
ಜನರ ಆಲೋಚನೆ ಸಂಪೂರ್ಣ ಬದಲಾಗಿದೆ. ಹಿಂದೆ ಅಳಿಯನನ್ನು ಮಗನಂತೆ ನೋಡ್ತಿದ್ರು. ಆದ್ರೀಗ ಅಳಿಯ ಅತ್ತೆಯ ಫೆವರೆಟ್ ಆಗ್ತಿದ್ದಾನೆ. ಬರೀ ಅಳಿಯ ಫೆವರೆಟ್ ಆಗೋದು ಮಾತ್ರವಲ್ಲ ಅವನನ್ನು ಪ್ರೀತಿಸಿ, ಮಗಳಿಗೆ ಕೈಕೊಟ್ಟು, ಅಳಿಯನ ಜೊತೆ ಓಡಿ ಹೋಗುವ ಅಮ್ಮಂದಿರ ಲವ್ ಸ್ಟೋರಿ (Mother love story) ಹೆಚ್ಚಾಗ್ತಿದೆ. ಮಗಳನ್ನು ಮದುವೆ ಆಗೋಕೆ ಬಂದ ಹುಡುಗನ ಜೊತೆ ಅಮ್ಮಓಡಿ ಹೋದ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಅಲಿಗಢದಲ್ಲಿ ಮಹಿಳೆಯೊಬ್ಬಳು ತಮ್ಮ ಭಾವಿ ಅಳಿಯನ ಜೊತೆ ಓಡಿ ಹೋಗಿದ್ದಳು. ಈಗ ಬಸ್ತಿ ಜಿಲ್ಲೆಯಲ್ಲಿ ಇಂಥಹದ್ದೇ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ಮತ್ತು ಹುಡುಗನ ಮೇಲೆ ಕುಟುಂಬಸ್ಥರು ದೂರು ನೀಡಿದ್ದಾರೆ. ಪೊಲೀಸರು ಪ್ರೇಮಿ (lover)ಗಳ ಪತ್ತೆಗೆ ಬಲೆ ಬೀಸಿದ್ದಾರೆ. ವಿಷ್ಯ ಹಳ್ಳಿಯ ಗಲ್ಲಿ ಗಲ್ಲಿಯಿಂದ ಹಿಡಿದು ಸೋಶಿಯಲ್ ಮೀಡಿಯಾವರೆಗೆ ಚರ್ಚೆ ಆಗ್ತಿದೆ.
ಕುಟುಂಬಸ್ಥರು ಇಬ್ಬರ ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ, ಇಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದ್ರಿಂದ ಬೇಸತ್ತ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಇಬ್ಬರ ಮೊಬೈಲ್ ಲೊಕೇಷನ್ ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಮೊಬೈಲ್ ಸ್ವಿಚ್ ಆಪ್ ಆದ ಕಾರಣ ಪತ್ತೆ ಕಾರ್ಯ ವಿಳಂಬ ಆಗ್ತಿದೆ.
ಅಲಿಗಢದಲ್ಲಿ ನಡೆದಿತ್ತು ಇಂಥಹದ್ದೇ ಘಟನೆ : ಕೆಲ ದಿನಗಳ ಹಿಂದೆ ಅಲಿಗಢದಲ್ಲೂ ಇಂಥ ಘಟನೆ ನಡೆದಿತ್ತು. ಭಾವಿ ಅಳಿಯನ ಜೊತೆ ಅತ್ತೆ ನಾಪತ್ತೆಯಾಗಿದ್ದಳು. ಇದು ನಾಚಿಕೆಗೇಡಿನ ಕೆಲ್ಸ ಅಂತ ಊರಿನವರು ಮಾತನಾಡಿಕೊಳ್ತಿದ್ದಾರೆ. ಕುಟುಂಬಸ್ಥರದಲ್ಲಿ ಆಕ್ರೋಶ ಮನೆ ಮಾಡಿದೆ. ಈ ಅತ್ತೆ – ಅಳಿಯ ಕೂಡ ಇನ್ನೂ ಪೊಲೀಸ್ ಕೈಗೆ ಸಿಕ್ಕಿಲ್ಲ. ಶೀಘ್ರವೇ ಪತ್ತೆ ಹಚ್ಚುವ ಭರವಸೆಯನ್ನು ಪೊಲೀಸರು ನೀಡ್ತಾನೆ ಇದ್ದಾರೆ.
ಅಳಿಯನ ಜೊತೆ ಅತ್ತೆ ಓಡಿ ಹೋಗಲು ಕಾರಣ ಏನು? : ಅತ್ತೆಗೆ ತನ್ನ ಪತಿ ಅಥವಾ ಕುಟುಂಬದಿಂದ ಪ್ರೀತಿ, ಗೌರವ ಅಥವಾ ಭಾವನಾತ್ಮಕ ಬೆಂಬಲ ಸಿಗದಿದ್ದಾಗ, ಅಳಿಯನಲ್ಲಿ ಇದು ಸಿಕ್ಕಾಗ ಆಕೆ ಅವನಿಗೆ ಹತ್ತಿರವಾಗ್ತಾಳೆ ಅಂತ ತಜ್ಞರು ಹೇಳ್ತಾರೆ. ಹುಡುಗರು ತಮಗಿಂತ ವಯಸ್ಸಿನಲ್ಲಿ ಹಿರಿಯ, ಅನುಭವಿ ಮಹಿಳೆಯರಿಗೆ ಹೆಚ್ಚು ಆಕರ್ಷಿತರಾಗೋದು ಕೂಡ ಇಲ್ಲಿ ಒಂದು ಕಾರಣ. ಇಬ್ಬರ ಮಧ್ಯೆ ವಯಸ್ಸಿನ ಅಂತ್ರ ಬಹಳ ಕಡಿಮೆ ಇದ್ದಾಗ್ಲೂ ಅಳಿಯ ಮತ್ತು ಅತ್ತೆಯ ನಡುವೆ ಸ್ನೇಹ ಅಥವಾ ಆಕರ್ಷಣೆ, ಪ್ರೀತಿಗೆ ತಿರುಗ್ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.