ನಾನು ಕಂಡಿದ್ದ ಕನಸು ಕನಸಾಗಿಯೇ ಹೋಯಿತು: ನಿರ್ದೇಶಕ ಮಂಸೋರೆ

By Suvarna News  |  First Published Nov 7, 2021, 9:00 PM IST

ಹೀಗೊಂದು ವಿಭಿನ್ನ ಪಾತ್ರದಲ್ಲಿ ಅಪ್ಪು ಸರ್‌ನ ನೋಡಬೇಕು ಅಂತ 2016 ರಿಂದ ದಯಾನಂದ್. ಟಿ.ಕೆ, ವೀರೇಂದ್ರ ಮಲ್ಲಣ್ಣ ಹಾಗೂ ನಾನು ಕಂಡಿದ್ದ ಕನಸು ಕೊನೆಗೂ ಕನಸಾಗಿಯೇ ಉಳಿದು ಹೋಯಿತು.


ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 'ಜೇಮ್ಸ್‌' (James) ಚಿತ್ರದ ನಂತರ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಆದರೆ ವಿಧಿ ಲೆಕ್ಕವೇ ಬೇರೆ. ಅವರ ಅಗಲಿಕೆ ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅಪ್ಪು ನಿರ್ದೇಶಕರ ನಟ ಆಗಿದ್ದರು. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಅನೇಕ ನಿರ್ದೇಶಕರ ಕನಸಾಗಿತ್ತು. ಅವರಿಗಾಗಿಯೇ ನಿರ್ದೇಶಕರು ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ಆ ಎಲ್ಲ ನಿರ್ದೇಶಕರ ಕನಸು ಈಗ ಭಗ್ನವಾಗಿದೆ. ಕನ್ನಡದ ನಿರ್ದೇಶಕ ಮಂಸೋರೆ ಕೂಡ ಪುನೀತ್‌ಗಾಗಿ ಹೊಸ ಕಥೆಯನ್ನು ರೆಡಿ ಮಾಡುತ್ತಿದ್ದರು. ಆದರೆ ಆ ಕನಸು ನನಸಾಗುವ ಮುನ್ನವೇ ಅಪ್ಪು ಇಹಲೋಕ ತ್ಯಜಿಸಿದ್ದಾರೆ.

ಹೌದು! 'ಹರಿವು', 'ನಾತಿಚರಾಮಿ', 'ಆ್ಯಕ್ಟ್​ 1978'ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡವರು ನಿರ್ದೇಶಕ ಮಂಸೋರೆ (Manso Re) ಪುನೀತ್​ ರಾಜ್​ಕುಮಾರ್ ಜೊತೆ ಸಿನಿಮಾ ಮಾಡಬೇಕು ಎಂದು ಅವರು ಹಲವು ವರ್ಷಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆ ವಿಚಾರವನ್ನು ಈಗ ಅವರು ತಮ್ಮ ಫೇಸ್‌ಬುಕ್‌ (FaceBook) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ಹೀಗೊಂದು ವಿಭಿನ್ನ ಪಾತ್ರದಲ್ಲಿ ಅಪ್ಪು ಸರ್‌ನ ನೋಡಬೇಕು ಅಂತ 2016 ರಿಂದ ದಯಾನಂದ್.ಟಿ.ಕೆ (Dayanand TK), ವೀರೇಂದ್ರ ಮಲ್ಲಣ್ಣ (Veerendra Mallanna) ಹಾಗೂ ನಾನು ಕಂಡಿದ್ದ ಕನಸು ಕೊನೆಗೂ ಕನಸಾಗಿಯೇ ಉಳಿದು ಹೋಯಿತು ಎಂದು ಕ್ಯಾಪ್ಷನ್ ಬರೆದು ಪುನೀತ್ ಇರುವ ಚಿತ್ರದ ಪೋಸ್ಟರ್‌ನ್ನು (Poster) ಹಂಚಿಕೊಂಡಿದ್ದರು.

