ಹೋಮ್‌ ಮಿನಿಸ್ಟರ್ ಆಗಿದ್ರೂ ಮನೆಯಲ್ಲಿ ಪಕ್ಕಾ ಗುಜರಾತಿ ಅಪ್ಪ ಈ ಅಮಿತ್ ಷಾ: ಫನ್ನಿ ವೀಡಿಯೋ ವೈರಲ್

Published : Jan 16, 2025, 05:46 PM IST
ಹೋಮ್‌ ಮಿನಿಸ್ಟರ್ ಆಗಿದ್ರೂ ಮನೆಯಲ್ಲಿ ಪಕ್ಕಾ ಗುಜರಾತಿ ಅಪ್ಪ ಈ ಅಮಿತ್ ಷಾ: ಫನ್ನಿ ವೀಡಿಯೋ ವೈರಲ್

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಕ್ರಾಂತಿ ಹಬ್ಬದಂದು ತಮ್ಮ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ನಡೆದ ತಮಾಷೆಯ ಘಟನೆಯ ವೀಡಿಯೊ ವೈರಲ್ ಆಗಿದೆ. ಮಗ ಜೈ ಶಾ ಅವರ ಮೇಲೆ ತಂದೆಯಂತೆ ಪ್ರೀತಿಯಿಂದ ಛೀಮಾರಿ ಹಾಕಿದ್ದಾರೆ.

ವ್ಯಕ್ತಿಗಳು ಎಷ್ಟೇ ದೊಡ್ಡವರಾದರು ಅವರ ಸಂಪ್ರದಾಯ ಪಾಲಿಸುವುದರಲ್ಲಿ ಅವರ ಕೆಲ ಗುಣ ನಡವಳಿಕೆಗಳು ಸಾಮಾನ್ಯರಂತೆಯೇ ಇರುತ್ತದೆ. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಈ ವರ್ತನೆಗೆ ಹೊರತಲ್ಲ, ಸಂಕ್ರಾಂತಿ ಸಂದರ್ಭದಲ್ಲಿ ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿದ್ದ ಅವರು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವುದರ ಜೊತೆಗೆ ತಮ್ಮ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು ಈ ವೇಳೆ ನಡೆದ ತಮಾಷೆಯ ಘಟನೆಯ ವೀಡಿಯೋವೊಂದು ವೈರಲ್ ಆಗಿದ್ದು, ಅಮಿತ್ ಷಾ ಕೂಡ ನಮ್ಮ ನಿಮ್ಮೆಲ್ಲರ ಮನೆಯಲ್ಲಿರುವ ಟಿಪಿಕಲ್ ಅಪ್ಪನಂತೆಯೇ ಎಂಬುದು ಸಾಬೀತಾಗಿದೆ. 

ಸಂಕ್ರಾಂತಿ ಹಬ್ಬದ ದಿನ ಅಮಿತ್ ಷಾ ಅವರು ತಮ್ಮ ಮಗ ಐಸಿಸಿಯ ಮುಖ್ಯಸ್ಥನಾಗಿರುವ ಜೈಶಾ ಹಾಗೂ ತಮ್ಮ ಇಡೀ ಕುಟುಂಬದ ಜೊತೆ ಅಹ್ಮದಾಬಾದ್‌ನ ದೇಗುಲವೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಆರತಿ ಬೆಳಗುವ ಸಮಯದಲ್ಲಿ ಇವರ ಪುತ್ರ ಜೈಶಾ ತಮ್ಮ ನವಜಾತ ಶಿಶುವಿಗೆ ಆರತಿ ಸೋಕದಂತೆ ಕೈ ಅಡ್ಡವಿಟ್ಟು ತುಸು ಹಿಂದೆ ಸರಿದಿದ್ದಾರೆ. ಈ ವೇಳೆ ಅಮಿತ್‌ ಷಾ ಮಗನ ಮೇಲೆ ಎಲ್ಲ ತಂದೆಯರಂತೆ ಪುತ್ರನಿಗೆ ತಮ್ಮ ಗುಜರಾತಿ ಭಾಷೆಯಲ್ಲಿ ಏನೋ ಹೇಳಿ ತಿವಿದಿದ್ದು, ಈ ಅಪ್ಪ ಮಗನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಗುವಿನ ಬಳಿ ಅಮಿತ್ ಷಾ ಆರತಿ ತೆಗೆದುಕೊಂಡು ಹೋಗಿದ್ದರೆ ಪುತ್ರ ಜೈ ಶಾ ತುಸು ಹಿಂದೆ ಸರಿದಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್‌ ಷಾ, 'ಕಾಸು ನೈ ಥಾಯ್, ತ್ಯಾರೇ ಕೈ ನೋವೋ ನೇವಿ ನೋ ಚೋಕ್ರೋ ಚೇ' ಎಂದು ಹೇಳಿದ್ದಾರೆ. ಅಂದರೆ ಏನು ಆಗುವುದಿಲ್ಲ, ನಿನಗೆ ಮಾತ್ರ ವಿಶಿಷ್ಠ ಹಾಗೂ ವಿಭಿನ್ನವಾದ ಮಗನೇ ಎಂದು ಕೇಳಿದ್ದಾರೆ.

