ಬೆಸ್ಟ್ ಫ್ರೆಂಡ್ ಪತಿಯ ಜೊತೆಯೇ ಸಂಬಂಧ ಬೆಳೆಸಲು ಮುಂದಾಗಿದ್ದಾಳೆ ಇವಳು! ಹೇಳುವುದೇನು?

By Suvarna News  |  First Published Aug 19, 2022, 3:53 PM IST

ಸ್ನೇಹ ಹಾಗೂ ಕುಟುಂಬದ ಮಧ್ಯೆ ಸಣ್ಣ ಗೆರೆ ಇರ್ಬೇಕು ಎಂದು ದೊಡ್ಡವರು ಹೇಳ್ತಾರೆ. ಅನೇಕ ಬಾರಿ ಕುಟುಂಬದ ಸಮಸ್ಯೆಗೆ ಸ್ನೇಹಿತರು ಕಾರಣವಾಗ್ತಾರೆ. ಸುಂದರ ಸಂಸಾರಕ್ಕೆ ಹುಳಿ ಹಿಂಡುವ ಸಾಧ್ಯತೆ ಕೂಡ ಇರುತ್ತದೆ.
 


ಸ್ನೇಹಿತರಿಬ್ಬರ ಮಧ್ಯೆ ಎಷ್ಟೇ ಆಪ್ತತೆಯಿರಲಿ, ಎಷ್ಟೇ ಪ್ರೀತಿ ಇರಲಿ ಅವರು ತಮ್ಮ ಸಂಗಾತಿಯನ್ನು ಸ್ನೇಹಿತರಿಗೆ ಬಿಟ್ಟು ಕೊಡಲು ಇಷ್ಟಪಡುವುದಿಲ್ಲ. ಸ್ನೇಹವೇ ಬೇರೆ, ದಾಂಪತ್ಯ ಪ್ರೀತಿಯೇ ಬೇರೆ. ಪತಿ ಮೇಲೆ ಬೇರೆ ಹುಡುಗಿ ಕಣ್ಣು ಹಾಕಿದ್ರೆ ಆಕೆಯನ್ನು ಪತಿಯಿಂದ ದೂರವಿಡಬಹುದೇನೋ, ಆಪ್ತ ಸ್ನೇಹಿತೆಯೇ ಆಕರ್ಷಿತಳಾದ್ರೆ ಈ ಚಟಿಲ ಸಂಬಂಧದಿಂದ ಬಿಡಿಸಿಕೊಳ್ಳುವುದು ಕಷ್ಟ. ಆ ಕಡೆ ಸ್ನೇಹವೂ ಬೇಕು, ಈ ಕಡೆ ಪತಿಯೂ ಬೇಕು. ಆಗ ಎಲ್ಲವನ್ನೂ ಸೂಕ್ಷ್ಮವಾಗಿ ಬಗೆಹರಿಸಬೇಕಾಗುತ್ತದೆ. ಮಹಿಳೆಯೊಬ್ಬಳು ಈಗ ಇದೇ ಉಭಯ ಸಂಕಟದಲ್ಲಿದ್ದಾಳೆ. ಸ್ನೇಹಿತೆ ಮಹಿಳೆಯ ಪತಿ ಪಡೆಯಲು ಹಾತೊರೆಯುತ್ತಿದ್ದಾಳೆ. ಸ್ನೇಹಿತೆಯಿಂದ ಪತಿಯನ್ನು ಹೇಗೆ ದೂರವಿಡುವುದು ಎಂಬ ಸಮಸ್ಯೆ ಮಹಿಳೆಯದ್ದು. ಆಕೆಗೆ ಮದುವೆ (Marriage) ಯಾಗಿ ತುಂಬಾ ವರ್ಷ ಕಳೆದಿಲ್ಲ. ದಾಂಪತ್ಯ ಜೀವನ (Life) ಸುಖಕರವಾಗಿದೆ. ಪ್ರೀತಿ (Love) ಮಾಡುವ ಪತಿ ಜೊತೆ ಮಹಿಳೆ ಸಂಬಂಧ ಚೆನ್ನಾಗಿದೆ. ಆದ್ರೆ ಸ್ನೇಹಿತೆಯದ್ದು ತಲೆನೋವಾಗಿದೆ. ಕಳೆದ 20 ವರ್ಷದ ಸ್ನೇಹ (Friendship) ವದು. ಆ ಸ್ನೇಹಿತೆ, ಮಹಿಳೆಯ ಪತಿ ಮೇಲೆ ಮೋಹಗೊಂಡಿದ್ದಾಳೆ. ಕಳೆದ 20 ವರ್ಷಗಳಿಂದ ಜೊತೆಗಿರುವ ಕಾರಣ ಆಕೆಯ ಪ್ರತಿಯೊಂದು ಸಂಗತಿ ನನಗೆ ಗೊತ್ತು. ಹಾಗೆಯೇ ನನ್ನ ಪ್ರತಿಯೊಂದು ವಿಷ್ಯ ಆಕೆಗೆ ಗೊತ್ತು. ಆಕೆ ವಿಷ್ಯವನ್ನು ಎಷ್ಟೇ ಮುಚ್ಚಿಡಲು ಪ್ರಯತ್ನಿಸಿದ್ರೂ ಆಕೆಯ ಕಣ್ಣು ನನಗೆ ಎಲ್ಲವನ್ನೂ ಹೇಳಬಲ್ಲದು ಎನ್ನುತ್ತಾಳೆ ಮಹಿಳೆ.

