
ಮಗುವಾಗುತ್ತಿದೆ ಎನ್ನುವ ಖುಷಿ ಯಾವ ದಂಪತಿಗಿರೋಲ್ಲ ಹೇಳಿ? ಆದರೆ, ಮಗುವಾಗುತ್ತಿದೆ ಅಥವಾ ಮಗುವಾಗಿದೆ ಎಂದಾಕ್ಷಣ ದಾಂಪತ್ಯದ ಸುಖವನ್ನೇ ಬಲಿ ಕೊಡಬೇಕೆಂದೇನೂ ಇಲ್ಲ. ಸಾಮಾನ್ಯವಾಗಿ ಗರ್ಭ ಧರಿಸಿದ ಸಂದರ್ಭ ಮಿಲನ ಕ್ರಿಯೆ ನಡೆಸೋದು ಸೇಫಾ, ಅದರಿಂದ ಗರ್ಭದಲ್ಲಿರುವ ಮಗುವಿಗೆ ತೊಂದರೆ ಆಗೋಲ್ವಾ? ಡಾಕ್ಟರ್ಸ್ ಹೇಳುವಂತೆ ನಾರ್ಮಲ್ ಗರ್ಭಧಾರಣೆಯಲ್ಲಿ (Normal Pregnancy) ಲೈಂಗಿಕ ಕ್ರಿಯೆ ನಡೆಸಿದರೆ ಏನೂ ಆಗೋಲ್ಲ. ಆರಂಭದ ಎರಡು ತಿಂಗಳು ಲೈಂಗಿಕತೆ ಅವೈಯ್ಡ್ ಮಾಡಿದರೆ ಒಳಿತು. ಸುರಕ್ಷತಾ ದೃಷ್ಟಿಯಿಂದ ಇದು ಜೀವಕ್ಕೆ ಬಹಳ ಒಳಿತು. ಬಹಳ ಸೂಕ್ಷ್ಮ ಸಮಯದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ಆಗ ಸ್ವಲ್ಪ ಹೆಚ್ಚುಕಮ್ಮಿಯಾದರೂ ಗರ್ಭಪಾತ (Abortion) ಆಗಬಹುದು. ಮೂರು ತಿಂಗಳ ಬಳಿಕ ಬೇರೆ ಏನೂ ಸಮಸ್ಯೆ ಇಲ್ಲದೇ ಹೋದಲ್ಲಿ ಹೊಟ್ಟೆ ಮೇಲೆ ಹೆಚ್ಚು ಬಾರವಾಗದಂತೆ ಲೈಂಗಿಕ ಕ್ರಿಯೆ ನಡೆಸಬಹುದು?
ಹಾಗಂತ ದೈಹಿಕ ಒತ್ತಡವಾಗಲಿ, ಮಾನಸಿಕ ಒತ್ತಡವಾಗಲಿ ಒಳಿತಲ್ಲ. ಸಾಧ್ಯವಾದಷ್ಟೂ ಕೇರ್‌ಫುಲ್ ಆಗಿರೋದು ಒಳ್ಳೆಯದು. ಐದು ತಿಂಗಳವರೆಗೆ ಓಕೆ. ಆಮೇಲೆ ಹೊಟ್ಟೆ ಬರುತ್ತೆ. ಮಡದಿಯೊಂದಿಗೆ ಮೊದಲಿನಂತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಗಂಡನಿಗೂ ಹಿಂಜರಿಕೆಯಾಗಬಹುದು. ಬೇರೇನೂ ಸಮಸ್ಯೆ ಇಲ್ಲವೆಂದರೆ ಈ ಸಮಯದಲ್ಲಿ ಸೆಕ್ಸ್ ಮಾಡೋದರಿಂದ ಅಪಾಯವಿಲ್ಲ. ಹೆರಿಗೆಯೂ (Delivery) ಸುಲಭವಾಗುತ್ತೆ ಅನ್ನೋ ನಂಬಿಕೆ ಇದೆ. ಅದು ಸಂಪೂರ್ಣ ಸತ್ಯವಲ್ಲವೆಂದೂ ಹೇಳುತ್ತಾರೆ.
ಡೆಲಿವರಿ ಡೇಟ್ ಇನ್ನೇನು ಹತ್ತಿರ ಬರುತ್ತೆ ಎನ್ನುವಾಗ?
ಗರ್ಭಾವಧಿಯ ಕೊನೆಯ ಎರಡು ತಿಂಗಳು ಸೆಕ್ಸ್ ಬೇಡ ಎನ್ನುತ್ತಾರೆ ತಜ್ಞರು. ಆದರೆ ಆ ಹೊತ್ತಿಗೆ ಹಸ್ತಮೈಥುನ ಮಾಡಿದರೆ ಅಪಾಯವಿಲ್ಲ. ಗುಪ್ತವಾಗಿ ನಡೆಯುವ ಈ ಕ್ರಿಯೆ ಮಗುವಿನ ಮೇಲೆ ಪರಿಣಾಮ ಬೀರಲ್ವಾ ಅಂತಾನೂ ಬಹಳ ಜನರು ಕೇಳುತ್ತಾರೆ. ಆದರೆ, ಲೈಂಗಿಕತೆ ಅನ್ನೋದು ಜೀವಿಗಳಲ್ಲಿ ಬಹಳ ಸಹಜ. ಒಳಗಿರುವ ಭ್ರೂಣಕ್ಕೆ ಇದರ ಅನುಭವ ಆಗುತ್ತೆ. ಆದರೆ ಅದರಿಂದ ಅಡ್ಡ ಪರಿಮಾಮ (Side Effects)ಗಳಿರೋಲ್ಲ.
