ಸುಖ ಸಂಸಾರದ ಗುಟ್ಟು ಬಿಚ್ಚಿಟ್ಟ ಚಂದನ್ ಮಾಜಿ ಪತ್ನಿ ನಿವೇದಿತಾ ಗೌಡ! ದಾಂಪತ್ಯ ಜೀವನ ಮುರಿದು ಬೀಳಲು ಇದೇ ಕಾರಣ!

Published : Feb 19, 2026, 07:24 PM IST
Nivedita Gowda

ಸಾರಾಂಶ

ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ನಂತರ, ನಟಿ ನಿವೇದಿತಾ ಗೌಡ ಸುಖ ಸಂಸಾರದ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ಅವರ ಪ್ರಕಾರ, ದಾಂಪತ್ಯ ಜೀವನ ಸುಖವಾಗಿರಲು ದಿನಕ್ಕೆ ಕೇವಲ 30 ನಿಮಿಷಗಳ ಗುಣಮಟ್ಟದ ಸಮಯ ಮೀಸಲಿಟ್ಟರೆ ಸಾಕು.

ರಾಪ್ ಸ್ಟಾರ್ ಚಂದನ್ ಶೆಟ್ಟಿ ಮಾಜಿ ಪತ್ನಿ, ನಟಿ ನಿವೇದಿತಾ ಗೌಡ ಈಗ ಸಂಸಾರದ ಗುಟ್ಟೊಂದನ್ನ ಬಿಚ್ಚಿಟ್ಟಿದ್ದಾರೆ. ಚಂದನ್ ಶೆಟ್ಟಿಯಿಂದ ವಿಚ್ಛೇದನ ಪಡೆದ ಬಳಿಕ ನಿವೇದಿತಾಗೆ ಸಂಸಾರ ಕಾಪಾಡಿಕೊಳ್ಳೋಕೆ ಜಸ್ಟ್​ 30 ನಿಮಿಷ ಸಮಯ ಕೊಟ್ರೆ ಸಾಕು ಎಂದಿದ್ದಾರೆ. ಹಾಗಾದ್ರೆ ಸಿಂಗಲ್ ಆಗಿರೋ ನಿವೇದಿತಾ ಸಂಸಾರದ ಸೂತ್ರದ ಬಗ್ಗೆ ಏನ್ ಹೇಳಿದ್ದಾರೆ ನೋಡೋಣ ಬನ್ನಿ.

ಸುಖ ಸಂಸಾರಕ್ಕೆ ಕೇವಲ 30 ನಿಮಿಷ ಸಾಕೆಂದ ಗೊಂಬೆ.!

ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಗಾದೇ ಮಾತಿದೆ. ಅದನ್ನ ಪಾಲಿಸಿದರು ಕೊನೆ ಉಸಿರು ಇರೋ ವರೆಗೂ ಸುಖ ಸಂಸಾರ ಸಾಗಿಸುತ್ತಾರೆ. ಆದ್ರೆ, ನಿವೇದಿತಾ ಗೌಡ ಜೀವನದಲ್ಲಿ ಇದು ಸಾಧ್ಯವಾಗಿಲ್ಲ ಜಗಳ ಹೆಮ್ಮರವಾಗಿ ಬೆಳೆದೆ, ಹೊಂದಾಣಿಕೆ ಇಲ್ಲದೇ ಱಪ್ ಸ್ಟಾರ್ ಚಂದನ್​​ ಶೆಟ್ಟಿಯಿಂದ ವಿಚ್ಛೇದನ ಪಡೆದ್ರು ನಿವೇದಿತಾ. ಇದೀಗ ಈ ಗೊಂಬೆ ಸುಖ ಸಂಸಾರ ನಡೆಸಲು ಗುಟ್ಟೊಂದನ್ನ ಬಿಚ್ಚಿಟ್ಟಿದ್ದಾರೆ.

