
ಬದುಕಿನಲ್ಲಿ ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯ ಘಟನೆಗಳು ಜರುಗುತ್ತವೆ. ಕೆಲವರ ಬದುಕಿನಲ್ಲಿ ಎಷ್ಟೋ ರಹಸ್ಯಗಳು ಅಡಗಿರುತ್ತವೆ. ಇನ್ನು ಕೆಲವರ ಬದುಕಿನಲ್ಲಿ ಮರೆಯಲಾಗದಂತಹ ಕೆಲವು ಅಹಿತಕರ ಘಟನೆಗಳು ನಡೆದಿರುತ್ತವೆ. ಹಾಗೆಯೇ ಕೆಲವರು ತಂದೆ ತಾಯಿ ಯಾರು ಎಂದು ತಿಳಿಯದೇ ಅನಾಥರಾಗಿ ಬದುಕುತ್ತಿರುತ್ತಾರೆ.
ತಮ್ಮ ಹಿಂದಿನ ಜೀವನದ ಬಗ್ಗೆ ತಿಳಿದುಕೊಳ್ಳಲು ಅಥವಾ ತಂದೆ ತಾಯಿಯ ಬಗ್ಗೆ ತಿಳಿದುಕೊಳ್ಳಲು ಮಕ್ಕಳು ಅವರ ಬಗ್ಗೆ ಮಾಹಿತಿ ಸಂಗ್ರಹಿಸುವುದನ್ನು ನಾವು ಟಿವಿ, ಸಿನೆಮಾಗಳಲ್ಲಿ ನೋಡಿದ್ದೇವೆ. ಇಲ್ಲೊಬ್ಬ ಮಹಿಳೆ ನಿಜಜೀವನದಲ್ಲೂ ತನ್ನ ತಂದೆಯ ಬಗ್ಗೆ ತಿಳಿದುಕೊಳ್ಳಲು ಹೋಗಿದ್ದಾಳೆ. ತಂದೆಯ ಬಗ್ಗೆ ತಿಳಿದುಕೊಳ್ಳಲು ಹೋದ ಈಕೆ ಸತ್ಯ ತಿಳಿದು ಬೆಚ್ಚಿಬಿದ್ದಿದ್ದಾಳೆ. ತನ್ನ ಕುಟುಂಬ (Family) ದ ಬಗ್ಗೆ ತಿಳಿದ ನಂತರ ಈಕೆಯ ಬದುಕೇ ಬದಲಾಗಿದೆ.
ನಿಮ್ಮ ಸಂಗಾತಿ ಬೆಡ್ಡಲ್ಲಿ ಗುಡ್ ಅಲ್ಲವೆನ್ನೋದನ್ನು ಹೇಳುತ್ತೆ ಈ ಚಿಹ್ನೆಗಳು!
ತಂದೆಯನ್ನು ಹುಡುಕಲು ಹೊರಟ ಈಕೆಗೆ ತಿಳಿದ ಸತ್ಯ ಏನು ಗೊತ್ತಾ?
ಅಮೆರಿಕದ ಓಹಿಯೋದ ಕ್ಲೀವ್ ಲ್ಯಾಂಡ್ ನ ನಿವಾಸಿ ಶೀನಾ ಹಾಲೆಂಡ್ – ಡೋಲನ್ ಒಬ್ಬಳೇ ಮಗಳಾಗಿದ್ದಳು. ಶೀನಾಳಿಗೆ 20 ವರ್ಷವಾದಾಗ ಆಕೆಗೆ ತನ್ನ ತಂದೆ ತಾಯಿಗೆ ಬಹಳ ವರ್ಷದ ತನಕ ಮಕ್ಕಳಾಗಿರಲಿಲ್ಲ ಹಾಗಾಗಿ ಅವರು ಮಗುವನ್ನು ಪಡೆಯಲು ಸ್ಪರ್ಮ್ಡೋನರ್ (Sperm Donor) ಸಹಾಯ ಪಡೆದಿದ್ದಾರೆ ಎನ್ನುವ ಸತ್ಯ ತಿಳಿಯಿತು. ತನ್ನ ಹುಟ್ಟಿನ ಬಗ್ಗೆ ಸತ್ಯ ತಿಳಿದ ಶೀನಾಳಿಗೆ ಶಾಕ್ ಆಯಿತು. ಆಗ ಆಕೆಗೆ ತನ್ನ ನಿಜವಾದ ತಂದೆ ಯಾರೆಂದು ತಿಳಿದುಕೊಳ್ಳಬೇಕು ಅನಿಸಿತು. ಆಗ ಅವಳು ತನ್ನ ಹುಟ್ಟಿಗೆ ಕಾರಣವಾದ ತಂದೆಯನ್ನು ಹುಡುಕುವ ಪ್ರಯತ್ನ ಆರಂಭಿಸಿದಳು.