ಇದನ್ನೂ ಓದಿ: ಗರ್ಭಿಣಿ ಶಾರೀರಿಕ ಸಂಬಂಧದಿಂದ ದೂರವಿರೋದು ಏಕೆ?
ಇನ್ನು ಹೆಣ್ಣು ಮಕ್ಕಳು ಬಾಣಂತನ ಅಂತ ವರ್ಷದವರೆಗೂ ತವರಲ್ಲಿಯೇ ಉಳಿಯುತ್ತಾರೆ. ಅದು ಒಂದರ್ಥದಲ್ಲಿ ಗಂಡನಿಂದ ಮಗು ಹೆತ್ತ ಹೆಣ್ಣನ್ನು ದೂರುವಿಡಲು ಇಂಥ ಪದ್ಧತಿ ಜಾರಿಯಲ್ಲಿದೆ. ಆದರೆ ವೈದ್ಯಕೀಯದ ಪ್ರಕಾರ ನಾರ್ಮಲ್ ಅಥವಾ ಸಿಸೇರಿಯನ್ ಹೆರಿಗೆಯಲ್ಲಿ ಗಾಯವೆಲ್ಲ ಮಾಸಿ, ಹೆಣ್ಣು ಸಹಜ ಬದುಕಿಗೆ ಮರಳಿದರೆ ಲೈಂಗಿಕತೆ ನಡೆಸಬಹುದು.
ಸುರಕ್ಷಿತ ಲೈಂಗಿಕತೆ
ಮಗು ಹಾಲು ಕುಡಿಯುವಾಗ ಗರ್ಭ ಧರಿಸೋಲ್ಲ ಎನ್ನುವ ನಂಬಿಕೆ ನಮ್ಮಲ್ಲಿದೆ. ಆದರದು ತಪ್ಪು. ಈ ಸಮಯದಲ್ಲೂ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭ ಧರಿಸಬಲ್ಲರು ಕೆಲವರು. ಹಾಗಾಗಿ ಸುರಕ್ಷಿತ ಲೈಂಗಿಕತೆ ನಡೆಸೋದು ಬೆಸ್ಟ್. ಈ ಅವಧಿಯಲ್ಲಿ ಸೆಕ್ಸ್ ನಡೆಸುವಾಗ ಬಹಳ ಎಚ್ಚರ ವಹಿಸೋದು ಅನಿವಾರ್ಯ. ಪೀರಿಯಡ್ಸ್ (Periods) ರೆಗ್ಯುಲರ್ ಆಗಿರೋಲ್ಲ. ಹಾಗಾಗಿ ಯಾವಾಗ ಗರ್ಭ ಧರಿಸಬಹುದು ಅಂತ ಗೆಸ್ ಮಾಡೋದೂ ಕಷ್ಟವಾಗುತ್ತೆ. ಆದ್ದರಿಂದ ಮಗುವಾದ ಮೇಲೆ ಪೀರಿಯೆಡ್ಸ್ ಹಿಂದಿನಂತೆ ರೆಗ್ಯುಲರ್ ಆಗುವವರೆಗೂ ಗರ್ಭ ನಿರೋಧಕ, ಕಾಂಡೋಮ್ (Condoms)ಇತ್ಯಾದಿ ಬಳಸಿ ಲೈಂಗಿಕ ಕ್ರಿಯೆ ನಡೆಸಿದರೆ ಒಳಿತು.
ವೈದ್ಯರಾಗಲಿ, ಬೇರೆ ಆದರೂ ಏನೇ ಹೇಳಿದರೂ ಹೆಣ್ಣು ಮಕ್ಕಳು ಪ್ರತಿ ಕ್ಷಣದಲ್ಲಿಯೂ ಕಂಫರ್ಟೇಬಲ್ ಫೀಲ್ ಮಾಡಿ ಕೊಳ್ಳುವುದು ಮುಖ್ಯ. ಆಕೆಗೆ ಇರಿಟೇಟ್ ಆಗುತ್ತಿದೆ ಅಂದರೆ ಯಾವುದನ್ನೂ ಒತ್ತಾಯದಿಂದ ಮಾಡಿದರೆ ತಾಯಿಯ ಮನಸ್ಸಿಗೆ ಹಾಗೂ ಗರ್ಭದಲ್ಲಿರುವ ಮಗು ಅಥವಾ ಹುಟ್ಟಿದ ಮಗುವಿನ ಮನಸ್ಸಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ತಾಯಿ ತನ್ನ ಭಾವನೆನಯನ್ನು ಎದೆ ಹಾಲಿನ ಮೂಲಕ ಮಗುವಿಗೂ ಹರಿಸುತ್ತಾಳೆ. ಹಾಗಾಗೆ ಮಗು ಹೆತ್ತ ತಾಯಿ ಸದಾ ಖುಷಿಯಾಗಿರುವಂತೆ ನೋಡಿಕೊಳ್ಳುವುದು ಇಡೀ ಕುಟುಂಬ, ಅದರಲ್ಲಿಯೂ ವಿಶೇಷವಾಗಿ ಗಂಡನ ಆದ್ಯ ಕರ್ತವ್ಯವಾಗಿರುತ್ತದೆ.
ಇದನ್ನೂ ಓದಿ: ಪತಿಗೆ ಮುಟ್ಟಿನ ಬಗ್ಗೆ ಎಷ್ಟು ಜ್ಞಾನವಿದೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.