ತಬ್ಬಿ ಹಿಡಿದು ಜಿಂಕೆಗೆ ಮುತ್ತಿಕ್ಕಿದ ಪೋರ: ವಿಡಿಯೋ ವೈರಲ್

By Suvarna News  |  First Published Jul 5, 2022, 5:10 PM IST

ಪುಟ್ಟ ಅಂಬೆಗಾಲಿಡುವ ಕಂದ ಹಾಗೂ ಪ್ರಾಣಿಗಳ ಒಡನಾಟದ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಕೆಲ ದಿನಗಳ ಹಿಂದೆ ಪುಟ್ಟ ಮಕ್ಕಳೊಂದಿಗೆ ಶ್ವಾನ ಜಾರು ಬಂಡಿ ಆಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.


ಪುಟ್ಟ ಅಂಬೆಗಾಲಿಡುವ ಕಂದ ಹಾಗೂ ಪ್ರಾಣಿಗಳ ಒಡನಾಟದ ಹಲವು ವಿಡಿಯೋಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಕೆಲ ದಿನಗಳ ಹಿಂದೆ ಪುಟ್ಟ ಮಕ್ಕಳೊಂದಿಗೆ ಶ್ವಾನ ಜಾರು ಬಂಡಿ ಆಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಮನೆಯಲ್ಲಿ ಪುಟ್ಟ ಮಕ್ಕಳ ಜೊತೆ ಸಾಕು ಪ್ರಾಣಿಗಳಿದ್ದರೆ, ಅವುಗಳೊಂದಿಗೆ ಒಡನಾಡುತ್ತಲೇ ಪುಟ್ಟ ಮಕ್ಕಳು ಬೆಳೆದು ದೊಡ್ಡವರಾಗುತ್ತಾರೆ. ಅದರಲ್ಲೂ ಶ್ವಾನಗಳು ಹಾಗೂ ಮಕ್ಕಳ ಒಡನಾಟ ತುಂಬಾ ಅಮೋಘವಾದುದು. ಅದೇ ರೀತಿ ಇಲ್ಲಿ ಜಿಂಕೆಯೊಂದಿಗೆ ಮುದ್ದು ಮಗುವಿನ ಒಡನಾಟವೊಂದು ವೈರಲ್ ಆಗಿದೆ.

jesseramirez89 ಎಂಬ ಇನ್ಸ್ಟಾ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಈಗಷ್ಟೇ ನಡೆಯಲು ಕಲಿತಿರುವ ಪುಟ್ಟ ಕಂದನೋರ್ವ ಜಿಂಕೆಯೊಂದನ್ನು ಮುದ್ದು ಮಾಡುತ್ತಿದ್ದಾನೆ. ತಲೆಗೆ ನೀಲಿ ಕ್ಯಾಪ್ ಹಾಗೂ ಕಾಲಿಗೆ ನೀಲಿ ಶೂ ಹಾಗೂ ಕಪ್ಪು ಬಣ್ಣದ ಟೀ ಶರ್ಟ್‌ ಹಾಗೂ ಚಡ್ಡಿಯನ್ನು ಬಾಲಕ ಧರಿಸಿದ ಅದನ್ನು ತಬ್ಬಿಕೊಂಡು ಅದಕ್ಕೆ ಮುತ್ತ ನೀಡಲು ಬಾಲಕ ಯತ್ನಿಸುತ್ತಿದ್ದಾನೆ. ಈ ಮುದ್ದಾದ ವಿಡಿಯೋವನ್ನು ಸಾವಿರಾರು ಜನ ಲೈಕ್ ಮಾಡಿದ್ದಾರೆ. ಪುಟ್ಟ ಬಾಲಕ ಹಾಗೂ ಜಿಂಕೆಯ(deer) ನಡುವಿನ ಮುದ್ದಾದ ಅನುಬಂಧಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂತಹಾ ಸುಂದರ ಕ್ಷಣ, ತುಂಬಾ ಒಳ್ಳೆಯ ಹುಡುಗ (Boy), ಬದುಕು ಹೀಗೆಯೇ ಇರಬೇಕು ಎಂದು ಒಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡಿದ್ದಾರೆ. ಆದರೆ ಎಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

 
 
 
 
 
 
 
 
 
 
 
 
 
 
 

Tap to resize

Latest Videos

A post shared by Jesse Ramirez (@jesseramirez89)

 

