ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡಿಕೊಂಡ್ಲು, ಮುಂದೇನ್ಮಾಡ್ಲಿ ಗೊತ್ತಾಗ್ತಿಲ್ಲ ?

By Suvarna NewsFirst Published Aug 21, 2022, 1:58 PM IST
Highlights

ಪ್ರೀತಿಯೆಂಬುದು ಒಂದು ಮಧುರ ಭಾವನೆ ನಿಜ. ಆದ್ರೆ ಕೆಲವೊಮ್ಮೆ ಅದು ದುರಂತ ಅಂತ್ಯವನ್ನು ಕಾಣುತ್ತದೆ. ಇಲ್ಲೊಬ್ಬನ ಜೀವನದಲ್ಲೂ ಹಾಗೆಯೇ ಆಗಿದೆ. ಪ್ರೀತಿಸಿದ ಹುಡುಗಿ ಆತ್ಮಹತ್ಯೆ ಮಾಡ್ಕೊಂಡಿದ್ದಾಳೆ. ಅದಕ್ಕೆ ನಾನೇ ಕಾರಣವಾಗ್ಬಿಟ್ಟೆ ಅಂತ ಹುಡುಗ ನೊಂದು ಹೋಗಿದ್ದಾನೆ. ಆಕೆಯ ನೆನಪಿನಿಂದ ಹೊರ ಬರೋಕೆ ಆಗ್ತಿಲ್ಲ ಏನ್ಮಾಡ್ಲಿ ಅಂತಿದ್ದಾನೆ. ಇದಕ್ಕೆ ತಜ್ಞರು ಏನ್ ಹೇಳಿದ್ದಾರೆ ತಿಳಿಯೋಣ.

ಪ್ರೀತಿ ಎಂಬುದು ಎಷ್ಟು ಸುಂದರ ಅನುಭೂತಿ. ಪದಗಳಲ್ಲಿ ಬಣ್ಣಿಸಲಾಗದ ಅದ್ಭುತ ಅನುಭವ. ಮತ್ತೊಂದು ಜೀವವನ್ನು ತನ್ನ ಜೀವದಂತೆಯೇ ಪ್ರೀತಿಸುವ ಪ್ರಕ್ರಿಯೆ. ಪ್ರೀತಿಯಲ್ಲಿದ್ದಾಗ ಲೋಕವೇ ಸುಂದರ ಎನ್ನುತ್ತಾರೆ. ಪ್ರೀತಿಗೆ ಬದುಕಿಗೆ ಅಷ್ಟು ಸುಂದರ ಬಣ್ಣಗಳನ್ನು ತುಂಬುತ್ತದೆ. ಆದ್ರೆ ಈ ಪ್ರೀತಿ ಯಾವಾಗಳು ಹಿತವಾಗಿರಬೇಕೆಂದೇನೂ ಇಲ್ಲ. ಪ್ರೀತಿ, ಕೆಲವೊಮ್ಮೆ ಇಡೀ ಜೀವನಕ್ಕೇ ಸಾಕಾಗುವ ನೋವನ್ನು ತಂದುಕೊಡುವ ವಿಚಾರವೂ ಹೌದು. ಯಾರ ಮೇಲಾದರೂ, ಯಾವ ಕ್ಷಣದಲ್ಲಾದರೂ ಮೂಡಬಹುದು. ಪ್ರೀತಿ ಮಾಡುವುದು ಚೆನ್ನಾಗಿರುತ್ತದೆ, ಪ್ರೀತಿಯಲ್ಲಿರುವುದು ಚೆನ್ನಾಗಿರುತ್ತದೆ. ಆದ್ರೆ ಪ್ರೀತಿಯಿಂದ ದೂರವಾಗುವುದು ಅಂದ್ರೆ ? ಮತ್ಯಾವತ್ತೂ ಅದನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂದ್ರೆ ?

ಆತನ ಜೀವನ (Life)ದಲ್ಲಿ ಆಗಿರೋದು ಅದೇ. ಮನಸಾರೆ ಪ್ರೀತಿಸಿದ ಹುಡುಗಿ, ಜಾತಿಯ ಕಾರಣದಿಂದ ಇಬ್ಬರು ಮದುವೆ (Marriage)ಯಾಗಲು ಸಾಧ್ಯವಾಗದ್ದಕ್ಕೆ ನೊಂದಿದ್ದಾಳೆ. ಮನೆ ಮಂದಿ ಸೇರಿ ಬೇರೆಯವನ್ನೊಟ್ಟಿಗೆ ಮದುವೆ ಮಾಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯನ್ನು ಪ್ರೀತಿಸಿದ ಯುವಕನೀಗ ಆಕೆಯನ್ನು ಮರೆಯೋಕಾಗ್ತಿಲ್ಲ. ಜೀವನದಲ್ಲಿ ಮೂವ್ ಆನ್ ಆಗೋಕೆ ಆಗ್ತಿಲ್ಲ ಎಂದು ಏಷ್ಯಾನೆಸ್ ಸುವರ್ಣ ನ್ಯೂಸ್ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಸದಾ ಕುಡ್ಕೊಂಡೇ ಇರೋ ಪತಿ ಜೊತೆ ಬದುಕೋದು ಹೇಗೆ? ಈ ಹೆಣ್ಣಿನ ಸಮಸ್ಯೆಗೆ ನಿಮ್ಮ ಸಲಹೆ ಏನು?

