
ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಹೊಸ ಹೊಸ ವಿಡಿಯೋಗಳು ವೈರಲ್ ಆಗುತ್ತಿವೆ. ಕೆಲವೊಮ್ಮೆ ಇಂತಹ ವಿಡಿಯೋಗಳು ಸಮಾಜದ ಕರಾಳ ವಾಸ್ತವವನ್ನು ಬಹಿರಂಗಪಡಿಸುತ್ತವೆ. ಇತ್ತೀಚೆಗೆ, ಇದೇ ರೀತಿಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರೋದು ಮಾತ್ರವಲ್ಲ, ಕೋಲಾಹಲವನ್ನೇ ಸೃಷ್ಟಿಸಿದೆ. ಈ ವಿಡಿಯೋದಿಂದ, ಮದುವೆಯಾಗಲು ಬಯಸುವ ಯುವಕರ ಭಯ ಇನ್ನಷ್ಟು ಹೆಚ್ಚಾಗಿದೆ. ವಿಡಿಯೋದಲ್ಲಿ ಇರುವ ಅಂಶವನ್ನು ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಮನರಂಜನಾ ವೀಡಿಯೊಗಳು ವೈರಲ್ ಆಗುತ್ತವೆ. ಆದರೆ ಕೆಲವೊಮ್ಮೆ ಮಾತ್ರ ಇಂಥ ವೀಡಿಯೊಗಳು ವೈರಲ್ ಆಗುತ್ತವೆ. ಇದರಿಂದಾಗಿ, ಅನೇಕ ನಂಬಿಕೆಗಳು ಅಲುಗಾಡಿದಂತೆ ಅನಿಸುತ್ತದೆ. ಅದರೊಂದಿಗೆ ಸಮಾಜದ ಒಂದು ಕರಾಳ ಮುಖವೂ ಬಹಿರಂಗಗೊಳ್ಳುತ್ತದೆ. ಈ ವೀಡಿಯೊದಲ್ಲಿ, ವಧುವಿಗೆ ತನ್ನ ಮದುವೆಯಲ್ಲಿ ವರದಕ್ಷಿಣೆ ರೂಪದಲ್ಲಿ ಬಾಕ್ಸ್ ಮಂಚ ಉಡುಗೊರೆಯಾಗಿ ಸಿಕ್ಕಿದ್ದನ್ನು ನೋಡಬಹುದು. ಆದರೆ, ಮದುವೆಯಾದ ದಿನದಿಂದಲೂ ಆಕೆ ಈ ಮಂಚವನ್ನು ಮುಟ್ಟಲು ಯಾರಿಗೂ ಬಿಟ್ಟಿರಲಿಲ್ಲ. ಯಾವಾಗಲೂ ಕೂಡ ಮಂಚದ ಮೇಲಿನ ಹಾಸಿಗೆಯನ್ನು ತಾನೇ ಬದಲಾಯಿಸಿಕೊಂಡು ಅದರ ಮೇಲೆ ಕುಳಿತಿರುತ್ತಿದ್ದಳು. ಆದರೆ, ಒಂದು ದಿನ ಮಾತ್ರ ಇದರ ಕಹಿಸತ್ಯ ಬಹಿರಂಗವಾಗಿದೆ.
ವಧುವಿನ ಪತಿಗೂ ಕೂಡ ಮದುವೆಯ ಉಡುಗೊರೆಯಾಗಿ ಬಂದ ಹಾಸಿಗೆಯ ಮೇಲೆ ತುಂಬಾ ವ್ಯಾಮೋಹವಿತ್ತು. ಒಂದು ದಿನ ಆತ ತನ್ನ ಪತ್ನಿಗೆ ತಿಳಿಯದೇ ಹಾಸಿಗೆಯನ್ನು ಎತ್ತು ಮಂಚದ ಬಾಕ್ಸ್‌ಅನ್ನು ತೆರೆದಿದ್ದಾನೆ. ಅದನ್ನು ನೋಡಿ ವರ ಮಾತ್ರವಲ್ಲ, ಅತ್ತೆ-ಮಾವ ಕೂಡ ಆಘಾತಕ್ಕೆ ಒಳಗಾಗಿದ್ದಾರೆ.
