ಅನಾಥೆಯೊಬ್ಬಳು ಒಳ್ಳೇ ಫ್ರೆಂಡ್ ಆದಾಗ, ಏನೆಂದು ಹೆಸರಿಡಲಿ ಈ ಚೆಂದದ ಸಂಬಂಧಕ್ಕೆ?

By Suvarna News  |  First Published Aug 8, 2023, 4:50 PM IST

ಅನಾಥ ಮಕ್ಕಳು ಸದಾ ತಮ್ಮ ಆಪ್ತರ ಹುಡುಕಾಟದಲ್ಲಿ ಇರ್ತಾರೆ. ಕೆಲ ಅದೃಷ್ಟವಂತರಿಗೆ ರಕ್ತ ಸಂಬಂಧಿಗಳು ಸಿಗದೆ ಹೋದ್ರೂ ಅದಕ್ಕಿಂತ ಮಿಗಿಲಾದ ಸ್ನೇಹ ಸಿಗುತ್ತದೆ. ಇನ್ಸ್ಟಾಗ್ರಾಮ್ ನಲ್ಲಿ ಅನಾಥೆಗೆ ಸಿಕ್ಕ ಸ್ನೇಹದ ಕಥೆ ಕಣ್ಣು ತುಂಬಿಸುತ್ತೆ. 
 


ಕೆಲವೊಂದು ಸಂಬಂಧ ನಮ್ಮ ಅರಿವಿಲ್ಲದೆ ಚಿಗುರಿರುತ್ತದೆ. ಆ ಸುಂದರ ಸಂಬಂಧಕ್ಕೆ ಹೆಸರಿಡೋದು ಕಷ್ಟ. ಸ್ನೇಹಕ್ಕಿಂತ ಮಿಗಿಲು, ಪ್ರೀತಿಗಿಂತ ಹೆಚ್ಚು. ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ನಮಗೆ ಯಾರೋ ಆಪ್ತರಾಗ್ತಾರೆ. ಕಾಲೇಜಿನಲ್ಲ, ಬಸ್ ನಿಲ್ದಾಣದಲ್ಲಿ, ಮಾರ್ಕೆಟ್ ನಲ್ಲಿ, ಆಸ್ಪತ್ರೆಯಲ್ಲಿ ಇಲ್ಲ ಸಿನಿಮಾ ಹಾಲ್ ನಲ್ಲಿ ಹೀಗೆ ಸ್ಥಳ ಯಾವುದೇ ಆಗಿರಬಹುದು, ಸಿಕ್ಕ ವ್ಯಕ್ತಿ ಮಾತ್ರ ಅಪರಿಚಿತನಿಂದ ಜೀವಕ್ಕೆ ಜೀವ ಎನ್ನುವಷ್ಟು ಹತ್ತಿರವಾಗ್ತಾನೆ. 

