ಡೇಟಿಂಗ್ ಗೆ ಹೋಗುವ ಮುನ್ನ ಏನೆಲ್ಲ ತಯಾರಿ ಮಾಡಿಕೊಳ್ಬೇಕು ಎಂಬುದು ಹುಡುಗ – ಹುಡುಗಿ ಇಬ್ಬರಿಗೂ ತಿಳಿದಿರಬೇಕು. ಹಾಗೆ ನೀವಾಡುವ ಮಾತು ಮುಂದಿರುವವರ ಗಮನ ಸೆಳೆಯೋದು ಮುಖ್ಯ. ಒಂದೇ ಬಾರಿ ಹುಡುಗ ಬೀಳ್ಬೇಕು ಅಂದ್ರೆ ಏನು ಮಾಡ್ಬೇಕು ಅಂತಾ ಈಕೆ ಹೇಳಿದ್ದಾಳೆ.
ಇದು ಡೇಟಿಂಗ್ ಯುಗ. ತಂದೆ – ತಾಯಿ ತೋರಿಸಿದ ಹುಡುಗ – ಹುಡುಗಿಗಿಂತ ಅವರೇ ನೋಡಿಕೊಂಡ ವ್ಯಕ್ತಿಗಳ ಮೇಲೆ ಇವರಿಗೆ ಭರವಸೆ ಹೆಚ್ಚು. ಇದೇ ಕಾರಣಕ್ಕೆ ಲವ್ ಮ್ಯಾರೇಜ್ ಗೆ ಜನರು ಹೆಚ್ಚು ಆದ್ಯತೆ ನೀಡ್ತಿದ್ದಾರೆ. ನೀವು ಪ್ರೀತಿಸುವ, ದೀರ್ಘಕಾಲ ಸಂಬಂಧ ಉಳಿಸಿಕೊಂಡು ಹೋಗುವಂತ ವ್ಯಕ್ತಿ ಸಿಗೋದು ಈಗ ಸುಲಭವಲ್ಲ. ಸಂಗಾತಿ ಹುಡುಕಾಟದ ವೇಳೆ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದ್ರಲ್ಲೂ ವಿಶೇಷವಾಗಿ ಹುಡುಗಿಯರು ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ಇವರ ಜೊತೆ ಡೇಟ್ ಗೆ ಬರುವ ಎಲ್ಲ ಹುಡುಗರು ಸಂಬಂಧವನ್ನು ಗಂಭೀರವಾಗಿ ತೆಗೆದುಕೊಂಡಿರೋದಿಲ್ಲ. ಹುಡುಗಿಯೊಬ್ಬಳ ಜೊತೆ ಡೇಟ್ ಗೆ ಬಂದು ಒಂದಿಷ್ಟು ತಿಂದು, ಮಜಾ ಮಾಡಿ ಹೋಗೋರೇ ಹೆಚ್ಚು. ಈ ಸಮಯದಲ್ಲಿ ಹುಡುಗರನ್ನು ಇಪ್ರೆಸ್ ಮಾಡೋದು, ಅವರ ಸ್ವಭಾವ ಅರಿಯೋದು ಹುಡುಗಿರಿಗೆ ಕಷ್ಟವಾಗುತ್ತದೆ.
ಈಗಿನ ದಿನಗಳಲ್ಲಿ ಡೇಟಿಂಗ್ (Dating) ಅಪ್ಲಿಕೇಷನ್ ಸಾಕಷ್ಟಿದೆ. ನಿಮ್ಮೆಲ್ಲ ವಿವರವನ್ನು ಅದ್ರಲ್ಲಿ ನೀಡಿದ್ರೆ ಮ್ಯಾಚ್ ಆಗುವ ವ್ಯಕ್ತಿಯನ್ನು ಡೇಟಿಂಗ್ ಅಪ್ಲಿಕೇಷನ್ ಸೂಚಿಸುತ್ತದೆ. ನೀವು ಅದ್ರ ಸಹಾಯದಿಂದ ಆ ವ್ಯಕ್ತಿ ನಿಮಗೆ ಸೂಕ್ತವೇ ಇಲ್ಲವೇ ಎಂಬುದನ್ನು ನಿರ್ಣಯಿಸಬಹುದು. ಸಂಬಂಧ (Relationship ) ಮುಂದುವರೆಸುವ ಬಗ್ಗೆ ಚಿಂತಿಸಬಹುದು. ಈಗ ಇಲ್ಲೊಬ್ಬ ಹುಡುಗಿ ತಾನು ಹುಡುಗರನ್ನು ಹೇಗೆ ಸೆಳೆಯುತ್ತೇನೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾಳೆ. ಆಕೆ ಜೊತೆ ಮಾತನಾಡ್ತಿದ್ದಂತೆ ಹುಡುಗರು ಮದುವೆಯಾಗಲು, ಇಂಪ್ರೆಸ್ ಮಾಡಲು ಶತಪ್ರಯತ್ನ ನಡೆಸ್ತಾರಂತೆ.
undefined
ರಶ್ಮಿಕಾ ಮಂದಣ್ಣ ಲೈಫ್ಗೆ ಎಂಟ್ರಿ ಕೊಟ್ಟವರಾರು? ನಿಗೂಢ ಪೋಸ್ಟ್ ಹಾಕಿ ಫ್ಯಾನ್ಸ್ ತಲೆಗೆ ಹುಳಬಿಟ್ಟ ನಟಿ
ಆಕೆ ಹೆಸರು ಮರೀನಾ ನ್ಯೂಮನ್. ಹವಾಮಾನ (Weather) ನಿರೂಪಕಿ. ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಾಳೆ. ಜೊತೆಗೆ ಡೇಟಿಂಗ್ ಅಪ್ಲಿಕೇಷನ್ ಬಳಕೆ ಮಾಡ್ತಿದ್ದಾಳೆ. ಡೇಟಿಂಗ್ ಅಪ್ಲಿಕೇಷನ್ ಸಹಾಯದಿಂದ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಬಹುದು ಎನ್ನುತ್ತಾರೆ ಮರೀನಾ ನ್ಯೂಮನ್.
