ಪ್ರೇಮ ನಿವೇದನೆಯ ವಿಷ್ಯಕ್ಕೆ ಬಂದಾಗ ಹುಡುಗ್ರು ಮುಂದಿರುತ್ತಾರೆ. ಈ ವಿಷ್ಯದಲ್ಲಿ ಕೊನೆ ಬೆಂಚಿನ ಸ್ಥಾನ ಹುಡುಗಿಯರದ್ದು. ಇಷ್ಟವಿದ್ರೂ ಹುಡುಗಿಯರು ಪ್ರೀತಿಯನ್ನು ಮುಚ್ಚಿಡಲು, ಪ್ರಪೋಸ್ ಮಾಡದೆ ಇರಲು ಅನೇಕ ಕಾರಣವಿದೆ.
ಇಂದಿನ ಮಾಡರ್ನ್ ಯುಗದಲ್ಲಿ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲೂ ಗಂಡ್ಮಕ್ಕಳ ಸರಿಸಮನಾಗಿ ನಿಲ್ಲುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಆದರೆ ಕೆಲವೇ ಕೆಲವು ವಿಷಯಗಳಲ್ಲಿ ಮಾತ್ರ ಏಕೋ ಅವರು ಗಂಡು ಮಕ್ಕಳಿಗಿಂತ ಹಿಂದೆಯೇ ಇರಲು ಬಯಸುತ್ತಾರೆ. ಅದರಲ್ಲೇ ಅವರು ಸಮಾಧಾನ ಕಾಣುತ್ತಾರೆ ಕೂಡಾ.
ಜಗತ್ತು ಎಷ್ಟೇ ಮುಂದುವರೆದಿದ್ದರೂ ಹೆಣ್ಣು ಮಕ್ಕಳು ಎಂದಾಗ ಅವರಿಗೆ ಕೆಲವು ಕಟ್ಟುಪಾಡುಗಳು ಇದ್ದೇ ಇರುತ್ತವೆ. ಇನ್ಕೆಲವು ಹುಡುಗಿಯರಿಗೆ ಇದು ಬೈ ಬರ್ತ್ ಬಂದಿರುತ್ತದೆ. ಉದಾಹರಣೆ (Example ) ಗೆ ಹೆಣ್ಣುಮಕ್ಕಳು ಒಬ್ಬರನ್ನು ಪ್ರೀತಿ (Love) ಸುತ್ತಿದ್ದಾರೆ ಎಂದಾದರೆ ಅವರು ತಮ್ಮ ಪ್ರೀತಿಯನ್ನು ಮೊದಲು ವ್ಯಕ್ತಪಡಿಸುವುದಿಲ್ಲ. ಬದಲಾಗಿ ಪ್ರೀತಿಸುತ್ತಿರುವ ಹುಡುಗನೇ ಮೊದಲು ಪ್ರಪೋಸ್ ಮಾಡಲಿ ಎಂದು ಕಾಯುತ್ತಾರೆ. ಹಾಗಾಗಿ ಪ್ರಪೋಸ್ (Proposal) ಮಾಡುವ ಜವಾಬ್ದಾರಿ ಗಂಡುಮಕ್ಕಳದ್ದೇ ಆಗಿರುತ್ತದೆ. ಹೆಣ್ಣು ಮಕ್ಕಳು ಎಷ್ಟೇ ಮುಂದುವರೆದಿದ್ದರೂ ಕೆಲವು ಕಾರಣದಿಂದ ಪ್ರೀತಿಯನ್ನು ವ್ಯಕ್ತಪಡಿಸಲು ಹಿಂದೇಟುಹಾಕುತ್ತಾರೆ.
ಮನೆಯಲ್ಲಿರೋ ಎಲ್ಲ ಪುರುಷರಿಗೂ ಒಂದೇ ಹೆಸರು; ಹೀಗಾದ್ರೆ ಗುರುತಿಸೋದು ಹೇಗಪ್ಪಾ?
