ಮಕ್ಕಳನ್ನು ಬೆಳೆಸುವುದೊಂದು ಕಲೆ, ಕೆಲವು ತಪ್ಪುಗಳು ವ್ಯಕ್ತಿತ್ವವನ್ನೇ ಘಾಸಿಗೊಳಿಸಬಹುದು!

By Suvarna NewsFirst Published Nov 16, 2022, 2:34 PM IST
Highlights

ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಜನರೇಷನ್ ಗ್ಯಾಪ್ ಪಾಲಕರು ಹಾಗೂ ಮಕ್ಕಳ ಮಧ್ಯೆ ಅಂತರ ಹೆಚ್ಚು ಮಾಡೋದು ನಿಜ. ಆದ್ರೆ ಮೊದಲೇ ಎಚ್ಚೆತ್ತರೆ ಸಂಬಂಧ ಹಳಸದಂತೆ ನೋಡಿಕೊಳ್ಳಬಹುದು. 
 

ಮನೆ ಅಂದ್ಮೇಲೆ ಸಮಸ್ಯೆಗಳು ನೂರಾರಿರುತ್ತವೆ. ಮಕ್ಕಳ ಪಾಲನೆ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ಮಕ್ಕಳು ದೊಡ್ಡವರಾಗ್ತಿದ್ದಂತೆ ಮಕ್ಕಳು ಹಾಗೂ ಪಾಲಕರ ಮಧ್ಯೆ ಅಂತರ ಹೆಚ್ಚಾಗ್ತಾ ಹೋಗುತ್ತದೆ. ಮಕ್ಕಳ ಆಲೋಚನೆಗೆ ಪಾಲಕರ ಆಲೋಚನೆ ಹೊಂದಾಣಿಕೆಯಾಗೋದಿಲ್ಲ. ಶಾಲೆ, ಸ್ನೇಹಿತರು ಎಂದು ಬ್ಯುಸಿಯಾಗುವ ಮಕ್ಕಳ ಸ್ವಭಾವ ಪಾಲಕರಿಗೆ ಹೊಂದುವುದಿಲ್ಲ. ಇದೇ ವಿಷ್ಯಕ್ಕೆ ಕುಟುಂಬದಲ್ಲಿ ಗಲಾಟೆಗಳು ಆಗೋದು ಸಹಜ. ತಂದೆ – ತಾಯಿ ನನ್ನ ಮಾತಿಗೆ ಬೆಲೆ ನೀಡ್ತಿಲ್ಲ ಎಂದು ಭಾವಿಸುವ ಮಕ್ಕಳು  ತಮ್ಮ ಆಸೆ ಈಡೇರಿಸಿಕೊಳ್ಳಲು ಬೇರೆ ದಾರಿ ಹಿಡಿಯುತ್ತಾರೆ. ಎಷ್ಟೋ ಮನೆಗಳಲ್ಲಿ ಮಕ್ಕಳು , ತಂದೆ – ತಾಯಿ ಜೊತೆ ಮಾತನಾಡೋದಿಲ್ಲ. ಮಕ್ಕಳು ನಮ್ಮಿಂದ ದೂರವಾಗ್ತಿದ್ದಾರೆ ಎಂಬುದನ್ನು ಪಾಲಕರು ಆರಂಭದಲ್ಲಿಯೇ ಪತ್ತೆ ಹಚ್ಚಬೇಕು. ಹಾಗೆ ಅವರನ್ನು ನಿಯಂತ್ರಣದಲ್ಲಿಡಲು ಪ್ರಯತ್ನ ನಡೆಸಬೇಕು. ಮಕ್ಕಳು ಹಾಗೂ ಪಾಲಕರ ಮಧ್ಯೆ ಅಂತರ ಹೆಚ್ಚಾಗ್ತಿದೆ ಎಂಬುದನ್ನು ಕೆಲ ಬದಲಾವಣೆಯಿಂದ ನೀವು ಗುರುತಿಸಬಹುದು.