ಶೀನಾ ಹಾಲೆಂಡ್ ಸಾಮಾಜಿಕ ಜಾಲತಾಣವಾದ 23andme.com ದಲ್ಲಿ ತನ್ನ ತಂದೆಯ ಕುರಿತು ಮಾಹಿತಿ ಸಂಗ್ರಹಿಸಿದಳು. ವೆಬ್ ಸೈಟ್ ಸಹಾಯದಿಂದ ಆಕೆಗೆ ತನ್ನ ತಂದೆ ಯಾರೆಂಬ ವಿಷಯ ತಿಳಿಯಿತು. ಆಕೆಯ ತಂದೆ ಒಬ್ಬ ಪ್ರೊಫೆಶನಲ್ ಸ್ಫರ್ಮ್ ಡೋನರ್ ಆಗಿದ್ದ. ಹೆಚ್ಚು ದುಡ್ಡು ಸಂಪಾದನೆ ಮಾಡುವುದಕ್ಕೋಸ್ಕರ ಆತ ಕಾಲೇಜು ದಿನಗಳಿಂದಲೇ ತನ್ನ ಸ್ಪರ್ಮ್ ಡೊನೇಟ್ ಮಾಡುತ್ತಿದ್ದ. ನಂತರ ಶೀನಾಳಿಗೆ ತನ್ನ ತಂದೆಗೆ ಒಟ್ಟೂ 77 ಮಂದಿ ಮಕ್ಕಳಿದ್ದಾರೆ. ಅದರಲ್ಲಿ ನಾನು 47ನೇ ಸಂತಾನ ಎನ್ನುವ ಶಾಕಿಂಗ್ ಮಾಹಿತಿ ಕೂಡ ತಿಳಿಯಿತು. ತನಗೆ ಒಟ್ಟೂ 77 ಜನ ಒಡಹುಟ್ಟಿದವರಿದ್ದಾರೆ ಎನ್ನುವುದನ್ನು ಅರಗಿಸಿಕೊಳ್ಳುವುದು ಆಕೆಗೆ ಕಷ್ಟವಾಗಿತ್ತು.
ಒಳ್ಳೆ ಸ್ನೇಹಿತರಲ್ಲಿ ಇರಬೇಕಾದ ಗುಣಗಳ ಬಗ್ಗೆ ಚಾಣಾಕ್ಯ ಹೇಳಿದ್ದಿಷ್ಟು!
ತನ್ನ ಒಡಹುಟ್ಟಿದವರ ಬಗ್ಗೆ ವಿಷಯ ತಿಳಿದ ಶೀನಾ ಹಾಲೆಂಡ್ ಅಷ್ಟಕ್ಕೇ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಆಕೆ ತನ್ನ ಹಿರಿಯ ಸಹೋದರ ಕಿಯಾನಿ ಅರೋಯೋ ಸಹಾಯದಿಂದ ತನ್ನ ಒಡಹುಟ್ಟಿದ ಇತರರ ಬಗ್ಗೆ ತಿಳಿತುಕೊಳ್ಳುವುದಕ್ಕೋಸ್ಕರ ಫೇಸ್ ಬುಕ್ ಗ್ರುಪ್ ಅನ್ನು ಕ್ರಿಯೇಟ್ ಮಾಡಿದಳು. ಫೇಸ್ ಬುಕ್ ಮೂಲಕ ಈಕೆ ಈಗ ತನ್ನ ಹೊಸ ಕುಟುಂಬವನ್ನು ಕಟ್ಟಿಕೊಂಡಿದ್ದಾಳೆ. ಈಗಾಗಲೇ ಅವಳ ಗ್ರುಪ್ ಗೆ 77 ಮಂದಿ ಅಕ್ಕ-ತಂಗಿ, ಅಣ್ಣ-ತಮ್ಮಂದಿರು ಸೇರಿಕೊಂಡಿದ್ದಾರೆ. ತನ್ನ ಎಲ್ಲ ಸಹೋದರರು ಒಬ್ಬೊಬ್ಬರು ಒಂದೊಂದು ಸ್ವಭಾವದವರಾಗಿದ್ದಾರೆ. ಅವರಲ್ಲಿ ಕೆಲವರು ಒಬ್ಬರನ್ನೊಬ್ಬರು ಭೇಟಿಯಾಗುವುದನ್ನು ಇಷ್ಟಪಡುತ್ತಾರೆ. ಕೆಲವರು ದೂರ ಇರಲು ಇಷ್ಟಪಡುತ್ತಾರೆ. ನಾನು ಯಾರಾದರೂ ಒಬ್ಬ ಹೊಸ ಸಹೋದರರನ್ನು ಭೇಟಿಯಾದಾಗ ನನ್ನ ಹಾಗೂ ಅವರ ಸ್ವಭಾವದಲ್ಲಿ ಹೋಲಿಕೆ ಇದೆಯಾ ಎಂದು ನೋಡುತ್ತೇನೆ ಎಂದು ಶೀನಾ ಹಾಲೆಂಡ್ ಹೇಳುತ್ತಾಳೆ. ಇನ್ನು ನನ್ನ ಮಕ್ಕಳು ಅವರ ಜೀವನ ಸಂಗಾತಿಯನ್ನು ಹುಡುಕಲು ಹೊರಟರೆ ನಾನು ಅವರಿಗೆ ಸ್ವಲ್ಪ ಹುಷಾರಾಗಿರಿ, ನಿಮ್ಮ ಹತ್ತಿರದ ಸಂಬಂಧಿಗಳೇ ಅನೇಕ ಮಂದಿ ಇದ್ದಾರೆ ಎಂದು ಮೊದಲೇ ಹೇಳಬೇಕಾಗುತ್ತದೆ ಎನ್ನುವ ಚಿಂತೆಯೂ ಶೀನಾಳಿಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.