
ಇಡೀ ವಿಶ್ವದಲ್ಲಿ ಎಷ್ಟೊಂದು ಜಾತಿ, ಧರ್ಮ, ಜನಾಂಗ, ಸಮುದಾಯಗಳು! ಇದಕ್ಕೆ ಲೆಕ್ಕವೇ ಇಲ್ಲ. ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಪದ್ಧತಿಗಳು, ಆಚರಣೆಗಳು. ಒಂದೊಂದು ಊರುಗಳಲ್ಲಿ, ಒಂದೊಂದು ಪ್ರದೇಶಗಳಲ್ಲಿ... ಒಂದೊಂದು ರೀತಿಯ ಸಂಪ್ರದಾಯಗಳಿವೆ. ಒಬ್ಬರಿಗೆ ಪವಿತ್ರ ಎನಿಸುವ ಸಂಪ್ರದಾಯಗಳು, ಇನ್ನೊಬ್ಬರಿಗೆ ಹೇಸಿಗೆ ತರುವಂಥದ್ದು ಇದ್ದರೆ, ಒಬ್ಬರಿಗೆ ಖುಷಿ ಕೊಡುವ ಸಂಪ್ರದಾಯ ಮತ್ತೊಬ್ಬರಿಗೆ ಕ್ಲೀಷೆ ಎನ್ನಿಸುವುದು ಉಂಟು. ಹೀಗೆ ಥಹರೇವಾರಿ ಸಂಪ್ರದಾಯಗಳು ಇವೆ. ಅದರಲ್ಲಿಯೂ ಮದುವೆಯ ಸಂಪ್ರದಾಯಗಳು ಭಿನ್ನ ಭಿನ್ನವಾಗಿರುತ್ತವೆ.
ಅಷ್ಟಕ್ಕೂ, ಮದುವೆ ಅನ್ನೋದು ಜೀವನದ ಪ್ರಮುಖ ಘಟ್ಟ. ಗಂಡು-ಹೆಣ್ಣನ್ನು ಸಂಬಂಧದಲ್ಲಿ ಬಿಗಿಯುವ ಪ್ರೀತಿಯ ಬಂಧನ. ಆದರೆ ಮದುವೆಯ ಆಚರಣೆ ಜಾತಿ, ಧರ್ಮ, ಪ್ರದೇಶ, ದೇಶಗಳಿಗೆ ತಕ್ಕತೆ ವಿಭಿನ್ನವಾಗಿರುತ್ತದೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಆಚರಣೆಗಳು ಇರುತ್ತವೆ. ಹಲವು ಗ್ರಾಮಗಳಲ್ಲಿ ಮದುವೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಆದ್ರೆ ಕೆಲವೊಂದೆಡೆ ಮದುವೆಯ ಸಂಪ್ರದಾಯದ ಹೆಸರಲ್ಲಿ ಕೆಟ್ಟ ಆಚರಣೆಗಳು ಇವತ್ತಿಗೂ ಜಾರಿಯಲ್ಲಿವೆ. ಅದರಲ್ಲಿ ಕೆಲವೊಂದು ಸಂಪ್ರದಾಯಗಳು ನಿಮ್ಮನ್ನು ಅಚ್ಚರಿಗೊಳಿಸಿದರೆ, ಇನ್ನು ಕೆಲವು ನಿಮ್ಮನ್ನು ಗಾಬರಿಗೊಳಿಸಬಹುದು ಮತ್ತು ಕೆಲವು ಸ್ವಲ್ಪ ವಿಚಿತ್ರವೆನಿಸಬಹುದು.
