ಮಗ ಗೆದ್ದು ತಂದ ತಟ್ಟೆಯಲ್ಲೇ 24 ವರ್ಷ ಉಣ್ಣುತ್ತಿದ್ದ ತಾಯಿ, ವೈರಲ್ ಆಯ್ತು ಮಗನ ಭಾವನಾತ್ಮಕ ಟ್ವೀಟ್​

By Shobha MCFirst Published Jan 25, 2023, 4:21 PM IST
Highlights

ಅಮ್ಮ..ಆಕೆಗೆ ಮಕ್ಕಳೇ ಪ್ರಪಂಚ..ಮಕ್ಕಳು ನಕ್ಕರೆ ನಗುತ್ತಾಳೆ, ಅತ್ತರೆ ಅಳುತ್ತಾಳೆ. ತಾಯಿಯೆಂಬ ದೇವರಿಗೆ ಮತ್ಯಾರೂ ಸಾಟಿಯಿಲ್ಲ. ಸೋಷಿಯಲ್ ಮೀಡಿಯಾದಲ್ಲೊಂದು ಟ್ವೀಟ್ ವೈರಲ್ ಆಗಿದೆ. ಭಾವನಾತ್ಮಕ ಟ್ವೀಟ್‌ನಿಂದ ಅಮ್ಮನ ಪ್ರೀತಿ ಜಗದಗಲ ಎಂಬುದು ಮತ್ತೆ ಸಾಬೀತಾಗಿದೆ.

ಅಮ್ಮ. ಈ ಹೆಸರು ಕೇಳಿದ್ರೆ ಸಾಕು ಮೈಯಲ್ಲೊಂದು ಮಿಂಚು, ಕರುಳಿನಲ್ಲಿ ಮಿಡಿತ. ಅಮ್ಮ ಅಂದ್ರೆ ಹಾಗೇನೇ. ಅವಳೆಂದೂ ಬತ್ತದ ಪ್ರೀತಿಯ ಸಮುದ್ರ.  ಮಕ್ಕಳು ಬೆಳೆದು ಎಷ್ಟೇ ದೊಡ್ಡವರಾದರೂ ಅವಳ ಪಾಲಿಗೆ ಅವರೆಂದು ಮಕ್ಕಳೇ. ಅಮ್ಮನ ವಾತ್ಸಲ್ಯದ ಸಿಹಿ ಉಂಡವರೇ ಅದೃಷ್ಟವಂತರು. ಅಮ್ಮನನ್ನು ಕಳೆದುಕೊಂಡವರ ದುಃಖ ಭರಿಸಲಾರದ್ದು. ಪ್ರತಿ ಕ್ಷಣವೂ ಅಮ್ಮ ನೆನಪಾಗದಿದ್ರೆ ಕೇಳಿ. ಯಾರನ್ನೂ ಮರೆತರೂ ಜನ್ಮ ಕೊಟ್ಟ ತಾಯಿಯನ್ನು ಮರೆತವರುಂಟೇ. ಇದ್ಯಾಕೆ ಈ ಪೀಠಿಕೆ ಅಂದ್ರೆ, ಸೋಷಿಯಲ್ ಮೀಡಿಯಾದಲ್ಲೊಂದು ಟ್ವೀಟ್ ವೈರಲ್ ಆಗಿದೆ. 

ಅಮ್ಮನ ತಟ್ಟೆ. ಹೌದು, ಚೆನ್ನೈನ ಡೆಂಟಿಸ್ಟ್​ ವಿಕ್ರಮ್​ ಬುದ್ದನೇಸನ್​ ಎಂಬುವರು ಮಾಡಿರೋ  ಅಮ್ಮನ ತಟ್ಟೆ ಅನ್ನೋ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಗಂಡನ ಸೆಕ್ಸ್ ಕಾಟಕ್ಕೆ ನೊಂದು ಬೆಂಕಿ ಹಚ್ಚಿಕೊಂಡು, ಬೆಂದು ಬಂದಳು..!

‘ಇದು ನನ್ನ ಅಮ್ಮನ ತಟ್ಟೆ. 20 ವರ್ಷಗಳಿಂದ ಅವರು ಇದೇ ತಟ್ಟೆಯಲ್ಲಿ  ಉಣ್ಣುತ್ತಿದ್ದರು. ಬೇರೆ ಯಾರಿಗೂ ಈ ತಟ್ಟೆ ಕೊಡುತ್ತಿರಲಿಲ್ಲ. ಆದ್ರೆ, ನನಗೆ, ನನ್ನ ಪುಟ್ಟ ಸೊಸೆಗೆ ಮಾತ್ರ ಇದರಲ್ಲಿ ಉಣ್ಣಲು ಅಮ್ಮ ತನ್ನ ತಟ್ಟೆ ಕೊಡುತ್ತಿದ್ದಳು. ಆದರೆ ಅಮ್ಮ  ನಿಧನದ ನಂತರ ತಟ್ಟೆಯ ಹಿಂದಿನ ಕಥೆ ತಿಳಿಯಿತು.’

