ಮದುವೆ ಎಂಬದು ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಕ್ಷಣ. ಅದನ್ನು ಕೊನೆಯವರೆಗೂ ನೆನಪಿನಲ್ಲಿ ಉಳಿಯವಂತೆ ಮಾಡಲು ವಿಭಿನ್ನವಾಗಿ ಆಚರಣೆ ಮಾಡಲು ಇಷ್ಟಪಡುತ್ತಾರೆ. ಆದ್ರೆ ಇಲ್ಲೊಂದು ಜೋಡಿ ಮದುವೆಯ ದಿನ ಮೆಮೊರೆಬಲ್ ಆಗ್ಬೇಕು ಅಂತ ಅದೆಂಥಾ ಎಡವಟ್ಟು ಮಾಡ್ಕೊಂಡಿದೆ ನೋಡಿ.
ಭಾರತೀಯ ಸಂಪ್ರದಾಯದಲ್ಲಿ ಮದುವೆಯ ಆಚರಣೆಗಳು ತುಂಬಾ ಮಹತ್ವಪೂರ್ಣವಾಗಿದೆ. ಎಲ್ಲವನ್ನೂ ಶಾಸ್ತ್ರಬದ್ಧವಾಗಿ ಮಾಡಲಾಗುತ್ತದೆ. ನಿಶ್ಚಿತಾರ್ಥ, ಮೆಹಂದಿ, ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತದೆ. ಸಾಮಾನ್ಯವಾಗಿ ಮದುವೆಯಾದ ಬಳಿಕವೇ ಹುಡುಗ-ಹುಡುಗಿ ಒಂದಾಗುತ್ತಾರೆ. ಫಸ್ಟ್ ನೈಟ್ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದರೂ ಮೊದಲ ರಾತ್ರಿ ಮಾತ್ರ ಗಂಡ-ಹೆಂಡತಿಯ ನಡುವಿನ ಖಾಸಗಿ ವಿಷಯ. ಆದರೆ ಇಲ್ಲೊಂದು ಜೋಡಿ ತಮ್ಮ ಫಸ್ಟ್‌ನೈಟ್‌ನ್ನು ಸಹ ಖುಲ್ಲಂಖುಲ್ಲಂ ಆಗಿ ಮಾಡಿಕೊಂಡಿದೆ. ಅಷ್ಟೂ ಸಾಲ್ದು ಅಂತ ದಂಪತಿ ತಮ್ಮ ಫಸ್ಟ್ ನೈಟ್ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪ್ರತಿಯೊಬ್ಬರೂ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡಿದರೂ ತಮ್ಮ ಖಾಸಗಿ ಜೀವನವನ್ನು (Personal life) ಗೌಪ್ಯವಾಗಿಡುತ್ತಾರೆ. ತಮ್ಮ ಜೀವನದ ಖಾಸಗಿ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಇತ್ತೀಚಿಗೆ ಎಲ್ಲರ ಜೀವನವೂ (Life) ಮುಕ್ತ ಮುಕ್ತ ಎಂಬಂತಾಗಿಬಿಟ್ಟಿದೆ. ಜೀವನದಲ್ಲಿ ನಡೆಯುವ ಎಲ್ಲಾ ಘಟನಾವಳಿಗಳು ಯಾವುದೇ ಮುಚ್ಚುಮರೆಯಿಲ್ಲದೆ ಸುಲಭವಾಗಿ ಇನ್ನೊಬ್ಬರಿಗೆ ತಿಳಿದುಬಿಡುತ್ತದೆ. ಸಾಮಾಜಿಕ ಜಾಲತಾಣ ಜಮಾನದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೊಬ್ಬರಿಂದ ಖಾಸಗೀತನಕ್ಕೆ ಧಕ್ಕೆಯಾಗುವುದು ಬೇರೆ ವಿಚಾರ, ಆದ್ರೆ ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಳ್ಳುವುದೆಂದರೆ ? ಈ ಜೋಡಿ (Couple) ಮಾಡಿರುವುದು ಅದೇ ನೋಡಿ.
ಗೊತ್ತಿರಲಿ ಮೊದಲ ರಾತ್ರಿಯ ರಹಸ್ಯ, ಸುಖಾ ಸುಮ್ಮನೆ ಅಪ್‌ಸೆಟ್ ಆಗೋದು ಬೇಡ!
