ಪ್ರೀತಿಸುವ ವ್ಯಕ್ತಿಗಳ ಮಧ್ಯೆ ಯಾವುದೇ ಗುಟ್ಟು ಇರಬಾರದು ಎನ್ನುತ್ತಾರೆ. ಮೊದಲು ಎಲ್ಲವನ್ನೂ ಹೇಳ್ತಿದ್ದ ಸಂಗಾತಿ ಈಗ ಮಾತು ಮಾತಿಗೂ ಜಗಳವಾಡ್ತಾರೆ, ನಿಮ್ಮ ಪ್ರಶ್ನೆಗೆ ಎಂದೂ ಉತ್ತರ ನೀಡೋದಿಲ್ಲ ಎಂದಾದ್ರೆ ಅವರ ಮೇಲೆ ಒಂದು ಕಣ್ಣಿಡೋದು ಬೆಸ್ಟ್.
ಪ್ರೀತಿ, ನಂಬಿಕೆ ಮೇಲೆ ನಿಂತಿರುತ್ತದೆ. ಪ್ರೀತಿಸುವ ವ್ಯಕ್ತಿ ಮೇಲೆ ನಂಬಿಕೆ ಬಲವಾಗಿದ್ದರೆ ಮಾತ್ರ ಭಾವನಾತ್ಮಕವಾಗಿ ಸಂಬಂಧ ಗಟ್ಟಿಯಾಗಲು ಸಾಧ್ಯ. ಪ್ರೀತಿ ಬಲವಾಗಿರಬೇಕೆಂದ್ರೆ ಇಬ್ಬರ ಮಧ್ಯೆ ಮಾತುಕತೆ ಕೂಡ ಮುಖ್ಯವಾಗುತ್ತದೆ. ನಿಮ್ಮಿಬ್ಬರ ಮಧ್ಯೆ ಎಷ್ಟು ಮುಕ್ತವಾದ ಮಾತುಕತೆ ಇದೆ ಎನ್ನುವುದರ ಮೇಲೆ ಪ್ರೀತಿಯ ಆಯಸ್ಸು ನಿಂತಿರುತ್ತದೆ. ಈಗಿನ ದಿನಮಾನದಲ್ಲಿ ಜನರಿಗೆ ಕೆಲಸದ ಮಧ್ಯೆ ಸಮಯವಿರುವುದಿಲ್ಲ. ಹಾಗಾಗಿ ಸಂಗಾತಿಗೆ ಸೂಕ್ತ ಸಮಯ (Time) ನೀಡಲು ಆಗುವುದಿಲ್ಲ. ಈ ಸಮಯದ ಕೊರತೆಯಿಂದಾಗಿ ಇಬ್ಬರ ಮಧ್ಯೆ ಮಾತುಕತೆ ಕಡಿಮೆಯಾಗುತ್ತದೆ. ಸಂಗಾತಿ ದೂರ ಮಾಡ್ತಿದ್ದಂತೆ ಮನಸ್ಸು ಪ್ರೀತಿ (Love) ಯನ್ನು ಅರಸಲು ಶುರು ಮಾಡುತ್ತದೆ. ವಿವಾಹೇತ ಸಂಬಂಧಗಳು ಶುರುವಾಗುತ್ತವೆ. ದೀರ್ಘಕಾಲ ಪ್ರೀತಿಯಲ್ಲಿರುವುದು ಸುಲಭದ ಕೆಲಸವಲ್ಲ. ಅನೇಕ ಸವಾಲುಗಳನ್ನು ಎದುರಿಬೇಕಾಗುತ್ತದೆ.