‘1997ರಲ್ಲಿ ನಾನು ಏಳನೇ ತರಗತಿಯಲ್ಲಿದ್ದಾಗ ಯಾವುದೋ ಸ್ಪರ್ಧೆಯಲ್ಲಿ ನನಗೆ ಬಂದ ಬಹುಮಾನ ಈ ತಟ್ಟೆ. ಈ 24 ವರ್ಷಗಳ ತನಕವೂ ನನ್ನ ಅಮ್ಮ ಈ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದರು. ಎಂಥ ಮಧುರ ನೆನಪಿದು.’ ಎಂದು ವಿಕ್ರಮ್ ಟ್ವೀಟ್​ ಮಾಡಿದ್ದಾರೆ. 
ಮಗನ ಗೆದ್ದ ಮೊದಲ ಬಹುಮಾನವನ್ನು ಆ ತಾಯಿ ಅತ್ಯಂತ ಜತನದಿಂದ ಕಾಪಾಡಿಕೊಂಡಿದ್ದಳು. ಅಷ್ಟೇ ಅಲ್ಲ, ಪ್ರತಿ ದಿನವೂ ಅದೇ ತಟ್ಟೆಯಲ್ಲೇ ವಿಕ್ರಮ್ ತಾಯಿ ಊಟ ಮಾಡುತ್ತಿದ್ರು ಅಂದ್ರೆ, ಆಕೆಯ ಆ ತಟ್ಟೆ ಮೇಲೆ ಅದೆಂಥಾ ಮೋಹ ನೋಡಿ ? ಮಗ ಗೆದ್ದ ಬಹುಮಾನ ಎಂಥಲೋ, ಮಗನಿಗೆ ಸಿಕ್ಕ ಬಹುಮಾನವನ್ನು ಕಾಪಾಡಿಕೊಳ್ಳಬೇಕೆಂಬ ಕಾಳಜಿಯೋ ಒಟ್ನಿನಲ್ಲಿ ವಿಕ್ರಮ್ ತಾಯಿ ಮಾತ್ರ 24 ವರ್ಷದವರೆಗೂ ಅದೇ ತಟ್ಟೆಯಲ್ಲಿ ಊಟ ಮಾಡುವ ಮೂಲಕ, ತನ್ನ ಮಗನನ್ನು ಎದೆಯೊಳಗೆ ಅವಚ್ಚಿಕೊಂಡಿದ್ದಳು. 

ವಿಧಿ ಬರಹ ಎಂಥ ಘೋರ..ಸಾವಿನಲ್ಲೂ ಒಂದಾದ ಅವಳಿ ಅಣ್ತಮ್ಮ..!

ವಿಕ್ರಮ್​ ಟ್ವೀಟ್​ ಓದಿದ ನೂರಾರು ಮಂದಿ, ತಮ್ಮ ತಾಯಿಯ ನೆನಪು ಹಂಚಿಕೊಂಡು ಭಾವುಕರಾಗಿದ್ದಾರೆ, ತಮ್ಮ ಅಮ್ಮ ಬಳಸುತ್ತಿದ್ದ ವಸ್ತುಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವರು, ಅಮ್ಮನಿಲ್ಲದ್ದನ್ನು ನೆನಪು ಕಣ್ಣೀರು ಸುರಿಸಿದ್ದಾರೆ. 
ನಾವೆಲ್ಲ ಹಾಗೇ ಅಲ್ವಾ, ನಮ್ಮ ಬಾಲ್ಯದ, ನಮ್ಮ ಕುಟುಂಬದ, ನಮ್ಮ ಹೆತ್ತವರ ಒಂದಿಲ್ಲೊಂದು ನೆನಪುಗಳನ್ನು ಅಂಟಿಸಿಕೊಂಡಿಯೇ ಬದುಕುತ್ತಿರುತ್ತೇವೆ. 

ಆದ್ರೆ, ಅಮ್ಮನ ನೆನಪು ಮಾತ್ರ ನಮ್ಮ ಕೊನೆಯ ಉಸಿರು ಇರೋವರೆಗೂ ಅಚ್ಚಳಿಯದಂತೆ ಉಳಿದುಬಿಡುತ್ತದೆ. ಅಮ್ಮನ ತಟ್ಟೆಯಂತೆ..!

in my 7th STD.. that is in the year 1999. All these 24 years she had eaten food from this plate which was won by me... How sweet know... And she didn't even tell me this 😭😭😭😭 maaaaaa miss you maa 💔💔💔

— Vikram S Buddhanesan (@vsb_dentist)
click me!