ಪ್ರೀತಿಯಲ್ಲಿ ಸೆಕ್ಸ್‌ನ ಪಾಲು ಶೇ.2ರಷ್ಟು. ಹಾಗೆಯೇ ಕೇವಲ ದೈಹಿಕ ಬಯಕೆಯ ಸೆಕ್ಸ್‌ನಲ್ಲಿ ಕೂಡಾ ಶೇ.2ರಷ್ಟು ಪ್ರೀತಿ ಇದ್ದೇ ಇರುತ್ತದೆ ಎನ್ನುತ್ತಾರೆ ರವಿಶಂಕರ್ ಗುರೂಜಿ. ಈ ವಿಷಯವಾಗಿ ಅವರ ಮಾತುಗಳನ್ನು ಅರಿಯೋಣ ಬನ್ನಿ..
ಸೆಕ್ಸ್ ಮತ್ತು ಪ್ರೀತಿ ಒಂದಕ್ಕೊಂದು ಸಂಬಂಧ ಹೊಂದಿವೆ. ಒಂದಿಲ್ಲದೆ ಮತ್ತೊಂದಿರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ.
ಈ ಎರಡೂ ವಿಷಯಗಳನ್ನೂ ಸಂಪೂರ್ಣ ಬೇರ್ಪಡಿಸಲು ಸಾಧ್ಯವಿಲ್ಲ ಎನ್ನುತ್ತಲೇ ಅವರೆಡರ ನಡುವಿನ ವ್ಯತ್ಯಾಸವನ್ನು ತೆರೆದಿಟ್ಟಿದ್ದಾರೆ ಗುರೂಜಿ. ಈ ಬಗ್ಗೆ ಅವರ ಅಭಿಪ್ರಾಯವನ್ನು ನೋಡೋಣ.
ಪ್ರೀತಿಯಲ್ಲಿ ಸೆಕ್ಸ್‌ನ ಪಾಲು ಶೇ.2ರಷ್ಟು ಮಾತ್ರ. ಹಾಗೆಯೇ, ಸುಮ್ಮನೆ ದೈಹಿಕ ಬಯಕೆ ಎಂದುಕೊಂಡ ಸೆಕ್ಸ್‌ನಲ್ಲಿ ಕನಿಷ್ಠ ಶೇ.2ರಷ್ಟು ಪ್ರೀತಿ ಇದ್ದೇ ಇರುತ್ತದೆ. ಅವರಿಗಾಗಿ ನೀವೊಂದು ಲೋಟ ಕಾಫಿಯನ್ನಾದರೂ ಕೊಡಿಸುವಿರಿ ಅಲ್ಲವೇ?
ಸೆಕ್ಸ್ ಎಂದರೆ ದೈಹಿಕವಾಗಿ ಹತ್ತಿರಾಗುವುದು. ದೇಹಗಳ ಸನಿಹವನ್ನು ಎಂಜಾಯ್ ಮಾಡುವುದು. ಅದೇ ಪ್ರೀತಿ ಎಂದರೆ ಆಂತರಿಕ ಜ್ಞಾನ. ದೇಹ ಮನಸ್ಸನ್ನು ಸಂಪೂರ್ಣವಾಗಿ ಒಂದರಿಂದೊಂದನ್ನು ಬೇರ್ಪಡಿಸಲಾಗದು. ಸೆಕ್ಸ್‌ನಲ್ಲಿ ನಿಮಗೆ ನೀವು ಪ್ರಮುಖರಾಗ್ತೀರಿ. ಆದರೆ, ಪ್ರೀತಿಯಲ್ಲಿ ಮತ್ತೊಬ್ಬರು ನಿಮಗೆ ಮುಖ್ಯವಾಗುತ್ತಾರೆ. ಪ್ರೀತಿಯಲ್ಲಿ ನೀವು ಇನ್ನೊಬ್ಬರಿಗಾಗಿ ಸದಾ ಇರುತ್ತೀರಿ ಎಂದಿದ್ದಾರೆ ಗುರೂಜಿ.
3 ಸಾವಿರ ಜನಸಂಖ್ಯೆಯ ಈ ಹಳ್ಳಿಯಲ್ಲಿದ್ದಾರೆ 1110 ಯೂಟ್ಯೂಬರ್‌ಗಳು!
ಲೈಂಗಿಕ ಮತ್ತು ಭಾವನಾತ್ಮಕ ಸಂಪರ್ಕಗಳು
ಲೈಂಗಿಕತೆಯು ಸಂಬಂಧದ ಒಂದು ಭಾಗ ಮಾತ್ರ. ಭಾವನಾತ್ಮಕ ಸಂಬಂಧ ಸಾಕಷ್ಟು ಆಳವಿದೆ. ನಿಮ್ಮ ಸಂಗಾತಿ ಬೇರೆಯವರೊಂದಿಗೆ ಹೋಗಿ ಮಲಗಿದಾಗ, ನೀವು ಅದನ್ನು ಇಷ್ಟಪಡುತ್ತೀರಾ? ನೀವು ಅದನ್ನು ಏಕೆ ಇಷ್ಟಪಡುವುದಿಲ್ಲ? ಏಕೆಂದರೆ ಅದು ನಿಮಗೆ ಎಲ್ಲೋ ಆಳವಾಗಿ ನೋವುಂಟು ಮಾಡುತ್ತದೆ. ಲೈಂಗಿಕತೆಯೇ ಬೇರೆ, ಪ್ರೀತಿಯೇ ಬೇರೆ ಎಂದರೆ ಹೀಗೆ ನೋವುಂಟಾಗಬೇಕಿರಲಿಲ್ಲ ಅಲ್ಲವೇ?