ಸಂಗಾತಿ ಅರಿವಿಲ್ಲದೆ ಮೋಸ (Cheating) ಮಾಡ್ತಿರುತ್ತಾರೆ. ನಂಬಿಕೆಗೆ ದ್ರೂಹ ಮಾಡ್ತಿರುತ್ತಾರೆ. ಸಂಗಾತಿಯ ಈ ಮೋಸವನ್ನು ಪತ್ತೆ ಮಾಡುವುದು ಕೂಡ ಕಷ್ಟದ ಕೆಲಸವೇ ಹೌದು. ಪ್ರಶ್ನೆ ಮಾಡಿದ್ರೆ ಇಬ್ಬರ ಮಧ್ಯೆ ಸಂಬಂಧ ಮತ್ತಷ್ಟು ಹದಗೆಡುತ್ತದೆ ಎನ್ನುವ ಕಾರಣಕ್ಕೆ ಕೆಲವರು ಸುಮ್ಮನಾಗ್ತಾರೆ. ಆದ್ರೆ ನಿಮ್ಮ ಮೌನ ನಿಮ್ಮಿಬ್ಬರನ್ನು ಮತ್ತಷ್ಟು ದೂರ ಮಾಡುತ್ತದೆ. ಹಾಗಾಗಿ ಸಂಗಾತಿ ಅಕ್ರಮ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನು ನೀವು ತಿಳಿಯಲೇಬೇಕು. ಕೆಲ ಅವರ ವರ್ತನೆಯಿಂದ ಕೂಡ ನೀವು ಇದನ್ನು ಪತ್ತೆ ಮಾಡಬಹುದು.
ಪುರುಷರ ಬಟ್ಟೆ ಪರಿಮಳ ಮಹಿಳೆಯರ ಒತ್ತಡ ಕಡಿಮೆ ಮಾಡುತ್ತಂತೆ !
ಪದೇ ಪದೇ ಬ್ಯುಸಿನೆಸ್ ಟ್ರಿಪ್ ಗೆ ಹೋಗ್ತಾರೆ ಪತಿ : ಕೆಲಸವೆಂದ್ಮೇಲೆ ಟ್ರಿಪ್, ಪಾರ್ಟಿಗಳು ಇದ್ದಿದ್ದೆ. ತಿಂಗಳಲ್ಲಿ ಒಂದೋ ಎರಡೋ ಬಾರಿ ಬ್ಯುಸಿನೆಟ್ ಟ್ರಿಪ್ ಹೋಗುವ ಅನಿವಾರ್ಯತೆ ಇರುತ್ತದೆ. ಆದ್ರೆ ಅಕ್ರಮ ಸಂಬಂಧ ಹೊಂದಿರುವವರು ಬ್ಯುಸಿನೆಟ್ ಟ್ರಿಪ್ ಹೆಸರಿನಲ್ಲಿ ಸಂಗಾತಿಗೆ ಮೋಸ ಮಾಡ್ತಾರೆ. ನಿಮ್ಮ ಸಂಗಾತಿ ಕೂಡ ತಿಂಗಳಲ್ಲಿ ಅತಿ ಹೆಚ್ಚು ಬಾರಿ ಟ್ರಿಪ್ ಅಂತಾ ಮನೆಯಿಂದ ಹೊರಗೆ ಹೋಗ್ತಿದ್ದರೆ ಅಥವಾ ಒಂದು ದಿನದ ಟ್ರಿಪ್ ಅಂತ ಹೇಳಿ ಮೂರ್ನಾಲ್ಕು ದಿನ ಬಂದಿಲ್ಲವೆಂದ್ರೆ, ಇದು ಪದೇ ಪದೇ ಆಗ್ತಿದೆ ಎಂದಾದ್ರೆ ಎಚ್ಚೆತ್ತುಕೊಳ್ಳಿ. ಸಂಗಾತಿ ಅಕ್ರಮ ಸಂಬಂಧ ಹೊಂದಿರುವ ಸಾಧ್ಯತೆಯಿದೆ.
