ಸಿಕ್ಕಾಪಟ್ಟೆ ಹಠ ಮಾಡೋ ಮಕ್ಕಳ ಜೊತೆ ಹೀಗ್ ಬಿಹೇವ್ ಮಾಡಿ, ಯಾವಾಗ್ಲೂ ಕೂಲ್ ಆಗಿರ್ತಾರೆ!

By Vinutha Perla  |  First Published Feb 10, 2024, 2:50 PM IST

ಮಕ್ಕಳು ಸ್ವಭಾವ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಕೋಪ, ಕೆಲವೊಮ್ಮೆ ಮೌನ, ​​ಕೆಲವೊಮ್ಮೆ ಕಿರುಚಾಟ, ಚೀರಾಟ ಎಲ್ಲವನ್ನೂ ಒಳಗೊಂಡಿರುತ್ತದೆ. ಹೀಗಿರುವ ಹಠಮಾರಿ ಮಕ್ಕಳನ್ನು ನಿಭಾಯಿಸುವುದು ತುಂಬಾ ಕಷ್ಟದ ವಿಚಾರ. ಆದರೆ ಕೆಲವೊಂದು ಸಿಂಪಲ್ ಟಿಪ್ಸ್ ಮೂಲಕ ಇಂತಹ ಮಕ್ಕಳನ್ನು ಸುಲಭವಾಗಿ ಸಮಾಧಾನ ಪಡಿಸಬಹುದು.


ಮಕ್ಕಳನ್ನು ಬೆಳೆಸುವುದು ದೊಡ್ಡ ಜವಾಬ್ದಾರಿ. ಯಾಕೆಂದರೆ ಹೆಚ್ಚಿನ ಮಕ್ಕಳು ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಮಕ್ಕಳು ಸ್ವಭಾವ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಕೆಲವೊಮ್ಮೆ ಕೋಪ, ಕೆಲವೊಮ್ಮೆ ಮೌನ, ​​ಕೆಲವೊಮ್ಮೆ ಕಿರುಚಾಟ, ಚೀರಾಟ ಎಲ್ಲವನ್ನೂ ಒಳಗೊಂಡಿರುತ್ತದೆ. ಹೀಗಿರುವ ಹಠಮಾರಿ ಮಕ್ಕಳನ್ನು ನಿಭಾಯಿಸುವುದು ತುಂಬಾ ಕಷ್ಟದ ವಿಚಾರ. ಆದರೆ ಕೆಲವೊಂದು ಸಿಂಪಲ್ ಟಿಪ್ಸ್ ಮೂಲಕ ಇಂತಹ ಮಕ್ಕಳನ್ನು ಸುಲಭವಾಗಿ ಸಮಾಧಾನ ಪಡಿಸಬಹುದು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಡಿ
ಮೂಡಿ ಮಕ್ಕಳಿಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಇದರಿಂದ ಮಕ್ಕಳು ತಮ್ಮ ಮನಸ್ಸಿನಲ್ಲಿರುವ ಪ್ರತಿಯೊಂದು ಆಲೋಚನೆಯನ್ನು ಯಾವುದೇ ಭಯವಿಲ್ಲದೆ ಎಲ್ಲರೊಂದಿಗೆ ಹಂಚಿಕೊಳ್ಳುತ್ತಾರೆ. ಇದು ಅರ್ಧದಷ್ಟು ಸಮಸ್ಯೆಯನ್ನು ಪರಿಹರಿಸುತ್ತದೆ. ಮಕ್ಕಳ ಮನಸ್ಥಿತಿ ಏರುಪೇರಾಗಲು ಹಲವು ಕಾರಣಗಳಿವೆ. ಇವುಗಳಲ್ಲಿ ಒಂದು ಅವರ ಭಾವನೆಗಳನ್ನು ನಿಗ್ರಹಿಸುವುದು. ಅದಕ್ಕಾಗಿಯೇ ಅಂಥಾ ಮಕ್ಕಳೊಂದಿಗೆ ಶಾಂತವಾಗಿ ಕುಳಿತು ಮಾತನಾಡುವುದು ಅವರ ಮನಸ್ಸನ್ನು ತಿಳಿಯಾಗಿಸುತ್ತದೆ.