ಮರೀನಾ ನ್ಯೂಮನ್ ಈವರೆಗೆ ಅನೇಕ ಹುಡುಗರನ್ನು ಭೇಟಿಯಾಗಿದ್ದಾಳೆ. ಈ ಸಮಯದಲ್ಲಿ ಆಕೆ ಒಂದು ಮಾತನಾಡ್ತಾಳೆ. ಆ ಮಾತನ್ನು ಕೇಳಿದ ಹುಡುಗ್ರು ಫುಲ್ ಫಿದಾ ಆಗ್ತಾರೆ. ಮದುವೆ ಮಾಡಿಕೊಳ್ಳಲು ಮನಸ್ಸಿಲ್ಲದ ಹುಡುಗ್ರು ಕೂಡ ಮದುವೆ ಮಾಡಿಕೊಳ್ಳಲು ಸಿದ್ಧವಾಗ್ತಾರೆ.
ಮರೀನಾ ನ್ಯೂಮನ್ ಹುಡುಗ್ರಿಗೆ ಹೇಳೋದೇನು? : ಡೇಟಿಂಗ್ ಸಮಯದಲ್ಲಿ ಹುಡುಗರನ್ನು ಭೇಟಿಯಾಗುವ ಮರೀನಾ, ನೀವು ತುಂಬಾ ಚೆನ್ನಾಗಿದ್ದೀರಿ. ನಾನು ಒಳ್ಳೆಯ ಸಮಯವನ್ನು ನಿಮ್ಮ ಜೊತೆ ಕಳೆದಿದ್ದೇನೆ. ಆದರೆ ನಾನು ಮದುವೆಗಾಗಿ ಡೇಟ್ ಮಾಡಲು ಬಯಸುತ್ತೇನೆ. ಭವಿಷ್ಯದಲ್ಲಿ ಈ ಸಂಬಂಧ ಗಂಭೀರವಾಗಬಹುದು ಎಂದು ನಾನು ಭಾವಿಸುವುದಿಲ್ಲ ಎನ್ನುತ್ತಾಳಂತೆ.
ಈ ಮಾತು ಕೇಳಿದ ಹುಡುಗರ ಪ್ರತಿಕ್ರಿಯೆ ಹೇಗಿರುತ್ತೆ? : ಮರೀನಾ ನ್ಯೂಮನ್ ಈ ಮಾತು ಕೇಳಿದ ಹುಡುಗ್ರು ಸ್ವಲ್ಪ ಗಂಭೀರವಾಗ್ತಾರೆ. ಆಕೆ ಮದುವೆ ಬಗ್ಗೆ ಆಲೋಚನೆ ಮಾಡ್ತಿದ್ದಾಳೆ ಎಂಬುದು ಅರಿವಿಗೆ ಬರ್ತಿದ್ದಂತೆ ಇವರೂ ಮದುವೆ ಬಗ್ಗೆ ಆಲೋಚನೆ ಮಾಡ್ತಾರೆ. ಮರೀನಾ ನ್ಯೂಮನ್ ಸೆಳೆಯಲು ಪ್ರಯತ್ನ ನಡೆಸ್ತಾರೆ. ಒಮ್ಮೆ ಹುಡುಗನೊಬ್ಬ ಮದುವೆ ಬಗ್ಗೆ ನಿರಾಸಕ್ತಿಯಿಂದಲೇ ಮರೀನಾ ಭೇಟಿಗೆ ಬಂದಿದ್ದ. ಆದ್ರೆ ಮರೀನಾ ಈ ಮಾತು ಕೇಳಿದ್ಮೇಲೆ ಗಂಭೀರವಾದ. ನಿನ್ನ ಮುಂದಿನ ಗುರಿ ಏನು ಎಂದು ಕೇಳಿದಾಗ ಇನ್ನು ಐದು ವರ್ಷದಲ್ಲಿ ಸಂಸಾರ ಹೊಂದೋದು ಎಂದಿದ್ದ.
ಹಾಲಿವುಡ್ ಗೂ ಭಗವದ್ಗೀತೆಗೂ ಏನು ಸಂಬಂಧ? ನಟ ವಿನ್ ಡೀಸೆಲ್ 'ಪ್ರತಿಫಲ ಬಯಸದೇ ಕರ್ತವ್ಯ ಮಾಡುʼ
ಹೀಗೆ ಮರೀನಾ ಅನೇಕ ಹುಡುಗ್ರಿಂದ ಇಂಥದ್ದೇ ಸಾಕಷ್ಟು ಅನುಭವಪಡೆದಿದ್ದಾಳೆ. ಇದನ್ನು ತನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾಳೆ. ಇದನ್ನು ಕೇಳಿದ ಸಾಮಾಜಿಕ ಜಾಲತಾಣ ಬಳಕೆದಾರರು ಸಾಕಷ್ಟು ಪ್ರತಿಕ್ರಿಯೆ ನೀಡಿದ್ದಾರೆ. ಹುಡುಗ್ರು ಚಾಲೆಂಜ್ ಇಷ್ಟಪಡ್ತಾರೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು ಹುಡುಗರನ್ನು ಸೆಳೆಯಲು ಇದು ಸೂಕ್ತ ಕೆಲಸ ಎಂದಿದ್ದಾರೆ.