
ಜಗತ್ತಿನಲ್ಲಿ ಅಚ್ಚರಿ ಹುಟ್ಟಿಸುವ ಅನೇಕ ಜಾಗಗಳಿವೆ. ಈಗಿನ ಕಾಲದಲ್ಲೂ ಜನರಿಗೆ ಭೂತ – ಪಿಶಾಚಿಯ ಬಗ್ಗೆ ನಂಬಿಕೆ ಹುಟ್ಟಿಸುವಂತಹ ಸ್ಥಳಗಳ ಸಂಖ್ಯೆ ಸಾಕಷ್ಟಿದೆ. ಕೆಲ ಪ್ರದೇಶಗಳಿಗೆ ಜನರು ರಾತ್ರಿ ಇರಲಿ, ಹಗಲಿನಲ್ಲಿ ಹೋಗಲು ಭಯಪಡುತ್ತಾರೆ. ನಾವು ಪ್ರವಾಸಕ್ಕೆ ಹೋದಾಗ ಕೆಲವೊಂದು ಆಶ್ಚರ್ಯ ಹುಟ್ಟಿಸುವ ಘಟನೆಗಳು ನಡೆಯುತ್ತಿರುತ್ತವೆ. ಈ ಪ್ರದೇಶವನ್ನು ಮೊದಲು ಎಲ್ಲೋ ನೋಡಿದ ಅನುಭವವಾಗುತ್ತದೆ. ಇಲ್ಲವೆ ಕನಸಿನಲ್ಲಿ ನೋಡಿದ ಜಾಗಕ್ಕೆ ನಾವು ತಲುಪಿರುತ್ತೇವೆ. ಕೆಲವರು ಭೂತ, ಆತ್ಮ, ಪುನರ್ಜನ್ಮವನ್ನು ನಂಬುವುದಿಲ್ಲ. ಹಾರರ್ ಸಿನಿಮಾಗಳನ್ನು ನೋಡಿ ಮನರಂಜನೆ ಪಡೆಯುತ್ತಾರೆಯೇ ವಿನಃ ಇದೆಲ್ಲ ನಿಜವಾಗಿ ನಡೆಯಲು ಸಾಧ್ಯವಿಲ್ಲ ಎಂದು ಭಾವಿಸ್ತಾರೆ.
ಅಪರಿಚಿತ (Stranger) ಜಾಗಕ್ಕೆ ನೀವು ರಾತ್ರಿ ಕಳೆಯಲು ಹೋಗಿರ್ತಿರಿ. ಇನ್ನೇನು ರಾತ್ರಿ ಆಗ್ತಿದೆ, ಅಲ್ಲಿನ ಕೋಣೆಯ ಗೋಡೆಯ ಮೇಲೆ ಫೋಟೋ (Photo) ಒಂದು ನೇತಾಡುತ್ತಿರುತ್ತದೆ. ಆ ಫೋಟೋ ನಿಮ್ಮದೇ ಆಗಿರುತ್ತೆ. ನೀವು ಒಮ್ಮೆಯೂ ಇಲ್ಲಿಗೆ ಬಂದಿಲ್ಲ, ಆ ಫೋಟೋ ಇಲ್ಲಿಗೆ ಹೇಗೆ ಬಂತು ಎಂಬುದು ಗೊತ್ತಿಲ್ಲ. ಒಂದ್ಕಡೆ ಭಯ. ಇನ್ನೊಂದು ಕಡೆ ಮುಂದೇನು ಮಾಡ್ಬೇಕು ಎಂಬ ಆತಂಕ… ಈ ದೃಶ್ಯಕ್ಕೆ ಹಿನ್ನಲೆಯಲ್ಲಿ ಭಯಾನಕ ಸೌಂಡ್ ನೀಡಿದಾಗ, ಥಿಯೇಟರ್ ನಲ್ಲಿ ಕುಳಿತವರು ಡಿಸ್ಟರ್ಬ್ ಆಗೋದ್ರಲ್ಲಿ ಸಂಶಯವಿಲ್ಲ. ಆದ್ರೆ ಇದು ಬರೀ ಸಿನಿಮಾ (Movie) ದಲ್ಲಿ ಅಂದುಕೊಂಡವರಿಗೆ ಅಚ್ಚರಿ ಸುದ್ದಿ ಇದೆ. ಇಂಥ ಸತ್ಯ ಘಟನೆ ದಂಪತಿ ನಿಜ ಜೀವನದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಸಾಯಿ ಪಲ್ಲವಿ ರೋಲ್ ಮಾಡೆಲ್ ಹುಡುಗನ ಸೀಕ್ರೆಟ್ ರಿವೀಲ್; ಅಬ್ಬಬ್ಬಾ, ಅಂಥವ್ನು ಸಿಗ್ತಾನಾ?
