Teachers Day 2022: ಶಿಕ್ಷಕರು ಜೀವನದಲ್ಲಿ ಯಾಕೆ ಮುಖ್ಯ ಗೊತ್ತಾ?

By Suvarna NewsFirst Published Sep 4, 2022, 5:28 PM IST
Highlights

ಮಕ್ಕಳಿಗೆ ಶಿಕ್ಷಕರ ಮಾರ್ಗದರ್ಶನ, ಬೆಂಬಲ, ಪ್ರೀತಿ ಎಂದಿಗೂ ಅಗತ್ಯ. ಶಿಕ್ಷಣ ಕ್ಷೇತ್ರ ಎಷ್ಟೇ ವಾಣಿಜ್ಯೀಕರಣಗೊಂಡರೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಬಾಂಧವ್ಯ ಮುಕ್ಕಾಗುವುದಿಲ್ಲ. ಕಾಲಮಾನಕ್ಕೆ ತಕ್ಕಂತೆ ಅವರ ಸಂಬಂಧವೂ ಸ್ವಲ್ಪ ನಾಜೂಕಾಗಿದ್ದರೂ ಮಕ್ಕಳ ಜೀವನ ರೂಪಿಸುವಲ್ಲಿ ಅವರ ಪಾತ್ರವೇ ಅನನ್ಯ.
 

ಬಾಲ್ಯದ ಹುಡುಗಾಟದಲ್ಲಿ ಮೆರೆಯುವ ಮಕ್ಕಳನ್ನು ಹಿಡಿದಿಡುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ಅವರು ಮಾತ್ರವೇ ಮಕ್ಕಳಲ್ಲಿ ಶಿಸ್ತು, ಸಂಯಮ, ಓದಿನೆಡೆಗೆ ಶ್ರದ್ಧೆ ಮೂಡಿಸಬಲ್ಲರು. ಒಮ್ಮೆ ನೆನಪಿಸಿಕೊಳ್ಳಿ. ನಮ್ಮೆಲ್ಲರ ಬದುಕಿನಲ್ಲೂ ಶಿಕ್ಷಕರು ಒಂದಲ್ಲ ಒಂದು ರೀತಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಅಲ್ಲೆಲ್ಲೋ ಕೆಲವರು ಜಾತಿವೈಷಮ್ಯ ಮಾಡಿದ, ಮನೆಕೆಲಸಕ್ಕೆ ಬಳಸಿಕೊಂಡ, ನಿಂದನೀಯ ಶಬ್ದಗಳನ್ನು ಬಳಕೆ ಮಾಡಿದ ಶಿಕ್ಷಕರೂ ಸಿಗಬಹುದು. ಆದರೆ, ಮುಖದಲ್ಲಿ ಮಂದಹಾಸ ಮೂಡಿಸಿದ ಶಿಕ್ಷಕರ ಸಂಖ್ಯೆಯೇ ಅಧಿಕವಾಗಿರುತ್ತದೆ ಎನ್ನುವುದು ನಿಸ್ಸಂಶಯ. ಕೆಲವು ವರ್ಷಗಳ ಹಿಂದಿನ ಮಾತು. ಅಂದಿನ ಕೆಲವು ಮಕ್ಕಳಿಗೆ ಮಾತ್ರವೇ ಮನೆಯಲ್ಲಿ ಅಲ್ಪಸ್ವಲ್ಪ ಶಿಸ್ತು, ಸ್ವಚ್ಛತೆ ರೂಢಿಯಾಗುತ್ತಿತ್ತು. ಹಲ್ಲುಜ್ಜಲು, ನೀಟಾಗಿ ತಲೆ ಬಾಚಿಕೊಳ್ಳಲು, ದಿನವೂ ಬಟ್ಟೆ ತೊಳೆದುಕೊಳ್ಳಲು, ಸ್ನಾನ ಮಾಡಲು, ಉಗುರುಗಳನ್ನು ಕತ್ತರಿಸಿಕೊಳ್ಳಲು ಶಿಕ್ಷಕರೇ ಶಿಕ್ಷಣ ನೀಡುತ್ತಿದ್ದರು. ಅಂದು ಶಾಲೆಗಳಲ್ಲಿ ದಿನವು ಹಲ್ಲುಗಳನ್ನು, ಉಗುರುಗಳನ್ನು ಪರೀಕ್ಷಿಸಲಾಗುತ್ತಿತ್ತು. ಕ್ರಮೇಣ ಅವು ಅಭ್ಯಾಸವಾದವು. ಅಷ್ಟೇ ಏಕೆ, “ಒಳ್ಳೆಯ ಕೆಲಸದ ಪಟ್ಟಿʼಯಲ್ಲಿ ದಿನವೂ ಇನ್ನೊಬ್ಬರಿಗೆ ಏನಾದರೂ ಮಾಡಿರುವ ಸಹಾಯದ ಬಗ್ಗೆ ಬರೆಯಬೇಕಾಗುತ್ತಿತ್ತು. ಅಂದರೆ, ಮತ್ತೊಬ್ಬರಿಗೆ ಸಹಾಯ ಮಾಡುವ ಅರಿವು ಆಗಲೇ ಮೂಡುತ್ತಿತ್ತು. ಒಟ್ಟಿನಲ್ಲಿ ಜೀವನ ಶಿಕ್ಷಣ ನೀಡಿರುವುದರಲ್ಲಿ ಶಿಕ್ಷಕರ ಪಾತ್ರ ಅಗಣ್ಯ. ಹಿಂದಿನ ಮಾತೊಂದೇ ಅಲ್ಲ, ಇಂದಿನ ಮಕ್ಕಳಿಗೂ ಶಿಕ್ಷಕರ ಮಾರ್ಗದರ್ಶನ ಅತಿಮುಖ್ಯ.

