14 ವರ್ಷದ ಪ್ರೀತಿ, ಮದುವೆಯಾಗಿ 35 ದಿನಕ್ಕೆ ಮಸಣ ಸೇರಿದ ಪತ್ನಿ! ಛೇ..ಋಣ ಇದ್ದಷ್ಟೇ ಸಿಗತ್ತೆ ಎನ್ನೋದು ಇದಕ್ಕೇನಾ?

Published : Jul 03, 2025, 02:59 PM ISTUpdated : Jul 03, 2025, 03:04 PM IST
prashanth and harshita true love story

ಸಾರಾಂಶ

ಹದಿನಾಲ್ಕು ವರ್ಷಗಳ ಪ್ರೀತಿ, ೩೫ ದಿನದ ವೈವಾಹಿಕ ಜೀವನವು ಅಂತ್ಯವಾಗಿದೆ. ಪ್ರಶಾಂತ್ ಮತ್ತು ಹರ್ಷಿತಾ ಪ್ರೀತಿಸಿ ಮದುವೆಯಾದರೂ ಬಾಳಲು ಅದೃಷ್ಟವಿರಲಿಲ್ಲ. ಅಪಘಾತದಿಂದ ಈ ಜೋಡಿ ದೈಹಿಕವಾಗಿ ದೂರ ಆಗಿದೆ.

ನಮ್ಮ ಜೀವನದಲ್ಲಿ ಯಾರು ಬರಬೇಕು, ಯಾರು ಹೋಗಬೇಕು? ಯಾರು ಎಷ್ಟು ದಿನ ಇರಬೇಕು ಎನ್ನೋದು ಮೊದಲೇ ನಿರ್ಧರಿತವಾಗುತ್ತದೆ ಎನ್ನುತ್ತಾರೆ. ಹದಿನಾಲ್ಕು ವರ್ಷಗಳ ಪ್ರೀತಿ, 35 ದಿನದ ವೈವಾಹಿಕ ಜೀವನವು ಅಂತ್ಯವಾಗಿದೆ. ಹೌದು, ಪ್ರಶಾಂತ್‌, ಹರ್ಷಿತಾ ಪ್ರೀತಿಸಿ ಮದುವೆಯಾದರೂ ಕೂಡ ಬಾಳಲು ಅದೃಷ್ಟವೇ ಇರಲಿಲ್ಲ. ಅಪಘಾತದಿಂದ ಈ ಜೋಡಿ ದೈಹಿಕವಾಗಿ ದೂರ ಆಗಿದೆ. ಸಾಮಾಜಿಕ ಜವಾಬ್ದಾರಿ ಇಲ್ಲದೆ, ಓವರ್‌ ಸ್ಪೀಡ್‌ ಇದ್ದರೆ ಈ ರೀತಿ ಜೀವ ಹೋಗುವುದು ಎಂದು ಪ್ರಶಾಂತ್‌ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದ ಹರ್ಷಿತಾ!

ಅರ್ಧಕ್ಕೆ ಬಿಕಾಂ ನಿಲ್ಲಿಸಿ, ಕ್ಯಾಟರಿಂಗ್‌ ಬ್ಯುಸಿನೆಸ್‌ ಮಾಡಿದ್ದ ಪ್ರಶಾಂತ್‌ ಅವರನ್ನು ಹರ್ಷಿತಾ ಮದುವೆಯಾಗಿದ್ದರು. ಹರ್ಷಿಕಾ ಎಂಕಾಂ ಮಾಡಿ ಪ್ರತಿಷ್ಠಿತ ಕಂಪೆನಿಯಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದರು. ಮದುವೆಯಾದ್ಮೇಲೂ ಹರ್ಷಿತಾ ಕೆಲಸ ಮಾಡುತ್ತಿದ್ದಳು.

ಗೋವಾಕ್ಕೆ ಹೋಗುವಾಗ ಅಪಘಾತ!

