ಟೆನ್ನಿಸ್ ತಾರೆ ಸಾನಿಯಾ ಮಾಜಿ ಪತಿ ಶೋಯೇಬ್ ಮಲಿಕ್‌ನ ಹಾಗೂ ಮದ್ವೆಯಾದ ಸನಾ ಜಾವೇದ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಳ ಫಳ ಮಿಂಚುವ ಲೆಹೆಂಗಾ ಧರಿಸಿ ಫೋಸ್ ನೀಡಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಫೋಟೋ ನೋಡಿದ ನೆಟ್ಟಿಗರು ಸನಾ ಜಾವೇದ್ ಅವರನ್ನು ಬಹಳ ಹೀನಾಯವಾಗಿ ನಿಂದಿಸುತ್ತಿದ್ದಾರೆ.
ಟೆನ್ನಿಸ್ ತಾರೆ ಸಾನಿಯಾ ಮಾಜಿ ಪತಿ ಶೋಯೇಬ್ ಮಲಿಕ್‌ನ ಹಾಗೂ ಮದ್ವೆಯಾದ ಸನಾ ಜಾವೇದ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫಳ ಫಳ ಮಿಂಚುವ ಲೆಹೆಂಗಾ ಧರಿಸಿ ಫೋಸ್ ನೀಡಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಫೋಟೋ ನೋಡಿದ ನೆಟ್ಟಿಗರು ಸನಾ ಜಾವೇದ್ ಅವರನ್ನು ಬಹಳ ಹೀನಾಯವಾಗಿ ನಿಂದಿಸುತ್ತಿದ್ದಾರೆ.
ಸನಾ ಜಾವೇದ್ ಹಾಗೂ ಶೋಯೆಬ್ ಮಲಿಕ್ ಇತ್ತೀಚೆಗಷ್ಟೇ ಮದ್ವೆಯಾಗಿದ್ದರು. ಸನಾ ಜಾವೇದ್‌ರನ್ನ ಮೂರನೇ ಮದ್ವೆಯಾಗುವ ಮೂಲಕ ಶೋಯಬ್ ಮಲ್ಲಿಕ್ ಎಲ್ಲಾ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿದ್ದರು. ಸನಾರನ್ನು ಮದ್ವೆಯಾಗುವ ಮೊದಲು ಶೊಯೇಬ್ ಮಲಿಕ್, ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾರನ್ನು ಮದ್ವೆಯಾಗಿದ್ದು ಬಹುತೇಕ ಎಲ್ಲರಿಗೂ ಗೊತ್ತೆ ಇದೆ. ಮದ್ವೆಯ ನಂತರ ಸನಾ ತನ್ನ ಹೆಸರನ್ನು ಸನಾ ಶೋಯೆಬ್ ಮಲಿಕ್ ಎಂದು ಬದಲಿಸಿಕೊಂಡಿದ್ದಳು. ಇತ್ತ ಸನಾಗೂ ಇದು 2ನೇ ಮದ್ವೆಯಾಗಿತ್ತು. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು. ಆದರೆ ಇತ್ತ ತಮ್ಮ ವಿಚ್ಛೇದನದ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದ ಸಾನಿಯಾ ಮಿರ್ಜಾ ಅಭಿಮಾನಿಗಳಿಗೆ ಇದು ಶಾಕ್ ಆಗುವ ವಿಚಾರವಾಗಿತ್ತು. ಹೀಗಾಗಿ ಸಾನಿಯಾ ಅಭಿಮಾನಿಗಳು ಶೋಯೆಬ್ ಹಾಗೂ ಸನಾ ಮದ್ವೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಸನಾ ತಮ್ಮ ಮುದ್ದಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದು, ಇದಕ್ಕೂ ಈಗ ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳ ನಾಗರಿಕರು