ತನಗೆ ಹೆಚ್ಚು ಇಂಪಾರ್ಟೆನ್ಸ್ ಕೊಡಬೇಕೆಂಬ ಬಯಕೆ : ಪುರುಷರಿಗಿಂತ ಮಹಿಳೆಯರೇ ಹೆಚ್ಚು ಡೇಟ್ ಗೆ ಕರೆಸಿಕೊಳ್ಳೋದನ್ನು ಮತ್ತು ಪ್ರಪೋಸ್ ಮಾಡಿಸಿಕೊಳ್ಳೋದನ್ನು ಇಷ್ಟಪಡುತ್ತಾರೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ತಾನು ಪ್ರೀತಿಸುತ್ತಿರುವ ಹುಡುಗ ತನಗೇ ಹೆಚ್ಚು ಇಂಪಾರ್ಟೆನ್ಸ್ ಕೊಡಬೇಕು. ಅವನ ಮೊದಲ ಆದ್ಯತೆ ತಾನೇ ಆಗಿರಬೇಕು ಎನ್ನುವ ಆಸೆ ಎಲ್ಲ ಹೆಣ್ಣುಮಕ್ಕಳಿಗೂ ಇರುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳು ಮೊದಲು ಪ್ರಪೋಸ್ ಮಾಡೊಲ್ಲ.
ಪ್ರೀತಿಯನ್ನು ನಿರಾಕರಿಸಿದರೆ ಎನ್ನುವ ಭಯ : ಪ್ರೀತಿಸಿದ ವ್ಯಕ್ತಿಗೆ ನಾನು ಪ್ರಪೋಸ್ ಮಾಡಿದರೆ ಆತ ನನ್ನನ್ನು ರಿಜೆಕ್ಟ್ ಮಾಡಿಬಿಟ್ಟರೆ ಏನು ಮಾಡೋದು ಎನ್ನುವ ಭಯ ಹೆಣ್ಣು ಮಕ್ಕಳಿಗೆ ಹೆಚ್ಚು ಇರುತ್ತೆ. ಅಂತಹ ತಿರಸ್ಕಾರ ಭಾವನೆಯನ್ನು ಸ್ವೀಕರಿಸಲು ಹೆಣ್ಣುಮಕ್ಕಳು ರೆಡಿ ಇರೋದಿಲ್ಲ. ಪ್ರೀತಿಯ ನಿರಾಕರಣೆ ಅವರ ಪಾಲಿಗೆ ದೊಡ್ಡ ಆಘಾತವಾಗುತ್ತದೆ. ಹಾಗೆಯೇ ಅದರಿಂದ ಹೊರಬರಲು ಅವರಿಗೆ ಬಹಳ ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಹೀಗೆ ಪ್ರಪೋಸ್ ಮಾಡಲು ಅವರ ಸ್ವಾಭಿಮಾನವೂ ಅಡ್ಡಬರಬಹುದು. ಈ ಎಲ್ಲ ಕಾರಣದಿಂದ ಹುಡುಗಿಯರು ಹುಡುಗರನ್ನು ಮೊದಲು ಪ್ರಪೋಸ್ ಮಾಡೊಲ್ಲ.
ಮದುವೆ ಆದ್ಮೆಲೇ ಜೀವನವೇ ಮುಗಿದು ಹೋಯ್ತಾ? ಮಹಿಳೆಯರೇ ನೀವು ಬಾಸ್ ಆಗೋದ್ಯಾವಾಗ?
