ತಾಯಿಯಾಗೋದು ಪ್ರತಿಯೊಬ್ಬ ಮಹಿಳೆ ಕನಸು. ಈ ಸಂತೋಷದಲ್ಲಿ ಪತಿ ಮಗುವನ್ನು ಮಾತ್ರವಲ್ಲ ತನ್ನನ್ನೂ ಆರೈಕೆ ಮಾಡ್ಬೇಕು, ಗಿಫ್ಟ್ ನೀಡ್ಬೇಕೆಂದು ಆಕೆ ಬಯಸ್ತಾಳೆ. ಆದ್ರೆ ಅದು ಆಗದೆ ಇದ್ದಾಗ ಏನೆಲ್ಲ ಮಾಡ್ತಾಳೆ ಗೊತ್ತಾ?
ತಾಯಿಯಾಗುವುದು ಪ್ರತಿಯೊಂದು ಹೆಣ್ಣಿನ ಜೀವನದ ಪ್ರಮುಖ ಘಟ್ಟ. ಆ ಕ್ಷಣವನ್ನು ಆಕೆ ಎಂದೂ ಮರೆಯಲಾಗುವುದಿಲ್ಲ. ಅಂತಹ ಸಮಯದಲ್ಲಿ ಆಕೆಗೆ ಹಲವಾರು ನಿರೀಕ್ಷೆಗಳು ಇರುವುದು ಸಹಜ. ಎಲ್ಲರೂ ತನ್ನ ಬಗ್ಗೆ ಕಾಳಜಿ ವಹಿಸಬೇಕು, ಸರ್ಪ್ರೈಸ್ ಗಿಫ್ಟ್ ಗಳನ್ನು ನೀಡಬೇಕು ಎನ್ನುವಂತಹ ಚಿಕ್ಕ ಚಿಕ್ಕ ಆಸೆಗಳು ತಾಯಿಯಾದವಳಲ್ಲಿ ಇರುತ್ತದೆ.
ಪತ್ನಿ (Wife) ಯಾದವಳು ಯಾವಾಗಲೂ ಗಂಡನಿಂದ ಉಡುಗೊರೆಯನ್ನು ಬಯಸುತ್ತಾಳೆ. ಗಂಡ ಉಡುಗೊರೆ (Gift) ಕೊಡದೇ ಇದ್ದಾಗ ಆಕೆ ಕೋಪಗೊಳ್ಳುವುದು ಸಾಮಾನ್ಯ. ವಿಚಿತ್ರವೆಂಬಂತೆ ಇಲ್ಲೊಬ್ಬ ಮಹಿಳೆ ಗಂಡನ ಮೇಲೆ ಕೋಪಗೊಂಡು ಸಾಮಾಜಿಕ ಜಾಲತಾಣ (Social Network ) ದಲ್ಲಿ ತನ್ನ ಪತಿಯ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಲ್ಲದೇ ಜನರಿಗೆ ಚಿತ್ರ ವಿಚಿತ್ರ ಸಲಹೆಗಳನ್ನು ಕೂಡ ನೀಡಿದ್ದಾಳೆ.
ಪ್ರತಿ ಹೆಂಡತಿಯೂ ತನ್ನ ಪತಿಯಿಂದ ಬಯಸುವ ಆ 5 ವಿಷ್ಯಗಳು ಯಾವುವು ಗೊತ್ತಾ?