ಆಕ್ರೋಶಭರಿತರಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಶೋಯೆಬ್ ಮಲಿಕ್ ಮೂರನೇ ಪತ್ನಿಯಾಗಿರುವ ಸನಾ, ಸುಂದರವಾದ ಮಿರಿ ಮಿರಿ ಮಿಂಚುವ ಲೆಹೆಂಗಾ ಧರಿಸಿ ಫೋಸ್ ಕೊಟ್ಟಿದ್ದು, ಲೆಹೆಂಗಾದಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ ಈ ಪಾಕಿಸ್ತಾನಿ ನಟಿ, ಇದರ ಜೊತೆ ಅದ್ದೂರಿಯಾದ ನೆಕ್ಲೇಸ್, ನೆತ್ತಿ ಬೊಟ್ಟು, ಕೈ ಬಳೆಗಳನ್ನು ಧರಿಸಿ ಸನಾ ಮಿಂಚುತ್ತಿದ್ದಾರೆ. ಆದರೆ ಈ ಫೋಟೋಗಳಿಗೆ ನೆಟ್ಟಿಗರ ಕಾಮೆಂಟ್ ಮಾತ್ರ ಭಯಾನಕವಾಗಿದೆ. ಕೆಲವರು ಆಕೆಯನ್ನು ಮನೆ ಮುರುಕಿ ಎಂದು ಕರೆದರೆ ಮತ್ತೆ ಕೆಲವರು ಮಾಡಿದ ಕರ್ಮ ತಟ್ಟದೇ ಇರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ನಿಮ್ಮ ಮದ್ವೆ ಸಮೃದ್ಧವಾಗದಿರಲಿ ಎಂದು ಟೀಕಿಸಿದ್ದಾರೆ. ಭಾರತ ಪಾಕಿಸ್ತಾನ ಎರಡೂ ದೇಶಗಳ ಜನ ಜೊತೆಯಾಗಿ ಬೈಯುವಂತಹ ಕೆಲಸ ಮಾಡು ಎಂದು ಮತ್ತೊಬ್ಬರು ಟೀಕಿಸಿದ್ದಾರೆ.
ಶೋಯೆಬ್ ಮದ್ವೆಯಾಗುವುದಕ್ಕೂ ಮೊದಲು ಸನಾ ಜಾವೇದ್ ಉಮೈರ್ ಜೈಸ್ವಾಲ್ ಎಂಬುವವರನ್ನು 2020ರಲ್ಲಿ ಮದ್ವೆಯಾಗಿದ್ದರು. ಆದರೆ ಮದ್ವೆಯಾದ ಕೆಲ ಸಮಯದಲ್ಲೇ ಈ ಜೋಡಿ ದೂರಾಗಿದ್ದರು. ಆದರೆ ಸನಾ ಟಿವಿ ವರದಿ ಪ್ರಕಾರ, ಉಮೈರ್ ಜೈಸ್ವಾಲ್‌ಗೆ ವಿಚ್ಛೇದನ ಪೇಪರ್‌ಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಗಿತ್ತು. ಅಲ್ಲದೇ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಹಾಗೂ ತ್ವರಿತವಾಗಿ ವಿಚ್ಚೇದನ ನೀಡಲು ಬೆದರಿಕೆ ಕರೆಗಳು ಕೂಡ ಬಂದಿದ್ದವು ಎಂಬ ಆರೋಪಗಳು ಕೇಳಿ ಬಂದಿದ್ದವು.
ಇನ್ನು ಸನಾ ಹಾಗೂ ಶೊಯೇಬ್ ವಿವಾಹಕ್ಕೆ ನೆಟ್ಟಿಗರು ಶಾಕ್ ಆಗಿದ್ದರು, ತಮ್ಮ ವಿಚ್ಛೇದನವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸದಿರುವುದೇ ಇದಕ್ಕೆ ಕಾರಣ, ಆದರೆ ನಂತರ ಸಾನಿಯಾ ತಂದೆ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಾನಿಯಾ ಹಾಗೂ ಶೋಯೇಬ್ ಮಧ್ಯೆ ವಿಚ್ಛೇದನವಾಗಿದೆ. ಸಾನಿಯಾ ಶೋಯೇಬ್‌ನಿಂದ ಖುಲಾ ಪಡೆದಿದ್ದಾರೆ. ಖುಲಾ ಎಂದರೆ ಇಸ್ಲಾಮಿಕ್ ಧಾರ್ಮಿಕ ನಂಬಿಕೆಗಗಳ ಪ್ರಕಾರ, ಗಂಡನಿಂದ ಬೇರ್ಪಡಲು ಮಹಿಳೆಗೆ ಇರುವ ಹಕ್ಕಾಗಿದೆ.