ಮಂಚದಲ್ಲಿ ಹೆಚ್ಚು ಹೊತ್ತು ಸ್ಮಾರ್ಟ್‌ಫೋನ್ ಬಳಸುವುದರಿಂದ ನಿಮ್ಮ ಲೈಂಗಿಕ ಜೀವನವೇ ಕೆಟ್ಟು ಹೋಗಬಹುದು ಎಂದು ಹಲವು ಅಧ್ಯಯನಗಳು ಖಚಿತಪಡಿಸಿವೆ, ಎಚ್ಚರಾಗಿ.
ಸ್ಮಾರ್ಟ್‌ಫೋನ್ ನಮ್ಮ ನಿಮ್ಮ ಎಲ್ಲ ಕೆಲಸಗಳಿಗೂ ಅನಿವಾರ್ಯವಾಗಿರಬಹುದು. ತಡರಾತ್ರಿ ಕೂಡ ನಿಮ್ಮ ಬಾಸ್ ಫೋನ್ ಮಾಡಿ ನಾಳೆ ಬೆಳಗ್ಗೆ ಬೇಗನೆ ಆಫೀಸ್‌ಗೆ ಬರಬೇಕು ಅಂತ ಅಸೈನ್‌ಮೆಂಟ್ ಹಚ್ಬಬಹುದು. ಇದೆಲ್ಲ ಆಧುನಿಕ ಜೀವನದಲ್ಲಿ ಅನಿವಾರ್ಯ. ಆದರೆ ರಾತ್ರಿ ಹೊತ್ತು ಮನೆಗೆ ಬಂದ ಮೇಲೂ ಮೊಬೈಲ್ ಹಿಡಿದುಕೊಂಡೇ ಸಮಯ ಕಳೆಯುವುದು, ಮಲಗುವ ಮುನ್ನ ಮಂಚದಲ್ಲಿ ಕೂಡ ಸಂಗಾತಿಯನ್ನು ಮುದ್ದಾಡುವ ಬದಲು ಸ್ಮಾರ್ಟ್‌ಫೋನನ್ನು ಮುದ್ದಾಡುವುದು- ಇದರಿಂದ ನಿಮ್ಮ ಸೆಕ್ಸ್ ಲೈಫ್ ದೊಡ್ಡ ಗಂಡಾಂತರಕ್ಕೆ ಸಿಲುಕಬಹುದು ಅಂತ ಹೇಳ್ತಿವೆ ಸ್ಟಡಿಗಳು.
ಮಗು ಹುಟ್ಟಿದ ಎಷ್ಟು ದಿನಗಳ ಬಳಿಕ ಸೆಕ್ಸ್ ಲೈಫ್‌ಗೆ ಮರಳಬಹುದು?
undefined
ಮೊರಾಕ್ಕೋದ ಕಾಸಾಬ್ಲಾಂಕಾದ ಚೀಕ್ ಖಲೀಫಾ ಬೆನ್ ಜಾಯೆದ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ ಹಾಸ್ಪಿಟಲ್‌ನಲ್ಲಿನ ಲೈಂಗಿಕ ಆರೋಗ್ಯ ಇಲಾಖೆ ಒಂದು ಅಧ್ಯಯನ ನಡೆಸಿತು. ಅದರಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 60 ಜನರು ಸ್ಮಾರ್ಟ್‌ಫೋನ್‌ಗಳ ಕಾರಣದಿಂದ ತಮ್ಮ ಲೈಂಗಿಕ ಜೀವನದಲ್ಲಿ ಸಮಸ್ಯೆ ಉಂಟಾಯಿತು ಎಂದು ಒಪ್ಪಿಕೊಂಡಿದ್ದಾರೆ. ಸುಮಾರು 600 ಜನ ಅಧ್ಯಯನದಲ್ಲಿ ಪಾಲ್ಗೊಂದಿದ್ದರು.
