ಕೆಲವೊಂದು ಸಂಬಂಧ ಬೆರಗು ಮೂಡಿಸುತ್ತದೆ. ಇಂಟರ್ನೆಟ್ ನಲ್ಲಿ ಮಗಳನ್ನು ನಾಚಿಸುವಷ್ಟು ಸೌಂದರ್ಯ ಹೊಂದಿರುವ ಅಮ್ಮಂದಿರನ್ನು ನಾವು ನೋಡ್ಬಹುದು. ಕೆಲ ಅಮ್ಮ ಮಗಳ ಜೋಡಿ ಎಲ್ಲರ ಗಮನ ಸೆಳೆಯುತ್ತದೆ. ಆದ್ರೆ ನಾವೀಗ ಹೇಳ್ತಿರುವ ಅಮ್ಮ – ಮಗಳು ಅಚ್ಚರಿ ಹುಟ್ಟಿಸುತ್ತಾರೆ.
ಸಾಮಾನ್ಯವಾಗಿ ತಾಯಿ ಮಗುವಿಗೆ ಸುಮಾರು 18 ರಿಂದ 20 ವರ್ಷದ ಅಂತರವಿರುತ್ತೆ. ತಾಯಿ ಅಷ್ಟು ದೊಡ್ಡವಳಾದಾಗ ಆಕೆಗೆ ಮಕ್ಕಳನ್ನು ಸಾಕುವಷ್ಟು ಪ್ರಬುದ್ಧತೆ ಬೆಳೆದಿರುತ್ತದೆ. ತಾಯಿ ಜವಾಬ್ದಾರಿ ಹೆಚ್ಚಿರುವ ಕಾರಣ ಆಕೆ ವಯಸ್ಸು ಹಾಗೂ ಮಗುವಿನ ವಯಸ್ಸು ಪ್ರಾಮುಖ್ಯತೆ ಪಡೆಯುತ್ತದೆ. ಮಕ್ಕಳನ್ನು ಪಡೆಯಲು ಸಾಧ್ಯವಾಗದವರು ಕೂಡ ಪುಟ್ಟ ಶಿಶುವನ್ನೋ ಅಥವಾ ನಾಲ್ಕೈದು ವರ್ಷದ ಮಗುವನ್ನೋ ದತ್ತು ಸ್ವೀಕಾರ ಮಾಡುವುದನ್ನು ನಾವು ನೋಡುತ್ತೇವೆ. ಇಲ್ಲೂ ವಯಸ್ಸಿನ ಅಂತರ ಹೆಚ್ಚಿರುತ್ತದೆ.
ಇವತ್ತಿನ ಪ್ರಪಂಚದಲ್ಲಿ ಇಂತಹ ಸಂಬಂಧಗಳಲ್ಲಿಯೂ ನಾವು ಅನೇಕ ವಿಚಿತ್ರಗಳನ್ನು ನೋಡುತ್ತೇವೆ. ಇಂದು ನಾವು ನಿಮಗೆ ಹೇಳಲಿರುವ ತಾಯಿ (Mother) ಮಗಳ ಸುದ್ದಿ ಅಪರೂಪ ಹಾಗೂ ವಿಚಿತ್ರವಾಗಿದೆ. ಇಲ್ಲೊಬ್ಬ ತಾಯಿ ಮಗಳಿಗೆ ಕೇವಲ 6 ವರ್ಷದ ಅಂತರವಿದೆ. ದಕ್ಷಿಣ ಕೊರಿಯಾ (South Korea) ದ 44 ವರ್ಷದ ಮಹಿಳೆಯೊಬ್ಬಳು 38 ವರ್ಷದ ಮಹಿಳೆಯನ್ನು ಮಗಳಾಗಿ ಸ್ವೀಕಾರ ಮಾಡಿದ್ದಾಳೆ. ಹೀಗೆ ಇವರು ತಾಯಿ ಮಗಳಾಗಿರುವ ಹಿಂದಿರುವ ಕಾರಣ ವಿಚಿತ್ರವಾಗಿದೆ.
undefined
ಮದ್ವೆಯಾಗೋಕೆ ಸರಿಯಾದ ಏಜ್ ಗ್ಯಾಪ್ ಯಾವುದು? ಅಧ್ಯಯನದ ವರದಿಯಲ್ಲೇನಿದೆ?
