ಮಕ್ಕಳ ಮದುವೆ ದಿನ ವರನ ಅಪ್ಪನ ಜೊತೆ ವಧುವಿನ ಅಮ್ಮ ಎಸ್ಕೇಪ್​: ಮದ್ವೆ ಕ್ಯಾನ್ಸಲ್​- ಮುಂದೇನಾಯ್ತು ನೋಡಿ

Published : Nov 13, 2026, 12:46 PM IST
Marriage

ಸಾರಾಂಶ

ಗುಜರಾತ್‌ನಲ್ಲಿ ಮದುವೆಯ ಮುಹೂರ್ತದ ಸಮಯದಲ್ಲಿ ವರನ ತಂದೆ ಮತ್ತು ವಧುವಿನ ತಾಯಿ ಓಡಿಹೋದ ವಿಚಿತ್ರ ಘಟನೆ ನಡೆದಿದೆ. ಬಾಲ್ಯದ ಸ್ನೇಹಿತರಾಗಿದ್ದ ಇಬ್ಬರೂ ತಮ್ಮ ಮಕ್ಕಳ ಮದುವೆಗೆ ಮುನ್ನವೇ ಎಸ್ಕೇಪ್ ಆಗಿದ್ದು, ಮದುವೆ ರದ್ದಾಗಿದೆ.

ವಡೋದರಾ (ಗುಜರಾತ್​): ಅಂದು ಮದುವೆಯ ಸಂಭ್ರಮ. ಹಿಮ್ಮತ್ ಪಟೇಲ್ ಮತ್ತು ಶೋಭನಾ ರಾವಲ್ ಅವರ ಮಗ ಮತ್ತು ಮಗಳು ಮದುವೆಯಾಗಲು ಸಿದ್ಧರಿದ್ದರು. ನೆಂಟರಿಷ್ಟರೆಲ್ಲರೂ ಮದುವೆಗೆ ಬಂದಿದ್ದರು. ಮಂಟಪ ರೆಡಿಯಾಗಿತ್ತು. ಮದುವೆಯ ಕಾರ್ಯಗಳೂ ಭರ್ಜರಿಯಿಂದ ಸಾಗಿದ್ದವು. ಮದುಮಕ್ಕಳು ತಮ್ಮ ದಾಂಪತ್ಯದ ಕನಸು ಕಾಣುತ್ತಿದ್ದರು. ಎಲ್ಲವೂ ನಿಗದಿಯಂತೇ ನಡೆಯುತ್ತಿದ್ದವು. ಇನ್ನೇನು ಮುಹೂರ್ತ ಹತ್ತಿರ ಬಂದಾಗ ಕಲ್ಯಾಣ ಮಂಟಪದಲ್ಲಿ ಕೋಲಾಹಲ ಶುರುವಾಯ್ತು. ಇತ್ತ ವರನ ಅಪ್ಪ ಕಾಣೆಯಾಗಿದ್ರೆ ಅಪ್ಪ ವಧುವಿನ ಅಮ್ಮ ಕಾಣೆಯಾಗಿದ್ದಳು. ಮದುವೆಯನ್ನು ಮುಂದೆ ನಿಂತು ಮಾಡಿಸಬೇಕಾದವರು ಎಲ್ಲಿ ಹೋದರು ಎಂದು ಎಲ್ಲರೂ ಹುಡುಕಾಟ ನಡೆಸಿದಾಗ ಗೊತ್ತಾಗಿದ್ದು, ಅವರಿಬ್ಬರೂ ಓಡಿ ಹೋಗಿದ್ದಾರೆ ಎಂದು!

ಆ ಕ್ಷಣದಲ್ಲಿ ಎಲ್ಲವೂ ಅಲ್ಲೋಲ, ಕಲ್ಲೋಲವಾಯಿತು. ಮದುವೆ ನಿಂತು ಹೋಯಿತು. ಓಡಿ ಹೋದವರನ್ನು ಹುಡಕಲು ಶುರು ಮಾಡಿದರು. ಇದು ನಡೆದದ್ದು ಗುಜರಾತ್​ನಲ್ಲಿ. ಎಷ್ಟು ಹುಡುಕಿದರೂ ಓಡಿ ಹೋದವರು ಸಿಗದೇ ಮದುವೆಯನ್ನು ಕ್ಯಾನ್ಸಲ್​ ಮಾಡಿ ಎರಡೂ ಮನೆಯವರು ವಾಪಸ್​ ಮನೆಗೆ ಹೋದ ಘಟನೆ ನಡೆದಿದೆ. ಕೆಲ ವರ್ಷಗಳ ಹಿಂದೆ ನಡೆದ ಈ ಘಟನೆಯ ವಿಷ್ಯ ಇದೀಗ ಮತ್ತೆ ವೈರಲ್​ ಆಗಲು ಕಾರಣ, ಕೊನೆಗೂ ಭೂಗತರಾಗಿದ್ದ ಓಡಿಹೋದ ಪೊಲೀಸರ ಕಾಟ ತಾಳಲಾಗದೇ ಪೊಲೀಸರ ಮುಂದೆ ಶರಣಾಗಿದ್ದರಿಂದ!