ಪಾಲಕರು (Parents) ಮತ್ತು ಮಕ್ಕಳ (Child) ನಡುವೆ ಅಂತರ ಹೆಚ್ಚಾಗ್ತಿರೋದನ್ನು ಹೀಗೆ ಪತ್ತೆ ಮಾಡಿ :

ಮೌನ (Silence) : ಒಂದು ಸಮಯದಲ್ಲಿ ಸದಾ ಮಾತು, ಹರಟೆಯಲ್ಲಿರುತ್ತಿದ್ದ ಮನೆ, ಮಕ್ಕಳಿದ್ದಾಗ್ಲೂ ಈಗ ಮೌನವಾಗಿದೆ ಅಂದ್ರೆ ನಿಮ್ಮ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದೇ ಅರ್ಥ. ಗಲಾಟೆ ದೊಡ್ಡ ಸಮಸ್ಯೆ ತರದೆ ಇರಬಹುದು. ಆದ್ರೆ ಮೌನ ಮಾತ್ರ ಭಯಂಕರವಾಗಿರುತ್ತದೆ. ಮಕ್ಕಳು ಹಾಗೂ ಪಾಲಕರ ಮಧ್ಯೆ ಮಾತನಾಡಲು ವಿಷ್ಯವಿಲ್ಲ ಎಂದಾಗ ಅಥವಾ ಇಬ್ಬರು ಒಂದೇ ಕಡೆ ಕುಳಿತಿದ್ರೂ ಸುಮ್ಮನೆ ಕುಳಿತಿದ್ದರೆ ಇಬ್ಬರ ಸಂಬಂಧ ದುರ್ಬಲವಾಗ್ತಿದೆ ಎಂಬ ಸೂಚನೆ. ಆರಂಭದಲ್ಲಿಯೇ ನೀವು ಇದಕ್ಕೆ ಪರಿಹಾರ ಕಂಡುಕೊಳ್ಳಿ. ನನ್ನ ಮಕ್ಕಳು ಹಾಗಿಲ್ಲ ಎಂದು ಸತ್ಯ ಮುಚ್ಚಿಡುವ ಬದಲು ಸತ್ಯ ಒಪ್ಪಿಕೊಂಡು ಸರಿಪಡಿಸುವ ಪ್ರಯತ್ನ ನಡೆಸಿ.

ಈ DATE NIGHT IDEAS ನಿಮ್ಮ ವೈವಾಹಿಕ ಜೀವನದಲ್ಲಿ ರೋಮ್ಯಾನ್ಸ್ ಹೆಚ್ಚಿಸೋದು ಗ್ಯಾರಂಟಿ

ಹೆಚ್ಚಾಗುವ ತೋರ್ಪಡಿಕೆ : ಸಂತೋಷ (Happiness) ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕು. ಅದ್ರಲ್ಲಿ ತಪ್ಪೇನಿಲ್ಲ. ಎಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಸುಂದರ ಕ್ಷಣಗಳನ್ನು ಹಂಚಿಕೊಳ್ತಾರೆ. ಆದ್ರೆ ಇದು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಬೇಕು. ಮಗು ಮನೆಯಲ್ಲಿ ನಡೆಯುವ ಹಾಗೂ ಜೀವನದಲ್ಲಿ ನಡೆಯುವ ಪ್ರತಿ ವಿಷ್ಯ, ಪ್ರತಿ ಚರ್ಚೆಯನ್ನು ಪ್ರಪಂಚದ ಮುಂದಿಡುವ ಪ್ರಯತ್ನ ನಡೆಸುತ್ತಿದ್ದರೆ ನೀವು ಇದ್ರ ಬಗ್ಗೆ ಗಮನ ನೀಡಿ. ಇಡೀ ದಿನ ಮೊಬೈಲ್ ನಲ್ಲಿ ಕಳೆಯುವುದು ಹಾಗೂ ಪಾಲಕರನ್ನು ನಿರ್ಲಕ್ಷ್ಯ ಮಾಡುವುದು ಕೂಡ ಮಕ್ಕಳು ನಿಮ್ಮಿಂದ ದೂರವಾಗ್ತಿದ್ದಾರೆ ಎಂಬ ಸೂಚನೆಯಾಗಿದೆ.