ತನಗಿಂತ 6 ವರ್ಷ ಚಿಕ್ಕವಳನ್ನು ಮಗಳಾಗಿ ಸ್ವೀಕರಿಸಿದ ಮಹಿಳೆ : ದಕ್ಷಿಣ ಕೊರಿಯಾದ ಯೂನ್ ಸಿಯೊ ರಾನ್ ಎಂಬ ಮಹಿಳೆಯೇ ದತ್ತು ಸ್ವೀಕಾರ ಮಾಡಿದ ಮಹಿಳೆಯಾಗಿದ್ದಾಳೆ. ಯೂನ್ ಸಿಯೋ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದವಳು. ಆಕೆಯ ತಂದೆಯೇ ಕುಟುಂಬಕ್ಕೆ ಬೆನ್ನೆಲುಬಾಗಿದ್ದರು. ತಾಯಿ ಮನೆಯನ್ನು ನಿಭಾಯಿಸುತ್ತದ್ದಳು. ಯೂನ್ ಸಿಯೋ ಮೇಲೆ ತಾಯಿಯ ಪ್ರಭಾವ ಹೆಚ್ಚು ಬೀರಿತು. ಆಕೆ ತನ್ನ ತಾಯಿ ಪರಿವಾರಕ್ಕಾಗಿ ದಿನವಿಡೀ ಕಷ್ಟಪಡುವುದನ್ನು ನೋಡುತ್ತಿದ್ದಳು. ತಾಯಿ ಎಷ್ಟೇ ದುಡಿದರೂ ತಂದೆ ತಾಯಿಯನ್ನು ಸ್ವಲ್ಪವೂ ಹೊಗಳುತ್ತಿರಲಿಲ್ಲ. ಇದರಿಂದ ಯೂನ್ ಸಿಯೊ ದುಃಖಿತಳಾಗುತ್ತಿದ್ದಳು. ತನ್ನ ವರ್ತನೆ ಮಗಳ ಮೇಲೆ ಪರಿಣಾಮ ಬೀರಬಹುದೆಂಬ ವಿಚಾರ ಯೂನ್ ಸಿಯೊ ತಂದೆಗೂ ಇರಲಿಲ್ಲ.
ತಾಯಿ ದಿನೇ ದಿನೇ ಕಷ್ಟಪಡುವುದನ್ನು ನೋಡಿದ ಯೂನ್ ತನಗೆ ಮದುವೆಯೇ ಬೇಡ ಎನ್ನುವ ನಿರ್ಧಾರ ತೆಗೆದುಕೊಂಡಳು. ಮದುವೆ ಬೇಡವಾದರೂ ಆಕೆಗೆ ತನ್ನದೇ ಆದ ಪರಿವಾರ ಬೇಕು ಎನ್ನುವ ಆಸೆಯಿತ್ತು. ಹಾಗಾಗಿ ಅವಳು ತನ್ನ ಗೆಳತಿಯನ್ನೇ ಮಗಳಾಗಿ ಸ್ವೀಕರಿಸಿದಳು. ಯೂನ್ ಸಿಯೊ ತನ್ನ ಗೆಳತಿ ಲೀ ಇಯೋ ರಿ ಯನ್ನು ಕಾನೂನುಬದ್ಧವಾಗಿ ಮಗಳೆಂದು ಸ್ವೀಕರಿಸಿದಳು. ಇವರಿಬ್ಬರ ಸ್ವಭಾವ, ವಿಚಾರಗಳು ಒಂದೇ ಆಗಿದ್ದರಿಂದ ಇಬ್ಬರೂ ಜೊತೆಯಲ್ಲೇ ಇರುವ ನಿರ್ಧಾರ ತೆಗೆದುಕೊಂಡರು. ಜೀವನಪೂರ್ತಿ ಇಬ್ಬರೂ ಜೊತೆಯಲ್ಲಿದ್ದು ಒಬ್ಬರನ್ನೊಬ್ಬರು ಚೆನ್ನಾಗಿ ನೋಡಿಕೊಳ್ಳುವುದು ಇವರ ಉದ್ದೇಶವಾಗಿತ್ತು. ಆದ್ದರಿಂದ ಈಗ ಕಾನೂನು ದಾಖಲೆಗಳ ಪ್ರಕಾರ 44 ವರ್ಷದ ಯೂನ್ ಸಿಯೊಗೆ 38 ವರ್ಷದ ಲೀ ಇಯೊ ರಿ ಎಂಬ ಮಗಳಿದ್ದಾಳೆ.
