ಮದುವೆಯಾದ ನಾಲ್ಕೇ ತಿಂಗಳಲ್ಲಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ ನಟಿ ಶರ್ಮಿಳಾ ಮಾಂಡ್ರೆ!

Published : Nov 14, 2026, 07:41 PM IST
Sharmiela Mandre Announces Pregnancy

ಸಾರಾಂಶ

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ಹಾಗೂ ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ವಿವಾಹವಾದ ಕೇವಲ ನಾಲ್ಕು ತಿಂಗಳಲ್ಲೇ ತಾಯಿಯಾಗುತ್ತಿರುವ ವಿಚಾರವನ್ನು ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು (ನ.14): ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ (Sharmiela Mandre) ಮತ್ತು ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ (Sudhan Sundaram) ದಂಪತಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಿವಾಹವಾದ ಕೇವಲ ನಾಲ್ಕು ತಿಂಗಳಲ್ಲೇ ಈ ತಾರಾ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ತಾವು ತಾಯಿಯಾಗುತ್ತಿರುವ ವಿಚಾರವನ್ನು ನಟಿ ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ಶರ್ಮಿಳಾ ಮಾಂಡ್ರೆ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅತ್ಯಂತ ಮುದ್ದಾದ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಈ ಶುಭ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ. ಈ ಫೋಟೋದಲ್ಲಿ ಶರ್ಮಿಳಾ ಮತ್ತು ಪತಿ ಸುಧನ್ ಸುಂದರಂ ಪರಸ್ಪರ ಕೈಹಿಡಿದುಕೊಂಡಿದ್ದು, ತಮ್ಮ ಬೆರಳುಗಳಲ್ಲಿ ಪುಟ್ಟ ಮಗುವಿನ ಬಿಳಿ ಬಣ್ಣದ ಬೂಟುಗಳನ್ನು (Knitted Baby Booties) ಹಿಡಿದಿರುವುದು ಕಂಡುಬಂದಿದೆ.

ಈ ಸುಂದರ ಚಿತ್ರಕ್ಕೆ ನಟಿ "Little steps ahead" (ಮುಂದೆ ಪುಟ್ಟ ಹೆಜ್ಜೆಗಳು) ಎಂದು ಶೀರ್ಷಿಕೆ ನೀಡಿದ್ದು, ತಮ್ಮ ಜೀವನದ ಹೊಸ ಅಧ್ಯಾಯವನ್ನು ಸ್ವಾಗತಿಸುವ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಿನಿಮಾ ರಂಗದ ಗಣ್ಯರು ಹಾಗೂ ಅಭಿಮಾನಿಗಳಿಂದ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಜೈಪುರದ ಅರಮನೆಯಲ್ಲಿ ನಡೆದಿದ್ದ ಅದ್ದೂರಿ ವಿವಾಹ

ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಚಿತ್ರ ನಿರ್ಮಾಪಕ ಸುಧನ್ ಸುಂದರಂ ಅವರು 2026ರ ಜುಲೈ 12 ರಂದು ರಾಜಸ್ಥಾನದ ಜೈಪುರದಲ್ಲಿರುವ ಐತಿಹಾಸಿಕ ಸಮೋದ್ ಅರಮನೆ (Samode Palace) ಮತ್ತು ಸಮೋದ್ ಬಾಗ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಮದುವೆಗೂ ಮುನ್ನ 2026ರ ಜೂನ್ 25 ರಂದು ಬೆಂಗಳೂರಿನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಈ ಜೋಡಿ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ದಕ್ಷಿಣ ಭಾರತದ ಸಂಪ್ರದಾಯ ಮತ್ತು ರಾಜಸ್ಥಾನಿ ಪರಂಪರೆಯ ಸುಂದರ ಸಮ್ಮಿಲನದಂತೆ ಈ ವಿವಾಹ ಮಹೋತ್ಸವ ಜರುಗಿತ್ತು. ವಿಶೇಷವಾಗಿ ಮೈಸೂರು ಅರಮನೆಯಿಂದ ಪ್ರೇರಿತವಾದ ಅಲಂಕಾರ, ಸಾಂಪ್ರದಾಯಿಕ ದೀಪಗಳು ಮತ್ತು ಚಿನ್ನದ ಕಂಬಗಳು ಮದುವೆ ಮಂಟಪಕ್ಕೆ ರಾಜಕಳೆ ನೀಡಿದ್ದವು. ಕುಟುಂಬಸ್ಥರು, ಆಪ್ತ ಸ್ನೇಹಿತರು ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಸಿನಿಮಾ ತಾರೆಯರಾದ ನಟಿ ರಮ್ಯಾ ಹಾಗೂ ಧನ್ಯಾ ರಾಮ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು. ಇದೀಗ ವಿವಾಹವಾದ ನಾಲ್ಕೇ ತಿಂಗಳಲ್ಲಿ ಮನೆಗೆ ಹೊಸ ಅತಿಥಿಯ ಆಗಮನವಾಗುತ್ತಿರುವ ಸುದ್ದಿ ಮಾಂಡ್ರೆ ಹಾಗೂ ಸುಂದರಂ ಕುಟುಂಬದಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಾನು ಸತ್ತರೆ ನೋಡಲು ಬರುತ್ತೀಯಾ?" ಆ ಪ್ರಶ್ನೆ ಕೇಳಿದ್ದ ನಟಿ ಸಿಲ್ಕ್ ಸ್ಮಿತಾ ಅಂತ್ಯಕ್ರಿಯೆಗೆ ಹೋಗಿದ್ರಾ ಈ ಸ್ಟಾರ್?
ದರ್ಶನ್​-ಪವಿತ್ರಾ ಗೌಡ ಕೋರ್ಟ್​ನಲ್ಲಿ ಮಾಡಿಕೊಂಡ ಎಡವಟ್ಟಿನ ಬೆನ್ನಲ್ಲೇ ವಿಜಯಲಕ್ಷ್ಮಿ ಕುತೂಹಲದ ಪೋಸ್ಟ್​