ಬ್ರಿಟಿಷರಲ್ಲಿ ಒಂದು ಪದ್ಧತಿ ಇದೆ. ಅದನ್ನು ಗಾರ್ಟರ್ ಸೆರೆಮನಿ ಎಂದು ಕರೆಯುತ್ತಾರೆ. ಅದರಲ್ಲಿ ಮದುಮಗಳ ತೊಡೆಯ ಮೇಲೆ ಇರುವ ಬ್ಯಾಂಡ್ ತೆಗೆಯಬೇಕು. ಇದು ಸಂಪ್ರದಾಯ. ಆದರೆ ಇಲ್ಲಿ ಹೇಳಹೊರಟಿರುವುದು ಸ್ಪೇನ್ನ ಬಾರ್ಸಿಲೋನಾದಲ್ಲಿ ಇರುವ ವಿಚಿತ್ರ ಸಂಪ್ರದಾಯ. ಇಲ್ಲಿ ಮದುವೆಯ ದಿನ ಮದುಮಗ ಮದುಮಗಳ ಗೌನ್ ಒಳಗೆ ಮುಖ ಹಾಕಿ ಅಲ್ಲಿಯ ಅಂಗವನ್ನು ನೋಡಬೇಕು. ಅದನ್ನು ನೋಡಿ ಅಲ್ಲಿಯ ಭಾಷೆಯಲ್ಲಿ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನಿನ್ನನ್ನು ಎಂದಿಗೂ ಬಿಡುವುದಿಲ್ಲ ಎನ್ನಬೇಕು. ಇದು ಸಂಪ್ರದಾಯ. ಅದನ್ನು ಮುಖ ನೋಡಿಯೇ ಹೇಳಬಹುದಿತ್ತಲ್ಲ, ಆ ಜಾಗವನ್ನು ನೋಡಿಯಾಕೆ ಹೇಳಬೇಕು ಎನ್ನುವ ಪ್ರಶ್ನೆಗೆ ಸದ್ಯ ಉತ್ತರವಿಲ್ಲ! ಇದನ್ನು ಸಂಪ್ರದಾಯ ಮಾಡಿದವರೇ ಹೇಳಬೇಕಿದೆ...
ಗ್ರೀಸ್ ದೇಶದಲ್ಲಿನ ಒಂದು ಸಮುದಾಯದಲ್ಲಿ ಇಂಥದ್ದೊಂದು ಪದ್ಧತಿ ಇದೆ. ಹೀಗೆ ಉಗುಳಿದರೆ ಮಾತ್ರ ವಧುವಿಗೆ ಆಶೀರ್ವಾದ ಮಾಡಿದಂತೆ ಎನ್ನುವುದು ಇಲ್ಲಿಯವರ ಅಭಿಮತ. ಮದುವೆಯ ಸಂದರ್ಭದಲ್ಲಿ ಮದುಮಕ್ಕಳಿಗೆ ದೃಷ್ಟಿಬೊಟ್ಟು ಇಡುತ್ತಾರಲ್ಲ, ಯಾರದ್ದೇ ಕೆಟ್ಟ ದೃಷ್ಟಿ ಬೀಳಬಾರದು ಎಂದು ದೃಷ್ಟಿಬೊಟ್ಟು ಇಡುತ್ತಾರೆ. ಅದೇ ರೀತಿ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಎನ್ನುವ ಕಾರಣಕ್ಕೆ ವಧುವಿನ ಮೇಲೆ ಉಗುಳುವ ಪದ್ಧತಿ ಇಲ್ಲಿದೆ. ಹಾಗಿದ್ರೆ ವರನಿಗೆ ಕೆಟ್ಟ ದೃಷ್ಟಿ ಬಿದ್ದರೆ ಪರವಾಗಿಲ್ವಾ ಕೇಳಬೇಡಿ. ಏಕೆಂದರೆ ಇಂಥ ಅನಿಷ್ಠ ಎನ್ನುವ ಸಂಪ್ರದಾಯಗಳು ಎಲ್ಲಿಯೇ ಹೋದರೂ ಹೆಣ್ಣುಮಕ್ಕಳ ಮೇಲೆಯೇ ಇರುತ್ತದೆ ಎನ್ನುವುದು ಹೊಸದಾಗಿ ಹೇಳಬೇಕಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.