
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ಕಾಕ್‌ಟೇಲ್’ನ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದಿರುವ ವೀರೇಶ್ ಕೇಶವ್ ಈ ಚಿತ್ರದ ನಾಯಕ.
ಈ ಚಿತ್ರದ ನಿರ್ಮಾಣದ ಜೊತೆಗೆ ರಚನೆ, ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿರುವವರು ಶ್ರೀರಾಮ್. ಲೋಕಿ ಅವರ ಸಂಗೀತ, ರವಿವರ್ಮ ಛಾಯಾಗ್ರಹಣ ಚಿತ್ರಕ್ಕಿದೆ. ಡಾ.ಶಿವಪ್ಪ ನಿರ್ಮಾಣ ಮಾಡುತ್ತಿದ್ದಾರೆ.
ಲವ್ 360ಯಲ್ಲಿ ಮೇಘಾ ಶೆಟ್ಟಿ ಹಿರೋಯಿನ್
ಕಾಕ್‌ಟೇಲ್ ನಿರ್ದೇಶಕ ಶ್ರೀರಾಮ್ ಅವರು ಚೊಚ್ಚಲ ಚಿತ್ರವನ್ನು ಮಾಡಲಿದ್ದು ಕ್ರೈಂ ಥ್ರಿಲ್ಲರ್ ಕಥೆ ಇದರಲ್ಲಿದೆ. IAS ಅಧಿಕಾರಿ ಡಾ.ಶಿವಪ್ಪ ಬಂಡವಾಳ ಹೂಡಿರುವ ಈ ಚಿತ್ರವು ಜುಲೈ 21 ರಂದು ಸೆಟ್ಟೇರಲಿದೆ. ಸಿನಿಮಾವನ್ನು ಬೆಂಗಳೂರು ಮತ್ತು ಮಡಿಕೇರಿಯಲ್ಲಿ ಚಿತ್ರೀಕರಿಸಲಾಗುತ್ತದೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ಆಗಸ್ಟ್‌ನಲ್ಲಿ ಮೊದಲ ಅಧಿಕೃತ ಟ್ರೇಲರ್ ಅನ್ನು ಹೊರತರಲು ತಯಾರಕರು ಚಿಂತಿಸುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಚರಿಷ್ಮಾ ನಟಿಸುತ್ತಿದ್ದು ಇದು ಅವರಿಗೆ ಚೊಚ್ಚಲ ಚಿತ್ರವಾಗಿದೆ. ಲೋಕಿ ಸಂಗೀತ, ಹೃದಯ ಶಿವ ಗೀತ ಸಾಹಿತ್ಯ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.