ಪ್ರಕೃತಿಯೇ ಔಷಧ! ನಿಸರ್ಗದ ನಡುವೆ ಇರುವ ಮಕ್ಕಳೇ ಆರೋಗ್ಯವಂತರಂತೆ!

Suvarna News   | Asianet News
Published : Oct 25, 2021, 02:44 PM ISTUpdated : Oct 27, 2021, 05:39 PM IST
ಪ್ರಕೃತಿಯೇ ಔಷಧ! ನಿಸರ್ಗದ ನಡುವೆ ಇರುವ ಮಕ್ಕಳೇ ಆರೋಗ್ಯವಂತರಂತೆ!

ಸಾರಾಂಶ

ನಿಸರ್ಗದ ನಡುವೆ ಸಮಯ ಹೆಚ್ಚಾಗಿ ಕಳೆಯುವ ಮಕ್ಕಳಲ್ಲಿ ವರ್ತನೆ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು (psycholgical problems) ಕಡಿಮೆಯಂತೆ. ಇದು ಹೊಸ ಅಧ್ಯಯನದಿಂದ ಕಂಡುಬಂದ ಸಂಗತಿ.

ನೀವು ಒಂದು ವಿಚಾರವನ್ನು ಗಮನಿಸಿರಬಹುದು. ಹಳ್ಳಿಯಲ್ಲಿ, ಪ್ರಕೃತಿಯ ನಡುವೆ ವಾಸಿಸುವ ಮಕ್ಕಳಲ್ಲಿ ಮಾನಸಿಕ ಸಮಸ್ಯೆಗಳು ಕಡಿಮೆ. ಪಟ್ಟಣಗಳಲ್ಲಿ, ಹೆಚ್ಚು ಹೆಚ್ಚು ಸೌಲಭ್ಯಗಳ ನಡುವೆ ವಾಸಿಸುವ ಮಕ್ಕಳಲ್ಲಿ ಒತ್ತಡದಿಂದ ಸೃಷ್ಟಿಯಾಗುವ ಮಾನಸಿಕ ಸಮಸ್ಯೆಗಳು ಅನೇಕ. ಇದೇಕೆ ಹೀಗೆ? ಈ ಬಗ್ಗೆ ನಮ್ಮ ಕಣ್ತೆರೆಸುವ ಅಧ್ಯಯನವೊಂದು ನಡೆದಿದೆ. ಮಕ್ಕಳು ಹೆಚ್ಚು ಹೆಚ್ಚಾಗಿ ನಿಸರ್ಗದ ನಡುವೆ ಸಮಯ ಕಳೆದರೆ, ಅಂಥ ಮಕ್ಕಳು ಮಾನಸಿಕವಾಗಿ ಸದೃಢರಾಗಿರುತ್ತಾರಂತೆ.

ಪ್ರಕೃತಿ (nature) ಒಂದು ಪವಾಡಕರ ಔಷಧದಂತೆ ಕೆಲಸ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಹೊರಾಂಗಣದ ನಿಸರ್ಗಕ್ಕೆ ಒಡ್ಡಿಕೊಳ್ಳುವುದರಿಂದ ವರ್ತನೆ ಸಮಸ್ಯೆಗಳಂಥ ಋಣಾತ್ಮಕ ಪರಿಣಾಮಗಳನ್ನು ನಿವಾರಿಸಲು, ಆಸ್ತಮಾ ದಾಳಿಯನ್ನು ಕಡಿಮೆ ಮಾಡಲು, ಸ್ಥೂಲಕಾಯದ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಮಾನಸಿಕ ಆರೋಗ್ಯದ ಹಲವು ಅಂಶಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಹೊಸ ಅಧ್ಯಯನಗಳು ತೋರಿಸಿವೆ. ಕೋವಿಡ್ (covid) ಸಾಂಕ್ರಾಮಿಕ ಸಮಯದಲ್ಲಿ ಸಹ, ಪ್ರಕೃತಿಗೆ ಹೆಚ್ಚು ಒಡ್ಡಿಕೊಂಡ ಮಕ್ಕಳು ಕಡಿಮೆ ನಡವಳಿಕೆಯ ಸಮಸ್ಯೆಗಳನ್ನು ತೋರಿದ್ದನ್ನು ಸಾಬೀತುಪಡಿಸಿದೆ.

ಏಪ್ರಿಲ್ ಮತ್ತು ಜುಲೈ 2020 ರ ನಡುವೆ, ಸಂಶೋಧಕರು ಬ್ರಿಟನ್‌ನಲ್ಲಿ ಮೂರರಿಂದ ಏಳು ವರ್ಷದ ಮಕ್ಕಳೊಂದಿಗೆ 300ಕ್ಕೂ ಹೆಚ್ಚು ಪೋಷಕರನ್ನು ಸಮೀಕ್ಷೆ ಮಾಡಿದರು. ಪೋಷಕರೊಂದಿಗೆ ಬದಲಾದ ಮಗುವಿನ ಸಂವಹನದ ರೀತಿಯನ್ನು ಅಭ್ಯಸಿಸಿದರು. ಪ್ರಕೃತಿಯಲ್ಲಿ ಹೆಚ್ಚು ಸಮಯ ಕಳೆದ ಮತ್ತು ಪ್ರಕೃತಿಯ ನಡುವೆ ಕಡಿಮೆ ಸಮಯ ಕಳೆದ ಮಕ್ಕಳನ್ನು ವಿಭಜಿಸಿ ಅಧ್ಯಯನ ಮಾಡಿದರು. ಪೋಷಕರು ಮತ್ತು ಮಕ್ಕಳ ಭಾವನಾತ್ಮಕ ಮತ್ತು ನಡವಳಿಕೆಯ ಸಂವಹನವನ್ನು ದಾಖಲಿಸಿಕೊಂಡರು. ಪೀಪಲ್ ಅಂಡ್ ನೇಚರ್ ಜರ್ನಲ್‌ನಲ್ಲಿ ಇದರ ಫಲಿತಾಂಶಗಳನ್ನು ಪ್ರಕಟಿಸಿದ್ದಾರೆ.

ಮಕ್ಕಳ ಉಗ್ಗು ಮನೆಯಲ್ಲೇ ಸರಿಪಡಿಸೋದು ಹೇಗೆ?

ಒಟ್ಟಾರೆಯಾಗಿ, ಸುಮಾರು 55 ಪ್ರತಿಶತದಷ್ಟು ಪೋಷಕರು ತಮ್ಮ ಮಕ್ಕಳು ಪ್ರಕೃತಿಯಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ ಎಂದಿದ್ದಾರೆ. 7 ಪ್ರತಿಶತದಷ್ಟು ಮಕ್ಕಳು ಕಡಿಮೆ ಸಮಯವನ್ನು ಪ್ರಕೃತಿಯಲ್ಲಿ ಕಳೆಯುತ್ತಿದ್ದಾರೆ ಮತ್ತು ಉಳಿದವರು ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಪ್ರಕೃತಿಯ ನಡುವೆ ಸಮಯವನ್ನು ಹೆಚ್ಚಿಸಿದ ಮಕ್ಕಳು, ಕಡಿಮೆ ಸಮಯವನ್ನು ಪ್ರಕೃತಿಯಲ್ಲಿ ಕಳೆಯುವ ಮಕ್ಕಳಿಗಿಂತ ಗಮನಾರ್ಹವಾಗಿ ಕಡಿಮೆ ವರ್ತನೆಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಪ್ರಕೃತಿಯಲ್ಲಿ ಕಡಿಮೆ ಸಮಯ ಕಳೆಯುವ ಮಕ್ಕಳು ಮತ್ತು ಪ್ರಕೃತಿಯಲ್ಲಿ ಹೆಚ್ಚು ಸಮಯ ಕಳೆಯುವ ಮಕ್ಕಳ ನಡುವಿನ ಭಾವನಾತ್ಮಕ ಸಮಸ್ಯೆಗಳಲ್ಲಿ ಅವರು ಗಮನಾರ್ಹವಾದ ವ್ಯತ್ಯಾಸವನ್ನು ಕಂಡುಕೊಂಡಿದ್ದಾರೆ.

ಮಕ್ಕಳಲ್ಲಿ ಈ ರೀತಿ ಬದಲಾವಣೆಯಾದರೆ ಗಮನವಿರಲಿ, ಇಲ್ಲವಾದರೆ ಮಗು ದಾರಿ ತಪ್ಪಬಹುದು!

