
ಗುರುಗಾಂವ್(ಫೆ.14) ವಿಶ್ವದೆಲ್ಲೆಡೆ ಪ್ರೇಮಿಗಳ ದಿನಾಚರಣೆ ಆಚರಿಸಲಾಗುತ್ತಿದೆ. ಪಾರ್ಕ್, ಹೊಟೆಲ್, ಪಬ್ ಸೇರಿದಂತೆ ಎಲ್ಲೆಡೆ ಪ್ರೇಮಿಗಳೇ ತುಂಬಿದ್ದಾರೆ. ಹಲವರು ಪ್ರೇಮ ನಿವೇದನೆ ಮಾಡಿ ಸಂಭ್ರಮಿಸುತ್ತಾರೆ. ಪಾರ್ಟಿ, ಉಡುಗೊರೆಗಳಿಗೆ ಲೆಕ್ಕವೇ ಇಲ್ಲ. ಭಾರತದಲ್ಲೂ ವ್ಯಾಲಂಟೈನ್ಸ್ ಡೇ ಸಂಭ್ರಮ ರಹಸ್ಯ, ಬಹಿರಂಗವಾಗಿ ನಡೆಯುತ್ತಿದೆ. ಇದರ ನಡುವೆ ತನ್ನ ಬಿಟ್ಟು ಹೋದ ಮಾಜಿ ಗೆಳೆಯನ ವಿರುದ್ದ ಯುವತಿಯೊಬ್ಬಳು ಪ್ರೇಮಿಗಳ ದಿನವೇ ರಿವೇಂಜ್ ತೀರಿಸಿದ ಘಟನೆ ಗುರುಗಾಂವ್‌ನಲ್ಲಿ ನಡೆದಿದೆ. 24 ವರ್ಷದ ಆಯುಷಿ ರಾವತ್, ಮಾಜಿ ಗೆಳೆಯನ ಮನೆಗೆ ಬರೋಬ್ಬರಿ 100 ಪಿಜ್ಜಾ ಆರ್ಡರ್ ಮಾಡಿದ್ದಾಳೆ. ಆದರೆ ಡೆಲಿವರಿ ವೇಳೆ ಪಾವತಿ ಮಾಡುವ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿದ್ದಾಳೆ.
ಯಶ್ ಹಾಗೂ ಆಯುಷಿ ರಾವತ್ ಒಂದಷ್ಟು ದಿನ ಪ್ರೀತಿಯಲ್ಲಿ ಬಂಧಿಯಾಗಿದ್ದರು. ಆದರೆ ಇವರಿಬ್ಬರ ನಡುವೆ ಕೆಲ ಕಾರಣಗಳಿಗೆ ಮನಸ್ತಾಪವಾಗಿತ್ತು. ಆಯುಷಿ ರಾವತ್ ಈ ಮನಸ್ತಾಪ ಪರಿಹರಿಸಿ ಪ್ರೀತಿ ಮುಂದುವರಿಸಲು ಬಯಸಿದ್ದರು. ಆದರೆ ಯಶ್ ಯಾವುದಕ್ಕೂ ತಯಾರಿರಲಿಲ್ಲ. ಏಕಾಏಕಿ ಬ್ರೇಕ್ ಅಪ್ ಮಾಡಿಕೊಂಡು ದೂರ ಸರಿದಿದ್ದ. ಇದು ಆಯಷಿಗೆ ತೀವ್ರ ನೋವು ಕೊಟ್ಟಿತ್ತು. ಆಯುಷಿ ರಾವತ್ ಅದೇನೆ ಮಾಡಿದರೂ ಮಾಜಿ ಗೆಳೆಯ ಯಶ್ ಮರೆಯಲು ಸಾಧ್ಯವಾಗುತ್ತಿರಲಿಲ್ಲ. ತನಗೆ ಮೋಸ ಮಾಡಿದ್ದಾನೆ. ಪ್ರೀತಿಯ ನಾಟಕವಾಡಿ ಕೊನೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ ಎಂದು ಆಕೆಯ ಆಕ್ರೋಶ ಹೆಚ್ಚಾಗಿದೆ.
ಬ್ರೇಕ್ಅಪ್ ನಂತ್ರ ಪ್ರತಿ ನಿಮಿಷಕ್ಕೆ 1 ರೂ. ಗೂಗಲ್ ಪೇ ಮಾಡ್ತಿದ್ದಾನೆ ಎಕ್ಸ್ !
