ಪ್ರಪೋಸಲ್ಸ್‌ ಬರ್ತಿದ್ರೂ ಜಿರಳೆ ದೀಪ್ಕೆ ಇನ್ನೂ ಮದ್ವೆಯಾಕಾಗಿಲ್ಲ? ಶಾಕಿಂಗ್‌ ಸತ್ಯ ರಿವೀಲ್‌ ಮಾಡಿದ ಅಮ್ಮ

Published : Jul 29, 2026, 07:45 PM IST
Abhijeet Deepke

ಸಾರಾಂಶ

'ಕಾಕ್ರೋಚ್‌ ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್‌ ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?

ಕಾಕ್ರೋಚ್‌ ಜನತಾ ಪಕ್ಷ (CJP) ಆರಂಭಿಸಿ ಅಲ್ಪ ಸಮಯದಲ್ಲಿಯೇ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಫೇಮಸ್‌ ಆಗಿ ರಾತ್ರೋರಾತ್ರಿ ಹೀರೋ ಫೇಮಸ್‌ ಆದವರು ಅಭಿಜೀತ್‌ ದೀಪ್ಕೆ. ಮೊದಲ ಪ್ರತಿಭಟನೆಯಲ್ಲಿಯೇ ಕೇಂದ್ರ ಸಚಿವರ ರಾಜೀನಾಮ ಪಡೆದು ಒಂದಷ್ಟು ಮಂದಿಗೆ ಹೀರೋ ಆಗಿ ಮೆರೆದಿದ್ದಾರೆ. ಇದೀಗ ಅವರಿಗೆ ಮ್ಯಾರೇಜ್‌ ಪ್ರಪೋಸಲ್ಸ್‌ ಕೂಡ ಸಾಕಷ್ಟು ಬರುತ್ತಿದೆಯಂತೆ.

ಅಂದಹಾಗೆ ಅಭಿಜೀತ್‌ ಅವರಿಗೆ ಈಗ 30 ವರ್ಷ ವಯಸ್ಸು. ಕಳೆದ ಎರಡು ವರ್ಷಗಳಿಂದ ಅಭಿಜೀತ್‌ ಅವರಿಗೆ ಪ್ರಪೋಸಲ್ಸ್‌ ಬರುತ್ತಲೇ ಇವೆಯಂತೆ. ಆದರೆ ಮದುವೆಗೆ ತಮ್ಮ ಮಗ ಒಪ್ತಿಲ್ಲ ಎಂದಿದ್ದಾರೆ ಅವರ ಅಮ್ಮ ಅನಿತಾ ದೀಪ್ಕೆ . ನನಗೂ ಮಗನ ಮದುವೆ ನೋಡುವ ಆಸೆ, ಆದರೆ ಅವನು ಮಾತ್ರ ಮದುವೆಗೆ ಒಪ್ತಿಲ್ಲ ಎಂದಿದ್ದಾರೆ ಅವರು. ಇದೀಗ ಅದರ ಕಾರಣವನ್ನೂ ಬಹಿರಂಪಡಿಸಿದ್ದಾರೆ.