ಆರ್ಥಿಕ ಸಮಸ್ಯೆ : ಪೋಷಕರು ಹಾಗೂ ಮಕ್ಕಳ ಆರ್ಥಿಕ ಸ್ಥಿತಿ ಯಾವಾಗ್ಲೂ ಸರಿಯಾಗಿರೋದಿಲ್ಲ. ಅನೇಕ ಬಾರಿ ಆರ್ಥಿಕ ಪರಿಸ್ಥಿತಿಯೇ ಕುಟುಂಬಸ್ಥರು ದೂರವಾಗಲು ಕಾರಣವಾಗುತ್ತದೆ. ಮಕ್ಕಳಿಗೆ ಪಾಲಕರ ಆರ್ಥಿಕ ಸ್ಥಿತಿ ತಿಳಿದಿರಬೇಕು. ಇಲ್ಲವೆಂದ್ರೆ ಮಕ್ಕಳು, ತಂದೆ – ತಾಯಿಯಿಂದ ದೂರವಾಗ್ತಾರೆ.

ಸಿಗದ ಪ್ರೀತಿ : ಪ್ರತಿಯೊಬ್ಬರೂ ಪ್ರೀತಿ ಬಯಸ್ತಾರೆ. ಮನೆಗೆ ಸುಸ್ತಾಗಿ ಬಂದಾಗ ಪ್ರೀತಿಯ ಮಾತನಾಡಿ, ಕುಡಿಯಲು ನೀರು ನೀಡಿದ್ರೂ ಹಿತವೆನ್ನಿಸುತ್ತದೆ. ಮಕ್ಕಳು ಪಾಲಕರ ಪ್ರೀತಿ ಹಾಗೂ ಗಮನ ಸೆಳೆಯಲು ಬಯಸ್ತಾರೆ. ಮಕ್ಕಳು ಮನೆಗೆ ಬಂದಾಗ ಪಾಲಕರು ಪ್ರೀತಿಯಿಂದ ತಲೆಸವರುವ ಅವಶ್ಯಕತೆಯಿದೆ. ಮಕ್ಕಳಿಗೆ ಇದು ಸಿಕ್ಕಿಲ್ಲವೆಂದಾಗ ಅವರು ಪಾಲಕರಿಂದ ದೂರವಾಗ್ತಾರೆ.

Pisces ಪುರುಷ ಹಾಗೂ Gemini ಮಹಿಳೆ ನಡುವೆ ನಿಜಕ್ಕೂ ಹೊಂದಾಣಿಕೆ ಸಾಧ್ಯಾನಾ!?

ನಿರುತ್ಸಾಹ : ಕೆಲಸದ ಒತ್ತಡದಲ್ಲಿ ಪಾಲಕರು ವಯಸ್ಸಿಗಿಂತ ಹೆಚ್ಚಾದಂತೆ ವರ್ತಿಸಲು ಶುರು ಮಾಡ್ತಾರೆ. ಎಲ್ಲದರಲ್ಲೂ ನಿರುತ್ಸಾಹ ತೋರಿಸ್ತಾರೆ. ಮಕ್ಕಳಿಗೆ ಆಸಕ್ತಿಯಿರುವ ವಿಷ್ಯದಲ್ಲೂ ಪಾಲಕರು ಬೇಸರ ವ್ಯಕ್ತಪಡಿಸಿದಾಗ ಸಮಸ್ಯೆ ಶುರುವಾಗುತ್ತದೆ. ಉದಾಹರಣೆಗೆ ಮಕ್ಕಳ ಜೊತೆ ಪ್ರವಾಸಕ್ಕೆ ಹೋದಾಗ ಫೋಟೋ ತೆಗೆಯಲು ಕೂಡ ಪಾಲಕರು ಹಿಂದೇಟು ಹಾಕಿದ್ರೆ ಮಕ್ಕಳ ಉತ್ಸಾಹ ಕೂಡ ಕುಗ್ಗಿ ಹೋಗುತ್ತದೆ.
 

click me!