ಮಗುವಿನ ಪ್ರಕೃತಿಯ ಸಂಪರ್ಕ ಹಾಗೂ ವರ್ತನೆಯ ಬದಲಾವಣೆಗೆ ವಿವರಣೆಗಳನ್ನು ನೀಡಲಾಗಿದೆ. ಮಗು ಪ್ರಕೃತಿ, ಪ್ರಾಣಿಗಳು ಮತ್ತು ಪಕ್ಷಿಗಳ ಬಗ್ಗೆ ಆಸಕ್ತಿ ತೋರಿಸುವ ಮಕ್ಕಳು ತಮ್ಮ ಸಂವಹನದಲ್ಲಿ ಕಡಿಮೆ ಆಕ್ರಮಣಕಾರಿತನ, ಹೆಚ್ಚು ಕುತೂಹಲ, ಆಸಕ್ತಿಗಳನ್ನು ತೋರಿಸಿದ್ದಾರೆ. ಪ್ರಕೃತಿಯಲ್ಲಿ ಮಗ್ನವಾಗುವ ಸ್ವಭಾವದ ಮಕ್ಕಳು ಹೆಚ್ಚುಅಧ್ಯಯನಶೀಲತೆಯನ್ನು ತೋರಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಮಗುವಿನ ಸಮಯದಲ್ಲಿ ಯಾವುದೇ ಬದಲಾವಣೆಯನ್ನು ಮಾಡದ ಪೋಷಕರು ತಮ್ಮ ಮಕ್ಕಳಲ್ಲಿ ಹೆಚ್ಚಿನ ಧನಾತ್ಮಕ ವರ್ತನೆ ದಾಖಲಿಸಿಲ್ಲ. ಕೆಲವೊಮ್ಮೆ, ಹೆಚ್ಚು ವರ್ತನೆಯ ಮತ್ತು ಭಾವನಾತ್ಮಕ ಸಮಸ್ಯೆಗಳಿರುವ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚು ಹೆಚ್ಚು ಪ್ರಕೃತಿಯ ನಡುವೆ ಕರೆದುಕೊಂಡು ಹೋದಾಗ, ಅವರ ಆಕ್ರಮಣಕಾರಿ ವರ್ತನೆಗಳಲ್ಲಿ ತುಸು ತಗ್ಗಿದ್ದನ್ನು ಕಂಡಿದ್ದಾರೆ.

ಈ ಸಂಶೋಧನೆಗಳು, ನಿಸರ್ಗವು ಮಕ್ಕಳನ್ನು ಒಳಗೊಂಡಂತೆ ನಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ದಾಖಲಿಸುತ್ತದೆ. ಉದಾಹರಣೆಗೆ, ಪ್ರಕೃತಿಯು ಒತ್ತಡ ಮತ್ತು ಆತಂಕ ಅಥವಾ ಖಿನ್ನತೆಯ ಅಪಾಯವನ್ನು ದೂರ ಮಾಡುತ್ತದೆ. ನಿಸರ್ಗದಲ್ಲಿ ಒಂದಾಗುವುದು ಮಕ್ಕಳಿಗೆ ಮಾತ್ರವಲ್ಲದೆ ಎಲ್ಲರಿಗೂ ಉತ್ತಮ.

ಈ ರಾಶಿಗಳ ಪೋಷಕ-ಮಕ್ಕಳಿಗೇ ಬರೀ ಜಗಳವಂತೆ!

ಮಕ್ಕಳ ಆರೋಗ್ಯಕ್ಕೆ ಹೀಗೆ ಮಾಡಿ

  • ವಾರಾಂತ್ಯದಲ್ಲಿ ನಿಮ್ಮ ಕುಟುಂಬ ಸಮೇತ ಪಕ್ಷಿ ವೀಕ್ಷಣೆಗೆ ಹೋಗಿ. (Bird watch)
  • ನಿಮ್ಮ ಹಿತ್ತಲಿನ ಅಥವಾ ಹತ್ತಿರದ ಉದ್ಯಾನವನದಲ್ಲಿ ಹತ್ತಾರು ಸುತ್ತು ವಾಕ್ ಮಾಡುವುದು ಒಳ್ಳೆಯದು.
  • ಹಳ್ಳಿ ಮಕ್ಕಳು ಸಹಜವಾಗಿಯೇ ನಿಸರ್ಗದಲ್ಲಿ ಒಂದಾಗಿರುತ್ತಾರೆ. ಪಟ್ಟಣದ ಮಕ್ಕಳನ್ನು ನಿಸರ್ಗದೆಡೆಗೆ ಕುಟುಂಬದವರು ಕರೆದುಕೊಂಡು ಹೋಗಲು ಸಮಯ ಮಾಡಿಕೊಳ್ಳಬೇಕು.
  • ವಾರದಲ್ಲಿ ಒಂದು ದಿನವನ್ನು 'ಹಸಿರು ದಿನ' ಎಂದು ನಿಗದಿಪಡಿಸಿಕೊಂಡು ಅದರಂತೆ ಹೊರಗೆ ಹೋಗಿ ಆ ದಿನವಿಡೀ ಕಳೆಯಿರಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Namratha Gowda ಪ್ರೀತಿಯಲ್ಲಿದ್ದಾರಾ? ಆ ಕಪ್ಪು ಬ್ಯಾಂಡ್‌ ಕೊಟ್ಟ ಸುಳಿವಿನ ಬಗ್ಗೆ Karthik Mahesh ಏನಂದ್ರು?
ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