Latest Videos

undefined

ಟೀನೇಜ್ ಮಕ್ಕಳಿಗೆ ಹೀಗೆ ನೋಡಿಕೊಂಡರೆ ದಾರಿ ತಪ್ಪೋದಿಲ್ಲ ಅಂತಾರೆ ಸುಧಾಮೂರ್ತಿ!

ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯಬೇಡಿ
ಇವತ್ತಿನ ದಿನಗಳಲ್ಲಿ ಬಹುತೇಕ ಮಕ್ಕಳಲ್ಲಿ ಹಠಮಾರಿ ಸ್ವಭಾವ ಇರೋದಕ್ಕೆ ಪೋಷಕರ ಅತಿಯಾದ ಮುದ್ದು ಕಾರಣವಾಗಿರುತ್ತದೆ. ಹೀಗಾಗಿ ಯಾವತ್ತೂ ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯಬೇಡಿ. ಇದು ಅನಾವಶ್ಯಕ ಹಠಕ್ಕೆ ಕಾರಣವಾಗುತ್ತದೆ. ಮಕ್ಕಳು ಪ್ರತಿ ಬಾರಿ ತಾವು ಹೇಳಿದ ಮಾತೇ ನಡೆಯಬೇಕು ಎಂದು ಅಂದುಕೊಳ್ಳುತ್ತಾರೆ.

ಹೈಪರ್ ಆಗಬೇಡಿ
ಮಕ್ಕಳೊಂದಿಗೆ ಯಾವತ್ತೂ ಶಾಂತ ರೀತಿಯಲ್ಲಿ ವರ್ತಿಸಬೇಕು. ವಿಶೇಷವಾಗಿ ಯಾವುದೇ ಸಂದರ್ಭದಲ್ಲಿ ಅತಿಯಾಗಿ ಪ್ರತಿಕ್ರಿಯಿಸಬೇಡಿ. ಅವರ ಮೇಲೆ ಕೋಪ ಮಾಡಿಕೊಳ್ಳಬೇಡಿ. ಕೋಪ ಮಾಡಿಕೊಳ್ಳುವ ಸ್ವಭಾವ ಅವರಿಗೆ ಕಿರಿಕಿರಿ ಉಂಟುಮಾಡುತ್ತದೆ. ಮಕ್ಕಳನ್ನು ಗದರಿಸಿ ಹೊಡೆಯುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅಲ್ಲದೆ ಇದು ಅವರನ್ನು ಇನ್ನಷ್ಟು ಹದಗೆಡಿಸುತ್ತದೆ. ಆದ್ದರಿಂದ ಅವರು ಏಕೆ ಕೋಪಗೊಂಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ. 

ಮಕ್ಕಳನ್ನು ಪ್ರೀತಿಸಿ, ಆದ್ರೆ, ಹೀಗಲ್ಲ, ಸದ್ಗುರು ಹೇಳಿದ ಪೇರೆಂಟಿಂಗ್ ಟಿಪ್ಸ್ !

ಮನೆಯ ವಾತಾವರಣ ಧನಾತ್ಮಕವಾಗಿರಿಸಿಕೊಳ್ಳಿ
ಅನೇಕ ಬಾರಿ ಮಗುವಿನ ಮನಸ್ಥಿತಿಗೆ ಮನೆಯ ವಾತಾವರಣವೂ ಕಾರಣವಾಗಿರುತ್ತದೆ. ದಿನವೂ ಮನೆಯಲ್ಲಿ ಜಗಳ ನಡೆದರೆ ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮನೆಯ ವಾತಾವರಣವನ್ನು ಧನಾತ್ಮಕವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ. ಪ್ರೀತಿ, ಸಂಬಂಧಗಳಲ್ಲಿ ವಾತ್ಸಲ್ಯ, ಹಿರಿಯರನ್ನು ಗೌರವಿಸುವುದು ಮಕ್ಕಳ ಉತ್ತಮ ಪಾಲನೆಗೆ ಬಹಳಷ್ಟು ಕೊಡುಗೆ ನೀಡುತ್ತವೆ.

click me!