ಇತ್ತೀಚೆಗೆ ಪ್ರಾಣಿಗಳು ಕೂಡ ಮನುಷ್ಯರಂತೆ ಎಲ್ಲಾ ಸವಲತ್ತುಗಳನ್ನು ಎಂಜಾಯ್‌ ಮಾಡಲು ಬಯಸುತ್ತಿವೆ. ಅದರಲ್ಲೂ ಶ್ವಾನಗಳ ಕೆಲ ಬುದ್ಧಿವಂತಿಕೆ ನೋಡಿದರೆ ಇವರೇನು ಮನುಷ್ಯರೋ ಪ್ರಾಣಿಗಳೋ ಎಂದು ಸಂಶಯ ಮೂಡುವುದು ಸಾಮಾನ್ಯ. ಶ್ವಾನಗಳ ಅನೇಕ ಮುದ್ದಾದ ವಿಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರಬಹುದು ಹಾಗೆಯೇ ಇಲ್ಲೊಂದು ಶ್ವಾನ ಜಾರು ಬಂಡಿ ಆಡುತ್ತಿದೆ. ಒಂದು ಬದಿಯಲ್ಲಿರುವ ಸ್ಟೆಪ್ ಮೇಲೇರುವ ಶ್ವಾನ ಮತ್ತೊಂದು ಕಡೆಯ ಇಳಿಜಾರಿನಲ್ಲಿ ಜಾರುತ್ತಾ ಹೋಗಿ ಮಕ್ಕಳಂತೆ ಎಂಜಾಯ್ ಮಾಡುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು ವಿಡಿಯೋ ಪೋಸ್ಟ್ ಆದಾಗಿನಿಂದ ಮೂರು ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 

ಪಾರ್ಕೊಂದರಲ್ಲಿ ಇರುವ ಜಾರು ಬಂಡಿ ಇದಾಗಿದ್ದು, ಇದರಲ್ಲಿ ಮಕ್ಕಳು ಒಬ್ಬೊಬರಾಗಿಯೇ ಮೆಟ್ಟಿಲ ಮೂಲಕ ಹತ್ತಿ ಮತ್ತೊಂದು ಭಾಗದಲ್ಲಿ ಮೇಲಿನಿಂದ ಕೆಳಗೆ ಹಾರುತ್ತಾರೆ. ಇದನ್ನು ನೋಡಿ ಮಕ್ಕಳ ಆಟದೊಂದಿಗೆ ತಾನು ಸೇರಿಕೊಳ್ಳುವ ಶ್ವಾನ ತಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮಕ್ಕಳೊಂದಿಗೆ ಜಾರುಬಂಡಿ ಆಟ ಆಡುತ್ತಿದ್ದು, ಮಕ್ಕಳು ಈ ಶ್ವಾನವನ್ನು ಇಷ್ಟ ಪಡುತ್ತಿದ್ದು, ಜೊತೆ ಜೊತೆಯಲ್ಲಿ ಕರೆದೊಯ್ಯುತ್ತಿದ್ದಾರೆ. ಈ ಪುಟ್ಟ ಶ್ವಾನ ನೀಲಿ ಬಣ್ಣದ ಜಾಕೆಟ್ ಧರಿಸಿದ್ದು, ಒಂದೊಂದೇ ಹೆಜ್ಜೆ ಇಡುತ್ತ ಮೆಟ್ಟಿಲು ಹತ್ತಿ ಕೆಳಗೆ ಜಾರುತ್ತಿದೆ. ವೀಡಿಯೊವನ್ನು ಒಂದು ವಾರದ ಹಿಂದೆ ಇನ್ಸ್ಟಾಗ್ರಾಮ್‌ (Instagram) ಹ್ಯಾಂಡಲ್( @beaglethedoodle) ನಲ್ಲಿ ಪೋಸ್ಟ್ ಮಾಡಲಾಗಿದೆ. 'ಡಾಗ್ಸ್ ಆಫ್ ಇನ್‌ಸ್ಟಾಗ್ರಾಮ್' ಕುಟುಂಬದ ಉದಯೋನ್ಮುಖ ತಾರೆ ಎನಿಸಿರುವ ಈ ಶ್ವಾನಕ್ಕೆ ಇನ್‌ಸ್ಟಾಗ್ರಾಮ್ ನಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ.

ಇದನ್ನು ಓದಿ: Dharwad: ನಾಯಿಯನ್ನು ಕೊಲ್ಲಲು ಮುಂದಾದ ದುರುಳರು: ರಕ್ಷಣೆ ಮಾಡಿದ ಶ್ವಾನ ಪ್ರಿಯ

ಕೆಲದಿನಗಳ ಹಿಂದೆ ಶ್ವಾನವೊಂದು ಸಿಂಕ್‌ನಲ್ಲಿ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿತ್ತು. ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಸ್ನಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ  ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

ಇದನ್ನು ಓದಿ:  ಜಿಂಕೆ ಮರಿಯ ಕೊಂಬಿನಲ್ಲಿ ಸಿಲುಕಿದ್ದ ಗಿಡ ಕಿತ್ತೆಸೆದ ಜಿರಾಫೆ : ವಿಡಿಯೋ ವೈರಲ್

click me!