ಬಾಲ್ಯದ ಸ್ನೇಹಿತರು

ಅಷ್ಟಕ್ಕೂ ಆಗಿದ್ದೇನೆಂದರೆ, ಹಿಮ್ಮತ್ ಪಟೇಲ್ ಮತ್ತು ಶೋಭನಾ ರಾವಲ್ ಇಬ್ಬರೂ ಬಾಲ್ಯದ ಸ್ನೇಹಿತರು. ಅಕ್ಕ-ಪಕ್ಕದ ಮನೆಯವರಾಗಿದ್ದರು. ಈ ಸ್ನೇಹ ಪ್ರೀತಿಗೂ ತಿರುಗಿತ್ತು. ಆದರೆ, ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ. ಇಬ್ಬರಿಗೂ ಬೇರೆ ಬೇರೆಯವರನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಹಿಮ್ಮತ್​ ಅವರಿಗೆ ಮಗ ಹುಟ್ಟಿದ, ಶೋಭನಾ ಅವರಿಗೆ ಮಗಳು ಹುಟ್ಟಿದಳು. ವಯಸ್ಸು ಎಷ್ಟೇ ಆದರೂ, ಮೊದಲ ಪ್ರೀತಿ ಹೋಗುವುದಾದರೂ ಹೇಗೆ? ಇಬ್ಬರಲ್ಲಿಯೂ ಆ ಬಾಲ್ಯದ ನೆನಪು, ಪ್ರೀತಿಯ ದಿನಗಳು, ಒಟ್ಟಿಗೆ ಓಡಾಡಿದ್ದು ಎಲ್ಲವೂ ಇನ್ನೂ ಹಚ್ಚ ಹಸಿರಾಗಿಯೇ ಇತ್ತು. ಬೇರೆಯವರ ಗಂಡ- ಹೆಂಡತಿ ಆಗಿದ್ದರೂ, ಮನಸ್ಸು ಮಾತ್ರ ಆ ನೆನಪುಗಳನ್ನೇ ಸವಿಯುತ್ತಿತ್ತೇನೋ.

ಕೊನೆಗೆ ವಿಧಿಯ ಲೀಲೆ ನೋಡಿ. ಇಬ್ಬರ ಮಕ್ಕಳ ಮದುವೆ ಫಿಕ್ಸ್​ ಆಯಿತು. ಅದೂ ಇಬ್ಬರ ಮಕ್ಕಳ ಜೊತೆಯೇ. ಆದರೆ ಮಕ್ಕಳ ಮದುವೆಯಾಗುವವರೆಗೂ ಕಾಯದ ಜೋಡಿ, ಮದುವೆಯ ಸಂದರ್ಭದಲ್ಲಿಯೇ ಓಡಿ ಹೋಗಿ ಮಕ್ಕಳಿಗೂ ಮುಜುಗರ ತಂದು, ಅವರ ಮದುವೆಯೂ ಕ್ಯಾನ್ಸಲ್​ ಮಾಡುವ ಹಾಗೆ ಮಾಡಿದರು. ಪೊಲೀಸರಿಗೆ ಶರಣಾದ ಮೇಲೂ ಈ ಜೋಡಿ ವಾಪಸ್​ ತಮ್ಮ ಕುಟುಂಬ ಸೇರಲು ನಿರಾಕರಿಸಿವೆಯಂತೆ. ತಾವಿಬ್ಬರೂ ಒಟ್ಟಿಗೇ ಇರುವುದಾಗಿ ಹೇಳಿದ್ದಾರೆ. ಹಾಗೇನಾದರೂ ಇದ್ದರೆ ಒಂದರ್ಥದಲ್ಲಿ, ನೇರವಾಗಿ ಸಂಬಂಧದಲ್ಲಿ ಅಲ್ಲದಿದ್ದರೂ, ಪರೋಕ್ಷವಾಗಿ ಇವರಿಬ್ಬರ ಮಕ್ಕಳು ಅಣ್ಣ-ತಂಗಿಯಾದಂತೆ ಆಗುತ್ತದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದ್ದಿಲ್ಲದೇ ಮದ್ವೆಯಾಗಿ ಫೋಟೋ ಮೂಲಕ ಫ್ಯಾನ್ಸ್​ಗೆ Lakshmi Nivasa ಚೆಲುವಿ ಶಾಕ್​: ಯಾರೀ ರಹಸ್ಯ ಪತಿ?
Long Distance Relationship: ಲಾಂಗ್ ಡಿಸ್ಟೆನ್ಸ್ ರಿಲೇಶನ್ಶಿಪ್ ಗಟ್ಟಿಯಾಗಿರಲು ಇಲ್ಲಿವೆ 7 ಮುಖ್ಯ ಟಿಪ್ಸ್