ಹಸ್ತ ಮೈಥುನ ಮಾಡೋದು ತಪ್ಪಾ, ಮಾಡ್ಕೊಂಡ್ರೆ ಏನೆಲ್ಲ ಸಮಸ್ಯೆಗಳಾಗುತ್ತೆ, ಅದು ಅಪರಾಧವಾ ಅನ್ನೋದು ಹಲವರ ಸಂದೇಹ. ಆದರೆ ಇದಕ್ಕೆ ಲೈಂಗಿಕ್ ತಜ್ಞರು ಬೇರೇ ಆ್ಯಂಗಲ್ ಕೊಡ್ತಾರೆ. ಆ ಆ್ಯಂಗಲ್ ಗಳೇನು, ಸ್ವಯಂ ಲೈಂಗಿಕತೆ ಯಾವ ಲೆವೆಲ್ ನಲ್ಲಿದ್ರೆ ಒಳ್ಳೆಯದು?
ಟೀನೇಜ… ನಲ್ಲಿ ಶುರುವಾಗೋ ಲೈಂಗಿಕ ಬಯಕೆಗಳು ಮಧ್ಯ ವಯಸ್ಸಿಗೆ ಬಂದಾಗ ತುಸು ಕಡಿಮೆಯಾಗುತ್ತೆ. ವೃದ್ಧಾಪ್ಯದಲ್ಲಿ ಮತ್ತೂ ಕ್ಷೀಣಿಸುತ್ತೆ ಅನ್ನೋದು ನಮಗೆಲ್ಲರಿಗೂ ಗೊತ್ತು. ಯವ್ವನದಲ್ಲಿ ಪ್ರತಿಯೊಬ್ಬನೂಮ ಪ್ರತಿಯೊಬ್ಬಳೂ ಹಸ್ತಮೈಥುನ ಮಾಡಿಯೇ ಇರುತ್ತಾರೆ. ಹಾಗಾದ್ರೆ ಇದು ತಪ್ಪಾ.. ಇದರಿಂದ ಆಗುವ ಸಮಸ್ಯೆಗಳೇನು ಅನ್ನುವ ಬಗ್ಗೆ ತುಸು ತಿಳಿದುಕೊಳ್ಳೋಣ.
ದೈಹಿಕವಾಗಿ ಹಾನಿಕಾರಕವಾ?
ಖಂಡಿತವಾಗಿಯೂ ಅಲ್ಲ ಅನ್ನುತ್ತೆ ವೈದ್ಯಕೀಯ. ಇದರಿಂದ ದೇಹಕ್ಕೆ ಯಾವುದೇ ಹಾನಿಯಿಲ್ಲ. ಊಟ, ನಿದ್ದೆಯಂತೆ ಇದೂ ಒಂದು ಸಾಮಾನ್ಯವಾದ ಚಟುವಟಿಕೆ. ಇದರಿಂದ ದೇಹಕ್ಕೆ ಯಾವುದೇ ಬಗೆಯ ಹಾನಿಯಿಲ್ಲ. ಒಂದು ವಯಸ್ಕ ನೆಲೆಗೆ ಬಂದು ನಿಂತ ಮೇಲೆ ಲಿಂಗ, ಸ್ಥಾನಗಳ ಹಂಗಿಲ್ಲದೇ ಹೆಚ್ಚಿನವರು ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೆಚ್ಚಿನವರಿಗೆ ತಾನು ಮಾಡುತ್ತಿರುವುದು ತಪ್ಪಾ ಎಂಬ ಬಗ್ಗೆ ಸಂದೇಹ ಇದ್ದೇ ಇರುತ್ತದೆ. ಆದರೆ ಇದು ತಪ್ಪಲ್ಲ ಸಹಜ ಅಂತಾರೆ ತಜ್ಞರು. ‘ಇದೊಂದು ಫನ್, ಸಹಜ ಜೊತೆಗೆ ಉಲ್ಲಾಸ ಕೊಡುವ ಕ್ರಿಯೆ’ ಅಂತಾರೆ ಬಲ್ಲವರು.
ಸಂಗಾತಿ ನಿಮ್ಮನ್ನು ವಂಚಿಸಲು ಬಿಡಬೇಡಿ
ಮಾನಸಿಕವಾಗಿ ದುಷ್ಪರಿಣಾಮಗಳಿವೆಯಾ?
ಹಲವು ಟೆನ್ಶನ್‌ಗಳಿಗೆ ಇದರಿಂದ ಪರಿಹಾರವಿದೆ. ಸಂಗಾತಿಯ ಅನುಪಸ್ಥಿತಿಯಲ್ಲಿ ಉಂಟಾಗುವ ಉದ್ವಿಗ್ನತೆಯನ್ನು ಇದು ಸರಿಪಡಿಸಬಲ್ಲದು. ಒತ್ತಡ ನಿವಾರಿಸುತ್ತೆ. ಮಾನಸಿಕವಾಗಿ ರಿಲ್ಯಾಕ್ಸೇಶನ್ ನೀಡುತ್ತೆ. ಆದರೆ ಅತಿಯಾದಲ್ಲಿ ಮಾತ್ರ ಸಮಸ್ಯೆ ಇದ್ದೇ ಇದೆ. ಇದು ಚಟವಾಗಿ ಪರಿಣಮಿಸಿದರೆ ಪರಿಣಾಮ ನೆಟ್ಟಗಿರಲ್ಲ.