ಅನೈತಿಕ ಸಂಬಂಧ ಟಿಸಿಲೊಡೆಯಲು ಈ ಸ್ಥಳವೇ ಕಾರಣ!
ಮಗಳಾಗಿ ಸ್ವೀಕರಿಸುವ ನಿರ್ಧಾರ ತೆಗೆದುಕೊಂಡಿದ್ದು ಏಕೆ? : ಮೊದಲು ಯೂನ್ ಸಿಯೋ ಮತ್ತು ಲಿ ಇಯೋ ಜೊತೆಯಲ್ಲಿ ಇರುವುದಕ್ಕೋಸ್ಕರ ಇಬ್ಬರೂ ಮದುವೆಯಾಗಬೇಕೆನ್ನುವ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಸೌತ್ ಕೊರಿಯಾದಲ್ಲಿ ಸಲಿಂಗ ವಿವಾಹ ಕಾನೂನು ಬಾಹಿರವಾದ ಕಾರಣ ಅವರಿಬ್ಬರ ಮದುವೆ ಸಾಧ್ಯವಿರಲಿಲ್ಲ. ಹಾಗಾಗಿ ಅವರು ಎಡಲ್ಟ್ ಅಡಾಪ್ಶನ್ ಕಾನೂನಿನ ಲಾಭ ಪಡೆದರು. ಈ ಪ್ರಕ್ರಿಯೆಯಲ್ಲಿ ಯೂನ್ ಸಿಯೊಗೆ ಲಿ ಇಯೋ ತನಗಿಂತ ಚಿಕ್ಕವಳೆಂದು ಸಾಬೀತುಪಡಿಸಬೇಕಾಗಿತ್ತು. ಅದಕ್ಕೆ ಬೇಕಾದ ಕಾಗದ ಪತ್ರಗಳನ್ನು ಒದಗಿಸಿದ ನಂತರ ದತ್ತು ಸ್ವೀಕಾರ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿತು. ಇದರಿಂದ ನಮಗೆ ಮೆಡಿಕಲ್ ರಿಲೀಜ್ ಮುಂತಾದ ಕೆಲವು ಕಾಗದಗಳಿಗೆ ಸೈನ್ ಹಾಕುವುದು, ಒಬ್ಬರನ್ನೊಬ್ಬರು ನೋಡಿಕೊಳ್ಳುವುದು ಅಥವಾ ನಮ್ಮಲ್ಲಿ ಯಾರಾದರೂ ತೀರಿಕೊಂಡರೆ ಇನ್ನೊಬ್ಬರು ಅಂತಿಮ ಸಂಸ್ಕಾರವನ್ನು ಕೂಡ ಮಾಡಬಹುದು ಎಂದು ಯೂನ್ ಮತ್ತು ಲಿ ಇಯೊ ಹೇಳುತ್ತಾರೆ.