ಪ್ರಶ್ನೆ: ನಾನು ಒಂದು ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತದ್ದೆ. ಅವಳು ಸಹ ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ಆದ್ರೆ ನಮ್ಮ ಮನೆಯಲ್ಲಿ ಪ್ರೀತಿಯ ಬಗ್ಗೆ ಹೇಳೋಕೆ ಧೈರ್ಯ ಸಾಕಾಗಲ್ಲಿಲ್ಲ. ಯಾಕೆಂದರೆ ನಾನು ಮತ್ತು ನಾನು ಪ್ರೀತಿಸುವ ಹುಡುಗಿ ಬೇರೆ ಬೇರೆ ಜಾತಿಯವರು. ಹೀಗಾಗಿ ನಾನು ಆಕೆ ನಾನು ಎಲ್ಲಿದ್ದರೂ ಚೆನ್ನಾಗಿರಲಿ ಎಂದು ಬಯಸಿದ್ದೆ. ಹುಡುಗಿ ಮನೇಲಿ ಜೂನ್ ಆರಕ್ಕೆ ಆಕೆಯ ಮದುವೆ ಮಾಡಿದರು. ಆದರೆ ಅವಳಿಗೆ ಆ ಮದುವೆ ಇಷ್ಟವಿರಲ್ಲಿಲ್ಲ. ಮನನೊಂದು ಆಕೆ ಜೂನ್ ಹದಿನಾಲ್ಕಕ್ಕೆ ಆತ್ಮಹತ್ಮೆ ಮಾಡಿಕೊಂಡಳು. ಈಗ ನನಗೆ ನನ್ನಿಂದಲೇ ಆಕೆ ನನ್ನ ತಪ್ಪಿನಿಂದಲೇ ಸತ್ತಳು ಎಂಬ ನೋವು ಕಾಡುತ್ತಿದೆ. ನನಗೂ ಸಾಯಬೇಕು ಅನಿಸುತ್ತಿದೆ. ಅವಳನ್ನು ತುಂಬಾ ಪ್ರೀತಿ (Love) ಮಾಡ್ತಿದ್ದೆ. ಅವಳ ನೆನಪು (Memory) ಈಗಲೂ ನನಗೆ ಬಿಡದೆ ಕಾಡ್ತಿದೆ ಏನಾದ್ರೂ ಸಲಹೆ ಕೊಡಿ.

ತಜ್ಞರ ಉತ್ತರ: ಪ್ರೀತಿಯಲ್ಲಿರುವುದು ತುಂಬಾ ಸುಂದರವಾದ ಭಾವನೆ (Feelings. ಆದರೆ ಪ್ರೀತಿಯ ದುರಂತ ಅಂತ್ಯ ಮನಸ್ಸಿಗೆ ತುಂಬಾ ದುಃಖ ನೀಡುತ್ತದೆ. ಪ್ರೀತಿಸಿದಾಕೆಯನ್ನು ಕಳೆದುಕೊಂಡಿರುವ ನಿಮ್ಮ ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಜಾತಿಯೆಲ್ಲೆದರ ಹೊರತಾಗಿಯೂ ನೀವು ಮನೆಮಂದಿಯ ಜೊತೆ ಮಾತನಾಡಿ ಮದುವೆಯಾಗಲು ಯತ್ನಿಸಬಹುದಿತ್ತು. ನಿಮ್ಮ ಪ್ರೀತಿಯ ಗಾಢತೆಯನ್ನು ಅವರಿಗೆ ಅರ್ಥ ಮಾಡಿಸಬಹುದಿತ್ತು. ಅದೂ ಸಾಧ್ಯವಾಗದಿದ್ದರೆ ನೀವಿಬ್ಬರೂ ಪ್ರತ್ಯೇಕ ಹೋಗಿ ಜೀವನ ನಡೆಸಬಹುದಿತ್ತು. ಈಗ ಆಕೆಯ ಸಾವಿನ ಬಳಿಕ ಕೊರಗಬೇಕಾಗಿರಲ್ಲಿಲ್ಲ. ಆದರೇನು, ಕಳೆದು ಹೋದ ಕಾಲಕ್ಕೆ ಚಿಂತಿಸಿ ಪ್ರಯೋಜನವಿಲ್ಲ. 

ಗಂಡಸರು ಮದ್ವೆಯಾಗಿ ಹೆಂಡ್ತಿಗೆ ಮೋಸ ಮಾಡೋದ್ಯಾಕೆ ?