ರಕ್ತ ಸಂಬಂಧಿಕರು, ಸ್ನೇಹಿತ (Friend) ರು, ಸಂಬಂಧಿಕರು ಎಲ್ಲರೂ ನಮ್ಮ ಸುತ್ತಲಿದ್ರೂ ಮನಸ್ಸು ಮತ್ತ್ಯಾರನ್ನೋ ಬಯಸುತ್ತೆ. ಎಲ್ಲವನ್ನು ಹಂಚಿಕೊಳ್ಳಬಲ್ಲ, ನಮ್ಮ ಖುಷಿಯಲ್ಲಿ ಖುಷಿಯಾಗಿರಬಲ್ಲ, ನಮ್ಮ ದುಃಖಕ್ಕೆ ಆಸರೆಯಾಗಬಲ್ಲ ಒಂದು ಜೀವ ಬೇಕು. ಅವರ ಹುಡುಕಾಟ ನಿರಂತರವಾಗಿರುತ್ತದೆ. ಅದೃಷ್ಟ (good luck) ದ ವ್ಯಕ್ತಿಗಳಿಗೆ ಮಾತ್ರ ಅಂಥಹ  ಹೆಸರಿಡದ ಸಂಬಂಧವೊಂದು ಸಿಗುತ್ತದೆ. ಈ ಹುಡುಗಿಗೂ ಈಗ ಒಂದೊಳ್ಳೆ ಆತ್ಮ ಸಿಕ್ಕಿದೆ. ಅದಕ್ಕೆ ಸ್ನೇಹವೆಂದು ಹೆಸರಿಡಬಹುದಾದ್ರೂ ಅಲ್ಲಿ ಬೇರೇನೋ ಇದೆ. ಅದು ಈಗಿನ ಕಾಲದ ಪ್ರೀತಿಯೂ ಅಲ್ಲ. ಅನಾಥೆಯಾಗಿದ್ದ ಆಕೆಗೆ ಮೆಟ್ರೋದಲ್ಲಿ ಸಿಕ್ಕ ಹುಡುಗಿ ಈಗ ಅಮ್ಮನಾಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಕಥೆ ಹಂಚಿಕೊಂಡ ಹುಡುಗಿ ಖುಷಿಯಾಗಿದ್ದಾಳೆ. Shethepeopletv ಹೆಸರಿನ ಇನ್ಸ್ಟಾಗ್ರಾಮ್ ನಲ್ಲಿ ಹುಡುಗಿ ತನ್ನ ಕಥೆ ಹೇಳಿದ್ದಾಳೆ. 

Latest Videos

undefined

SEX EDUCATION: ಗಂಡಸಿಗೆ ತಕ್ಷಣ ಎರಡನೇ ಸಲ ಸೆಕ್ಸ್‌ ಮಾಡೋಕಾಗಲ್ಲ ಯಾಕೆ? ಅದು ಸಾಧ್ಯವೇ?

ಅವರಿಬ್ಬರ ಕಥೆ ಏನು ಗೊತ್ತಾ? : ಮೆಟ್ರೋದಲ್ಲಿ ಇವರಿಬ್ಬರ ಸಂಬಂಧ ಶುರುವಾಗಿದೆ. ಮೆಟ್ರೋದಲ್ಲಿ ಕುಳಿತುಕೊಳ್ಳಲು ಸೀಟ್ ಹುಡುಕುತ್ತಿದ್ದ ವೇಳೆ ಪಕ್ಕದಲ್ಲಿದ್ದ ಹುಡುಗಿಯೊಬ್ಬಳು ಕೆಳಗೆ ಕುಳಿತುಕೊಳ್ಳುವ ಸಲಹೆ ನೀಡಿದ್ದಾಳೆ. ಅದಕ್ಕೆ ಒಪ್ಪಿದ ಈ ಹುಡುಗಿ ಕೆಳಗೆ ಕುಳಿತಿದ್ದಾಳೆ. ಅಲ್ಲಿಂದ ಇಬ್ಬರ ಮಧ್ಯೆ ಮಾತುಕತೆ ಶುರುವಾಗಿದೆ. ಆಕೆ ಫೋನ್ ನಲ್ಲಿ ಕೇವಲ ಒಂದು ಪರ್ಸೆಂಟ್ ಬ್ಯಾಟರಿ ಇದ್ದ ಕಾರಣ, ಈ ಹುಡುಗಿ ಬ್ಯಾಟರಿ ಕಡಿಮೆ ಇದೆ, ಮೊಬೈಲ್ ಬಳಕೆ ಮಾಡ್ಬೇಡ, ಪಾಲಕರು ಕರೆ ಮಾಡಿದ್ರೆ ಏನು ಮಾಡ್ತೀಯಾ ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಆ ಹುಡುಗಿ ನಾನು ಅನಾಥೆ. ನನಗೆ ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಯಾರೂ ಇಲ್ಲ ಎಂದಿದ್ದಾಳೆ. ಆಕೆಯನ್ನು ತನ್ನ ಮನೆಗೆ ಕರೆದ ಈ ಹುಡುಗಿ, ಮತ್ತೆ ಮೀಟ್ ಆಗೋಣ ಅಂತಾ ಪ್ರಾಮೀಸ್ ಮಾಡಿದ್ದಾಳೆ. ಈ ಆತು ಕೇಳಿದ ಅನಾಥ ಹುಡುಗಿಗೆ ಖುಷಿಯಾಗಿದೆ. ಸ್ಮೈಲ್ ಮಾಡ್ತಾ ಮೆಟ್ರೋದಿಂದ ಇಳಿದು ಹೋಗಿದ್ದಾಳೆ.