ನಿಮ್ಮ ಸಂತೋಷವು ನಿಮ್ಮ ದೈಹಿಕ ಅಸ್ತಿತ್ವಕ್ಕೆ ಮಾತ್ರ ಸಂಬಂಧಿಸಿಲ್ಲವಾದ್ದರಿಂದ, ಇದು ನಿಮ್ಮ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಪರ್ಕವನ್ನು ಸಹ ಒಳಗೊಂಡಿರುತ್ತದೆ. ನೀವು ನಿಜವಾಗಿಯೂ ಯಾರನ್ನಾದರೂ ಪ್ರೀತಿಸುತ್ತಿರುವಾಗ, 'ಈ ವ್ಯಕ್ತಿ ನನ್ನ ಆತ್ಮ ಸಂಗಾತಿ' ಎಂದು ಹೇಳುತ್ತೀರಿ. ‘ಆತ್ಮಸಂಗಾತಿ’ ಎಂಬುದಕ್ಕೆ ನಿಮ್ಮ ಅರ್ಥವೇನು? ಅಂದರೆ ಆ ವ್ಯಕ್ತಿಯೊಂದಿಗೆ ನೀವು ಅಂತಹ ಆಳವಾದ ಏಕತೆಯನ್ನು ಹೊಂದಿದ್ದೀರಿ. ಸಂಬಂಧಗಳನ್ನು ದೈಹಿಕ ಅನ್ಯೋನ್ಯತೆ ಅಥವಾ ವ್ಯಾಮೋಹವನ್ನು ಮೀರಿ ನೋಡಬೇಕು.
ಏಕ ವ್ಯಕ್ತಿಯೊಂದಿಗಿನ ಸಂಬಂಧವೇ ಉತ್ತಮ
ಹಲವಾರು ಸಂಬಂಧಗಳನ್ನು ಹೊಂದುವುದು ಎಂದಿಗೂ ಆರೋಗ್ಯಕರವಲ್ಲ. ಇದು ಎಷ್ಟು ರೋಗಗಳನ್ನು ತರಬಹುದು ಎಂಬುದು ಒಂದು ವಿಷಯವಾದರೆ, ಎರಡನೆಯದಾಗಿ, ಇದು ನಿಮ್ಮನ್ನು ಭಾವನಾತ್ಮಕವಾಗಿ ಕೆರಳಿಸುತ್ತದೆ. ಆದ್ದರಿಂದ, ಆರೋಗ್ಯಕರ, ಸಂತೋಷದ ಜೀವನದ ವಿವಿಧ ಅಂಶಗಳನ್ನು ನೋಡುವಾಗ, ಈ ಪ್ರವೃತ್ತಿಯನ್ನು ತಪ್ಪಿಸುವುದು ಉತ್ತಮ.
ಮಹಿಳೆಯರ ಒಡಕು ಪಾದ ನೋಡಿ ಬ್ಯುಸಿನೆಸ್ ಶುರು ಮಾಡಿದ ವ್ಯಕ್ತಿ ಈಗ ಕೋಟ್ಯಾಧಿಪತಿ
ಲಿವ್ ಇನ್ ಸಂಬಂಧ ಉತ್ತಮವೇ?
ಲಿವ್-ಇನ್ ಸಂಬಂಧಗಳಲ್ಲಿ ಎರಡೂ ಪಾಲುದಾರರಲ್ಲಿ ಅಭದ್ರತೆಯ ಭಾವನೆ ಇರುತ್ತದೆ. ಅಭದ್ರತೆಯು ಪ್ರೀತಿ ಮತ್ತು ಸಂತೋಷವನ್ನು ನಾಶಪಡಿಸುವ ಸಂಗತಿಯಾಗಿದೆ. ಯಾವುದೇ ಸಂಬಂಧದಲ್ಲಿ ಅಭದ್ರತೆ ಇದ್ದಾಗ, ಅದು ವಿನೋದವಾಗಿರುವುದಿಲ್ಲ. ನೀವು ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋಗಿ ಉತ್ತಮ ಸವಾರಿ ಮಾಡಲು ಬಯಸುತ್ತೀರಿ ಮತ್ತು ರೋಲರ್‌ಕೋಸ್ಟರ್‌ಗೆ ಹೋಗಲು ಭಯಪಡುತ್ತೀರಿ ಎಂದರೆ ಪಾರ್ಕ್‌ಗೆ ಹೋಗಿದ್ದೇ ವೇಸ್ಟ್ ಅಲ್ಲವೇ? ನೀವದನ್ನು ಆನಂದಿಸಬೇಕೆಂದರೆ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಹಾಗೆಯೇ ಲಿವ್ ಇನ್‌ಗಿಂತ ಬದ್ಧತೆಯುಳ್ಳ ಕುಟುಂಬ ಜೀವನವು ನಿಮಗೆ ಆನಂದವನ್ನು ತರುತ್ತದೆ.