ಇತ್ತೀಚಿನ ದಿನಗಳಲ್ಲಿ ಆರೇಂಜ್ಡ್ ಮ್ಯಾರೇಜ್‌ಗಿಂತ ಲವ್ ಮ್ಯಾರೇಜ್ ಆಗುವವರ ಸಂಖ್ಯೆ ಹೆಚ್ಚಿದೆ. ತಮಗೆ ಸೂಕ್ತವಾದ ಸಂಗಾತಿಯನ್ನು ಮೊದಲೇ ಹುಡುಕಿಕೊಂಡು ಮನೆಯವರ ಸಮ್ಮತಿ ಪಡೆದು ಮದುವೆಯಾಗುತ್ತಾರೆ.
ಕೆಲವೊಬ್ಬರ ಮನೆಯಲ್ಲಿ ಪ್ರೇಮವಿವಾಹಕ್ಕೆ ಒಪ್ಪದ ಕಾರಣ ಓಡಿ ಹೋಗಿ ಅಥವಾ ಮನೆಯಿಂದ ಹೊರ ಬಂದು ಸಪರೇಟ್ ಆಗಿ ವಾಸಿಸುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಲವ್ ಮ್ಯಾರೇಜ್ ಪ್ರಮಾಣ ಹೆಚ್ಚಿದೆ ಮತ್ತು ಆರೇಂಜ್ಡ್ ಮ್ಯಾರೇಜ್‌ಗಳು ಕಡಿಮೆಯಾಗುತ್ತಿವೆ.
ಆದ್ರೆ ಲವ್ ಮ್ಯಾರೇಜ್ ಆದರೂ ಕೆಲವೊಬ್ಬರು ಖುಷಿಯಾಗಿರುವುದಿಲ್ಲ. ಅದಕ್ಕೇನು ಕಾರಣ ನಿಮಗೆ ಗೊತ್ತಿದೆಯಾ?
ಇದು ಬಹುತೇಕ ಲವ್ ಮ್ಯಾರೇಜ್‌ನಲ್ಲಿ ಕಾಡುವ ಸಮಸ್ಯೆ. ಅತ್ತೆ, ಮಗ ಆಯ್ಕೆ ಮಾಡಿದ ಸೊಸೆಯನ್ನು ಸ್ವೀಕರಿಸಲು ಸಿದ್ಧವಾಗುವುದಿಲ್ಲ.
ಸಂಸ್ಕೃತಿ ವಿಭಿನ್ನವಾಗಿರುವುದು ಕೆಲವೊಮ್ಮೆ ಗಂಡ-ಹೆಂಡತಿ ಪರಸ್ಪರ ಅಡ್ಚಸ್ಟ್ ಆಗಲು ಕಷ್ಟವಾಗುವಂತೆ ಮಾಡಬಹುದು.
ಒಬ್ಬರು ವೆಜ್, ಇನ್ನೊಬ್ಬರು ನಾನ್‌ವೆಜ್ ಆಹಾರ ಇಷ್ಟಪಡುವವರು ಆಗಿದ್ದರೆ ದಾಂಪತ್ಯದಲ್ಲಿ ಇದು ಜಗಳಕ್ಕೆ ಕಾರಣವಾಗಬಹುದು.
ಪ್ರೀತಿಯಲ್ಲಿದ್ದಾಗ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಮದುವೆಯಾದ ನಂತರ ಗಂಡನ ನಿಜವಾದ ಸ್ವಭಾವ ತಿಳಿದ ಮೇಲೆ ಈ ಮದುವೆ ಬೇಡವಾಗಿತ್ತು ಅನಿಸುತ್ತದೆ.