Mental Health: ವ್ಯಕ್ತಿತ್ವಕ್ಕೆ ಸಂಬಂಧಿಸಿದ ಗುಪ್ತ ಸಮಸ್ಯೆಗಳಿದ್ರೆ ಹೀಗೆಲ್ಲ ವರ್ತಿಸೋದು ಸಹಜ, ಎಚ್ಚರ

ಅಲ್ಲಿಂದ ಇಬ್ಬರ ಬಾಂಧವ್ಯ ಗಟ್ಟಿಯಾಗಿದೆ. ನೋವು, ನಲಿವು, ಸಂತೋಷ ಎಲ್ಲವನ್ನೂ ಪರಸ್ಪರ ಹಂಚಿಕೊಳ್ತಿದ್ದಾರೆ. ಒಟ್ಟಿಗೆ ಡಾನ್ಸ್ ಮಾಡುವ ಇವರು ಎಲ್ಲವನ್ನು ಮರೆತು ಎಂಜಾಯ್ ಮಾಡ್ತಿದ್ದಾರೆ. ಮನೆಗೆ ಬಂದಿದ್ದ ಅನಾಥ ಹುಡುಗಿ, ತನ್ನ ಫೋನ್ ನಲ್ಲಿ ಈ ಹುಡುಗಿ ನಂಬರ್ ಬದಲಿಸಿದ್ದಾಳೆ. ಮಮ್ಮಾ ಎಂದು ಫೋನ್ ನಂಬರ್ ಸೇವ್ ಮಾಡಿಕೊಂಡಿದ್ದಾಳೆ. ಇನ್ಮುಂದೆ ಆಕೆ ಎಂದೂ ತಾನು ಅನಾಥೆ ಅನ್ನೋದಿಲ್ಲ ಎಂದು ಈ ಹುಡುಗಿ ಹೇಳಿದ್ದಾಳೆ.

ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ನೋಡಿದ ಜನರು ಭಾವುಕರಾಗಿದ್ದಾರೆ. ಯಾವುದೇ ಲೇಬಲ್ ಇಲ್ಲದ ಈ ಸಂಬಂಧಗಳು ತುಂಬಾ ಸ್ಟ್ರಾಂಗ್ ಆಗಿರುತ್ವೆ ಎಂದು ಹೇಳಿದ್ದಾರೆ. ಕ್ರೂರ ಮಾನವನ ಮಧ್ಯೆ ಸಹಾನುಭೂತಿಯುಳ್ಳ ಮಾನವರು ಇದ್ದಾರೆ. ನಮ್ಮ ಸಾವಿನ ನಂತ್ರ ನಾವು ಏನನ್ನೂ ತೆಗೆದುಕೊಂಡು ಹೋಗೋದಿಲ್ಲ.  ಕರ್ಮ ಮಾತ್ರ ನಮ್ಮ ಜೊತೆಯಲ್ಲಿರುತ್ತದೆ ಎಂದು ಒಬ್ಬರು ಹೇಳಿದ್ರೆ ಸ್ವೀಟ್ ಆತ್ಮಗಳಿಗೆ ಮಾತ್ರ ಸ್ವೀಟ್ ಆತ್ಮ ಸಿಗೋದು ಎಂದಿದ್ದಾರೆ. ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂದಿದೆ, ಇಂಥ ಸ್ನೇಹಿತರು ಬೇಕು ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
 

click me!