ಎರಡು ವರ್ಷಗಳ ಹಿಂದೆ ದಂಪತಿ ಯುಕೆಯಿಂದ ಸ್ವೀಡನ್‌ಗೆ ಶಿಫ್ಟ್ ಆಗಿದ್ದಾರೆ. ಮೂರು ಮಕ್ಕಳ ತಾಯಿಯಾದ ಜಾನಿ ಸ್ಟೀವ್ಸನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾಳೆ. ರಜೆಯನ್ನು ಕಳೆದ ಮೇಲೆ ಮನೆಗೆ ವಾಪಸ್ ಆಗ್ತಿದ್ದ ದಂಪತಿ ಮಕ್ಕಳ ಜೊತೆ ಏಕಾಂತ ಜಾಗದಲ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದರು. ಅವರು ಆ ಮನೆಯಲ್ಲಿ ಆರಾಮವಾಗಿ ರಾತ್ರಿ ಕಳೆಯಬಹುದಿತ್ತು. ಆದ್ರೆ ಆ ಸ್ಥಳದಲ್ಲಿ ಅವರು ನೋಡಿದ ದೃಶ್ಯ ಅವರ ನಿದ್ರೆ ಹಾಳು ಮಾಡಿತ್ತು. ಭಯದಿಂದ ಅವರು ಅಲ್ಲಿ ರಾತ್ರಿ ಕಳೆಯೋದು ಕಷ್ಟವಾಗಿತ್ತು. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಕೂಡ ಅವರ ಮನಸ್ಸಿನಲ್ಲಿ ಮೂಡಿತ್ತು.
ಶಾಂತವಾದ ಪ್ರದೇಶದಲ್ಲಿರುವ ಮನೆಯೊಂದರಲ್ಲಿ ಊಟಕ್ಕೆ ತಯಾರಿ ನಡೆಸಿದ ಅವರು, ಊಟದ ಹಾಲಿನಲ್ಲಿ ಊಟಕ್ಕೆ ಕುಳಿತುಕೊಳ್ಳುವವರಿದ್ದರು. ಈ ಸಮಯದಲ್ಲಿ ಆಕೆ ಮಗಳು ಗೋಡೆ ಬಳಿ ಹೋಗಿದ್ದಾಳೆ. ಗೋಡೆಯ ಮೇಲಿದ್ದ ಫೋಟೋ ನೋಡಿ ದಂಗಾಗಿದ್ದಾಳೆ. ಅಮ್ಮನ ಬಳಿ ಓಡಿ ಬಂದು ತನ್ನ ಏಳು ವರ್ಷದ ತಮ್ಮ ಬಾರ್ನಿ ಫೋಟೋ ಗೋಡೆ ಮೇಲಿದೆ ಎಂದು ಹೇಳಿದ್ದಾಳೆ. ಜಾರ್ನಿ ಇದನ್ನು ನೋಡಿ ಅಚ್ಚರಿಗೊಂಡಿದ್ದಲ್ಲದೆ, ಗೋಡೆ ಬಳಿ ಹೋಗಿ ಫೋಟೋ ನೋಡಿದ್ದಾಳೆ.
ಅಲ್ಲಿದ್ದ ಫೋಟೋ ಆಕೆಯನ್ನು ಆಶ್ಚರ್ಯಗೊಳಿಸಿದೆ. ಗೋಡೆ ಮೇಲೆ ಪೇಂಟಿಂಗ್ ಮಾಡಲಾಗಿದೆ. ಈ ಪೇಂಟಿಂಗ್ ಬಾರ್ನಿಯನ್ನು ಹೋಲುತ್ತಿತ್ತು. ಆದ್ರೆ ಬಾರ್ನಿ ಹುಡುಗನಾದ್ರೆ ಗೋಡೆ ಮೇಲಿದ್ದ ಪೇಂಟಿಂಗ್ ನಲ್ಲಿ ಹುಡುಗಿ ಇದ್ದಳು. ಬಾರ್ನಿ ಈವರೆಗೆ ಒಮ್ಮೆಯೂ ಇಲ್ಲಿಗೆ ಬಂದಿರಲಿಲ್ಲ. ಆದ್ರೆ ಆತನನ್ನೇ ಹೋಲುವ ಈ ಪೇಂಟಿಂಗ್ ಮಾತ್ರ ಅವರನ್ನು ಆಘಾತಗೊಳಿಸಿತ್ತು. ಇದ್ರಿಂದ ಅವರ ಭಯ ಹೆಚ್ಚಾಗಿತ್ತು.
ಅಧಿಕ ರಕ್ತದೊತ್ತಡಕ್ಕೆ ಈ ಹರ್ಬಲ್ ಟೀ ಬೆಸ್ಟ್, ಟ್ರೈ ಮಾಡಿ, ಕೂಲ್ ಆಗಿರಿ
ಜಾರ್ನಿ ಈ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಿದ್ದಂತೆ ಬಳಕೆದಾರರ ಪ್ರತಿಕ್ರಿಯೆ ಸಿಕ್ಕಿದೆ. ಇದು ಬಹಳ ವಿಚಲಿತಗೊಳಿಸುವ ಹಾಗೂ ಭಯ ಹುಟ್ಟಿಸುವ ಘಟನೆ ಎಂದು ಕೆಲವರು ಹೇಳಿದ್ದಾರೆ. ಆ ಸ್ಥಳದಲ್ಲಿ ಹೆಚ್ಚು ಸಮಯ ಇರಬಾರದಿತ್ತು ಎಂದು ಮತ್ತೆ ಕೆಲವರು ಹೇಳಿದ್ದಾರೆ. ಇದು ಬಾರ್ನಿಯ ಪುನರ್ಜನ್ಮ ಎಂದು ಮತ್ತೊಂದಿಷ್ಟು ಬಳಕೆದಾರರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.