ಸಾಮಾಜಿಕ ಜಾಲತಾಣದಲ್ಲಿ ಗಂಡನನ್ನು ದೂರಿದ ಮಹಿಳೆ : ಲಿಂಡಾ ಆಂಡ್ರೇಡ್ ಕೋಟ್ಯಾಧಿಪತಿಯೊಬ್ಬನ ಪತ್ನಿಯಾಗಿದ್ದಾಳೆ. ಈಕೆಗೆ ತಾನು ತಾಯಿಯಾದ ನಂತರ ಪತಿ ದೊಡ್ಡ ಬಂಗಲೆಯನ್ನು ಉಡುಗೊರೆಯಾಗಿ ನೀಡಬೇಕು ಎನ್ನುವ ಆಸೆಯಿತ್ತು. ಮಗು ಜನಿಸಿದ ನಂತರ ತನ್ನ ಗಂಡ ತನಗೆ ದುಬಾರಿ ಉಡುಗೊರೆಯನ್ನು ನೀಡಬೇಕು ಎನ್ನುವುದು ಈಕೆಯ ಕನಸಾಗಿತ್ತು. ಆದರೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮೇಲೆ ಗಂಡ ಕೊಟ್ಟ ಉಡುಗೊರೆಯನ್ನು ನೋಡಿ ಲಿಂಡಾ ಕೋಪಗೊಂಡಿದ್ದಾಳೆ ಮತ್ತು ಗಂಡನ ಮೇಲೆ ನಿರಾಸೆ ವ್ಯಕ್ತಪಡಿಸಿದ್ದಾಳೆ. ಇದರ ಜೊತೆಗೆ ಗಂಡ ತನಗೆ ಬೇಕಾದ ಉಡುಗೊರೆ ಕೊಡಲಿಲ್ಲ ಎನ್ನುವ ಸಿಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಗಂಡನ ಮೇಲೆ ಕಿಡಿಕಾರಿದ್ದಾಳೆ ಮತ್ತು ತನ್ನ ಪ್ರಸವಾನಂತರದ ಖಿನ್ನತೆಯನ್ನು ಕೂಡ ಹೇಳಿಕೊಂಡಿದ್ದಾಳೆ.
ಲಿಂಡಾ ಆಂಡ್ರೇಡ್ ಬಯಸಿದಂತೆ ಪ್ರಸವಾನಂತರ ಆಕೆಗೆ ಅನೇಕ ದುಬಾರಿ ಗಿಫ್ಟ್ ಗಳು ಸಿಕ್ಕಿವೆ. ಕೋಟ್ಯಾಧಿಪತಿಯಾದ ಆಕೆಯ ಗಂಡ ಆಕೆಗೆ ದೊಡ್ಡ ಅಪಾರ್ಟ್ ಮೆಂಟ್, ಹ್ಯಾಂಡ್ ಬ್ಯಾಗ್, ಹೊಸ ಕಾರು ಹಾಗೂ ಬೆಲೆ ಬಾಳುವ ವಜ್ರವನ್ನು ಕೂಡ ನೀಡಿದ್ದನು. ಇಷ್ಟೆಲ್ಲ ದುಬಾರಿ ಉಡುಗೊರೆಗಳು ಸಿಕ್ಕರೂ ಲಿಂಡಾಳಿಗೆ ಸಮಾಧಾನವಿರಲಿಲ್ಲ. ತನ್ನ ಗಂಡ ಭವ್ಯ ಬಂಗಲೆಯನ್ನು ಗಿಫ್ಟ್ ಮಾಡಲಿಲ್ಲ ಎನ್ನುವುದೇ ಆಕೆಯ ಕೋಪಕ್ಕೆ ಕಾರಣವಾಗಿತ್ತು.
