
ಪ್ರೀತಿ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಆಗಬಹುದು. ಅದೇ ರೀತಿ ಒಂದು ಮುದ್ದಾದ ಪ್ರೇಮಕಥೆ ಈಗ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಗುಜರಾತ್‌ನ ಹುಡುಗ ಮತ್ತು ಫಿಲಿಪೈನ್ಸ್‌ನ ಹುಡುಗಿ ಈ ಕಥೆಯ ನಾಯಕ-ನಾಯಕಿ.
ಅವರಿಬ್ಬರಿಗೂ ಇಂಗ್ಲಿಷ್ ಹೆಚ್ಚು ಅರ್ಥವಾಗುತ್ತಿರಲಿಲ್ಲ. ಹಾಗಾಗಿ ಮೊದಲಿಗೆ ಸಂಭಾಷಣೆ ಸಣ್ಣ ಹಾಯ್, ಹಲೋ ಮತ್ತು ಎಮೋಜಿಗಳಿಗೆ ಸೀಮಿತವಾಗಿತ್ತು. ನಂತರ, ಅದು ಸಣ್ಣ ವೀಡಿಯೊ ಕರೆಗಳಾಗಿ ಬದಲಾಯಿತು. ಅವಳಿಗೆ ಭಾಷೆ ಬರದಿದ್ದರೂ, ಪಿಂಟು ಏನು ಹೇಳಿದರೂ ಅವಳ ಮುಖದಲ್ಲಿ ನಗು ಬರುತ್ತದೆ. ಪಿಂಟುವಿನ ಪ್ರಾಮಾಣಿಕ ಮತ್ತು ಮುಕ್ತ ನಡವಳಿಕೆಗೆ ತಾನು ಆಕರ್ಷಿತಳಾದೆ ಎಂದು ಯುವತಿ ಹೇಳುತ್ತಾಳೆ. ಶೀಘ್ರದಲ್ಲೇ, ಇಬ್ಬರ ನಡುವಿನ ಸ್ನೇಹವು ಬಲವಾಯಿತು.
ಇಬ್ಬರ ನಡುವೆ ಸ್ನೇಹ ಬಲವಾಗಿದ್ದರಿಂದ ಪಿಂಟು ಫಿಲಿಪೈನ್ಸ್ ಗೆಳತಿಯ ವಿಳಾಸವನ್ನು ಪಡೆದು ಅವಳಿಗಾಗಿ ಒಮದು ವಿಶೇಷವಾದ ಉಡುಗೊರೆಯನ್ನು ಕಳುಹಿಸಿದನು. ಆದರೆ, ಅದರಲ್ಲಿ ಒಂದು ಪ್ರಸ್ತಾಪವಿತ್ತು. ಉಡುಗೊರೆ ತಲುಪಿದ ಕೂಡಲೇ ಅದನ್ನು ತೆಗೆದುಕೊಂಡ ಯುವತಿ ವೀಡಿಯೊ ಕರೆಯ ಮೂಲಕ ಆ ಉಡುಗೆಯನ್ನು ತೆರೆದಳು. ಅದನ್ನು ತೆರೆದು ನೋಡಿದಾಗ ತುಂಬಾ ಆಶ್ಚರ್ಯಚಕಿತಳಾಗಿ ಸಂತೋಷ ಪಟ್ಟಳು. ನಂತರ, ನಾವಿಬ್ಬರೂ ಸ್ನೇಹದಲ್ಲಿ ಎಷ್ಟೇ ಹತ್ತಿರವಾಗಿದ್ದರೂ ನಮ್ಮಿಬ್ಬರ ದೇಶಗಳು ಬೇರೆ ಬೇರೆ ಆಗಿದ್ದು, ಹತ್ತಿರ ಆಗುವುದಕ್ಕೆ ಸಾಧ್ಯವಾಗುತ್ತಿಲ್ಲವೆಂದು ಅಳುತ್ತಿದ್ದಳು. ಇದಾದ ನಂತರ ಉಡುಗೊರೆಯಲ್ಲಿ ಬಂದಿದ್ದ ಪ್ರಸ್ತಾಪವನ್ನು ಕೂಡ ಆಕೆ ಒಪ್ಪಿಕೊಳ್ಳುತ್ತಾಳೆ. ಇದಾದ ನಂತರ ಇಬ್ಬರ ನಡುವೆ ಪ್ರೀತಿ ಆರಂಭವಾಗುತ್ತದೆ.
ಇದನ್ನೂ ಓದಿ: ಭಾರತೀಯರ ಆತಿಥ್ಯಕ್ಕೆ ಮನಸೋತ ರಷ್ಯಾದ ಪ್ರವಾಸಿಗ; ನೀವೊಮ್ಮೆ ಭಾರತಕ್ಕೆ ಬನ್ನಿ ಎಂದು ಕರೆಕೊಟ್ಟ ಅತಿಥಿ!
ಎರಡು ವರ್ಷಗಳ ಕಾಲ ದೂರದ ದೇಶಗಳಲ್ಲಿ ಇದ್ದುಕೊಂಡೇ ಇಬ್ಬರೂ ಗಾಢವಾದ ಪ್ರೀತಿಯಲ್ಲಿ ಸಿಲುಕುತ್ತಾರೆ. ನಂತರ, ಗುಜರಾತ್‌ನಿಂದ ಪಿಂಟು ಫಿಲಿಪೈನ್ಸ್‌ಗೆ ಹೋಗಿ ಅವಳನ್ನು ಮತ್ತು ಅವಳ ಕುಟುಂಬವನ್ನು ಭೇಟಿ ಮಾಡಿಕೊಂಡು ಬರುತ್ತಾನೆ. ಇದು ಅವರ ಮೊದಲ ಭೇಟಿಯಾಗಿತ್ತು. ಯುವತಿಯ ಕುಟುಂಬವು ಪಿಂಟುವನ್ನು ಬಹಳ ಪ್ರೀತಿಯಿಂದ ಸ್ವಾಗತಿಸಿತು. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹ ಸಮಾರಂಭಗಳು ನಡೆದವು.
ಫೇಸ್‌ಬುಕ್‌ನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ತಮ್ಮ ಜೀವನದ ಪ್ರೀತಿಯ ಪ್ರಯಾಣವಾಗಿ ಬದಲಾಗುತ್ತದೆ ಎಂದು ಇಬ್ಬರೂ ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದೀಗ ದೇಶದ ಗಡಿಗಳನ್ನು ಮೀರಿದ, ಜಾತಿ-ಧರ್ಮಗಳನ್ನು ಮೀರಿದ ಪ್ರೀತಿ ಮತ್ತು ಮದುವೆಯ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಹೆದರಿಕೊಂಡೆ ಭಾರತಕ್ಕೆ ಬಂದಾಕೆಯಿಂದ ಭಾರತದ ಬಗ್ಗೆ ಹೆಮ್ಮೆಯ ಮಾತು: ವೀಡಿಯೋ ವೈರಲ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.