
ಮಕ್ಕಳ ಪರೀಕ್ಷೆ ವಿಷ್ಯ ಬಂದಾಗ ಗುಡ್, ಬೆಟರ್ ಎಂಬ ಶಬ್ಧಕ್ಕೆ ಮಹತ್ವವಿಲ್ಲ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳು ಬೆಸ್ಟ್ ಆಗ್ಬೇಕೆಂದೇ ಬಯಸ್ತಾರೆ. ಇದೇ ಕಾರಣಕ್ಕೆ ಇಡೀ ದಿನ ಮಕ್ಕಳ ಹಿಂದೆ ಬೀಳ್ತಾರೆ. ಮಕ್ಕಳ ಪರೀಕ್ಷೆ, ಪಾಲಕರಿಗೂ ಪರೀಕ್ಷೆಯಿದ್ದಂತೆ. ಮೊನ್ನೆ ಸ್ಕೂಲ್ ಬಳಿ ಹೋದಾಗ, ತಂದೆಯೊಬ್ಬರು ಮಗನ ಮೇಲೆ ಕಿರುಚಾಡ್ತಿದ್ರು. ಎಲ್ಲ ಪ್ರಶ್ನೆಗೆ ಉತ್ತರ ಬರೆದು ಔಟ್ ಆಫ್ ಔಟ್ ತಂದ್ರೆ ಸರಿ. ಇಲ್ಲ ಅಂದ್ರೆ ಮನೆಗೆ ಬಂದ್ಮೇಲೆ ನಿನ್ನ ಚರ್ಮ ಸುಲಿತೇನೆ ಎನ್ನುತ್ತಿದ್ದರು. ವಿಚಾರಿಸಿದ್ದಾಗ ಗೊತ್ತಾಗಿದ್ದು, ಆತ ಓದುತ್ತಿರೋದು ನಾಲ್ಕನೇ ಕ್ಲಾಸಿನಲ್ಲಿ. ಅಲ್ಲ ನಾಲ್ಕನೇ ಕ್ಲಾಸ್ ಮಾರ್ಕ್ಸ್ ಇಟ್ಕೊಂಡು ಈ ಪಾಲಕರು ಏನು ಮಾಡ್ತಾರೆ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಮಕ್ಕಳ ಮೇಲೆ ಪಾಲಕರು ಹೊರಿಸುವ ಈ ಒತ್ತಡ ಮಕ್ಕಳನ್ನು ಮಾನಸಿಕವಾಗಿ ಕುಗ್ಗಿಸುತ್ತಿದೆ. ಮಾರ್ಕ್ಸ್ ಇಲ್ಲ ಅಂದ್ರೆ ಸಮಾಜದಲ್ಲಿ ತಮಗೆ ಸ್ಥಾನವೇ ಇಲ್ಲ ಎಂದು ಮಕ್ಕಳು ಭಾವಿಸ್ತಿದ್ದಾರೆ. ಬರೀ ಪಾಲಕರು ಮಾತ್ರವಲ್ಲ ಶಾಲೆ, ಶಿಕ್ಷಣ ಸಂಸ್ಥೆ ಕೂಡ ಮಾರ್ಕ್ಸ್ ಮಹತ್ವ ನೀಡ್ತಿದೆ. ಕಡಿಮೆ ಮಾರ್ಕ್ಸ್ ಬಂದ ಮಕ್ಕಳನ್ನು ಶಾಲೆ ಶಿಕ್ಷಕರು ಕೂಡ ಸರಿಯಾಗಿ ವಿಚಾರಿಸಿಕೊಳ್ಳೋದಿಲ್ಲ. ಮಕ್ಕಳು, ಪರೀಕ್ಷೆ ಮತ್ತು ಪಾಲಕರ ಬಗ್ಗೆ ನಟಿ ಆಲಿಯಾ ಭಟ್ ಸಹೋದರಿ ಹಾಗೂ ಕವಿಯಿತ್ರಿ, ಕಥೆಗಾರ್ತಿ ಶಾಹೀನ್ ಭಟ್ ಸಲಹೆ ನೀಡಿದ್ದಾರೆ.
ಶಾಹೀನ್ ಭಟ್ (Shaheen Bhatt) ಪ್ರಕಾರ, ಪಾಲಕರು ನೀಡುವ ಒತ್ತಡ ಮಕ್ಕಳನ್ನು ಹತಾಷೆಗೆ ತಳ್ಳುತ್ತಿದೆ. ಸೋಲನ್ನು ಯಶಸ್ಸಿನ ಮೊದಲ ಮೆಟ್ಟಿಲು ಎಂದು ಪರಿಗಣಿಸಬೇಕಾದ ಮಕ್ಕಳು (Children), ಸೋಲನ್ನು ತಮ್ಮ ಜೀವನದ ಕೊನೆ ಎಂದು ಭಾವಿಸುತ್ತಿದ್ದಾರೆ. ಸರ್ವಶ್ರೇಷ್ಠರಾಗ್ಬೇಕು ಎನ್ನುವ ಗುಂಗಿನಲ್ಲಿ, ಪರೀಕ್ಷೆ, ಮಾರ್ಕ್ಸ್ ಬಿಟ್ಟು ಇನ್ನೊಂದು ಪ್ರಪಂಚವಿದೆ ಎನ್ನುವುದನ್ನೇ ಪಾಲಕರು ಮರೆತಿದ್ದಾರೆ ಎನ್ನುತ್ತಾರೆ ಶಾಹಿನ್. ಉತ್ತಮ ಮಾರ್ಕ್ಸ್ ಒಳ್ಳೆ ಕಾಲೇಜು, ಉದ್ಯೋಗ ನೀಡಬಲ್ಲದೆ ವಿನಃ ಸಂತೋಷ ನೀಡುವುದಿಲ್ಲ ಎನ್ನುತ್ತಾರೆ ಶಾಹೀನ್.
