
ಕನ್ನಡದ ಬರವಣಿಗೆಗೆ ಪರಭಾಷೆಯಲ್ಲಿ ಸ್ವಾಗತ ಸಿಗುತ್ತಿದೆ. ಕನ್ನಡದ ಕತೆಗಾರ ಟಿ.ಕೆ. ದಯಾನಂದ್ ತೆಲುಗಿನ ಚಿತ್ರವೊಂದಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಬೆಂಕಿ ಪಟ್ಣ, ಬೆಲ್ ಬಾಟಮ್, ಆ್ಯಕ್‌ಟ್ 1957 ಚಿತ್ರಗಳ ಮೂಲಕ ಗಮನ ಸೆಳೆದಿರುವ ಟಿ.ಕೆ. ದಯಾನಂದ್, ಪ್ರಸ್ತುತ ಕನ್ನಡದಲ್ಲಿ ನಾಲ್ಕೈದು ಚಿತ್ರಗಳಿಗೆ ಕತೆ, ಚಿತ್ರಕಥೆ ಬರೆಯುತ್ತಿದ್ದಾರೆ.
ಆ್ಯಕ್‌ಟ್ 1957 ಹಾಗೂ ಬೆಲ್ ಬಾಟಮ್ ಚಿತ್ರಗಳನ್ನು ನೋಡಿ ತೆಲುಗಿನ ದೊಡ್ಡ ನಿರ್ಮಾಪಕ ವಾಕಡ ಅಪ್ಪರಾವ್ ತಮ್ಮ ನಿರ್ಮಾಣದ ಚಿತ್ರಕ್ಕೆ ಸ್ಕ್ರೀನ್ ಪ್ಲೇ, ಬೇಸಿಕ್ ಸಂಭಾಷಣೆಗಳನ್ನು ಬರೆದುಕೊಡುವಂತೆ ಕೇಳಿಕೊಂಡಿದ್ದಾರೆ.
‘ನಮ್ಮ ಚಿತ್ರಗಳನ್ನು ನೋಡಿ. ಈ ಚಿತ್ರಗಳಿಗೆ ಬರೆದ ರೈಟರ್‌ನಿಂದಲೇ ತಮ್ಮ ಚಿತ್ರಕ್ಕೂ ಬರೆಸಬೇಕೆಂದು ನನ್ನವರೆಗೂ ಬಂದಿದ್ದಾರೆ. ಒಂದು ಸಾಲಿನ ಕತೆ ಹೇಳಿದ್ದಾರೆ. ಅದರ ವಿಸ್ತರಣೆ ಜತೆಗೆ ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಬರೆಯುತ್ತಿದ್ದೇನೆ. ಇದು ನನ್ನ ಮೊದಲ ತೆಲುಗು ಚಿತ್ರ. ಥ್ರಿಲ್ಲರ್ ಜಾನರ್ ಸಿನಿಮಾ. ರಾಜಮೌಳಿ ಅವರ ಆರ್‌ಆರ್‌ಆರ್ ಚಿತ್ರಕ್ಕೆ ಕೆಲಸ ಮಾಡುತ್ತಿರುವ ತಂಡವೇ ಈ ಚಿತ್ರ ಮಾಡುತ್ತಿದೆ’ ಎನ್ನುತ್ತಾರೆ ದಯಾನಂದ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.