
ಮಾತು (Talk ) ಆಡಿದರೆ ಹೋಯ್ತು, ಮುತ್ತು (Pearl) ಒಡೆದರೆ ಹೋಯ್ತು ಎನ್ನುವ ಮಾತಿದೆ. ಪ್ರತಿಯೊಂದು ವಿಷ್ಯವನ್ನು ಹೇಳಲು ಸರಿಯಾದ ಸಮಯ (Time)ವಿದೆ. ಅನೇಕ ಬಾರಿ ಜನರು ತಪ್ಪಾದ ಸಮಯದಲ್ಲಿ ವಿಷಯವನ್ನು ಹೇಳುತ್ತಾರೆ. ಇದು ಕೇಳಿಸಿಕೊಳ್ಳುವ ವ್ಯಕ್ತಿಗೆ ಹಿತವೆನಿಸದೆ ಇರಬಹುದು. ವ್ಯಕ್ತಿಯ ಕೋಪಕ್ಕೆ ಕಾರಣವಾಗಬಹುದು. ದಾಂಪತ್ಯದಲ್ಲೂ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದಾಂಪತ್ಯ ಸೂಕ್ಷ್ಮವಾದದ್ದು. ನಿಮ್ಮ ಸಂಗಾತಿ ಮುಂದೆ ನೀವು ಎಲ್ಲ ವಿಷ್ಯಗಳನ್ನು ಹೇಳಬಹುದು. ಆದ್ರೆ ಎಲ್ಲ ವಿಷ್ಯವನ್ನು ಎಲ್ಲ ಸಮಯದಲ್ಲಿ ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ವಿಷ್ಯವನ್ನು ಹೇಳಲು ಅದರದೆ ಆದ ಸಮಯವಿರುತ್ತದೆ. ಅದನ್ನು ನೋಡಿ ಮಾತನಾಡಬೇಕಾಗುತ್ತದೆ. ಅನೇಕ ಬಾರಿ ಸಂಗಾತಿಯ ಮೂಡ್ ಸರಿಯಿರುವುದಿಲ್ಲ. ಆ ಸಮಯದಲ್ಲಿ ಏನಾದರೂ ಹೇಳಿದರೆ ಸಂಬಂಧ ಹಾಳಾಗುತ್ತದೆ.
ಇಡೀ ದಿನ ಕಚೇರಿಯಲ್ಲಿ ಕೆಲಸ ಮಾಡಿದ ನಂತರ ನೀವು ಮನೆಗೆ ಬರುತ್ತೀರಿ. ಗಂಟೆಗಳ ಕಾಲ ದೂರವಿದ್ದ ನಂತರ ನೀವು ನಿಮ್ಮ ಸಂಗಾತಿಯನ್ನು ಭೇಟಿಯಾಗುತ್ತೀರಿ. ಮನೆಗೆ ಮರಳಿದ ನಂತರ, ನೀವು ಸ್ವಲ್ಪ ಆಲೋಚಿಸಿ ಮಾತನಾಡಬೇಕು. ಕಚೇರಿಯಿಂದ ಹಿಂದಿರುಗಿದ ನಂತರ ಸಂಗಾತಿ ಜೊತೆ ಎಂದೂ ಕೆಲ ವಿಷ್ಯಗಳನ್ನು ಮಾತನಾಡಬಾರದು. ಇದು ನಿಮಗಾಗಿ ಕಾದು ಕುಳಿತಿದ್ದ ಸಂಗಾತಿ ಮೂಡ್ ಹಾಳು ಮಾಡಬಹುದು. ಇಬ್ಬರ ಸಂಬಂಧಕ್ಕೆ ಮುಳ್ಳಾಗಬಹುದು. ನೀವು ಹೊರಗಿನಿಂದ ಮನೆಗೆ ಬಂದ ತಕ್ಷಣ ನಿಮ್ಮ ಸಂಗಾತಿ ಮುಂದೆ ಏನು ಮಾಡ್ಬಾರದು ಎಂಬುದನ್ನು ನಾವಿಂದು ಹೇಳ್ತೇವೆ.
ಕಚೇರಿಯಿಂದ ವಾಪಸ್ ಬಂದ್ಮೇಲೆ ಈ ಕೆಲಸ ಮಾಡ್ಬೇಡಿ
ತಪ್ಪುಗಳನ್ನು ಎತ್ತಿ ಹೇಳುವುದು : ನೀವು ಹೊರಗಿನಿಂದ ಮನೆಗೆ ಬಂದ ತಕ್ಷಣ ನಿಮ್ಮ ಸಂಗಾತಿಯ ತಪ್ಪುಗಳ ಬಗ್ಗೆ ಮಾತನಾಡಬೇಡಿ. ಸಂಗಾತಿ ಮೇಲೆ ಅಸಮಾಧಾನಗೊಂಡಿದ್ದರೆ ಅಥವಾ ಸಿಟ್ಟಾಗಿದ್ದರೂ, ಮನೆಗೆ ಬಂದ ತಕ್ಷಣ ಈ ತಪ್ಪುಗಳ ಬಗ್ಗೆ ಚರ್ಚೆ ಶುರು ಮಾಡ್ಬೇಡಿ. ಅನೇಕರು ಬಾಗಿಲಿನಿಂದ ಒಳಗೆ ಬರುವಾಗಲೇ ವಾದ ಶುರು ಮಾಡಿರುತ್ತಾರೆ. ಫೋನ್ ನಲ್ಲಿ ಕೂಗಾಡಲು ಸಾಧ್ಯವಾಗದ ಸಂಗತಿಯನ್ನು ಮನೆಗೆ ಬಂದ ತಕ್ಷಣ ಹೇಳಲು ಪ್ರಾರಂಭಿಸುತ್ತಾರೆ. ಹೀಗೆ ಮಾಡಿದ್ರೆ ನಿಮ್ಮಿಬ್ಬರ ಮಧ್ಯೆ ಜಗಳವಾಗುತ್ತದೆ. ಸಂಗಾತಿಗಾಗಿ ಕಾದುಕುಳಿತಿರುವ ಅವರಿಗೆ ಬೇಸರವಾಗಬಹುದು.