ಪ್ರೇಮಿಗಳ ದಿನಾಚರಣೆ ದಿನ ಮಾಜಿ ಗೆಳೆಯ ಮತ್ತೆ ಕಾಡತೊಡಗಿದ್ದಾನೆ. ತನಗೆ ಮೋಸ ಮಾಡಿದ ಮಾಜಿ ಗೆಳೆಯ ಯಶ್ ವಿರುದ್ದ ಸೇಡು ತೀರಿಸಿಕೊಳ್ಳಲು ಆಯುಷಿ ರಾವತ್ ಮುಂದಾಗಿದ್ದಾಳೆ. ಇದಕ್ಕಾಗಿ ಕ್ಯೂಟ್ ಹಾಗೂ ಅಷ್ಟೇ ದುಬಾರಿ ರೀವೇಂಜ್‌ಗೆ ಪ್ಲಾನ್ ಮಾಡಿದ್ದಾಳೆ. ಆನ್‌ಲೈನ್ ಮೂಲಕ 100 ಪಿಜ್ಜಾ ಆರ್ಡರ್ ಮಾಡಿದ್ದಾಳೆ. ಮಾಜಿ ಗೆಳೆಯನ ಮನೆ ವಿಳಾಸಕ್ಕೆ ಈ ಪಿಜ್ಜಾ ಆರ್ಡರ್ ಮಾಡಿದ್ದಾಳೆ. ಆದರೆ ಆನ್‌ಲೈನ್ ಮೂಲಕ ಹಣ ಪಾವತಿ ಮಾಡಿಲ್ಲ. ಡೆಲಿವರಿ ವೇಳೆ ಹಣ ಪಾವತಿ ಮಾಡುವ ಕ್ಯಾಶ್ ಆನ್ ಡೆಲವರಿಯನ್ನು ಆಯ್ಕೆ ಮಾಡಿಕೊಂಡಿದ್ದಾಳೆ.
ಆರ್ಡರ್ ಮಾಡಿದ ಕೆಲ ಹೊತ್ತಲ್ಲಿ ಫುಡ್ ಡೆಲಿವರಿ ಎಜೆಂಟ್ 100 ಪಿಜ್ಜಾ ಹಿಡಿದು ಮಾಜಿ ಗೆಳೆಯ ಯಶ್ ಮನೆಗೆ ತಲುಪಿಸಿದ್ದಾರೆ. ಎಲ್ಲಾ ಪಿಜ್ಜಾವನ್ನು ಜೋಡಿಸಿ ಮಾಜಿ ಗೆಳೆಯ ಮನೆಗೆ ಡೆಲಿವರಿ ನೀಡಿದ್ದಾರೆ. ಒಂದು ಪಿಜ್ಜಾಗೆ ಕನಿಷ್ಠ 150 ರೂಪಾಯಿ ಇದ್ದರೂ 15,000 ರೂಪಾಯಿ ಮೊತ್ತವನ್ನು ಮಾಜಿ ಗೆಳೆಯ ಪಾವತಿಸಬೇಕಾಗುತ್ತದೆ. ಇಲ್ಲಿ ಆಯುಷಿ ಎಷ್ಟು ರೂಪಾಯಿ ಪಿಜ್ಜಾ ಆರ್ಡರ್ ಮಾಡಿದ್ದಾರೆ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಮಾಜಿ ಗೆಳೆಯನ ವಿರುದ್ದ ಸರಿಯಾಗಿ ಸೇಡು ತೀರಿಸಿಕೊಂಡಿದ್ದು ಮಾತ್ರ ನಿಜ.
ಈ ಸೇಡಿನ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸೇಡು ತೀರಿಸಿಕಬೇಕು ಎಂದಿದ್ದರೆ ಈ ರೀತಿಯೂ ಮಾಡಬಹುದು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸೇಡು ತೀರಿಸಿಕೊಳ್ಳಲು ಬೇರೆ ರೀತಿ ಯೋಚನೆ ಮಾಡಬೇಡಿ. ಈ ಮಾರ್ಗ ಯೋಚಿಸಿ ಎಂದು ಹಲವರು ಸೂಚಿಸಿದ್ದಾರೆ. ಪ್ರೇಮಿಗಳ ದಿನಾಚರಣೆ ದಿನವೇ ಈ ರೀತಿಯ ಸೇಡು ತೀರಿಸಿಕೊಂಡ ಘಟನೆ ಇದೀಗ ಭಾರಿ ಸದ್ದು ಮಾಡುತ್ತಿದೆ.
ವಿವಾಹಿತ ಹೀರೋ ಜೊತೆ ಡೇಟಿಂಗ್, ಮೂರು ಪ್ರೇಮ ವೈಫಲ್ಯ, 41 ಆದರೂ ಒಂಟಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.