ಮೊದಲ ರಾತ್ರಿಯ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ದಂಪತಿ
ಮೊದಲ ರಾತ್ರಿಯ ಕಲ್ಪನೆಯೇ ಮಧುರ. ಏಕೆಂದರೆ ಇದು ಎರಡು ದೇಹಗಳ ಜೊತೆಗೆ ಎರಡು ಮನಸ್ಸುಗಳು ಒಂದಾಗಿ ಬಾಳ ಪಯಣವನ್ನು ಒಟ್ಟಿಗೆ ಆರಂಭಿಸುವ ದಿನ. ಮೊದಲ ರಾತ್ರಿಯೆಂದರೆ (First night) ಅದೊಂದು ಖಾಸಗಿ ಕ್ಷಣ. ಆದರೆ, ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಹುಬ್ಬೇರಿಸಿರುವುದಲ್ಲದೆ ಆಕ್ರೋಶಕ್ಕೂ ಗುರಿಯಾಗಿದ್ದಾರೆ.
ಸೋಷಿಯಲ್ ಮೀಡಿಯಾ ಜಗತ್ತನ್ನೇ ಆಳುತ್ತಿರುವ ಕಾಲವಿದು. ಇಲ್ಲಿ ಟ್ರೆಂಡ್ ಆಗಿ ಫೇಮಸ್ ಆಗಲು ಎಲ್ಲರೂ ಪ್ರಯತ್ನಿಸುತ್ತಾರೆ. ಡಾನ್ಸ್ನಿಂದ ಹಿಡಿದು ಕುಟುಂಬದೊಂದಿಗೆ ವಿಡಿಯೋ ಚಿತ್ರೀಕರಿಸುವವರೆಗೆ ವಿವಿಧ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ತಮ್ಮ ಮುಜುಗರ ಉಂಟು ಮಾಡುವಂತಹ ವಿಡಿಯೋಗಳನ್ನು ಅಪ್‌ಲೋಡ್ ಮಾಡಿ ಲೈಕ್ಸ್ ಗಳಿಸುವುದೂ ಇದೆ. ಅದೇ ರೀತಿ ಆರುಶಿ ರಾಹುಲ್ ಅಫಿಶಿಯಲ್ (arushirahulofficial) ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಫಸ್ಟ್ ನೈಟ್ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಬಹುತೇಕ ಭಾರತೀಯರು First Night ನಲ್ಲಿ ಏನು ಮಾಡ್ತಾರೆ..?
ವಿಡಿಯೋದಲ್ಲಿ ನವವಿವಾಹಿತ ದಂಪತಿ, ತಮ್ಮ ಮೊದಲ ರಾತ್ರಿಯ ಖಾಸಗಿ ಕೋಣೆಯಲ್ಲಿರುವುದನ್ನು ಕಾಣಬಹುದು. ಮದುವೆ (Marriage) ಮುಗಿದ ನಂತರ ವಧು-ವರರು ತುಂಬಾ ಸಂತೋಷವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರು ಸಹ ಮದುವೆ ಉಡುಗೆಯನ್ನು ಧರಿಸಿದ್ದಾರೆ. ವಧು ಆಭರಣಗಳನ್ನು ಬಿಚ್ಚುತ್ತಿರುವುದು ಮತ್ತು ಆಕೆಯ ಪತಿ ಆಭರಣಗಳನ್ನು ಹಾಗೂ ಬಟ್ಟೆ ಬಿಚ್ಚಲು ಸಹಾಯ ಮಾಡುತ್ತಿರುವುದು ಮತ್ತು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದೆ. ನಾವು ಹೇಗೆ ನಮ್ಮ ಮೊದಲ ರಾತ್ರಿಯನ್ನು ಕಳೆದೆವು ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಈ ವಿಡಿಯೋವನ್ನು ಜ.25ರಂದು ಪೋಸ್ಟ್ ಮಾಡಲಾಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಬಯಸಿದರೆ, ಮುಂದಿನ ಬಾರಿ ಇಡೀ ವಿಡಿಯೋವನ್ನು ಪೋಸ್ಟ್ ಮಾಡಿ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇದು ನಿಮ್ಮ ಖಾಸಗಿ ಕ್ಷಣ ಎಂಬುದು ನಿಮಗೆ ನೆನಪಿರಲಿ. ಇಂಥದ್ದನ್ನು ಜಾಲತಾಣದಲ್ಲಿ ಪೋಸ್ಟ್ ಮಾಡುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.