ಬುಧವಾರ ಅಹ್ಮದಾಬಾದ್‌ನ  ಜಗನ್ನಾಥ ದೇಗುಲದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ  ಈಗ ವೈರಲ್ ಆಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಶಾ ಅವರು ಮೂರು ದಿನಗಳ ಕಾಲ ಗುಜರಾತ್‌ಗೆ  ಭೇಟಿ ನೀಡಿದ್ದ ಸಂದರ್ಭದಲ್ಲಿ ಬುಧವಾರ ಅಹಮದಾಬಾದ್‌ನ ಜಗನ್ನಾಥ ದೇವಾಲಯಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ನಗರದಲ್ಲಿ ಉತ್ತರಾಯಣ ಆಚರಣೆಯ ಸಂದರ್ಭದಲ್ಲಿ ಆಶೀರ್ವಾದ ಪಡೆಯಲು ಶಾ ಅವರ ಕುಟುಂಬ ದೇವಾಲಯಕ್ಕೆ ಭೇಟಿ ನೀಡಿತ್ತು.

ವಿಡಿಯೋದಲ್ಲಿ, ಶಾ ಗೋಪೂಜೆಯ ಭಾಗವಾಗಿ ಆರತಿ ಮಾಡುತ್ತಾರೆ. ಈ ವೇಳೆ ಜೇಯ್ ಶಾ ಅವರ ಮಗನಿಗೆ ಪವಿತ್ರ ಆರತಿಯ ಜ್ವಾಲೆಯ ಆಶೀರ್ವಾದ ನೀಡಲು ಸಚಿವರು ಪ್ರಯತ್ನಿಸುತ್ತಾರೆ, ಈ ವೇಳೆ ಮಗುವಿನ ತಂದೆ ಅವನನ್ನು ಆರತಿಯ ಬಿಸಿಯಿಂದ ರಕ್ಷಿಸಲು ಪ್ರಯತ್ನಿಸಿದಾಗ ಅಮಿತ್ ಶಾ ಅವರು, ಏನೂ ಆಗುವುದಿಲ್ಲ ನಿನಗೆ ಮಾತ್ರ ಹೊಸ ಮತ್ತು ವಿಶಿಷ್ಟ ಮಗನಿದ್ದಾನೆಯೇ ಎಂದು ಹೇಳಿದ್ದಾರೆ ಈ ವೀಡಿಯೋ ಈಗ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಹಲವರು ಕಾಮೆಂಟ್ ಮಾಡಿದ್ದಾರೆ. ಅಮಿತ್ ಷಾ ಓರ್ವ ಕ್ಲಾಸಿಕ್ ಗುಜರಾತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಪ್ಪ ಮನೆಯ ಬಾಸ್ ಆಗಿರ್ತಾರೆ. ಅವರಿಗೆ ಮಗ ಐಸಿಸಿ ಚೇರ್‌ಮ್ಯಾನ್ ಆಗಿದ್ದರೂ ಸರಿ ಇನ್ನೇನಾದರೂ ಸರಿ ಅವರೇನು ಕ್ಯಾರ್ ಮಾಡಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಟಿಪಿಕಲ ಗುಜ್ಜು ಆಟಿಟ್ಯೂಡ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಹಾಗೆಯೇ ಮತ್ತೆ ಕೆಲವರು ಅಮಿತ್ ಷಾ ಅವರನ್ನು ಹೊಗಳಿದ್ದು, ಅವರು ಮಹಾನ್ ನಾಯಕ. ಸತ್ಯವಂತ ಮತ್ತು ಪ್ರಾಮಾಣಿಕ. ಸಾರ್ವಜನಿಕವಾಗಿ ಅವರು ಏನೂ ಶೋಅಪ್ ಮಾಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.  

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Chanakya Niti: ಇಂಥಾ ಮಹಿಳೆಯರ ಕೈ ಹಿಡಿದ್ರೆ ಜೀವನ ಪರ್ಯಂತ ಅಳೋದು ಗ್ಯಾರಂಟಿ: ಮದುವೆ ಬಗ್ಗೆ ಪುರುಷರಿಗೆ ಕಿವಿಮಾತು
ಮೋಸ ಮಾಡುವ ಗಂಡನನ್ನು ಕಂಡು ಹಿಡಿಯೋದು ಹೇಗೆ?