•    ಶಿಕ್ಷಕರು ಶಿಕ್ಷಣ (Education), ಜ್ಞಾನ (Knowledge) ದಾನಿಗಳು
“ಲಕ್ಷಾಂತರ ರೂಪಾಯಿ ಹಣ ನೀಡುತ್ತೇವೆ, ಹೀಗಾಗಿ, ಶಾಲೆಗಳು (Schools) ಮಕ್ಕಳಿಗೆ ಶಿಕ್ಷಣ ನೀಡುವುದು ಅನಿವಾರ್ಯ’ ಎನ್ನುವ ಸಿನಿಕತನ ಪಾಲಕರಿಗೆ ಬೇಡ. ಶಾಲೆಗಳು ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸಿರುವುದು (Commercial) ನಿಜವಾದರೂ ಅದಕ್ಕೆ ಶಿಕ್ಷಕರನ್ನು (Teachers) ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ನೇರವಾಗಿ ಮಕ್ಕಳ ಸಂಪರ್ಕಕ್ಕೆ ಬರುವವರೇ ಶಿಕ್ಷಕರು. ಅವರೇ ಮಕ್ಕಳಿಗೆ ಶಿಕ್ಷಣ, ಜ್ಞಾನ ನೀಡುತ್ತಾರೆ. ಭವಿಷ್ಯದ ಜೀವನಕ್ಕೆ ಶಿಕ್ಷಣ ಅತಿಮುಖ್ಯ. ಮಕ್ಕಳ ಮನಸ್ಸನ್ನು ಗಾಢವಾಗಿ ಪ್ರಭಾವಿಸುವ ಶಿಕ್ಷಕರು ಅವರ ಏಳ್ಗೆಗೆ ಕಾರಣರಾಗುತ್ತಾರೆ.

Teachers Day : ನಿಮ್ಮ ಫೆವರಿಟ್ ಟೀಚರ್ ಗೆ ಕೊಡಬಹುದಾದ ಬೆಸ್ಟ್ ಗಿಫ್ಟ್!

•    ಭವಿಷ್ಯ (Future) ಎದುರಿಸಲು ಮಕ್ಕಳನ್ನು ಸಜ್ಜುಗೊಳಿಸುತ್ತಾರೆ
ಇಂದಿನ ಮಕ್ಕಳ ಭವಿಷ್ಯ ತೀವ್ರ ಸ್ಪರ್ಧಾತ್ಮಕತೆಯಿಂದ ಕೂಡಿದೆ. ಅವರನ್ನು ಸಜ್ಜುಗೊಳಿಸುವ ಶಿಕ್ಷಕರು ಯಾವುದಕ್ಕೂ ಕಡಿಮೆ ಇರುವುದಿಲ್ಲ. ಅವರು ಮಕ್ಕಳ (Children) ವ್ಯಕ್ತಿತ್ವವನ್ನು (Personality)  ರೂಪಿಸುತ್ತಾರೆ. ನಿಮ್ಮ ಮಕ್ಕಳ ಬಗ್ಗೆ ಕಂಪ್ಲೇಂಟ್‌ ಮಾಡುತ್ತಾರೆ ಎಂದು ಕಂಡುಬಂದರೂ ಅವರ ಉದ್ದೇಶ ಮಕ್ಕಳು ತಿದ್ದಿಕೊಳ್ಳಲಿ ಎಂದೇ ಆಗಿರುತ್ತದೆ. ಹೇಗೆ ಭಾವನೆಗಳನ್ನು (Emotions) ನಿಯಂತ್ರಿಸಿಕೊಳ್ಳಬೇಕು, ಸಾಮಾಜಿಕವಾಗಿ ಹೇಗೆ ವರ್ತಿಸಬೇಕು ಎನ್ನುವುದನ್ನು ತಿಳಿಸಿಕೊಡುತ್ತಾರೆ.

