
ಪ್ರೀತಿ ಒಂದು ಸುಂದರ ಅನುಭವ, ಇಬ್ಬರು ಜೊತೆಯಾಗಿ ಕಾಣುವ ಭವಿಷ್ಯದ ಕನಸುಗಳೇ ರೋಮಾಂಚನ. ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧನ, ಹೆಜ್ಜೆ, ನೋಟ, ಭಾವನೆ, ಮನಸ್ಸು, ಹೃದಯ ಒಂದಾಗಿ ಕಾಣುವ ಸಮುಧರ ಪ್ರೀತಿ ಅನುಭವವೇ ಭಿನ್ನ. ಇಬ್ಬರು ಜೊತೆಯಾದರೆ ಬದುಕು ಸ್ವರ್ಗದಂತಿರುತ್ತದೆ ಎಂಬ ಭರವಸೆ ಜೋಡಿ ಹಕ್ಕಿಗಳದ್ದು. ಆದರೆ ಆ ಪ್ರೀತಿ ಸ್ವಲ್ಪ ದಿನಗಳು ಕಳೆಯುತ್ತಿದ್ದಂತೆ ಉಸಿರು ಕಟ್ಟಲಾರಂಭಿಸುತ್ತದೆ, ನಾನು ನಾನಲ್ಲದೆ ಹೋಗಿದ್ದೀನಿ, ನಾನು ಅಂದು ಕೊಂಡಂತೆ ಬದುಕಿಲ್ಲ, ಎಲ್ಲವೂ ಅವನು ಅಂದುಕೊಂಡಂತೆಯೇ ನಡೆಯಬೇಕು ಎಂಬುವುದು ಲವ್ ಬಾಂಬ್ ಅಥವಾ ಲವ್ ಬಾಂಬಿಂಗ್ ಸುಳಿಯಲ್ಲಿ ಸಿಕ್ಕವರಿಗೆ ಖಂಡಿತ ಆಗಲಿದೆ. ಏನಿದು ಲವ್ ಬಾಂಬ್? ನಿಜವಾದ ಪ್ರೀತಿಗಿಂತ ಈ ಪ್ರೀತಿ ಹೇಗೆ ಭಿನ್ನವಾಗಿರುತ್ತೆ? ಈ ಸಳಿಯಲ್ಲಿ ಸಿಕ್ಕಾಕಿಕೊಂಡಿರುವುದು ಪಕ್ಕಾ ಪ್ಲ್ಯಾನ್ಡ್ ಟ್ರ್ಯಾಪ್‌ನಲ್ಲಿ ಎಂದು ತಿಳಿಯುವುದು ಹೇಗೆ?
ಏನಿದು ಲವ್ ಬಾಂಬ್?
ಇದೊಂದು ರೀತಿಯ ಸೈಕೋ ಪ್ರೀತಿ, ಇದರಲ್ಲಿ ಪ್ರಾರಂಭದಲ್ಲಿ ಗುರುತಿಸುವುದು ಕಷ್ಟವಾಗಬಹುದು, ಅವರು ಪ್ರೀತಿ ಗಳಿಸಲು ಏನು ಬೇಕಾದರು ಮಾಡಲು ಸಿದ್ಧ ಎಂಬಂತಿರುತ್ತಾರೆ, ನಿಮ್ಮ ಗಮನ ಸೆಳೆಯಲು ತುಂಬಾನೇ ಪ್ರಯತ್ನ ಮಾಡುತ್ತಾರೆ, ನಿಮ್ಮನ್ನು ತುಂಬಾನೇ ಇಷ್ಟಪಡುತ್ತಿರುತ್ತಾರೆ, ಇದನ್ನೆಲ್ಲಾ ನೋಡಿದ ಮೇಲೆ ನೀವು ಪ್ರೀತಿಯಲ್ಲಿ ಬೀಳುತ್ತಿದ್ದಂತೆ ಅವರ ನಿಜವಾದ ಬಣ್ಣ ಬಯಲಾಗುತ್ತೆ, ಅವರ ಕಂಟ್ರೋಲ್‌ನಲ್ಲಿ ನಿಮ್ಮನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ, ನಿಮ್ಮ ಇಷ್ಟಗಳಿಗೆ, ಭಾವನೆಗಳಿಗೆ ಬೆಲೆ ಕೊಡಲ್ಲ, ಬದಲಿಗೆ ಅವರು ಬಯಸಿದಂತೆ ನೀವು ಇರಬೇಕು ಎಂದು ಬಯಸುತ್ತಾರೆ, ಇದು ಬರಿ ಪ್ರೀತಿಯಲ್ಲಿ ಮಾತ್ರವಲ್ಲ, ಮದುವೆಯಾದ ಮೇಲೆ ಕೂಡ ನಡೆಯಬಹುದು. ಪ್ರೀತಿಸುತ್ತಿದ್ದಾಗ ತುಂಬಾನೇ ಇಷ್ಟವಾದ ವ್ಯಕ್ತಿ ಮದುವೆಯಾಗುತ್ತಿದ್ದಂತೆ ತುಂಬಾನೇ ಬದಲಾಗಿದ್ದಾರೆ ಎಂದನಿಸಲಾರಂಭಿಸುತ್ತದೆ, ಆ ವ್ಯಕ್ತಿ ಜೊತೆ ಬಾಳುವುದು ಕಷ್ಟವಾಗುವುದು, ಇದನ್ನು ಲವ್ ಬಾಂಬ್ ಎಂದು ಹೇಳುವುದು, ಪ್ರೀತಿ ಹೆಸರಿನಲ್ಲಿ ಬದುಕನ್ನೇ ಸರ್ವ ನಾಶ ಮಾಡಿ ಬಿಡುತ್ತಾರೆ.
ಟ್ರೆಂಡಿಂಗ್’ನಲ್ಲಿದೆ ಮದುವೆಯಾಗಿ ಬೇರೆ ಬೇರೆ ರೂಮಲ್ಲಿ ಮಲಗೋ ಫ್ರೆಂಡ್’ಶಿಪ್ ಮ್ಯಾರೇಜ್
ಈ ಬಗೆಯ ಟಾಕ್ಸಿಕ್ ಪ್ರೀತಿಯನ್ನು ಮೊದಲೇ ಗುರುತಿಸಲು ಸಾಧ್ಯವಾಗುವುದೇ,ಲಕ್ಷಣಗಳೇನು?
ಪ್ರೀತಿಯನ್ನು ತುಂಬಾನೇ ರೊಮ್ಯಾಂಟಿಕ್ ಆಗಿ ಬಿಂಬಿಸುತ್ತಾರೆ, ತುಂಬಾನೇ ಗಿಫ್ಟ್ಸ್ ಕೊಡ್ತಾರೆ, ನಿಮಗೆ ಸರ್‌ಫ್ರೈಸ್ ನೀಡಿ ನಿಮ್ಮ ಪ್ರೀತಿಯನ್ನು ಗಳಿಸಲು ಎಲ್ಲಾ ಸರ್ಕಸ್ ಮಾಡ್ತಾರೆ, ನೀನೇ ನನ್ನ ಪ್ರಾಣ ಎಂದೆಲ್ಲಾ ಹೇಳುತ್ತಾರೆ. ಅವರು ಪ್ರೀತಿಯನ್ನು ತೋರಿಸುವ ರೀತಿ ನೋಡಿ ನಿಜವಾಗಲೂ ಇಷ್ಟು ಪ್ರೀತಿಸಲು ಸಾಧ್ಯವೇ? ಎಂದನಿಸುವ ರೀತಿಯಲ್ಲಿ ಪ್ರೀತಿ ಮಾಡುತ್ತಾರೆ.