ಹುಡುಗ ನನ್ನನ್ನು ಬಿಟ್ಟು ಹೋದರೆ ಎನ್ನುವ ಆತಂಕ : ಹುಡುಗಿಯರಿಗೆ ತಾನೇ ಮೊದಲು ಪ್ರಪೋಸ್ ಮಾಡಿದರೆ ಹುಡುಗ ತನ್ನನ್ನು ಗೌರವಿಸುವುದಿಲ್ಲ. ಮುಂದೆ ತನ್ನನ್ನು ಮಾತು ಮಾತಿಗೆ ನೀನೇ ಮೊದಲು ಪ್ರಪೋಸ್ ಮಾಡಿದ್ದು, ನಾನೇನು ನಿನ್ನ ಹಿಂದೆ ಬಂದಿರಲಿಲ್ಲ ಎಂದು ಹೀಯಾಳಿಸಿದರೆ, ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೆದರಿಸಿದರೆ ಎನ್ನುವ ಭಯ ಕೂಡ ಇರುತ್ತೆ. ಒಮ್ಮೆ ನಾನು ಸೋತು ಅವನಿಗೆ ಶರಣಾದರೆ ಜೀವನ ಪೂರ್ತಿ ಅವನೆದುರು ತಲೆತಗ್ಗಿಸಿ ನಿಲ್ಲಬೇಕಾಗುತ್ತದೆ ಎನ್ನುವ ಭಯದಿಂದಲೂ ಕೆಲವು ಹೆಣ್ಣು ಮಕ್ಕಳು ಮೊದಲು ಪ್ರಪೋಸ್ ಮಾಡುವುದಿಲ್ಲ.
ಹುಡುಗಿ ಸಕತ್ ಬೋಲ್ಡ್ ಇದಾಳೆ ಅಂದುಕೊಳ್ತಾರೆ : ಕೆಲವೊಂದು ಹುಡುಗಿಯರು ಯಾವುದೇ ಭಯ, ನಾಚಿಕೆಯಿಲ್ಲದೇ ಹುಡುಗರನ್ನು ಪ್ರಪೋಸ್ ಮಾಡುತ್ತಾರೆ. ಅಂತಹ ಹುಡುಗಿಯರನ್ನು ನೋಡಿ ಎಲ್ಲರೂ ಹುಡುಗಿ ಸಕತ್ ಬೋಲ್ಡ್ ಆಗಿದ್ದಾಳೆ, ಇವಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಸುಲಭ ಅಂದುಕೊಳ್ತಾರೆ. ಯಾವ ಹುಡುಗಿಯರೂ ಜನ ತನ್ನ ಬಗ್ಗೆ ಹೀಗೆ ಅಂದುಕೊಳ್ಳುವುದನ್ನು ಸಹಿಸುವುದಿಲ್ಲ. ಹಾಗಾಗಿಯೇ ಹುಡುಗಿಯರು ಪ್ರಪೋಸ್ ಮಾಡದೇ ಕೇವಲ ಪ್ರೀತಿಯ ಸುಳಿವನ್ನು ಹುಡುಗರಿಗೆ ನೀಡುತ್ತಾರೆ.
ಹುಡುಗಿಯ ಕ್ಯಾರೆಕ್ಟರ್ ಚೆನ್ನಾಗಿಲ್ಲ ಅಂತಾರೆ : ವರ್ಷಗಟ್ಟಲೆ ಗಂಡುಮಕ್ಕಳು ಹೆಣ್ಣುಮಕ್ಕಳ ಹಿಂದೆ ಬಿದ್ದು ತಮ್ಮ ಪ್ರೀತಿಯನ್ನು ನಾನಾ ರೀತಿಯಲ್ಲಿ ಹೇಳಿಕೊಂಡರೂ ನಮ್ಮ ಸಮಾಜ ಅವರನ್ನು ಏನೂ ಹೇಳುವುದಿಲ್ಲ. ಆದರೆ ಒಬ್ಬ ಹೆಣ್ಣು ಮಗಳು ಈ ರೀತಿ ವರ್ತಿಸಿದರೆ ಅವಳ ಕ್ಯಾರೆಕ್ಟರ್ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ. ಈ ಎಲ್ಲ ಕಾರಣಕ್ಕಾಗಿ ಹೆಣ್ಣುಮಕ್ಕಳು ತಮ್ಮ ಫೀಲಿಂಗ್ಸ್ ಅನ್ನು ಪ್ರೀತಿಸಿದ ವ್ಯಕ್ತಿಯ ಬಳಿ ಹೇಳಿಕೊಳ್ಳುವುದಿಲ್ಲ.