ಪತಿ ಜೊತೆಗಿರುವಾಗ ಆಕೆ ವರ್ತನೆ (Behavior) ಯೇ ಬದಲಾಗುತ್ತದೆ. ಆತನ ಗಮನ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸ್ತಾಳೆ. ಆತನಿಗೆ ಹತ್ತಿರವಾಗಲು ಯತ್ನಿಸ್ತಾಳೆ. ಅವರಿಬ್ಬರನ್ನು ಒಟ್ಟಿಗಿರುವ ಯಾವುದೇ ಅವಕಾಶವನ್ನು ನಾನು ನೀಡ್ತಿಲ್ಲ. ನನಗೆ ನನ್ನ ಪತಿ ಮೇಲೆ ನಂಬಿಕೆ (Faith) ಯಿದೆ. ಆತ ನನಗೆ ಮೋಸ ಮಾಡುವುದಿಲ್ಲ ಎಂಬುದು ತಿಳಿದಿದೆ. ಆದ್ರೆ ಸ್ನೇಹಿತೆ ಮೋಸದ ಜಾಲಕ್ಕೆ ಬಿದ್ರೆ ಎಂಬ ಆತಂಕ ಮನಸ್ಸಿನ ಮೂಲೆಯಲ್ಲೆಲ್ಲೋ ಇದೆ. ಸ್ನೇಹವನ್ನೂ ನಾನು ಬಿಟ್ಟುಕೊಡುವ ಸ್ಥಿತಿಯಲ್ಲಿಲ್ಲ. ಈ ವಿಷ್ಯ ಬಿಟ್ರೆ ಮತ್ತೆಲ್ಲದ್ರಲ್ಲೂ ಸ್ನೇಹಿತೆ ನನಗೆ ಬಲ ನೀಡ್ತಾಳೆ ಎನ್ನುತ್ತಾಳೆ ಮಹಿಳೆ. 

Tap to resize

Latest Videos

ಗಂಡ್ಮಕ್ಕಳ ಜೊತೆ ಮಾತಾಡೋದು ಕಷ್ಟವಾಗ್ತಿದೆ ಏನ್ಮಾಡ್ಲಿ?