ಪಾಶವಾಯ್ತು ಜಿಮ್ ನಲ್ಲಿ ಶುರುವಾದ Extra Marital Affair
ಕೆಲಸ ಹೇಳಬೇಡಿ : ನೀವು ಕಚೇರಿಯಿಂದ ಮನೆಗೆ ಬಂದ ತಕ್ಷಣ, ನಿಮ್ಮ ಸಂಗಾತಿಗೆ ಯಾವುದೇ ಕೆಲಸವನ್ನು ಹೇಳಬೇಡಿ. ನೀವು ಎಷ್ಟು ದಣಿದಿದ್ದೀರೋ, ನಿಮ್ಮ ಸಂಗಾತಿಯೂ ಅಷ್ಟೇ ದಣಿದಿರಬಹುದು. ಹೊರಗಿನಿಂದ ಬಂದಿದ್ದೇವೆ ಎಂಬ ಒಂದೇ ಕಾರಣಕ್ಕೆ ನೀವು ಅವರಿಗೆ ಕೆಲಸ ಹೇಳುವುದು ಸೂಕ್ತವಲ್ಲ. ಮೊದಲು, ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅವರು ಬೇರೆ ಕೆಲಸದಲ್ಲಿಲ್ಲ,ಆರಾಮಾಗಿದ್ದಾರೆ ಎಂಬುದು ತಿಳಿದ ನಂತ್ರವೇ ಶಾಂತವಾಗಿ,ಪ್ರೀತಿಯಿಂದ ಕೆಲಸ ಹೇಳಿ.
ಖರ್ಚು-ವೆಚ್ಚದ ಚರ್ಚೆ : ಮನೆಗೆ ಬಂದ ತಕ್ಷಣ ಖರ್ಚಿನ ಬಗ್ಗೆ ಮಾತನಾಡಬೇಡಿ. ಇದಕ್ಕಾಗಿ ಸರಿಯಾದ ಸಮಯವನ್ನು ನಿಗದಿಪಡಿಸಿ. ಆಯವ್ಯಯ, ಹಣದ ಲೆಕ್ಕಪತ್ರ ನಿರ್ವಹಣೆ ಮಾಡಲು ಸೂಕ್ತ ಸಮಯವಿದೆ. ಕಚೇರಿಯಿಂದ ಬಂದ ಕೂಡಲೇ ಖರ್ಚಿನ ಬಗ್ಗೆ ಚರ್ಚೆ ಶುರು ಮಾಡಿದರೆ ಅದು ವಾದಕ್ಕೆ ತಿರುಗಬಹುದು. ಪ್ರೀತಿಯ ಮಾತುಗಳನ್ನು ಬಯಸಿದ್ದ ಸಂಗಾತಿಗೆ ಇದು ಬೇಸರತರಿಸಬಹುದು.
SEX SECRET: ವಯಾಗ್ರ ಜೊತೆ ನಿಂಬೆ ರಸ ಸೇರಿಸಿದ್ರೆ ಸೆಕ್ಸ್ ಲೈಫ್ ಸೂಪರ್ ಆಗುತ್ತಂತೆ..!
ಉದಾಸೀನತೆ : ಕಚೇರಿಯಿಂದ ಮನೆಗೆ ಬರುವಾಗ ಸುಸ್ತಾಗಿರಬಹುದು ಅಥವಾ ಕೆಲಸದ ಹೊರೆಯಿಂದ ಮೂಡ್ ಸರಿಯಿಲ್ಲದಿರಬಹುದು. ಆದರೆ ಮನೆಯಲ್ಲಿ ನಿಮಗಾಗಿ ಕಾಯುತ್ತಿರುವ ಸಂಗಾತಿ ಮೇಲೆ ಇದ್ರ ಪರಿಣಾಮವಾಗಬಾರದು. ಹಾಗಾಗಿ ಅವರು ಏನಾದರೂ ಹೇಳಿದ್ರೆ ಕೋಪಮಾಡಿಕೊಳ್ಳಬೇಡಿ. ಅಸಭ್ಯವಾಗಿ ಮಾತನಾಡಬೇಡಿ. ಅವರು ಹೇಳಿದ ಮಾತನ್ನು ನಿರ್ಲಕ್ಷ್ಯಿಸಬೇಡಿ. ನಿಮ್ಮ ಸುಸ್ತನ್ನು ಅವರ ಮುಂದೆ ತೋರಿಸಬೇಡಿ. ಶಾಂತವಾಗಿ ಕುಳಿತು,ವಿಶ್ರಾಂತಿ ಪಡೆದ ನಂತ್ರ ಮುಂದಿನ ಕೆಲಸಕ್ಕೆ ಇಬ್ಬರೂ ಹೋಗುವುದು ಸೂಕ್ತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.