ಹಾಡಿನ ಶೂಟಿಂಗ್‌ಗೆ 3 ಕೋಟಿ ವೆಚ್ಚದ ಸೆಟ್: ಜು.19ರಿಂದ ಮದಗಜ ಶೂಟಿಂಗ್ ಶುರು

By Kannadaprabha News  |  First Published Jul 15, 2021, 11:27 AM IST
  • ಜು.19ರಿಂದ ಮದಗಜ ಚಿತ್ರದ ಶೂಟಿಂಗ್ ಶುರು
  • ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಮೂರು ವಿಶೇಷವಾದ ಸೆಟ್ ನಿರ್ಮಾಣ

ನಟ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರತಂಡ ಹಾಡುಗಳ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಜು.19ರಿಂದ ಬೆಂಗಳೂರಿನ ಎಚ್‌ಎಂಟಿ ಫ್ಯಾಕ್ಟ್ರಿಯಲ್ಲಿ ಒಂದು ಹಾಡು, ನಂತರ ಮೈಸೂರಿನಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಲು ನಿರ್ದೇಶಕ ಮಹೇಶ್ ತಯಾರಿ ಮಾಡಿಕೊಂಡಿದ್ದಾರೆ.

ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಮೂರು ವಿಶೇಷವಾದ ಸೆಟ್ ಗಳನ್ನು ನಿರ್ಮಿಸುತ್ತಿದ್ದಾರೆ. ಒಂದೊಂದು ಸೆಟ್‌ಗೂ ರು.1 ಕೋಟಿ ವೆಚ್ಚವಾಗಲಿದೆ. ‘ಎರಡು ಹಾಡುಗಳ ಚಿತ್ರೀಕರಣಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ.

Tap to resize

Latest Videos

ಮದಗಜ ಟೀಸರ್ ರಿಲೀಸ್; ಆಶಿಕಾ- ಶ್ರೀ ಮುರಳಿ ರೊಮ್ಯಾಂಟಿಕ್ ಮೂಡ್ ನೋಡಿ..!..

ಹೀರೋ ಮೇಲೆ ಚಿತ್ರೀಕರಣ ಆಗುವ ಹಾಡುಗಳು ಇವು. ಹೀಗಾಗಿ ಮೈಸೂರಿನ ವೀರನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಹಾಗೂ ಬೆಂಗಳೂರಿನ ಎಚ್‌ಎಂಟಿ ಕಾರ್ಖಾನೆಯಲ್ಲಿ ಸೆಟ್‌ಗಳನ್ನು ಹಾಕುತ್ತಿದ್ದೇನೆ.

15 ಮಂದಿ ಮುಖ್ಯ ಕಲಾವಿದರು, 500 ಮಂದಿ ಜೂನಿಯರ್ ಆರ್ಟಿಸ್‌ಟ್ಗಳು ಹಾಗೂ ಜಗಪತಿ ಬಾಬು ಕೂಡ ಈ ಹಾಡಿನಲ್ಲಿ ಇರಲಿದ್ದಾರೆ. ಹೀಗಾಗಿ ಇದು ಸಖತ್ ಕಲರ್‌ಫುಲ್ ಹಾಡು ಆಗಲಿದೆ’ ಎನ್ನುತ್ತಾರೆ ನಿರ್ದೇಶಕ ಮಹೇಶ್.

click me!