ಫೋನ್ ಮುಟ್ಟಲು ಕೊಡ್ತಿಲ್ಲ ಸಂಗಾತಿ: ಸಂಗಾತಿಗಳ ಮಧ್ಯೆ ಆಪ್ತತೆ ಇದ್ದರೆ ಒಬ್ಬರ ಫೋನ್ ಪಾಸ್ವರ್ಡ್ ಇನ್ನೊಬ್ಬರಿಗೆ ತಿಳಿದಿರುತ್ತದೆ. ಆದ್ರೆ ಸಂಗಾತಿ ಫೋನ್ ನಲ್ಲಿ ಗುಟ್ಟು ಅಡಗಿದೆ ಎಂದಾದ್ರೆ ಆತ ಫೋನ್ ಮುಟ್ಟಲು ಬಿಡುವುದಿಲ್ಲ. ತನ್ನ ಗುಟ್ಟು ಬಹಿರಂಗವಾದ್ರೆ ಎನ್ನುವ ಭಯವಿರುತ್ತದೆ. ಅಪ್ಪಿತಪ್ಪಿ ನೀವು ಫೋನ್ ಟಚ್ ಮಾಡಿದ್ರೂ ಸಂಗಾತಿ ಕೂಗಾಡ್ತಾರೆ, ತಡರಾತ್ರಿಯವರೆಗೂ ಫೋನ್ ಗೆ ಅಂಟಿಕೊಂಡಿರ್ತಾರೆ ಎಂದಾದ್ರೆ ನೀವು ಇದಕ್ಕೆ ಉತ್ತರ ಪಡೆಯುವುದು ಒಳ್ಳೆಯದು.
ಅವ್ರ ಮಾತಲ್ಲೇ ಸತ್ಯ ಕಂಡು ಹಿಡಿಯಬಹುದು : ನಿಮ್ಮ ಸಂಗಾತಿ ಮೇಲೆ ನಿಮಗೆ ಅನುಮಾನ ಬಂದಿದೆ ಎಂದಾದ್ರೆ ಅವರನ್ನು ನೇರವಾಗಿ ಕೇಳಿ. ನಿಮ್ಮ ಸಂಗಾತಿ ಅಕ್ರಮ ಸಂಬಂಧದ ವಿಷ್ಯ ಕೇಳ್ತಿದ್ದಂತೆ ಶಾಂತವಾಗಿದ್ದರೆ ಅವರು ಯಾವುದೇ ಸಂಬಂಧ ಹೊಂದಿಲ್ಲ ಎಂದು ನೀವು ಅರ್ಥ ಮಾಡಿಕೊಳ್ಳಬಹುದು. ಅದೇ ನೀವು ಹೇಳ್ತಿದ್ದಂತೆ ಸಂಗಾತಿ ಚೀರಾಡಿ, ಕೂಗಾಡಿ ಮಾಡಿದ್ರೆ ಅವರು ಮೋಸ ಮಾಡ್ತಿದ್ದಾರೆ ಎಂದೇ ಅರ್ಥ. ಮುನಿಸಿಕೊಂಡ್ರೆ, ನಿಮಗೆ ಉತ್ತರ ನೀಡದೆ ಹೋದ್ರೆ ನೀವು ಎಚ್ಚರದಿಂದಿರುವುದು ಒಳ್ಳೆಯದು.
Work Place Culture: ಯಶಸ್ವಿ ಬಾಸ್ ಆಗಬೇಕು ಅಂದ್ರೆ ಈ ರೂಲ್ಸ್ ಫಾಲೋ ಮಾಡಿ
ಇದ್ರ ಬಗ್ಗೆಯೂ ಇರಲಿ ಗಮನ: ಈ ಮೇಲಿನ ವಿಷ್ಯವಲ್ಲದೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡ್ತಿದ್ದಾರೆ ಎಂದಾದ್ರೆ ಸಾಮಾಜಿಕ ಜಾಲತಾಣದ ಬಗ್ಗೆ ರಹಸ್ಯ ಕಾಯ್ದುಕೊಳ್ತಾರೆ. ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಮುಚ್ಚಿಡುತ್ತಾರೆ. ನಿಮ್ಮ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಆಗಾಗ ಸುಳ್ಳು ಹೇಳ್ತಿರುತ್ತಾರೆ. ಗಂಭೀರವಲ್ಲದ ವಿಷ್ಯಕ್ಕೂ ನಿಮ್ಮ ಮೇಲೆ ಕೋಪ ಮಾಡಿಕೊಳ್ತಾರೆ ಎಂದಾದ್ರೆ ನೀವು ಸಂಗಾತಿ ಮೇಲೆ ಅನುಮಾನಪಡುವುದ್ರಲ್ಲಿ ತಪ್ಪಿಲ್ಲ.