Mother Relationship with Son-in-law: ಅಳಿಯನ ಜೊತೆಯೇ ಅತ್ತೆಯ ಅಕ್ರಮ ಸಂಬಂಧ, ಮಗಳ ಬಾಳಿಗೇ ವಿಲನ್ ಆದ್ಲು ಅಮ್ಮ

Published : May 24, 2025, 04:32 PM IST
Extramarital affair

ಸಾರಾಂಶ

ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ 22 ವರ್ಷಗಳಿಂದ ಪತ್ನಿಗೆ ಮೋಸ ಮಾಡಿದ ಪತಿ, ಯಾರ ಜೊತೆ ಸಂಬಂಧ ಬೆಳೆಸಿದ್ದ ಗೊತ್ತಾ?

ಪವಿತ್ರ ಸಂಬಂಧಕ್ಕೆ ಮಸಿ ಬಳಿಯುವ ಕೆಲ ಘಟನೆ ಆಗಾಗ ಬೆಳಕಿಗೆ ಬರ್ತಿರುತ್ತೆ. ಅಳಿಯ ಅತ್ತೆಯನ್ನು ತಾಯಿಯಂತೆ, ಅತ್ತೆ ಅಳಿಯನ್ನು ಮಗನಂತೆ ನೋಡೋದು ಭಾರತೀಯ ಸಂಸ್ಕೃತಿ (Indian culture). ತನ್ನ ಜೀವ ಪಣಕ್ಕಿಟ್ಟು ಮಕ್ಕಳ ಸಂಸಾರ ಸರಿ ಮಾಡುವ ಪಾಲಕರಿದ್ದಾರೆ. ಆದ್ರೆ ಇಲ್ಲೊಬ್ಬ ತಾಯಿ ಮನುಷ್ಯತ್ವವನ್ನೇ ಮರೆತಿದ್ದಾಳೆ. ಅತ್ತೆ – ಅಳಿಯ ಸೇರಿ ಮಗಳಿಗೆ ಮೋಸ ಮಾಡಿದ್ದಾರೆ. ತನ್ನ ತಮ್ಮಂದಿರು ಅಂದ್ಕೊಂಡಿದ್ದವರು ತನ್ನ ಪತಿಗೆ ಹುಟ್ಟಿದವರು ಎಂಬ ವಿಷ್ಯ ಕೇಳಿ ನೊಂದ ಮಗಳು ದಂಗಾಗಿದ್ದಾಳೆ. ಇಷ್ಟಾದ್ರೂ ಅಮ್ಮ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಮಗಳಿಂದಲೇ ತನ್ನ ಸಂಸಾರ ಹಾಳಾಯ್ತು ಅಂತ ಆರೋಪ ಮಾಡಿದ್ದಾಳೆ.

ಮಹಿಳೆ ಕಥೆ ಏನು? : ರೆಡ್ಡಿಟ್ (Reddit) ಗುಂಪಿನ r/TrueOffMyChestನಲ್ಲಿ ಮಹಿಳೆ ತನ್ನ ನೋವಿನ ಕಥೆಯನ್ನು ಹೇಳಿಕೊಂಡಿದ್ದಾಳೆ. ಪ್ರೇಮಿ ಜೊತೆ 15 ವರ್ಷ ಲಿವ್ ಇನ್ ನಲ್ಲಿದ್ದ ಮಹಿಳೆ ತನ್ನ 17ನೇ ವಯಸ್ಸಿನಲ್ಲೇ ಗರ್ಭಿಣಿಯಾಗಿದ್ಲು. ಹಾಗಾಗಿ ಪಾಲಕರ ಜೊತೆ ವಾಸ ಶುರು ಮಾಡಿದ್ದಳು. ಒಂದು ವರ್ಷದ ನಂತ್ರ ಮಹಿಳೆ ತಂದೆ, ಮನೆ ಹತ್ತಿರವೇ ಮನೆಯೊಂದನ್ನು ಹುಡುಕಿದ್ದರು. ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿವೆ. ಈ ಪೋಸ್ಟ್ ಬರೆಯುವಾಗ ಆಕೆಗೆ ಮತ್ತೆ 7 ತಿಂಗಳಾಗಿತ್ತು. ಒಂದು ದಿನ ಸ್ನೇಹಿತೆಯರ ಜೊತೆ ಔಟಿಂಗ್ ಹೋಗಿದ್ದ ಮಹಿಳೆ ಬೇಗ ವಾಪಸ್ ಬಂದಿದ್ದಾಳೆ. ಆಕೆ ಮನೆಯ ಸ್ಥಿತಿ ನೋಡಿ ಭೂಮಿ ಕುಸಿದಿದೆ. ಅಮ್ಮ ಹಾಗೂ ತನ್ನ ಗಂಡನನ್ನು ನೋಡಬಾರದ ಸ್ಥಿತಿಯಲ್ಲಿ ತನ್ನದೇ ಬೆಡ್ ರೂಮಿನಲ್ಲಿ ನೋಡಿದ್ದಾಳೆ ಮಹಿಳೆ.

