ಇಂದು ಪುನೀತ್‌ 11ನೇ ದಿನದ ಪುಣ್ಯತಿಥಿ: ಅಪ್ಪು ಸಮಾಧಿ ವೀಕ್ಷಣೆಗೆ ಜನವೋ ಜನ

By Kannadaprabha NewsFirst Published Nov 8, 2021, 7:13 AM IST
Highlights

*  ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು
*  ಪುನೀತ್‌ ಸಮಾಧಿ, ಭಾವಚಿತ್ರದ ಮುಂದೆ ಕಣ್ಣೀರು
*  ನಾಳೆ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ
 

ಬೆಂಗಳೂರು(ನ.08):  ಡಾ ರಾಜ್‌ಕುಮಾರ್‌ ಕುಟುಂಬದಿಂದ(Dr Rajkumar Family) ನಟ ಪುನೀತ್‌ ರಾಜ್‌ಕುಮಾರ್‌ ಅವರ 11ನೇ ದಿನದ ತಿಥಿ ಕಾರ್ಯ ಸೋಮವಾರ ನಡೆಯಲಿದೆ. ಬೆಳಗ್ಗೆ ಪುನೀತ್‌ ಅವರ ಮನೆಯಲ್ಲಿ ಶಾಸೊತ್ರೕಕ್ತವಾಗಿ ಪೂಜೆ(Pooje) ನಡೆಯಲಿದೆ. ನಂತರ ಇಡೀ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ(Kanteerava Studios) ಪುನೀತ್‌ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ತಿಥಿ ಕಾರ್ಯ ಮಾಡಲಿದ್ದಾರೆ.

ಪುಣ್ಯ ತಿಥಿಯ ಅಂಗವಾಗಿ ತಮ್ಮ ಚಿಕ್ಕಪ್ಪ ಪುನೀತ್‌ ಅವರ ಕಾರ್ಯದಲ್ಲಿ ಪಾಲ್ಗೊಳುವ ನಟ ವಿನಯ್‌ ರಾಜ್‌ಕುಮಾರ್‌(Vinay Rajkumar) ಅವರು ಕೂದಲು ತೆಗೆಸಿ ಶಾಸ್ತ್ರ ಮಾಡಲಿದ್ದಾರೆ. ಕುಟುಂಬದವರಿಂದ ಮನೆ ಹಾಗೂ ಸಮಾಧಿಗ(Grave) ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾಜ್‌ ಕುಟುಂಬದವರಿಂದ ನಡೆಯಲಿರುವ ಈ ಕಾರ್ಯದಲ್ಲಿ ಕುಟುಂಬದವರು ಹಾಗೂ ಆಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಈಗಾಗಲೇ ಚಿತ್ರರಂಗದ ಕೆಲ ಹಿರಿಯರನ್ನು ಹಾಗೂ ರಾಜ್‌ ಕುಟುಂಬದ ಎಲ್ಲ ಆಪ್ತರು, ನೆಂಟರನ್ನು ಅಹ್ವಾನಿಸಲಾಗಿದೆ.

ಅಪ್ಪು ನಿಧನದ ಬಳಿಕ ಮೊದಲ ಹೇಳಿಕೆ ಕೊಟ್ಟ ಪತ್ನಿ: ಪತ್ರದ ಮೂಲಕ ಧನ್ಯವಾದ ತಿಳಿಸಿದ ಅಶ್ವಿನಿ

ಕಂಠೀರವ ಸ್ಟುಡಿಯೋಗೆ ರಾಜ್‌ ಕುಟುಂಬದವರು ಹಾಗೂ ಆಪ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಮಾಧಿ ಸುತ್ತ ಬಿಗಿ ಪೊಲೀಸ್‌(Police0 ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. ಇಡೀ ರಾಜ್‌ ಕುಟುಂಬ ತಿಥಿ ಕಾರ್ಯದ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ.

ನಾಳೆ ಅನ್ನಸಂತರ್ಪಣೆ:

ಇನ್ನು ನ.9ರಂದು ಮಂಗಳವಾರ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ತಿಥಿ ಕಾರ್ಯದ ಅಂಗವಾಗಿ ಅನ್ನಸಂತರ್ಪಣೆ ನಡೆಯಲಿದೆ. ಅರಮನೆ ಮೈದಾನದಲ್ಲಿರುವ(Palace Ground) ನಡೆಯಲಿರುವ ಈ ಕಾರ್ಯದಲ್ಲಿ ಚಿತ್ರರಂಗದವರು, ಸಾರ್ವಜನಿಕರು, ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಅಭಿಮಾನಿಗಳು(Fans) ಸೇರಿದಂತೆ ಎಲ್ಲರು ಪಾಲ್ಗೊಳ್ಳಲಿದ್ದಾರೆ.

