ಮೂಢನಂಬಿಕೆಗಳನ್ನು ಇಟ್ಟುಕೊಂಡರೆ, ಮಂತ್ರವಾದಿಗಳನ್ನು ನಂಬಿಕೊಂಡು ಅವರು ಹೇಳಿದಂತೆಲ್ಲ ಮಾಡುತ್ತ ಹೊರಟರೆ ಎಂಥ ದುರಂತ ಸಂಭವಿಸಬಹುದು ಎಂಬುದಕ್ಕೆ ಮದನಪಲ್ಲಿ ಡಬಲ್ ಮರ್ಡರ್ ಪ್ರಕರಣವೇ ಸಾಕ್ಷಿಯಾಗಿದೆ.
ಎಷ್ಟೇ ಸುಶಿಕ್ಷಿತ ಫ್ಯಾಮಿಲಿಯಾದರೂ ಮೂಢನಂಬಿಕೆಗಳನ್ನು ಇಟ್ಟುಕೊಂಡರೆ, ಮಂತ್ರವಾದಿಗಳನ್ನು ನಂಬಿಕೊಂಡು ಅವರು ಹೇಳಿದಂತೆಲ್ಲ ಮಾಡುತ್ತ ಹೊರಟರೆ ಎಂಥ ದುರಂತ ಸಂಭವಿಸಬಹುದು ಎಂಬುದಕ್ಕೆ ಮದನಪಲ್ಲಿ ಡಬಲ್ ಮರ್ಡರ್ ಪ್ರಕರಣವೇ ಸಾಕ್ಷಿಯಾಗಿದೆ.
ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದ ಹೆಣ್ಣುಮಕ್ಕಳಿಬ್ಬರ ಘೋರ ಹತ್ಯೆಯ ಪ್ರಕರಣದಲ್ಲಿ ತಾಯಿ- ತಂದೆಯರೇ ಅವರಿಬ್ಬರನ್ನು ಕೊಲೆ ಮಾಡಿದ್ದಾರೆ ಎಂದು ಮೊದಲು ನಂಬಲಾಗಿತ್ತು. ಆದರೆ ವಿಚಾರಣೆಯಿಂದ ತಿಳಿದು ಬಂದಿರುವ ಸಂಗತಿ ಅಂದರೆ, ತಂಗಿಯನ್ನು ಕೊಂದವಳು ಅಕ್ಕ. ನಂತರ ಅಕ್ಕ ತನ್ನನ್ನು ಕೊಲ್ಲಲು ತಾಯಿಯನ್ನು ಕೇಳಿಕೊಂಡಿದ್ದಳು. ನಂತರವೇ ತಾಯಿ, ಅಕ್ಕನನ್ನು ತ್ರಿಶೂಲದಿಂದ ಇರಿದಿರಿದು ಸಾಯಿಸಿದ್ದಾಳೆ. ಇದೆಲ್ಲ ನಡೆದುದು ಒಬ್ಬ ಮಂತ್ರವಾದಿ ಎಂದು ಹೇಳಿಕೊಂಡಿರುವ ನೀಚನಿಂದಾಗಿ. ಈ ನೀಚ, ಸತ್ಯಯುಗ ಬರಲಿದೆ; ಅದಕ್ಕೂ ಮುನ್ನ ನಿಮ್ಮನ್ನು ಸಾಯಿಸಿಕೊಂಡರೆ ನೀವು ಸತ್ಯಯುಗದಲ್ಲಿ ರಾಜ ಕುಟುಂಬದವರಾಗಿ ಜನಿಸುತ್ತೀರಿ ಎಂದೆಲ್ಲ ಬಾಯಿಗೆ ಬಂದಂತೆ ಹೇಳಿದ್ದ. ಇದನ್ನು ಇಡೀ ಫ್ಯಾಮಿಲಿ ನಂಬಿಕೊಂಡಿತ್ತು.