ಟಿಕ್ ಟಾಕ್ ನಲ್ಲಿ ತನ್ನ ಗರ್ಭಾವಸ್ಥೆ ಹಾಗೂ ಪ್ರಸವಾನಂತರದ ಅನುಭವಗಳನ್ನು ಹಂಚಿಕೊಂಡ ಲಿಂಡಾ, ಪ್ರಸವಾನಂತರದ ಖಿನ್ನತೆಯು (Depression) ತುಂಬಾ ನೈಜವಾಗಿದೆ. ಈ ಸಮಯದಲ್ಲಿ ಉಂಟಾಗುವ ಹಾರ್ಮೋನ್ ವ್ಯತ್ಯಾಸಗಳು ನಮ್ಮನ್ನು ಹುಚ್ಚರನ್ನಾಗಿ ಮಾಡುತ್ತವೆ. ಅದರಲ್ಲೂ ಮುಖ್ಯವಾಗಿ, ನೀವು ಅನುಪಯುಕ್ತ ಪುರುಷನಿಂದ ಮಗುವನ್ನು ಹೊಂದಿದ್ದರೆ ಇಂತಹ ಅನುಭವಗಳು ಹೆಚ್ಚಾಗುತ್ತವೆ ಎಂದು ತನ್ನ ಗಂಡನನ್ನು ಆರೋಪಿಸಿದ್ದಾಳೆ. ಟಿಕ್ ಟಾಕ್ ನಲ್ಲಿ ಈ ರೀತಿ ಹೇಳಿಕೆ ನೀಡಿದ ಲಿಂಡಾ ತನ್ನ ಫಾಲೋವರ್ಸ್ ಬಳಿ ಹಣವಿಲ್ಲದ ವ್ಯಕ್ತಿಯೊಂದಿಗೆ ಎಂದೂ ಮಗುವನ್ನು ಹೊಂದಬೇಡಿ ಎಂದು ವಿಚಿತ್ರ ಹೇಳಿಕೆ ನೀಡಿದ್ದಾಳೆ.
ಭಾಷಣ ಕಾಪಿ ಮಾಡಿದ್ರ ಅಂಬಾನಿ ಸೊಸೆ: ರಾಧಿಕಾ ಮರ್ಚೆಂಟ್ ಮಾಡಿದ ಭಾಷಣ ಸಿನಿಮಾದಿಂದ ಕದ್ದಿದ್ದ?
ಲಿಂಡೆ ತನ್ನ ಗರ್ಭಾವಸ್ಥೆಯ ದಿನಗಳ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ (Social Media) ಹೇಳಿಕೊಂಡಿದ್ದಾಳೆ. ಗರ್ಭಿಣಿಯಾಗಿದ್ದಾಗ ನಾವು ಶಾಪಿಂಗ್ ಗೆ (Shopping) ಹೋಗುತ್ತಿದ್ದೆವು, ಸುತ್ತಾಡುತ್ತಿದ್ದೆವು, ಒಳ್ಳೆಯ ತಿಂಡಿಯನ್ನು ತಿನ್ನುತ್ತಿದ್ದೆವು ಎಂದು ಹೇಳಿದ್ದಾಳೆ. ಎಲ್ಲ ಪುರುಷರೂ ತಮ್ಮ ಹೆಂಡತಿಯನ್ನು ಹೀಗೆ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗಬೇಕು ಎಂದು ಲಿಂಡೆ ಹೇಳಿದ್ದಾಳೆ ಜೊತೆಗೆ ಈಕೆ ಯುವತಿಯರು ಶ್ರೀಮಂತ ವ್ಯಕ್ತಿಗಳನ್ನೇ ಮದುವೆಯಾಗಬೇಕು ಎಂದು ಕೂಡ ಸಲಹೆ ನೀಡಿದ್ದಾಳೆ. ಲಿಂಡೆ ಆಂಡ್ರೇಡ್ ತನಗೆ ಹುಟ್ಟಿದ ಹೆಣ್ಣು ಮಗುವನ್ನು ಮದುವೆಯಾಗುವ ವ್ಯಕ್ತಿ ಹೇಗಿರಬೇಕು ಎನ್ನುವುದನ್ನು ಹೇಳಿ ನಂತರ ಹೆಣ್ಣು ಮಗು ಹುಟ್ಟಿದ ನಂತರವೂ ನಾನು ಬಯಸಿದ ಉಡುಗೊರೆ ನನಗೆ ಸಿಗಲಿಲ್ಲ ಎಂದು ಮತ್ತೊಮ್ಮೆ ಬೇಸರ ವ್ಯಕ್ತಪಡಿಸಿದ್ದಾಳೆ.