ಹೌದು, ನಿವೇದಿತಾ ಗೌಡ ಈಗ ರೀಲ್ಸ್​​​ಗಳಲ್ಲೇ ಮತ್ತಷ್ಟು ಬ್ಯುಸಿ ಆಗಿದ್ದಾರೆ. ದಿನಕ್ಕೊಂದು ಹಾಟ್ ಪೋಸ್ಟ್ ಮಾಡದಿದ್ರೆ ನಿವ್ವಿಗೆ ನಿದ್ದೆ ಬರಲ್ವೇನೋ. ಆದ್ರೆ ಈಗ ಮ್ಯಾಟ್ರು ಅದಲ್ಲ. ಈಗ ಚರ್ಚೆ ಆಗುತ್ತಿರೋದು ನಿವೇದಿತಾ ಹೇಳಿರೋ ಸುಖ ಸಂಸಾದರ ಗುಟ್ಟು. ನೀವು ಜೀವನ ಪೂರ್ತಿ ಸುಖ ಸಂಸಾರ ಮಾಡಬೇಕು ಅಂದ್ರೆ ಜಸ್ಟ್ 30 ನಿಮಿಷ ಸಮಯ ಕೊಟ್ರೆ ಸಾಕಂತೆ.

ಗಂಡ-ಹೆಂಡತಿ ದಾಂಪತ್ಯ ಜೀವನ ಮುರಿದು ಬೀಳಲು ಇದೇ ಕಾರಣ!

ಗಂಡ ಹೆಂಡತಿ ದಾಂಪತ್ಯ ಜೀವನ ಮುರಿದು ಬೀಳಲು ಈ ಸಮಯ ಕೂಡ ಒಂದು ಕಾರಣ. ಇದೇ ಮಾತನ್ನು ಚಂದನ್ ಶೆಟ್ಟಿಯ ಮಾಜಿ ಪತ್ನಿ ನಿವೇದಿತಾ ಗೌಡ ಪುನರುಚ್ಚಿಸಿದ್ದಾರೆ. ನಿವೇದಿತಾ ಗೌಡ ತಮ್ಮ ವಿಚ್ಚೇದನದ ನಂತರ ಸುಖಿ ದಾಂಪತ್ಯದ ರಹಸ್ಯವನ್ನ ಸಂದರ್ಶನವೊಂದರಲ್ಲಿ ಹೇಳಿದ್ದು, ಒಬ್ಬ ವ್ಯಕ್ತಿಯ ಜೊತೆ ನೀವು ಎಷ್ಟು ಗಂಟೆ ಕಳೆಯುತ್ತಿದ್ದೀರಾ ಎನ್ನುವುದು ಮುಖ್ಯವಲ್ಲ. 24 ಗಂಟೆ ಜೊತೆಯಲ್ಲಿ ಇರುವುದು ಕೂಡ ಮುಖ್ಯ ಅಲ್ಲ, ಆದರೆ ಕೊನೆ ಪಕ್ಷ ಅರ್ಧ ಗಂಟೆಯಾದ್ರು ನಾವು ಪ್ರೀತಿ ಮಾಡುವ, ಇಷ್ಟ ಪಡುವ, ವ್ಯಕ್ತಿಗಳಿಗೆ ನಮ್ಮ ಸಮಯವನ್ನು ಮೀಸಲಿಡಬೇಕು ಎಂದಿದ್ದಾರೆ.

ನಿವೇದಿತಯಾ ಗೌಡ 30 ನಿಮಿಷದ ಸಂಸಾರದ ಗುಟ್ಟು ಹೇಳಿದ್ಮೇಲೆ ಮತ್ತೊಂದು ಮದುವೆಗೇನಾದ್ರು ರೆಡಿಯಾಗುತ್ತಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿವೆ. ನಿವೇದಿತಾ ಸಂಸಾರಿ ಆದ್ರೆ ಇದನ್ನ ಫಾಲೋ ಮಾಡುತ್ತಾರಾ ಕಾದು ನೋಡ್ಬೇಕಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ತಿಂಗಳಿಗೆ 2 ಬಿಯರ್, ಅಪರೂಪಕ್ಕೆ ನಾನ್ ವೆಜ್...ಸತ್ಯ ಹೇಳಿದ್ದೇ ಮದುವೆಗೆ ಮುಳುವಾಯ್ತು
ಕಾರುಣ್ಯಾ ಜೊತೆ ಎಂಗೇಜ್‌ ಆದ 'ಗಿಚ್ಚಿ ಗಿಲಿಗಿಲಿ ಶೋ' ಚಿಲ್ಲರ್‌ ಮಂಜು; ಸುಂದರ ಫೋಟೋಗಳಿವು