ತಮ್ಮದೇ ಮಕ್ಕಳನ್ನು ಕೊಂದ ದಂಪತಿಗೆ ಆಸ್ಪತ್ರೆಗೆ
ವಾಸ್ತವವಾಗಿ ಇಡೀ ಫ್ಯಾಮಿಲಿ ವಿದ್ಯಾವಂತರದು. ವಿದ್ಯಾವಂತರಾದರೆ ಏನಾಯಿತು, ಮನಸ್ಸನ್ನ ಇನ್ಯಾರದೋ ಕೈಗೆ ಕೊಟ್ಟ ಅಶಿಕ್ಷಿತರು ಇವರು ಎಂದರೂ ತಪ್ಪಲ್ಲ. ಅಕ್ಕ ಹಾಗೂ ತಂಗಿಯ ಇನ್‌ಸ್ಟಗ್ರಾಮ್ ಅಕೌಂಟ್‌ಗಳನ್ನು ನೋಡಿದರೆ ಇವರು ನಂಬಿಕೊಂಡು ಬಂಧ ಭ್ರಾಂತುಗಳೆಲ್ಲ ನಿಮ್ಮ ಕಣ್ಣಿಗೆ ಬೀಳುತ್ತವೆ. ಇವರ ತಂದೆ ಪುರುಷೋತ್ತಮ್ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ. ತಾಯಿ ಪದ್ಮಜಾ ಗಣಿತದಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ತಮ್ಮದೇ ಖಾಸಗಿ ಕಾಲೇಜನ್ನು ನಡೆಸುತ್ತಿದ್ದಳು. ಮೊದಲ ಮಗಳು ಅಲೈಖ್ಯಾ ಅರಣ್ಯ ಸೇವೆ ಪರೀಕ್ಷೆ ಮುಗಿಸಿ, ಅರಣ್ಯಾಧಿಕಾರಿಯಾಗಿ ಭೋಪಾಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಳು. ತಂಗಿ ಎಂಬಿಎ ಪದವೀಧರೆ ಸಾಯಿದಿವ್ಯಾ. ಈಕೆ ಕಲಿಕೆ ಮುಗಿಸಿ ಎಂಆರ್ ರೆಹಮಾನ್ ಮ್ಯೂಸಿಕ್ ಅಕಾಡೆಮಿಯಲ್ಲಿ ಮ್ಯೂಸಿಕ್ ಕೋರ್ಸ್ ಮಾಡುತ್ತಿದ್ದಳು. ಎಷ್ಟು ಕಲಿತರೇನು ಭ್ರಾಂತಿ ಬಿಡಲಿಲ್ಲ.
ಭಾನುವಾರ ರಾತ್ರಿ ಇವರ ಮನೆಯಲ್ಲಿ ಹೆಣ್ಣುಮಕ್ಕಳ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಬಂದು ನೋಡಿದರು. ಪಕ್ಕನೆ ಪದ್ಮಜಾ ಬಾಗಿಲು ತೆರೆಯಲಿಲ್ಲ. ಬಲವಂತವಾಗಿ ತೆರೆದು ನೋಡಿದಾಗ ಹೆಣ್ಣು ಮಕ್ಕಳಿಬ್ಬರೂ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಬೆತ್ತಲೆಯಾಗಿದ್ದರು. ಪೊಲೀಸರನ್ನು ಕರೆಸಲಾಯಿತು. ಪೊಲೀಸರು ಬಂದರೂ ಹೆಣ್ಣುಮಕ್ಕಳ ಶವ ಮುಟ್ಟಲು ಹೆತ್ತವರು ಬಿಡಲಿಲ್ಲ. ಕಾರಣ ಕೇಳಿದರೆ, 'ಇಂದು