ಬಹಳಷ್ಟು ಜನರು ಒತ್ತಡದ ಸನ್ನಿವೇಶಗಳನ್ನು ಅತಿ ಸುಲಭವಾಗಿ ನಿಭಾಯಿಸುತ್ತಾರೆ. ಆದರೆ, ಕೆಲ ಜನರಿಗೆ ಈ ಕಲೆ ತಿಳಿದಿರುವುದಿಲ್ಲ. ಅಸಲಿಗೆ ಅವರಲ್ಲಿ ಅನೇಕ ಗುಣಗಳು ಅಡಕವಾಗಿರುತ್ತದೆ. ಹೀಗಾಗಿಯೇ, ಅವರಲ್ಲಿ ನೈತಿಕ ಬಲದೊಂದಿಗೆ ಪರಿಸ್ಥಿತಿಯನ್ನು ವಿಮರ್ಶಿಸುವ ಗುಣವೂ ಇರುತ್ತದೆ.
ನಾವೆಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡರೂ, ಎಷ್ಟೇ ಶಿಸ್ತುಬದ್ಧವಾಗಿ ನಡೆದುಕೊಂಡರೂ, ಯೋಜನಾಬದ್ಧವಾಗಿ ಎಲ್ಲವೂ ನಡೆಯಬೇಕೆಂದು ಯತ್ನಿಸುತ್ತಿದ್ದರೂ ಅನಿರೀಕ್ಷಿತ ಘಟನೆಗಳು ಜೀವನದಲ್ಲಿ ಯಾವಾಗ ಬೇಕಾದರೂ ಜರುಗುತ್ತಿರುತ್ತವೆ. ಅನಿರೀಕ್ಷಿತತೆ ಜೀವನದ ಭಾಗ. ಏಕೆಂದರೆ, ಮತ್ತೊಬ್ಬರ ವಿಚಾರ, ಲೆಕ್ಕಾಚಾರಗಳು ನಮಗೆ ನಿಲುಕಿರುವುದಿಲ್ಲ, ಹೀಗಾಗಿ, ಕೈ ಮೀರಿದ ಘಟನೆಗಳು ನಡೆದುಹೋಗುತ್ತವೆ. ಅವು ಎಷ್ಟೋ ಬಾರಿ ನಮ್ಮನ್ನು ಅಲುಗಿಸಿಬಿಡುತ್ತವೆ. ಒತ್ತಡ ಸೃಷ್ಟಿಸುತ್ತವೆ. ಇಂತಹ ಸನ್ನಿವೇಶಗಳಲ್ಲಿ ಶಾಂತವಾಗಿರುವುದೇ ಬಹುದೊಡ್ಡ ಸವಾಲಾಗುತ್ತದೆ. ಅನೇಕರು ಕೂಗಿ, ಗಲಾಟೆ ಮಾಡಿ ಮತ್ತಷ್ಟು ಅಶಾಂತಿಯೆಬ್ಬಿಸಿಬಿಡುತ್ತಾರೆ. ಆದರೆ, ಕೆಲವರು ಒತ್ತಡದ ಸನ್ನಿವೇಶಗಳನ್ನು ಅತ್ಯಂತ ಚೆನ್ನಾಗಿ ನಿಭಾಯಿಸುತ್ತಾರೆ. ಅಂತಹ ಸಮಯದಲ್ಲೂ ನಿಯಂತ್ರಣ ಕಳೆದುಕೊಳ್ಳದೆ ಹೇಗೆ ಶಾಂತವಾಗಿರುತ್ತಾರೆ ಎನಿಸುತ್ತದೆ. ಅಸಲಿಗೆ ಅವರ ಹವ್ಯಾಸಗಳೇ ಹಾಗಿರುತ್ತವೆ. ಆ ಅಭ್ಯಾಸಗಳು ಅವರನ್ನು ಎಂದಿಗೂ ಚಿತ್ತಶಾಂತಿಯನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತವೆ. ಅವುಗಳನ್ನು ನಾವೂ ಅರಿತು ಅಳವಡಿಸಿಕೊಳ್ಳುವುದು ಉತ್ತಮ.
