Indian Law : ಸಲಿಂಗ ದಂಪತಿ ಮಕ್ಕಳನ್ನು ದತ್ತು ಪಡೀಬಹುದಾ?

By Suvarna NewsFirst Published Aug 11, 2022, 11:34 AM IST
Highlights

ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧಪಟ್ಟಿಯಿಂದ ಹೊರಗಿಡಲಾಗಿದೆ. ಆದ್ರೆ ಸಲಿಂಗ ವಿವಾಹಕ್ಕೆ ಇನ್ನೂ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಹಾಗಾಗಿ ಲಿವ್ ಇನ್ ನಲ್ಲಿರುವ ದಂಪತಿಗೆ ಮಕ್ಕಳನ್ನು ದತ್ತು ಪಡೆಯುವ ಅಧಿಕಾರವಿಲ್ಲ.
 

ಮನೆಯಲ್ಲಿ ಮಕ್ಕಳಿದ್ರೆ ಆನಂದ ದುಪ್ಪಟ್ಟಾಗುತ್ತದೆ. ಬಾಳಿಗೆ ಒಂದು ಅರ್ಥ ನೀಡುವವರು ಮಕ್ಕಳು. ವಂಶಾಭಿವೃದ್ಧಿ ಸೇರಿದಂತೆ ವೃದ್ಧಾಪ್ಯದಲ್ಲಿ ನಮ್ಮನ್ನು ನೋಡಿಕೊಳ್ಳಲು ಒಂದು ಆಸರೆ ಬೇಕು ಎಂಬ ಕಾರಣಕ್ಕೂ ಮಕ್ಕಳನ್ನು ಪಡೆಯುವ ಇಚ್ಛೆಯನ್ನು ಅನೇಕರು ಹೊಂದಿರ್ತಾರೆ. ಮಹಿಳೆಯಾದವಳಿಗೆ ತಾಯಿಯಾಗುವ ಖುಷಿಯೇ ಬೇರೆ. ಆದ್ರೆ ಎಲ್ಲರಿಗೂ ಈ ಸೌಭಾಗ್ಯ ಸಿಗುವುದಿಲ್ಲ. ಮಕ್ಕಳಾಗಲ್ಲ ಎಂಬುದು ತಿಳಿಯುತ್ತಿದ್ದಂತೆ ಕೆಲ ದಂಪತಿ ಮಗುವನ್ನು ದತ್ತು ಪಡೆಯಲು ಮುಂದಾಗ್ತಾರೆ. ಕಾನೂನಿನ ಪ್ರಕಾರ ದಂಪತಿಗೆ ಮಗುವನ್ನು ದತ್ತು ನೀಡಲಾಗುತ್ತದೆ. ಆದ್ರೆ ಸಲಿಂಗಕಾಮಿ ದಂಪತಿಗೆ ಮಗುವನ್ನು ದತ್ತು ಪಡೆಯುವ ಅಧಿಕಾರ ಇದೆಯೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಸಲಿಂಗಕಾಮಿಗಳ ದತ್ತು ವಿಷ್ಯಕ್ಕೆ ಸಂಬಂಧಿಸಿದಂತೆ ನಾವಿಂದು ಮಾಹಿತಿ ನೀಡ್ತೇವೆ.

ವ್ಯಕ್ತಿಯ ಲೈಂಗಿಕ (Sexual) ದೃಷ್ಟಿಕೋನವನ್ನು ಆಧರಿಸಿ ದತ್ತು ತೆಗೆದುಕೊಳ್ಳುವುದನ್ನು ಕಾನೂನು (Law) ನಿಷೇಧಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ಸಲಿಂಗಕಾಮಿ ದಂಪತಿ ಕೂಡ ಮಕ್ಕಳನ್ನು ದತ್ತು (adopt) ಪಡೆಯಬಹುದು. ಆದ್ರೆ  ಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದರೆ ಮಾತ್ರ ದಂಪತಿ, ಮಗುವನ್ನು ದತ್ತು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಎನ್ನುತ್ತಾರೆ ತಜ್ಞರು. ಲಿವ್-ಇನ್ (Live in) ದಂಪತಿ  ದೇಶದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳಲು ಸಾಧ್ಯವಿಲ್ಲ. 

ಲಿವ್ ಇನ್ ದಂಪತಿಗಿಲ್ಲ ಮಗುವನ್ನು ದತ್ತು ತೆಗೆದುಕೊಳ್ಳಲು ಅನುಮತಿ : ಕಾನೂನು ಮತ್ತು ಸಿಬ್ಬಂದಿಯ ಸಂಸದೀಯ ಸ್ಥಾಯಿ ಸಮಿತಿಯು ಈ ಬಗ್ಗೆ  ಶಿಫಾರಸು ಮಾಡಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ ಮತ್ತು ಬಾಲಾಪರಾಧ ನ್ಯಾಯ ಕಾಯಿದೆಯನ್ನು ಸಮನ್ವಯಗೊಳಿಸಿ, ಮಕ್ಕಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಏಕರೂಪದ ಮತ್ತು ಸಮಗ್ರ ಕಾನೂನನ್ನು ತರಲು ಅಗತ್ಯವಿದೆ ಎಂದು ಶಿಫಾರಸ್ಸಿನಲ್ಲಿ ಹೇಳಿದೆ. ಸಲಿಂಗಕಾಮಿ, ಟ್ರಾನ್ಸ್ಜೆಂಡರ್ (Transgender) ಸಮುದಾಯಗಳಿಗೆ ಸದ್ಯ ಮದುವೆಯಾಗದೆ ದತ್ತು ತೆಗೆದುಕೊಳ್ಳಲು ಅನುಮತಿಯಿಲ್ಲ.