•    ಸಾಮರ್ಥ್ಯದ (Ability) ಅಣೆಕಟ್ಟೆ ತೆರೆಯುವ ಶಿಕ್ಷಕರು
ಶಿಕ್ಷಕರು ಮಕ್ಕಳ ಸಾಮರ್ಥ್ಯವನ್ನು ಸುಧಾರಿಸುವ ಜತೆಗೆ ಅವರ ಸಂಪೂರ್ಣವಾಗಿ ಅವರು ತಮ್ಮ ಸಾಮರ್ಥ್ಯ ಬಳಸಿಕೊಳ್ಳವುದನ್ನು ಅಭ್ಯಾಸ ಮಾಡಿಸುತ್ತಾರೆ. ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ಮಕ್ಕಳ ಬೆಂಬಲಕ್ಕೆ (Support) ಸದಾ ನಿಲ್ಲುತ್ತಾರೆ. ಯಾವ ಮಕ್ಕಳು ಯಾವುದರಲ್ಲಿ ವೀಕ್‌, ಯಾವುದರಲ್ಲಿ ಸ್ಟ್ರಾಂಗ್‌ ಎನ್ನುವುದನ್ನು ಪಾಲಕರಿಗಿಂತ ಚೆನ್ನಾಗಿ ಗುರುತಿಸುತ್ತಾರೆ. 

•    ಪ್ರೋತ್ಸಾಹ (Encourage) ನೀಡುತ್ತಾರೆ
ಉತ್ತಮ ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ, ಬೆಂಬಲ ನೀಡುತ್ತಾರೆ. ಅವರು ಉತ್ತಮ ಕೆಲಸ ಮಾಡಿದಾಗ ಶ್ಲಾಘಿಸುತ್ತಾರೆ. ಅವರ ಕುರಿತು ಮೆಚ್ಚುಗೆಯ ಮಾತನಾಡುತ್ತಾರೆ. ಶಿಕ್ಷಕರ ಬಳಿ ಗುಡ್‌ (Good) ಹೇಳಿಸಿಕೊಳ್ಳಬೇಕೆಂಬ ಆಸೆ ಎಲ್ಲ ಮಕ್ಕಳಿಗೂ ಇರುತ್ತದೆ. 

Teacher Day ಯಾಕೆ ಆಚರಣೆ ಮಾಡ್ತಾರೆ ಗೊತ್ತಾ?

•    ಸ್ಫೂರ್ತಿ (Motivation) ಮತ್ತು ಮಾರ್ಗದರ್ಶನ (Guidance)
ಪಠ್ಯಗಳ ಕಲಿಕೆಯ ಜತೆಗೆ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಹಾಗೂ ಮಾರ್ಗದರ್ಶನ ಮಾಡುವ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಸಹಜವಾಗಿ ಅನೇಕ ವಿಚಾರಗಳಲ್ಲಿ ಗೊಂದಲ ಇರುತ್ತದೆ. ಅದನ್ನು ಅವರು ನಿವಾರಿಸುವ ಮೂಲಕ ಮಾರ್ಗದರ್ಶನ ಮಾಡುತ್ತಾರೆ. ಕೇವಲ ಕಲಿಕೆಯ ವಿಚಾರಕ್ಕೆ ಮಾತ್ರವಲ್ಲ, ಮುಂದಿನ ಶಿಕ್ಷಣದಲ್ಲಿ ವಿಷಯಗಳ ಆಯ್ಕೆಗೆ ಸಂಬಂಧಿಸಿಯೂ ಮಾಹಿತಿ (Information) ನೀಡುತ್ತಾರೆ. ತಮ್ಮ ವಿದ್ಯಾರ್ಥಿಗಳು ಸಾಧನೆ (Success) ಮಾಡಬೇಕು ಎನ್ನುವ ಹೆಬ್ಬಯಕೆ ಹೊಂದಿರುತ್ತಾರೆ.  

 

 

click me!