• ದೃಷ್ಟಿಕೋನ (Perspective)
ನಾವು ನೋಡುವ ನೋಟದಲ್ಲೇ ಎಲ್ಲ ಇದೆ ಎನ್ನಲಾಗುತ್ತದೆ. ಹಾಗೇ ಇವರ ವರ್ತನೆಯೂ (Behave) ಇರುತ್ತದೆ. ಯಾವುದೇ ಒತ್ತಡದ (Stressful) ಸನ್ನಿವೇಶವನ್ನು (Situation) ಇವರು ಅದೊಂದು ಪ್ರತ್ಯೇಕ ಘಟನೆಯನ್ನಾಗಿ ನೋಡದೆ ಅದಕ್ಕೆ ಕಾರಣವಾಗಿರುವ ಒತ್ತಡವನ್ನು, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.
undefined
ಖುಷಿ ಪಡೋವಂಥ ವಿಷಯ ಹೇಳಿದ್ರೂ ಬೇಜಾರು ಮಾಡಿಕೊಂಡ್ರೆ ಡಿಪ್ರೆಶನ್ ಲಕ್ಷಣವೇ?
ಇತರ ಯಾವುದೇ ಭಾವನೆಗಳಂತೆ ಮನುಷ್ಯರ ಹತಾಶೆ, ವರ್ತನೆಗಳನ್ನೂ ಅವರು ತಮ್ಮದೇ ಸಮಭಾವದ ದೃಷ್ಟಿಕೋನದಲ್ಲಿ ನೋಡಿ ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಸುತ್ತ ಜರುಗುತ್ತಿರುವ ಸಂಗತಿಗಳನ್ನು ನಿಯಂತ್ರಿಸುವುದು ತಮ್ಮಿಂದ ಸಾಧ್ಯವಿಲ್ಲ, ಆದರೆ, ತಮ್ಮ ಭಾವನೆಗಳ (Feelings) ಮೇಲೆ ನಿಯಂತ್ರಣ (Control) ಹಾಕಿಕೊಳ್ಳಬಹುದು ಎಂದು ತಿಳಿದಿರುತ್ತಾರೆ. ಆ ಒತ್ತಡದ ಪರಿಸ್ಥಿತಿಯಲ್ಲಿ ತಮ್ಮ ಪ್ರತಿಕ್ರಿಯೆ (Reaction) ಮೇಲೆ ನಿಯಂತ್ರಣ ಹೇರಿಕೊಳ್ಳಬಹುದು ಎಂದು ಅರಿತಿರುತ್ತಾರೆ. ಇದನ್ನು ಯಾರು ಬೇಕಿದ್ದರೂ ಅಭ್ಯಾಸ ಮಾಡಿಕೊಳ್ಳಬಹುದು. ಇಂತಹ ದೃಷ್ಟಿಕೋನ ರೂಪಿಸಿಕೊಳ್ಳುವುದನ್ನು ಕಲಿತರೆ ಜೀವನಕ್ಕೆ (Life) ಮಹತ್ವದ ತಿರುವು ಲಭಿಸುತ್ತದೆ.
• ಸ್ವ ಕಾಳಜಿಗೆ (Self Care) ಆದ್ಯತೆ
ತಮ್ಮ ಬಗ್ಗೆ ಕಾಳಜಿ ಹೊಂದಿರುವವರ್ಯಾರೂ ಸಹ ಕೋಪಕ್ಕೆ (Angry), ಒತ್ತಡಕ್ಕೆ ತಮ್ಮನ್ನು ತಾವು ಬಲಿಕೊಡುವುದಿಲ್ಲ. ಯಾವುದೇ ಒತ್ತಡದ ಸಮಯದಲ್ಲಿ ನಮ್ಮ ಬಗ್ಗೆ ನಾವು ಕಾಳಜಿ ತೆಗೆದುಕೊಂಡರೆ ಕುದಿಯುವ ಮನಸ್ಸು ತಣ್ಣಗಾಗುತ್ತದೆ. ಹೀಗೆ, ನಿರಂತರವಾಗಿ ನಮ್ಮ ಬಗ್ಗೆ ಕಾಳಜಿ ವಹಿಸಬೇಕು. ನಮ್ಮವರ ಬಗ್ಗೆ ಕಾಳಜಿ ವಹಿಸಬೇಕು ಎಂದಾದರೆ ಮೊದಲು ತಮ್ಮ ಕಾಳಜಿ ತಮಗಿರಬೇಕು ಎನ್ನುವುದು ಇವರ ನಿಲುವು. ಇದು ಯಾವುದೇ ರೀತಿಯಲ್ಲಿರಬಹುದು, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಾಗಿರಬಹುದು. ಉತ್ತಮ ಆಹಾರ, ಕ್ರಿಯಾಶೀಲತೆ, ಉತ್ಸಾಹ, ನಿದ್ರೆ, ಧ್ಯಾನ ಮುಂತಾದವುಗಳ ಮೂಲಕ ದೇಹವನ್ನು ರಕ್ಷಿಸಿಕೊಳ್ಳುವುದಾಗಿರಬಹುದು. ಹೀಗೆ ನಿರಂತರವಾಗಿ ತಮ್ಮ ಯೋಗಕ್ಷೇಮಕ್ಕೆ (Wellness) ಆದ್ಯತೆ ನೀಡುವವರಲ್ಲಿ ಸ್ಥಿರತೆಯ ಗುಣ, ಮಾನಸಿಕ ಸಾಮರ್ಥ್ಯ (Mental Ability) ಹೆಚ್ಚುತ್ತದೆ.