ನಿಮ್ಮ ಅಟೆನ್ಷನ್‌ಗೆ ಡಿಮ್ಯಾಂಡ್ ಮಾಡ್ತಾರೆ
ಅವರು ಫೋನ್ ಮಾಡಿದ ತಕ್ಷಣ ಪಿಕ್ ಮಾಡಬೇಕು, ನೀವು ಅವರ ಜೊತೆಯೇ ಟೈಮ್ ಸ್ಪೆಂಡ್ ಮಾಡಬೇಕು ಎಂದೆಲ್ಲಾ ಹೇಳುತ್ತಾರೆ. ಇದನ್ನು ಪ್ರೀತಿಯಲ್ಲಿ ತೋರಿಸುವ ಪೊಸೆಸಿವ್ ಎಂದೇ ಹೆಚ್ಚಿನವರು ಅಂದುಕೊಳ್ಳುತ್ತಾರೆ, ಅದರೆ ಈ ರೀತಿಯ ವರ್ತನೆ ಕಂಡು ಬಂದಾಗ ಇದು ಸರಿಯಲ್ಲ ಅಂತ ನೀವು ಅವರಿಗೆ ಹೇಳಿ,ಆದರೂ ಅವರು ಅದೇ ರೀತಿಯ ವರ್ತನೆ ಮುಂದುವರೆಸಿದರೆ ಅದು ಲವ್ ಬಾಂಬ್.
ನಿಮಗೆ ಅವರ ವರ್ತನೆ ಇಷ್ಟವಾಗಿಲ್ಲ ಎಂದಾಗ ಅದನ್ನು ಅವರನ್ನು ಆಸ್ವಾದಿಸುತ್ತಾರೆ
ಅವರ ವರ್ತನೆಯಿಂದಾಗಿ ನಿಮ್ಮ ಮನಸ್ಸಿಗೆ ನೋವಾಗಿದೆ ಎಂದು ತಿಳಿದರೂ ಅದನ್ನು ಆಸ್ವಾದಿಸುತ್ತಾರೆ. ಬರ್ತಾ ಬರ್ತಾ ಸೈಕೋ ವರ್ತನೆ ತೋರಿಸಲಾರಂಭಿಸುತ್ತಾರೆ, ಅವರನ್ನು ಸಹಿಸುವುದು ಕಷ್ಟ ಎಂದು ಎನಿಸಲಾರಂಭಿಸುತ್ತದೆ.
ಇಂಥ ಪ್ರೀತಿಯಿಂದ ಪಾರಾಗುವುದು ಹೇಗೆ?
ನಮ್ಮನ್ನು ತುಂಬಾ ಪ್ರೀತಿಸುವ ವ್ಯಕ್ತಿ ನಮ್ಮ ಮನಸ್ಸಿಗೆ ನೋವುಂಟು ಮಾಡುವುದಿಲ್ಲ, ಆದರೆ ಅವರು ನಮ್ಮನ್ನು ನೋಯಿಸುವುದನ್ನು ಇಷ್ಟ ಪಡುತ್ತಿದ್ದಾರೆ, ನಮ್ಮ ಮೇಲೆ ಸಂಪೂರ್ಣ ಕಂಟ್ರೋಲ್ ತೆಗೆದುಕೊಂಡಿದ್ದಾರೆ ಎಂದಾದರೆ ಅವರ ಬಳಿ ಈ ಬಗ್ಗೆ ಮಾತನಾಡಿ, ಆದರೂ ಬದಲಾಗುತ್ತಿಲ್ಲ ಎಂದಾದರೆ ನಿಮ್ಮ ಬದುಕಿನ ಕುರಿತ ನಿರ್ಧಾರ ನೀವು ತೆಗೆದುಕೊಳ್ಳುವುದು ಒಳ್ಳೆಯದು.
ಕ್ಲೈಂಟ್‌ಗೆ ಬಾಯ್ತಪ್ಪಿ ಲವ್ ಯು ಎಂದ ಉದ್ಯೋಗಿ, ಮರು ದಿನ ಇಮೇಲ್ ನೋಡಿ ನಾಚಿ ನೀರಾದ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.