ಮಗ ಯಾಕೆ ಮದ್ವೆ ಆಗ್ತಿಲ್ಲ ಎಂದು ಅಮ್ಮನ ಕಾರಣ

"ಕಳೆದ ಎರಡು ವರ್ಷಗಳಿಂದ ನಮಗೆ ಮದುವೆಗೆ ಪ್ರಸ್ತಾವನೆಗಳು ಬರುತ್ತಿವೆ. ನಾವು ಹೆಚ್ಚು ಆಸಕ್ತಿ ಹೊಂದಿದ್ದೇವೆ. ಆದರೆ ಅಭಿಜೀತ್‌, ಆರ್ಥಿಕವಾಗಿ ಸ್ಥಿರವಾದ ನಂತರವೇ ಮದುವೆಯಾಗುವುದಾಗಿ ನಿರಂತರವಾಗಿ ಹೇಳುತ್ತಿದ್ದಾನೆ ಎಂದಿದ್ದಾರೆ ಅಮ್ಮ. "ಅವನು 'ನನ್ನ ಅಧ್ಯಯನ ಮುಗಿದ ನಂತರ ನನಗೆ ಏನಾದರೂ ಸಂಪಾದಿಸಲು ಬಿಡಿ. ಇಲ್ಲದಿದ್ದರೆ, ನಾನು ಹೇಗೆ ಮದುವೆಯಾಗುತ್ತೇನೆ?' ಎಂದು ನಮಗೆ ಹೇಳಿದನು, ನಮ್ಮಲ್ಲಿ ಸಾಕಷ್ಟು ಹಣವಿದೆ ಎಂದು ನಾನು ಅವನಿಗೆ ಹೇಳಿದೆ, ಆದರೆ ಅವನು ತನಗಾಗಿ ಸಂಪಾದಿಸಲು ಬಯಸುತ್ತೇನೆ ಎಂದು ಹೇಳಿದನು. ಅವನು ತುಂಬಾ ಪ್ರಾಮಾಣಿಕರಾಗಿದ್ದು, ಆತ ತಮ್ಮ ಮದುವೆಗೆ ಬಟ್ಟೆಗಳನ್ನು ಹೊರತುಪಡಿಸಿ ಬೇರೆ ಏನನ್ನೂ ತೆಗೆದುಕೊಳ್ಳುವುದಿಲ್ಲ" ಎಂದರು.

ಇಲ್ಲೂ ಬಿಡ್ತಿಲ್ಲ ಟ್ರೋಲಿಗರು!

"ನಾವು ಸದ್ಯ ಯಾವುದೇ ಹುಡುಗಿಯನ್ನು ನೋಡಿಲ್ಲ. ಅವನು ಈ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಅವನ ಒಪ್ಪಿಗೆ ಪಡೆದೇ ಹುಡುಗಿ ನೋಡುತ್ತೇವೆ ಎಂದಿದ್ದಾರೆ. ಆದರೆ ಇದಕ್ಕೂ ಸಿಕ್ಕಾಪಟ್ಟೆ ನೆಗೆಟಿವ್‌ ಕಮೆಂಟ್ಸ್‌ ಬರುತ್ತಿವೆ. ಪ್ರತಿಭಟನೆಯ ನಂತರ ಆರ್ಥಿಕವಾಗಿ ತುಂಬಾ ಸ್ವತಂತ್ರವಾಗಿದ್ದು, ಪ್ರತಿಭಟನೆ ಮುಂದುವರೆಯಲು ಇನ್ನೂ ಹೆಚ್ಚು ಹಣ ಹರಿದು ಬರುತ್ತದೆ. ಆಮೇಲಾದ್ರೂ ಮಗನ ಇಚ್ಛೆಯಂತೆ ಮದುವೆ ಮಾಡಿ ಅಂತಿದ್ದಾರೆ ಕೆಲವು ನೆಟ್ಟಿಗರು. ಮತ್ತೆ ಕೆಲವರು ಅಮೆರಿಕದಲ್ಲಿ ಬಿಳಿ ಹೆಂಡ್ತಿಯನ್ನು ನೋಡಿಕೊಂಡಿರಬೇಕು ಬಿಡಿ ಎನ್ನುತ್ತಿದ್ದರೆ, ಪಾಕಿಸ್ತಾನಿ, ಖಲಿಸ್ತಾನಿಗಳ ಬೆಂಬಲ ಇರುವಾಗ ಒಳ್ಳೆಯ ಹುಡುಗಿ ಸಿಗ್ತಾಳೆ, ಆರ್ಥಿಕವಾಗಿಯೂ ಸಿಕ್ಕಾಪಟ್ಟೆ ಸ್ವತಂತ್ರ ಆದ್ಮೇಲೆ ಮದುವೆ ಮಾಡಿ ಅಂತಿದ್ದಾರೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದುವೆಯಾಗಿ ನಾಲ್ಕೇ ತಿಂಗಳು, ಖ್ಯಾತ ಗಾಯಕನ ಬಂಡವಾಳ ಬಯಲು ಮಾಡಿದ ಪತ್ನಿ
Shocking: ವಿಜಯಲಕ್ಷ್ಮೀ ಮಾಡಿದ್ದ ಪೋಸ್ಟ್ ರಿಪೀಟ್ ಮಾಡಿದ್ದೇಕೆ ಧನ್ವೀರ್ ಗೌಡ, 'ಬೇರೆ ಏನೋ ಇದೆ ಇಲ್ಲಿ..' ಅಂತಿರೋ ನೆಟ್ಟಿಗರು!