ಶೇಕಡಾ 92ರಷ್ಟು ಜನ ತಾವು ರಾತ್ರಿ, ಕೆಲವೊಮ್ಮೆ ಮಂಚದಲ್ಲಿ ಕೂಡ ಸ್ಮಾರ್ಟ್‌ಫೋನ್‌ಗಳನ್ನುಬಳಸುತ್ತೇವೆಂದು ಒಪ್ಪಿಕೊಂಡರು. ಸ್ಮಾರ್ಟ್‌ಫೋನ್‌ಗಳು 20 ರಿಂದ 45 ವರ್ಷ ವಯಸ್ಸಿನವರ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅಧ್ಯಯನವು ಕಂಡುಹಿಡಿಯಿತು. ಶೇಕಡಾ 60ರಷ್ಟು ಮಂದಿ ಏನು ಹೇಳಿದರು ಗೊತ್ತಾ- ಈ ಸ್ಮಾರ್ಟ್‌ಫೋನ್‌ಗಳು ತಮ್ಮ ‘ಲೈಂಗಿಕ ಪ್ರದರ್ಶನಗಳಿಗೆ’ ತೊಂದರೆಯಾಗಿದೆ ಎಂದರು! ಸುಮಾರು 50 ಪ್ರತಿಶತ ಜನ ತಮ್ಮ ಲೈಂಗಿಕ ಜೀವನ ಸಾಕಷ್ಟು ಆಕರ್ಷಕವಾಗಿಲ್ಲ ಎಂದರು. ಯಾಕೆ? ಯಾಕೆಂದರೆ, ಅದಕ್ಕಾಗಿ ವಿನಿಯೋಗಿಸಬೇಕಾದ ಸಮಯವನ್ನು ಅವರು ಫೋನ್ ಬಳಕೆಗೆ ಮೀಸಲಿಟ್ಟಿದ್ದರು. ಸ್ಮಾರ್ಟ್‌ಫೋನ್ ಬಳಸುವ ಮಂದಿಯಲ್ಲಿ ಸುಮಾರು ಮುಕ್ಕಾಲು ಭಾಗ ರಾತ್ರಿ ತಮ್ಮ ಹಾಸಿಗೆಯ ಮೇಲೇ ಪಕ್ಕದಲ್ಲಿ ಅದನ್ನು ಇಟ್ಟುಕೊಳ್ಳುತ್ತಾರೆ. ಫೋನ್ ದೂರ ಇದ್ದರೆ ಭಯ ಅಥವಾ ಆತಂಕ ಅನುಭವಿಸುತ್ತಾರಂತೆ.
ಹಸ್ತಮೈಥುನ ಮಾಡಿದ್ರೆ ಏನ್ ಪ್ರಾಬ್ಲಂ?
ಕಾಂಡೋಮ್ ಸಂಸ್ಥೆ ಡ್ಯುರೆಕ್ಸ್ ಇತ್ತೀಚೆಗೆ ಡರ್ಹಾಮ್ ವಿಶ್ವವಿದ್ಯಾನಿಲಯದ ಮೂಲಕ ಈ ಬಗ್ಗೆ ಒಂದು ಸ್ಟಡಿ ನಡೆಸಿತು. ಸೆಕ್ಸ್ ಮತ್ತು ಸ್ಮಾರ್ಟ್‌ಫೋನ್ ಈ ಎರಡು ಅವಕಾಶಗಳನ್ನು ಮುಂದಿಟ್ಟಾಗ, ಹೆಚ್ಚು ಜನರು ಯಾವುದನ್ನು ಆಯ್ದುಕೊಳ್ಳುತ್ತಾರೆ? ಸಹಜವಾಗಿಯೇ ಸೆಕ್ಸನ್ನೇ ಆಯ್ದುಕೊಳ್ಳುತ್ತಾರೆ ಎಂಬುದು ನಿಮ್ಮ ಊಹೆ ಅಲ್ಲವೇ? ಆದರೆ ನಿಜ ಹಾಗಿಲ್ಲ! ಜನ ತಮ್ಮ ಸಂಗಾತಿಗಿಂತಲೂ ಗ್ಯಾಜೆಟ್‌ಗಳ ಮೇಲೇ ಹೆಚ್ಚು ಮೋಹ ಹೊಂದಿರುವ ಸಾಧ್ಯತೆ ಹೆಚ್ಚಂತೆ! ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ಮೂರನೇ ಒಂದು ಭಾಗ ಜನ, ಸೆಕ್ಸ್‌ನ ಸಂದರ್ಭದಲ್ಲಿ ಯಾವುದಾದರೂ ಫೋನ್ ಕಾಲ್ ಬಂದರೆ, ಸಂಭೋಗವನ್ನು ತಾತ್ಕಾಲಿಕವಾಗಿ ನಿಲ್ಲಿಸಿಯಾದರೂ ಫೋನ್ ಕರೆಗೆ ಓಗೊಡುತ್ತೇವೆ ಎಂದಿದ್ದಾರಂತೆ. ಅದಕ್ಕೆ ಕಾರಣ, ಈ ಫೋನ್ ಕರೆ ಎಲ್ಲಿಯಾದರೂ ತುಂಬಾ ಇಂಪಾರ್ಟೆಂಟ್ ಆಗಿದ್ದರೆ ಎಂಬ ಆತಂಕ. ಇದರಿಂದಾಗಿಯೇ, ಗ್ಯಾಜೆಟ್‌ಗಳು ಮಲಗುವ ಕೋಣೆಯಲ್ಲಿ ಸಂಬಂಧಗಳಿಗೆ ಗಂಭೀರ ಹಾನಿ ಉಂಟುಮಾಡಬಹುದು ಎಂಬ ಆತಂಕ ತಲೆದೋರಿರುವುದು.
ಸ್ಮಾರ್ಟ್‌ಫೋನ್‌ಗಳು ನಿಮ್ಮ ಲೈಂಗಿಕ ಜೀವನವನ್ನು ಹಾನಿಗೊಳಪಡಿಸದಿರಲು ನೀವು ಹೀಗೆ ಮಾಡಬಹುದು:
- ಸ್ಮಾರ್ಟ್‌ಫೋನ್‌ಗಳಲ್ಲಿ ನಿಮ್ಮ ಸೆಕ್ಸ್ ಲೈಫ್‌ಗೆ ಉತ್ತೇಜನ ನೀಡುವ ಸಂಗತಿಗಳನ್ನು, ಉದಾಹರಣೆಗೆ ಸೆಕ್ಸ್‌ಟಿಂಗ್, ರೊಮ್ಯಾಂಟಿಕ್ ಚಿತ್ರಗಳ ವೀಕ್ಷಣೆ ಇತ್ಯಾದಿ ಹೆಚ್ಚು ಮಾಡಿ.
- ಮಲಗುವ ಮುನ್ನ ರೊಮ್ಯಾಂಟಿಕ್ ಸಾಹಿತ್ಯ ಓದಿ ಅಥವಾ ಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಸಿನಿಮಾಗಳನ್ನು ನೋಡಿ.
'ಸೆಕೆಂಡ್ ಇನ್ನಿಂಗ್ಸ್' ಪ್ರಾರಂಭಿಸುವ ಮುನ್ನ ಹೀಗೆಲ್ಲ ಯೋಚಿಸಿ!
- ಸ್ಮಾರ್ಟ್‌ಫೋನ್ ಮಂಚದಿಂದ ಆಚೆಗೇ ಇರಲಿ. ಡೇಟಾ ಬಂದ್ ಮಾಡಿ. ಆಗಾಗ ಬರುವ ಮೆಸೇಜ್‌ಗಳ ನೋಟಿಫಿಕೇಶನ್ ಸೌಂಡ್‌ಗಳಿಂದ ಆಗುವ ಕಿರಿಕಿರಿ ತಪ್ಪುತ್ತದೆ.
- ರಾತ್ರಿ ಮಲಗುವ ಒಂದು ಗಂಟೆ ಮೊದಲು ಎಲ್ಲ ಬಗೆಯ ಸ್ಮಾರ್ಟ್‌ಫೋನ್ ವೀಕ್ಷಣೆಯನ್ನು ಬಂದ್ ಮಾಡಿ.