ಭಾನುವಾರ. ನಾಳೆ ಬೆಳಗಾದರೆ ಸತ್ಯಯುಗ ಶುರುವಾಗುತ್ತೆ. ಈ ಮಕ್ಕಳಿಬ್ಬರೂ ಮರಳಿ ಹುಟ್ಟಿ ಬರುತ್ತಾರೆ. ಅಲ್ಲಿಯವರೆಗೂ ಹೆಣ ಎತ್ತಬೇಡಿ,' ಎಂದು ಗಲಾಟೆ ಮಾಡಿದರು. ಪ್ರಕರಣ ಇಡೀ ಬಿಡಿಸಿ ನೋಡಿದಾಗ ಅರ್ಥವಾದದ್ದಿಷ್ಟು: ಒಬ್ಬ ಮಂತ್ರವಾದಿ ಇಡೀ ಫ್ಯಾಮಿಲಿಯನ್ನು ಭ್ರಮೆಗೊಳಪಡಿಸಿದ್ದಾನೆ. ಆತ ಹೇಳಿದ್ದನ್ನು ಮಕ್ಕಳೂ ಹೆತ್ತವರೂ ನಂಬಿ ಹಾಗೇ ನಡೆದುಕೊಂಡಿದ್ದಾರೆ. ಸ್ವತಃ ಅಕ್ಕನೇ ತಂಗಿಯನ್ನು ಬೆತ್ತಲೆ ಮಾಡಿ ಇರಿದು ಸಾಯಿಸಿದ್ದಾಳೆ. ನಂತರ ನನ್ನನ್ನು ಕೊಲ್ಲು, ಆಕೆಯನ್ನು ಬದುಕಿಸಿಕೊಂಡು ಬರುತ್ತೇನೆ ಎಂದು ತಾಯಿಗೆ ಹೇಳಿದ್ದಾಳೆ. ಅದನ್ನು ನಂಬಿ ತಾಯಿ ಹಾಗೇ ಮಾಡಿದ್ದಾಳೆ. ಈಗ ಆ ಮಂತ್ರವಾದಿ ಯಾರು ಎಂಬ ಹುಡುಕಾಟ ನಡೆದಿದೆ.
ಸೊಸೆಯ ನಿಗೂಢ ಸಾವಿನ ನಂತರ ಅತ್ತೆಯೂ ನೇಣಿಗೆ ಶರಣು
ಇದಕ್ಕೂ ಮುನ್ನ ಒಂದು ಬಾರಿ, ಇದೇ ಅಲೈಖ್ಯಾ, ತಮ್ಮ ಮನೆಯ ಸಾಕು ನಾಯಿಯನ್ನು ಕೊಂದು, ಅದನ್ನು ಬದುಕಿಸಿಕೊಂಡು ಬರುತ್ತೇನೆ ಎಂದು ಹೊರಟಿದ್ದಳು. ನಾಯಿಯನ್ನು ಕೊಂದಿದ್ದಳು. ಆದರೆ ಅದು ಬದುಕಿರಲಿಲ್ಲ. ಸಾಯಲು ಎರಡು ದಿನಗಳ ಮೊದಲು ಸಾಮಾಜಿಕ ಜಾಲತಾಣ ಇನ್‌ಸ್ಟಗ್ರಾಮ್‌ನಲ್ಲಿ ಆಕೆ ಹಾಕಿದ ಪೋಸ್ಟ್‌ನಲ್ಲಿ 'ನಮ್ಮ ಕೆಲಸ ಮುಗಿದಿದೆ, ಶಿವ ಬರುತ್ತಿದ್ದಾನೆ,' ಎಂದು ಅಲೈಖ್ಯಾ ಬರೆದುಕೊಂಡಿದ್ದಳು.
ಈ ವರ್ಷದ ಆರಂಭದಲ್ಲಿ ತಂಗಿ ಸಾಯಿದಿವ್ಯಾ ಆರೋಗ್ಯ ಸ್ವಲ್ಪ ಕೆಟ್ಟಿತ್ತು. ಸರಿಯಾಗಿ ವೈದ್ಯರಲ್ಲಿಗೆ ಹೋಗಿ ತೋರಿಸುವ ಬದಲು, ಕೇರಳದಿಂದ ಮಂತ್ರವಾದಿಗಳನ್ನು ಕರೆಸಿದ್ದರು ಈ ಫ್ಯಾಮಿಲಿ. ಈ ಮಂತ್ರವಾದಿಗಳೇ ಈ ಕುಟುಂಬದ ಸರ್ವನಾಶಕ್ಕೆ ಕಾರಣರಾಗಿದ್ದಾರೆ.
ಅದೊಂದು ಘೋರ ಕಾರಣಕ್ಕೆ ನಡೆದೇ ಹೋಯಿತು ಕೊಲೆ