ಹನಿಮೂನ್ ಮೂಡ್ನಲ್ಲಿರೋ ಪರಿಣಿತಿ- ರಾಘವ್ಗೆ ಭಾರಿ ಶಾಕ್! ಮನೆ ಖಾಲಿ ಮಾಡಲು ಕೋರ್ಟ್ ಆದೇಶ
ಪರೀಕ್ಷೆಯ ಒತ್ತಡವನ್ನು ತಪ್ಪಿಸಲು ಶಾಹೀನ್ ಭಟ್ ನೀಡಿದ ಸಲಹೆ ಏನು? :
ಮಕ್ಕಳಿಗೆ ಒತ್ತಡ (Stress) ವನ್ನು ನೀಡಬೇಡಿ : ಮಕ್ಕಳ ಅಧ್ಯಯನದ ಬಗ್ಗೆ ಪದೇ ಪದೇ ಒತ್ತಡ ಹೇರುವುದು ಅವರ ಮಾನಸಿಕ ಆರೋಗ್ಯದ (Mental Health) ಮೇಲೆ ಪರಿಣಾಮ ಬೀರುತ್ತದೆ ಎಂದು ಪೋಷಕರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೀಗೆ ಮಾಡಿದ್ರೆ ಮಕ್ಕಳು ಖಿನ್ನತೆಗೆ ಒಳಗಾಗ್ತಾರೆ. ಶೈಕ್ಷಣಿಕ ಒತ್ತಡವು ಪರೋಕ್ಷವಾಗಿ ಖಿನ್ನತೆಯ ಲಕ್ಷಣಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಪತ್ತೆಯಾಗಿದೆ.
ಮಕ್ಕಳಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಿ : ಪೋಷಕರು ಮಗುವಿಗೆ ಮೊದಲು ಸ್ನೇಹಿತರಾಗ್ಬೇಕು. ಆಗ ಮಗುವಿಗೆ ಅಧ್ಯಯನಕ್ಕೆ ಹೆಚ್ಚು ಗಮನ ನೀಡ್ಬಹುದು. ನೀವು ಸ್ನೇಹಿತರಾಗಿ ಮಕ್ಕಳ ಜೊತೆ ಮಾತನಾಡಿದ್ರೆ ಅವರ ಸಮಸ್ಯೆ ಅರ್ಥವಾಗುವುದಲ್ಲದೆ ಅದನ್ನು ಸುಲಭವಾಗಿ ಬಗೆಹರಿಸಬಹುದು.
ತಂಗಿ ಖುಷಿಗಾಗಿ ನಟನೆಯನ್ನೇ ಬಿಡಲು ರೆಡಿ ಯಾಗಿದ್ರಂತೆ ಜಾನ್ವಿ ಕಪೂರ್!
ಮಕ್ಕಳಿಗೆ ಕಥೆ ಹೇಳಿ : ಆಸಕ್ತಿದಾಯಕ ಕಲಿಕೆ ವಾತಾವರಣ ಮುಖ್ಯ. ಮಕ್ಕಳ ಮನಸ್ಸು ತುಂಬಾ ಚಂಚಲವಾಗಿರುತ್ತದೆ. ಆದ್ದರಿಂದ, ಮಕ್ಕಳನ್ನು ಗದರಿಸಿ ಕಲಿಸುವ ಬದಲು ಅವರಿಗೆ ಸ್ಥಿರ ಮತ್ತು ಶಾಂತ ಕಲಿಕೆ ವಾತಾವರಣ ಸೃಷ್ಟಿ ಮಾಡಿ. ಇದಕ್ಕೆ ನೀವು ಪರಿಣಿತರ ಸಹಾಯ ಪಡೆಯಿರಿ.
ಎಲ್ಲರೂ ಒಂದೇ ಅಲ್ಲ : ಪ್ರತಿ ಮಕ್ಕಳು ಭಿನ್ನವಾಗಿರುತ್ತಾರೆ. ನಿಮ್ಮ ಮಕ್ಕಳ ಸ್ವಭಾವ, ಅವರ ಕಲಿಕಾ ಸಾಮರ್ಥ್ಯವನ್ನು ನೀವು ಅರ್ಥ ಮಾಡಿಕೊಂಡು ಅವರಿಗೆ ಕಲಿಸಬೇಕು. ಅವರಿಗೆ ವಾಕ್ ಸ್ವಾತಂತ್ರ್ಯ ನೀಡ್ಬೇಕು. ಆಗ ಅವರು ತಮ್ಮ ಸಮಸ್ಯೆ, ಪ್ರಯತ್ನ ಎಲ್ಲವನ್ನೂ ನಿಮ್ಮ ಮುಂದೆ ಬಿಚ್ಚಿಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.