ಈ ವೀಡಿಯೊವನ್ನು @silent_boy_ap_dhakad_602 ಖಾತೆ ಹಂಚಿಕೊಂಡಿದೆ. ಅದರೊಂದಿಗೆ ಬರೆದ ಕ್ಯಾಪ್ಶನ್‌ನಲ್ಲಿ, "ಮದುವೆಯಲ್ಲಿ ಸಿಕ್ಕ ಹಾಸಿಗೆಯಿಂದ ಗೆಳೆಯ ಎದ್ದ!" ಈ ವೀಡಿಯೊ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ವೀಡಿಯೊಗೆ ನೆಟಿಜನ್‌ಗಳು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ವಿಡಿಯೋದಲ್ಲಿ ಮದುವೆಯ ನಂತರ ತನ್ನ ಅತ್ತೆಯ ಬಳಿಗೆ ಬಂದ ವಧು ಹಾಸಿಕೆಯನ್ನು ಜೋಡಿಸುತ್ತಿದ್ದಳು. ಆ ಸಮಯದಲ್ಲಿ, ಪತಿ ಮತ್ತು ಆಕೆಯ ಅತ್ತೆಯಂದಿರು ಬೆಡ್‌ರೂಮ್‌ಗೆ ಪ್ರವೇಶಿಸಿದರು. ಇದರಿಂದಾಗಿ, ವಧುವಿನ ಮುಖದಲ್ಲಿ ಭಯ ಕೂಡ ಆವರಿಸಿತು. ಆಕೆ ಭಯಭೀತಳಾದಂತೆ ಕಾಣುತ್ತಿದ್ದಳು. ಅದರ ಬೆನ್ನಲ್ಲಿಯೇ ಮದುಮಗ ಮಂಚದ ಮೇಲಿದ್ದ ಬೆಡ್ ಹಾಗೂ ಅದರ ಮೇಲಿನ ಬೆಡ್‌ಶೀಟ್‌ಅನ್ನು ತೆಗೆಯುತ್ತಾನೆ. ಬೆಡ್‌ಅನ್ನು ಎತ್ತಿ, ಮಂಚದ ಬಾಕ್ಸ್‌ಅನ್ನು ತೆರೆದಾಗ ಅದರಲ್ಲಿ ಒಬ್ಬ ವ್ಯಕ್ತಿ ಮಲಗಿರುವುದು ಕಂಡಿದೆ. ಆತ ವಧುವಿನ ಬಾಯ್‌ಫ್ರೆಂಡ್ ಎನ್ನುವುದು ಗೊತ್ತಾಗಿದೆ.
ಮಲಗುವ ಕೋಣೆಯನ್ನು ಅನುಮಾನಾಸ್ಪದ ಶಬ್ದ ಬಂದಾಗ ಎಲ್ಲರೂ ವಧುವಿನ ಕೋಣೆಗೆ ಹೊಕ್ಕಿದ್ದಾರೆ. ಆ ಸಮಯಲ್ಲಿ ಯುವತಿ ಕೋಣೆಯಲ್ಲಿ ಒಬ್ಬಂಟಿಯಾಗಿದ್ದಳು. ಇದರಿಂದಾಗಿ ಗಂಡನಿಗೆ ಅನುಮಾನ ಬಂದಿತ್ತು. ಇಡೀ ಕೋಣೆಯವನ್ನು ಸಂಪೂರ್ಣವಾಗಿ ಚೆಕ್ ಮಾಡಿದ ಬಳಿಕ ಮಂಚವನ್ನು ಪರಿಶೀಲನೆ ಮಾಡಲಾಗಿದೆ. ಅದರ ಒಳಗೆ ವಧುವಿನ ಬಾಯ್‌ಫ್ರೆಂಡ್ ಎದ್ದು ಬಂದಿದ್ದಾನೆ. ಇದರ ನಂತರ, ಅಲ್ಲಿಯ ಜನರು ಸೇರಿ ವಧುವಿನ ಬಾಯ್‌ಫ್ರೆಂಡ್‌ನಲ್ಲಿ ಬಟ್ಟೆ ಒಗೆದಂತೆ ಒಗೆದಿದ್ದಾರೆ. ಈ ವೇಳೆ ಆಕೆಯ ಬಾಯ್‌ಫ್ರೆಂಡ್ ಅಕ್ಷರಶಃ ಕ್ಷಮೆಯಾಚಿಸಲು ಪ್ರಾರಂಭ ಮಾಡಿದ್ದ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.