ಕಳೆದುಹೋದ ವಿಷಯಗಳ ಬಗ್ಗೆ ಚಿಂತಿಸಬೇಡಿ: ಮುಖ್ಯವಾಗಿ ಜೀವನದಲ್ಲಿ ಏನಾಗಬೇಕು ಎಂದು ಇರುತ್ತದೆಯೋ ಅದೇ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಅದನ್ನು ನಾವು ಅಥವಾ ನೀವು ಯಾರೂ ಸಹ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಕಳೆದು ಹೋದ ವಿಷಯಗಳ ಬಗ್ಗೆ ಯೋಚಿಸುವುದನ್ನು ಬಿಟ್ಟುಬಿಡಿ. ನೀವು ಪ್ರೀತಿಸಿದ ಹುಡುಗಿ, ಆಕೆಯ ನೆನಪುಗಳಿಂದ ಹೊರಬರುವ ವರೆಗೂ ನೀವು ಮೂವ್ ಆನ್ ಆಗಲು ಸಾಧ್ಯವಿಲ್ಲ. ಆಕೆ ನಿಜವಾಗಿಯೂ ಸತ್ತರೆ, ನೀವು ಬದುಕಿದ್ದೂ ಸತ್ತಂತೆ ಆಗುತ್ತದೆ. ಹಾಗಾದರೆ ಬದುಕಿಗೆ ಅರ್ಥವೇನು ?

ನಿಮ್ಮನ್ನೇ ದೂಷಿಸುವುದನ್ನು ಬಿಟ್ಟುಬಿಡಿ: ನಡೆದಿರುವ ಘಟನೆಗಳು ನಿಮಿತ್ತ ಮಾತ್ರ. ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ. ಹೀಗಾಗಿ ಯಾವಾಗಲೂ ನಿಮ್ಮನ್ನೇ ದೂಷಿಸುತ್ತಾ ಕುಳಿತುಕೊಳ್ಳಬೇಡಿ. ಬೇರೆ ಮದುವೆಗೆ ಆಕೆಯನ್ನು ಒತ್ತಾಯಿಸಿದ ಮನೆಯವರದ್ದೂ ತಪ್ಪಿದೆಯಲ್ಲ. ಸಾವಿನ ಬಳಿಕ ಏನು ಹೇಳಿದರೂ ಯಾವುದನ್ನೂ ಬದಲಾಯಿಸಲಾಗುವುದಿಲ್ಲ. 

ಆಕೆಗೆ ಇಷ್ಟವಾದ ಕೆಲಸಗಳನ್ನು ಮಾಡಿ: ಜೀವನದಲ್ಲಿ ಮುಂದೆ ಸಾಗಿ. ಆಕೆಯ ನೆನಪುಗಳಲ್ಲೇ ಕೊರಗುವುದನ್ನು ಬಿಟ್ಟು. ಆಕೆಗೆ ಇಷ್ಟವಾದ ಒಳ್ಳೆಯ ಕೆಲಸಗಳನ್ನು ಮಾಡಿ. ಅಶಕ್ತರಿಗೆ ನೆರವಾಗುವುದು, ಅನಾಥಾಶ್ರಾಮಗಳಿಗೆ ನೆರವು ನೀಡುವುದು, ಪುಟ್ಟ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು. ಹೀಗೆ ಯಾವುದೇ ಕೆಲಸವಾರೂ ಸರಿ. ಇದು ನೀವು ಪ್ರೀತಿಸಿದ ಹುಡುಗಿಗೆ ನೀವು ನೀಡುವ ನಿಜವಾದ ಗೌರವ.

ಅಬ್ಬಬ್ಬಾ..ಹುಡುಗೀರು ಫಸ್ಟ್‌ ನೈಟ್‌ ಬಗ್ಗೆ ಹೀಗೆಲ್ಲಾ ಯೋಚ್ನೆ ಮಾಡಿರ್ತಾರಂತೆ !

ಮೂವ್ ಆನ್‌: ಯು ಹ್ಯಾವ್ ಟು ಮೂವ್ ಆನ್. ಯಾಕೆಂದರೆ ಯಾರಿಗಾಗಿಯೂ ಬದುಕು ನಿಲ್ಲುವುದಿಲ್ಲ. ನಿಮ್ಮನ್ನು ಪ್ರೀತಿಸುವ ಅದೆಷ್ಟು ಮಂದಿ ನಿಮ್ಮ ಸುತ್ತಮುತ್ತಲಿದ್ದಾರೆ. ನಿಮ್ಮ ಹೆತ್ತವರು, ಸಂಬಂಧಿಗಳು ಸ್ನೇಹಿತರು ಎಲ್ಲರ ಜೊತೆ ಖುಷಿಯಾಗಿ ಸಮಯ ಕಳೆಯಿರಿ. ಉತ್ತಮ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ವೃತ್ತಿಯಲ್ಲಿ ಚೆನ್ನಾಗಿ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸಿ. ಯಾವಾಗಲೂ ಖುಷಿ ಖುಷಿಯಾಗಿರಿ. ನಿಮ್ಮನ್ನು ಅತಿ ಹೆಚ್ಚು ಪ್ರೀತಿಸುವ ಹುಡುಗಿ ಭವಿಷ್ಯದಲ್ಲಿ ಕಾಯುತ್ತಿರಬಹುದು.

ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

click me!