• ಉತ್ತಮ ಸಂಬಂಧಗಳು (Good Relationship)
ಉತ್ತಮ ಸಂಬಂಧಗಳು ಜೀವನದಲ್ಲಿ ಭಾರೀ ಅಗತ್ಯ. ಅವು ಎಂದಿಗೂ ನಮಗೆ ಬೆಂಬಲ ನೀಡುತ್ತವೆ. ಕಷ್ಟದ ಸನ್ನಿವೇಶಗಳಲ್ಲಿ ಸಂಬಂಧಗಳು ಮಾನಸಿಕವಾಗಿ ಜತೆಗೆ ನಿಲ್ಲುತ್ತವೆ. ಇದೊಂದೇ ಸಾಕು, ನಮ್ಮ ಮನಸ್ಥಿತಿ (Mentality) ಉತ್ತಮಗೊಳ್ಳಲು. ಹೀಗಾಗಿ, ಸಂಬಂಧಗಳನ್ನು ಎಂದಿಗೂ ಕಡೆಗಣಿಸಬಾರದು. ಸಾಮಾಜಿಕ ಸಂಬಂಧ, ವೈಯಕ್ತಿಕ ಸಂಬಂಧಗಳನ್ನು ಬಲಪಡಿಸಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕು.
ನೀವೂ ಅತಿಯಾಗಿ ಯೋಚನೆ ಮಾಡ್ತೀರಾ? ಪ್ರತಿದಿನ ಇಂಥ ಹೋರಾಟ ಮಾಡ್ತೀರಾ?
• ಬಿಟ್ಟುಬಿಡು (Let Go)
ಎಷ್ಟೋ ಬಾರಿ ಒತ್ತಡಕ್ಕೆ ಕಾರಣವಾಗುವ ಸ್ಥಳದಿಂದ, ಜನರಿಂದ ದೂರವಾಗುವುದು ಉತ್ತಮ. ಉದ್ಯೋಗದಲ್ಲಿ (Job) ನೆಮ್ಮದಿಯೇ ಇಲ್ಲ, ಅದರಿಂದ ಜೀವನದ ಬೇರೆ ಎಲ್ಲ ಅಂಶಗಳಿಗೂ ತೊಂದರೆಯಾಗುತ್ತಿದೆ ಎಂದಾದರೆ ಅದರಿಂದ ಧೈರ್ಯವಾಗಿ ದೂರವಾಗಿಬಿಡಬೇಕು. ಹಣಕಾಸಿನ ಅಭದ್ರತೆಯ ಭಯದಲ್ಲಿ (Fear) ದಿನವೂ ಒತ್ತಡ ಅನುಭವಿಸುವ ಅಗತ್ಯವೇ ಇರುವುದಿಲ್ಲ. ಸಮಸ್ಯೆ ಉದ್ಯೋಗದ ಸ್ಥಳದಲ್ಲಿಯೇ ಇದ್ದಾಗ ನಿಮ್ಮೊಬ್ಬರಿಂದ ಏನೂ ಸುಧಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಇದರರ್ಥ, ಕೈ ಚೆಲ್ಲುವುದು ಎಂದಲ್ಲ. ಅಲ್ಲಿಂದ ದೂರವಾಗುವುದು ಅಷ್ಟೆ.