ಪುನೀತ್‌ ಸಮಾಧಿ ವೀಕ್ಷಣೆಗೆ ಜನವೋ ಜನ

ನಟ ಪುನೀತ್‌ ರಾಜ್‌ಕುಮಾರ್‌ ಅವರು ಅಗಲಿ 11 ದಿನ ಕಳೆದರೂ ಅವರ ಸಮಾಧಿ ನೋಡಲು ಬರುತ್ತಿರುವ ಸಾರ್ವಜನಿಕರು ಹಾಗೂ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಮಕ್ಕಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಮಕ್ಕಳು ಪುನೀತ್‌ ಅವರ ಚಿತ್ರಗಳ ಹಾಡುಗಳನ್ನು ಹಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದು ಕಂಡು ಬಂತು.

ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆಯೂ ಮಳೆಯನ್ನೂ ಲೆಕ್ಕಿಸದೆ ಮಕ್ಕಳ ಸಮೇತರಾಗಿ ಸಾರ್ವಜನಿಕರು ಕಂಠೀರವ ಸ್ಟುಡಿಯೋ ಮುಖ್ಯ ದ್ವಾರದ ಮುಂದೆ ಸಾಲು ಗಟ್ಟಿನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಬೆಂಗಳೂರು(Bengaluru) ಮಾತ್ರಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದರೂ ಸಮಾಧಿ ನೋಡಲು ಬರುತ್ತಿದ್ದಾರೆ. ಪುನೀತ್‌ರಾಜ್‌ಕುಮಾರ್‌ ಸಮಾಧಿ ನೋಡಿ, ಅಲ್ಲೇ ಇರುವ ಭಾವಚಿತ್ರವನ್ನು ಕಣ್ಣು ತುಂಬಿಕೊಂಡು ಕಣ್ಣೀರು ಹಾಕುವ ಮೂಲಕ ತಮ್ಮ ಅಭಿಮಾನ ತೋರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋಗೆ ಬಂದ ಮೇಲೆ ಎಷ್ಟೇ ಹೊತ್ತು ಆದರೂ ಸಾಲಿನಲ್ಲಿ ನಿಂತು ಸಮಾಧಿ ನೋಡಿಕೊಂಡೇ ಅಭಿಮಾನಿಗಳು ಅಲ್ಲಿಂದ ತೆರಳುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳು ಹಾಗೂ ಸಾರ್ವಜನಿಕರಿಂದ ಯಾವುದೇ ರೀತಿಯ ತೊಂದರೆಗಳು ಆಗುತ್ತಿಲ್ಲ.

ಪುನೀತ್‌ಗೆ ನಮನ ಸಲ್ಲಿಸಿದ ಬಳಿಕ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡ ರೇಣುಕಾಚಾರ್ಯ

ಪುನೀತ್‌ ಇದ್ದಾಗಲೇ ಪದ್ಮಶ್ರೀ ನೀಡಬೇಕಿತ್ತು: ಬಿ.ಸಿ.ಪಾಟೀಲ್‌

ಹಾವೇರಿ: ಒಬ್ಬ ಅಭಿಮಾನಿಯಾಗಿ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಪದ್ಮಶ್ರೀ ಕೊಡಬೇಕೆಂದು ನಾನು ಒತ್ತಾಯಿಸುತ್ತೇನೆ. ಬದುಕಿದ್ದಾಗಲೇ ಅವರಿಗೆ ಪದ್ಮಶ್ರೀ(Padma Shri) ಕೊಡಬೇಕಿತ್ತು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌(BC Patil) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಹಾವೇರಿ(Haveri) ಜಿಲ್ಲೆಯ ಹಿರೇಕೆರೂರು ತಾಲೂಕಿನ ಸರ್ವಜ್ಞನ ಅಬಲೂರು ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುನೀತ್‌ ರಾಜಕುಮಾರ್‌ ಅವರಿಗೆ ಪದ್ಮಶ್ರೀ ನೀಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪವಾದರೆ ನಾವೂ ಬೆಂಬಲ ಕೊಡುತ್ತೇವೆ ಎಂದಿದ್ದಾರೆ.

ಬಿಟ್‌ ಕಾಯಿನ್‌ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಟ್‌ ಕಾಯಿನ್‌ ಎಂದರೇನು ಎಂದೇ ನನಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆಯೂ ಮಾಹಿತಿಯಿಲ್ಲ. ಆದರೆ, ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅದು ಅಕ್ರಮ ಎಂದಾದರೆ ಅದರಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗುತ್ತದೆ ಎಂದಿದ್ದಾರೆ.
 

click me!