Tap to resize

Latest Videos

undefined

ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು: ವಿಕ್ರಮ್ ರವಿಚಂದ್ರನ್

ಮಂಸೋರೆ ಈ ಚಿತ್ರಕ್ಕೆ 'ಮಿಷನ್ ಕೊಲಂಬಸ್' (Mission Columbus) ಎಂದು ಹೆಸರಿಟ್ಟಿದ್ದರು. ಪೋಸ್ಟರ್‌ನಲ್ಲಿ ಪುನೀತ್​ ಅವರ ಲುಕ್‌ ಅನ್ನು ಕಲಾವಿದ ಸರವಣ ಕುಮಾರ್ (Saravana Kumar) ಡಿಸೈನ್ ಮಾಡಿದ್ದರು. ಮಾಸಿದ ಗಡ್ಡ ಮತ್ತು ಉದ್ದ ಬಿಟ್ಟ ಕೂದಲಿನ ಗೆಟಪ್​ನೊಂದಿಗೆ, ಕೊಲಂಬಸ್​​ ಪಾತ್ರದಲ್ಲಿ ಪುನೀತ್​ ಅವರನ್ನು ಕಲ್ಪಿಸಿಕೊಳ್ಳಲಾಗಿತ್ತು. ಪೋಸ್ಟರ್​ ಹಿಂಭಾಗದಲ್ಲಿ ಹಡಗು ಗಮನ ಸೆಳೆಯುತ್ತಿದೆ. ಇನ್ನು ಈ  ಪೋಸ್ಟ್‌ಗೆ ನೆಟ್ಟಿಗರು, ಈ ಪಾತ್ರದ ಆ ಕಣ್ಣಿನಲ್ಸಿನ ತೇಜಸ್ಸು ಕಾಣದಾದುದು ನಮಗಿದು ವಿಪರ್ಯಾಸವೇ ಹೌದು. ನಿಮ್ಮ ಕನಸು ನನಸಾಗಬೇಕಿತ್ತು ಸರ್. ಸೇರಿದಂತೆ ಕ್ಷಮೆ ಕೋರುತ್ತಾ ನಿಮ್ಮ ಅ ಪಾತ್ರವನ್ನು ಹೊಸ ಪ್ರತಿಭೆಗೆ ಇರುವ ಯಾರಾದರೂ ಆಯ್ಕೆ ಮಾಡಿ ಉತ್ತಮ ಸಿನಿಮಾ ನೀಡಿದರೆ ಅಪ್ಪು ಸರ್ ಅವರ ಆತ್ಮಕ್ಕೆ ಶಾಂತಿ ಸಿಗಬಹುದು ಅಂತ ನನ್ನ ನಂಬಿಕೆ. ಯಾಕೆಂದರೆ ಅವರಿಗೂ ಸಾಮಾಜಿಕ ಕಾಳಜಿ ಇತ್ತು. ಕುಟುಂಬ ಸಮೇತ ಬಂದು ನೋಡುವ ಸಿನಿಮಾ ತೆಗೆಯುವ ಕನಸು ಅವರಿಗಿತ್ತು ಎಂದು ತರೇಹವಾರಿ ಕಾಮೆಂಟ್ ಮಾಡಿದ್ದಾರೆ.

ಪುನೀತ್‌ನನ್ನು ನಾನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ: ಭಾವುಕರಾದ ಜಯಪ್ರದಾ

ಇನ್ನು ಪುನೀತ್ ಅಭಿನಯದ 'ಜೇಮ್ಸ್' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಡಬ್ಬಿಂಗ್​ ಮತ್ತು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿತ್ತು. ಆದರೂ ಆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್​ ಕುಮಾರ್ (Chetan Kumar) ಹೇಳಿದ್ದಾರೆ. ಈ ಚಿತ್ರದಲ್ಲಿ ಪುನೀತ್‌ ವಿಶೇಷ ಸ್ಟಂಟ್ಸ್‌, ಹೈವೋಲ್ಟೇಜ್‌ ಆ್ಯಕ್ಷನ್‌ ಜೊತೆಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಜೇಮ್ಸ್'​ನಲ್ಲಿ ನಾಯಕಿಯಾಗಿ  ಕಾಲಿವುಡ್‌ ನಟಿ ಪ್ರಿಯಾ ಆನಂದ್ (Priya Anand) ನಟಿಸುತ್ತಿದ್ದಾರೆ. ಹಿರಿಯ ತಮಿಳು ನಟ ಶರತ್ ಕುಮಾರ್ (Sarathkumar) ಖಳನಟನಾಗಿ ಅಬ್ಬರಿಸಿದ್ದಾರೆ. ಅಪ್ಪು ಹುಟ್ಟುಹಬ್ಬದಂದು 'ಜೇಮ್ಸ್' ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ.
 

click me!