ಇದನ್ನೂ ಓದಿ: ಕ್ಷುಲ್ಲಕ ಸ್ವಭಾವದ ಸಹೋದ್ಯೋಗಿಗಳನ್ನು ಸಂಭಾಳಿಸುವುದು ಹೇಗೆ?

ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ : ಮೇಲಿನ ಈ ಶಿಫಾರಸುಗಳು ಪ್ರಗತಿಪರವಾಗಿವೆ ಎಂದು ತಜ್ಞರು ಮತ್ತು ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ. 2018 ರಲ್ಲಿ ಭಾರತದಲ್ಲಿ ಸಲಿಂಗಕಾಮವನ್ನು ಅಪರಾಧ ಪಟ್ಟಿಯಿಂದ ಹೊರಗಿಡಲಾಗಿದೆ. ಆದರೆ ಸಲಿಂಗ ವಿವಾಹಕ್ಕೆ ಇನ್ನೂ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಸಲಿಂಗ ವಿವಾಹಗಳನ್ನು ಗುರುತಿಸುವುದು ಮತ್ತು ಲಿವ್ ಇನ್  ದಂಪತಿಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ನೀಡುವ ಸಮಸ್ಯೆಗಳನ್ನು ಸಹ ಗಮನಿಸಬೇಕಿದೆ. ಕಾನೂನಿನ ಅಡಿಯಲ್ಲಿ ಒಬ್ಬ ವ್ಯಕ್ತಿ ಅಥವಾ ವೈವಾಹಿಕ ಸಂಬಂಧದಲ್ಲಿ ವಾಸಿಸುವ ದಂಪತಿ ಮಾತ್ರ ಮಗುವನ್ನು ದತ್ತು ಪಡೆಯಬಹುದು.

ಸಲಿಂಗ ದಂಪತಿ ಈ ಷರತ್ತಿನ ಮೇಲೆ ಅರ್ಜಿ ಸಲ್ಲಿಸಬಹುದು : ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಕಾನೂನು ಅನುಮತಿಸುವುದಿಲ್ಲ ಅಥವಾ ನಿಷೇಧಿಸುವುದಿಲ್ಲ. ಆದ್ದರಿಂದ ಯಾವುದೇ ವ್ಯಕ್ತಿ, ಬಾಲಾಪರಾಧ ನ್ಯಾಯ ಕಾಯ್ದೆ ಅಥವಾ ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆಯಡಿ ಮಕ್ಕಳನ್ನು ದತ್ತು ಪಡೆಯಲು ಅರ್ಜಿ ಸಲ್ಲಿಸಬಹುದು ಎನ್ನುತ್ತಾರೆ ತಜ್ಞರು. ಇದಲ್ಲದೆ ದೇಶದಲ್ಲಿ  ಸಲಿಂಗ ವಿವಾಹ ಅಥವಾ ಲಿವ್-ಇನ್ ಸಂಬಂಧದಲ್ಲಿ ಮಗುವನ್ನು ದತ್ತು ತೆಗೆದುಕೊಳ್ಳಲು ಅನುಮತಿಸುವ ಯಾವುದೇ ಕಾನೂನು ಇಲ್ಲ ಎನ್ನುತ್ತಾರೆ ತಜ್ಞರು.  ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ (CARA) ರೂಪದಲ್ಲಿ ಮಗುವನ್ನು ದತ್ತು ಪಡೆಯಲು ಒಬ್ಬರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 40ನೇ ವಯಸ್ಸಿನಲ್ಲಿ ಪ್ರೀತಿ ಚಿಗುರಿದವರಿಗೆ Dating Tips
 
ಸಲಿಂಗ ಸಮುದಾಯದ ವಿರುದ್ಧದ ತಾರತಮ್ಯ ಕೊನೆಗೊಳ್ಳಬೇಕು :  ವಕೀಲರು ಮತ್ತು ಮಕ್ಕಳ ಹಕ್ಕುಗಳ ಕಾರ್ಯಕರ್ತರ ಪ್ರಕಾರ, ಭಾರತದಲ್ಲಿ ಸಲಿಂಗ ದಂಪತಿ ಮದುವೆಯಾಗಲು ಕಾನೂನು ಅನುಮತಿಯನ್ನು ಪಡೆದರೆ, ಸಲಿಂಗ ಸಮುದಾಯದ ಸದಸ್ಯರ ವಿರುದ್ಧದ ತಾರತಮ್ಯವು ಕೊನೆಗೊಳ್ಳುತ್ತದೆ ಮತ್ತು ಅವರು ವಿವಾಹಿತ ದಂಪತಿಯಾಗಿ ದತ್ತು ಪಡೆಯಲು ಸಾಧ್ಯವಾಗುತ್ತದೆ. 

click me!