ಹರ್ಷಿತಾ ಹಾಗೂ ಪ್ರಶಾಂತ್‌ ಮದುವೆಯಾಗಿ 35ನೇ ದಿನಕ್ಕೆ ಅಪಘಾತ ಆಯ್ತು. ಹೋಟೆಲ್‌, ಆಸ್ಪತ್ರೆ, ದೇವಸ್ಥಾನ ಎಂದು ಈ ಜೋಡಿ ಓಡಾಡಿತ್ತು. ಈ ಬಗ್ಗೆ ಮಾತನಾಡಿದ ಪ್ರಶಾಂತ್‌, “ಹರ್ಷಿತಾಗೆ ಫ್ರೆಂಡ್ಸ್‌ ಜೊತೆ ಗೋವಾ ಹೋಗುವ ಪ್ಲ್ಯಾನ್‌ ಇತ್ತು. ತುಂಬ ಒತ್ತಾಯ ಮಾಡಿಕೊಂಡಿದ್ದಕ್ಕೆ ಹರ್ಷಿತಾ ಹಾಗೂ ಅವಳ ಫ್ರೆಂಡ್ಸ್‌ ಜೊತೆ ಗೋವಾಕ್ಕೆ ಹೊರಟಿದ್ದೆವು. ಎರಡು ಕಾರ್‌ನಲ್ಲಿ ನಾವು ಗೋವಾಕ್ಕೆ ಹೊರಟೆವು”ಎಂದಿದ್ದಾರೆ.

ಬೇರೆ ಬೇರೆ ಕಾರ್‌ನಲ್ಲಿದ್ದೆವು!

“ಬೆಳಗ್ಗೆ 4.30ಕ್ಕೆ ನಾವು ಮನೆಯಿಂದ ಹೊರಟಿದ್ದೆವು, 7.30ಕ್ಕೆ ಅಪಘಾತ ಆಯ್ತು. ನಾನು ಬೇರೆ ಕಾರ್‌, ಅವಳು ಬೇರೆ ಕಾರ್‌ನಲ್ಲಿ ಗೋವಾಕ್ಕೆ ಹೋಗುತ್ತಿದ್ದೆವು. ಬೇರೆಯವರ ಕಾರ್‌ನಲ್ಲಿ ಅವಳು ಬರೋಕೆ ರೆಡಿ ಇರಲಿಲ್ಲ, ಅಂದು ಅವಳ ಫ್ರೆಂಡ್ಸ್‌ ಇದ್ದರು ಅಂತ ಆ ಕಾರ್‌ನಲ್ಲಿ ಹೋಗಿದ್ದಳು. ಓವರ್‌ ಸ್ಪೀಡ್‌ನಿಂದ ಅಪಘಾತ ಆಗಿತ್ತು. ದಾವಣಗೆರೆಯಲ್ಲಿ ಅವಳು ನನ್ನ ಕಾರ್‌ಗೆ ಶಿಫ್ಟ್‌ ಆಗಬೇಕು ಅಂತ ಪ್ಲ್ಯಾನ್‌ ಆಗಿತ್ತು. ನಾವು ದಾವಣೆಗೆರೆ ರೀಚ್‌ ಆದೆವು, ಹರ್ಷಿತಾ ರೀಚ್‌ ಆಗಲಿಲ್ಲ” ಎಂದಿದ್ದಾರೆ.

ಸಾಯುವ ಮುನ್ನ ಹೇಳಿದ್ದೇನು?

ಬೆಳಗ್ಗೆ ಮನೆಯಿಂದ ಹೊರಡುವಾಗ “ನೀವು ಗೋವಾದಲ್ಲಿ ಬೈಯ್ಯೋ ಹಾಗಿಲ್ಲ” ಎಂದು ಹರ್ಷಿತಾ ಹೇಳಿದ್ದಳು. ಫಾರ್ಚೂನರ್‌ ಕಾರ್‌ ಅಂದು ಅಪಘಾತ ಆಗಿತ್ತು. ಅಪಘಾತದಲ್ಲಿ ಜಾಗದಲ್ಲೇ ನನ್ನ ಪತ್ನಿ ಸೇರಿ ಮೂವರು ತೀರಿಕೊಂಡಿದ್ದರು, ಆಸ್ಪತ್ರೆಗೆ ಸೇರಿಸಿದ್ಮೇಲೆ ಇನ್ನೊಬ್ಬರು ತೀರಿಕೊಂಡರು.

ಪ್ರತಿದಿನ ಹರ್ಷಿತಾ ತಂದೆ ನನಗೆ ಫೋನ್‌ ಮಾಡಿ ಮಾತನಾಡುತ್ತಾರೆ, ಹರ್ಷಿತಾ ಇಲ್ಲ ಅಂತ ಮಾವನ ಮನೆಯವರ ಜೊತೆ ಕಾಂಟ್ಯಾಕ್ಟ್‌ ಬಿಟ್ಟಿಲ್ಲ. ಹದಿನಾಲ್ಕು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿ 35 ದಿನಕ್ಕೆ ಹರ್ಷಿತಾ-ಪ್ರಶಾಂತ್‌ ಬೇರೆ ಬೇರೆಯಾದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!