ತಜ್ಞರ ಸಲಹೆ : ಮಹಿಳೆಯ ಈ ಸಮಸ್ಯೆಗೆ ತಜ್ಞರು ಪರಿಹಾರ ಹೇಳಿದ್ದಾರೆ. ಪತಿ ಮೇಲೆ ಸಂಪೂರ್ಣ ಭರವಸೆ ಇದೆ ಎಂದಾದ್ರೆ ಚಿಂತಿಸುವ ಅಗತ್ಯವೇ ಇಲ್ಲ ಎನ್ನುತ್ತಾರೆ ತಜ್ಞರು. ಇಷ್ಟರ ಮಧ್ಯೆಯೂ ಸ್ನೇಹಿತೆ ನಿಮ್ಮ ಜೀವನಕ್ಕೆ ಮುಳುವಾಗಬಹುದು ಎಂದಾದರೆ ನೀವು ಅದಕ್ಕೆ ಸಿದ್ಧವಾಗಿರಬೇಕು ಎಂಬುದು ತಜ್ಞರ ಸೂಚನೆ. ಮೊದಲು ನಿಮ್ಮ ಪತಿ ಬಳಿ ಮಾತನಾಡಿ ಎಂಬುದು ತಜ್ಞರ ಸಲಹೆ. ನಿಮ್ಮ ಸ್ನೇಹಿತೆ ಹೇಗೆ ವರ್ತಿಸ್ತಿದ್ದಾಳೆ, ಆಕೆ ವರ್ತನೆಯಲ್ಲಿ ಏನೆಲ್ಲ ಬದಲಾವಣೆಯಾಗಿದೆ, ಆಕೆಯಿಂದ ನಿಮಗೆಷ್ಟು ಕಷ್ಟವಾಗ್ತಿದೆ ಎಂಬುದನ್ನು ಹೇಳಿ ಎನ್ನುತ್ತಿದ್ದಾರೆ ತಜ್ಞರು. 

ನಿಮ್ಮ ಮೇಲೆ ಸವಾರಿ ಮಾಡೋರನ್ನ ಸಹಿಸಿಕೊಳ್ಳಬೇಡಿ, ವಿಶ್ವಾಸ ಕುಂದದಿರಲಿ

ಸ್ನೇಹಿತೆ ಬಗ್ಗೆ ನಿಮ್ಮ ಊಹೆ ತಪ್ಪಾಗಿರಬಹುದು. ನಿಮ್ಮ ಹಾಗೂ ನಿಮ್ಮ ಪತಿ ಜೊತೆ ಹೆಚ್ಚು ಸ್ನೇಹವಿರುವ ಕಾರಣ ಸ್ನೇಹಿತೆ ಹಾಗೆ ವರ್ತಿಸುತ್ತಿರಬಹುದು. ಹಾಗಾಗಿ ಸೂಕ್ಷ್ಮವಾಗಿ ನಿಮ್ಮ ಸ್ನೇಹಿತೆಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಬೇಕು. ಸ್ನೇಹಿತೆ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯದೆ ತೀರ್ಮಾನಕ್ಕೆ ಬರುವುದು ತಪ್ಪು ಎನ್ನುತ್ತಾರೆ ತಜ್ಞರು. 20 ವರ್ಷಗಳಿಂದ ಸ್ನೇಹಿತರು ಎಂದ್ಮೇಲೆ ನಿಮ್ಮನ್ನು ಆಕೆ ಅರ್ಥ ಮಾಡಿಕೊಳ್ತಾಳೆ. ಪತಿ ಬಗ್ಗೆ ಆಕೆ ಮನಸ್ಸಿನಲ್ಲಿ ಏನಿದೆ ಎಂದು ಕೇಳಿ. ಒಂದ್ವೇಳೆ ಆಕೆ ಸತ್ಯ ಹೇಳಿದ್ದರೆ ಆಕೆಯನ್ನು ಕ್ಷಮಿಸಿ ಮುಂದೆ ನಡೆಯಿರಿ. ಸುಳ್ಳು ಹೇಳುವ ಪ್ರಯತ್ನ ಮಾಡ್ತಿದ್ದರೆ ಅಥವಾ ವಿಷ್ಯ ಮುಚ್ಚಿಟ್ಟಿದ್ದರೆ ಆಕೆ ಸ್ನೇಹ ಮುರಿದುಕೊಳ್ಳುವುದು ಒಳ್ಳೆಯ ಮಾರ್ಗ ಎನ್ನುತ್ತಾರೆ ತಜ್ಞರು.
 

click me!