ಅಮ್ಮ, ಸಂಬಂಧ ನಿರಾಕರಿಸಿದ್ರೆ ಪತಿ ಒಪ್ಪಿಕೊಂಡಿದ್ದ. 22 ವರ್ಷಗಳಿಂದ ಅತ್ತೆ ಜೊತೆ ಸಂಬಂಧ ಹೊಂದಿದ್ದೆ ಎಂದಿದ್ದಾನೆ. ಮಹಿಳೆ ಮದುವೆಗೂ ಮುನ್ನವೇ ಅತ್ತೆ ಜೊತೆ ಆತನಿಗೆ ಸಂಬಂಧವಿತ್ತು. ಪತಿ ಈ ಹೇಳಿಕೆಯಿಂದ ಪತ್ನಿಗೆ ಅನುಮಾನ ಬಂದಿದೆ. ಕೆಲ ವರ್ಷಗಳ ಹಿಂದಷ್ಟೆ ಜನಿಸಿದ ತನ್ನ ಅವಳಿ ಸಹೋದರರು ಮತ್ತು ಕಿರಿಯ ಸಹೋದರ ಅಪ್ಪನಿಗಲ್ಲ ನನ್ನ ಪತಿಗೆ ಹುಟ್ಟಿದ್ದು ಎನ್ನುವ ಅನುಮಾನ ಬಂದಿತ್ತು. ಮಹಿಳೆ ವಿಷ್ಯವನ್ನು ತನ್ನ ಅಪ್ಪನಿಗೆ ಹೇಳಿದ್ದಾಳೆ. ಈ ವಿಷ್ಯ ಕೇಳಿ ತಂದೆ ಶಾಕ್ ಆಗಿದ್ದಾನೆ. ಪತ್ನಿಯ ಹಾಗೂ ಮಕ್ಕಳ ಡಿಎನ್ ಎ ಪರೀಕ್ಷೆಗೆ ಮುಂದಾಗಿದ್ದಾನೆ. ನಿರೀಕ್ಷೆಯಂತೆ ಆ ಎರಡೂ ಮಕ್ಕಳು ತನ್ನದಲ್ಲ, ಅಳಿಯನದ್ದು ಎಂಬ ಸಂಗತಿ ಗೊತ್ತಾಗಿದೆ.

ಕೋಪಗೊಂಡ ಅಪ್ಪ, ಅಮ್ಮನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಇತ್ತ ಮಹಿಳೆ ಕೂಡ ತನ್ನ ಪತಿಯಿಂದ ದೂರ ಉಳಿದಿದ್ದು, ವಿಚ್ಛೇದನಕ್ಕೆ ಪ್ರಯತ್ನ ನಡೆಸುತ್ತಿದ್ದಾಳೆ. ಮಗಳ ಬಾಳು ಹಾಳು ಮಾಡಿದ ಅತ್ತೆ ಈಗ ಪ್ರತ್ಯೇಕ ವಾಸ ಶುರು ಮಾಡಿದ್ದಾಳೆ. ತನ್ನ ಈ ಸ್ಥಿತಿಗೆ ಮಗಳೇ ಕಾರಣ ಅಂತ ಅಮ್ಮ ಆರೋಪ ಕೂಡ ಮಾಡಿದ್ದಾಳೆ. ಇದ್ರಿಂದ ನನ್ನ ಕೆಲ್ಸ ಹೋಯ್ತು ಎಂದು ಅಮ್ಮ, ಮಗಳ ಮೇಲೆ ಗೂಬೆ ಕೂರಿಸುವ ಯತ್ನ ಮಾಡಿದ್ದಾಳೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಷ್ಯ ಚರ್ಚೆಗೆ ಕಾರಣವಾಗಿದೆ. ಅನೇಕರು ನೊಂದ ಮಗಳ ಪರ ಮಾತನಾಡಿದ್ದಾರೆ. ಪತಿ ಹಾಗೂ ಅಮ್ಮ ನಿಮಗೆ ಮೋಸ ಮಾಡಿದ್ದಾರೆ. ಇದ್ರಲ್ಲಿ ನಿಮ್ಮ ತಪ್ಪಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ಅಮ್ಮನೇ ಮಗಳ ಬಾಳನ್ನು ಹಾಳು ಮಾಡಲು ಹೇಗೆ ಸಾಧ್ಯ ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