ದುಷ್ಪರಿಣಾಮಗಳಾಗೋದು ಯಾವಾಗ?
ಹಾಗಂತ ಇದರಿಂದ ಸಮಸ್ಯೆಗಳು ಇಲ್ಲವೇ ಇಲ್ಲ ಅನ್ನೋ ಹಾಗಿಲ್ಲ. ಆದರೆ ಪ್ರತ್ಯಕ್ಷವಾಗಿ ಅಲ್ಲ. ಪರೋಕ್ಷವಾಗಿ ಆಗುವ ಸಮಸ್ಯೆಗಳವು. ಮುಖ್ಯವಾಗಿ ಇದೇ ಹ್ಯಾಬಿಟ್ ಆದಾಗ ಒಂದಿಷ್ಟು ಸಮಸ್ಯೆಗಳು ಬರುತ್ತವೆ.
ಸಂಗಾತಿಯ ಜೊತೆಗೆ ಬಿರುಕು
ಎಷ್ಟೋ ಜನರಿಗೆ ಹೀಗಾದ ಬಳಿಕ ಸಂಗಾತಿಯಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಹೋಗಬಹುದು. ಅಥವಾ ಇದರಲ್ಲಿ ಸಿಗುವ ಸಂತೋಷ ಸಂಗಾತಿಯಿಂದ ಸಿಗದೇ ಹೋಗಬಹುದು. ಆಗ ಇಬ್ಬರೂ ರೊಮ್ಯಾಂಟಿಕ್ ಆಗಿ ಇರಲು ಸಾಧ್ಯವಾಗದು. ಇದರಿಂದ ಸಂಬಂಧ ಹದಗೆಡಬಹುದು.
ಪುರುಷರು ಎಷ್ಟು ದಿನಕ್ಕೊಮ್ಮೆ ವೀರ್ಯ ಬಿಡುಗಡೆ ಮಾಡಬೇಕು?
ಗಿಲ್ಟ್ ಕ್ರಿಯೇಟ್ ಮಾಡುತ್ತೆ
ಅತಿಯಾಗುವ ಈ ಕ್ರಿಯೆ ಒಂದು ಕೀಳರಿಮೆ ಕ್ರಿಯೇಟ್ ಮಾಡುತ್ತೆ. ತಾನು ಮಾಡ್ತಾ ಇರೋದು ಸರಿಯಲ್ಲ. ಇದು ಅನೈತಿಕ ಅನ್ನೋ ವಿಚಾರ ವ್ಯಕ್ತಿಯನ್ನು ಕುಗ್ಗಿಸುತ್ತೆ. ಇದು ಕೊಳಕು, ಅಸಹ್ಯ ಅಂತೆಲ್ಲ ಸಾಮಾಜಿಕವಾಗಿ ಕೇಳಿಬರುವ ಅಭಿಪ್ರಾಯಗಳು ವಿಷಾದ ಹೆಚ್ಚಿಸಬಹುದು. ಹೀಗಾದಾಗ ತಕ್ಷಣ ತಜ್ಞರಲ್ಲಿ ಭೇಟಿ ಮಾಡುವುದು ಬೆಸ್ಟ್. ಇಲ್ಲವಾದರೆ ಇದು ಮುಂದುವರಿದು ಡಿಪ್ರೆಶನ್‌ನಂಥ ಮಾನಸಿಕ ಸಮಸ್ಯೆಗೆ ಕಾರಣವಾಗಬಹುದು.
ಚಟವಾದಾಗ ಸಮಸ್ಯೆಗಳಾಗಬಹುದು
ಇದು ಚಟವಾಗಿ ಬದಲಾದರೆ ಏನೆಲ್ಲ ತೊಂದರೆಗಳು ಬರಬಹುದು. ಕೆಲಸದಲ್ಲಿ ಏಕಾಗ್ರತೆ ಬರದಿರುತ್ತೆ. ಫ್ರೆಂಡ್ಸ್, ಫ್ಯಾಮಿಲಿ ಜೊತೆಗಿದ್ದರೂ ಅವರ ಜೊತೆಗೆ ಬರೆಯಲಾಗದೇ ಹೋಗಬಹುದು. ಸಾಮಾಜಿಕವಾಗಿ ಇತರರ ಜೊತೆಗೆ ಬೆರೆಯಲು ಸಾಧ್ಯವಾಗದೇ ಹೋಗಬಹುದು.
ಚಟದಿಂದ ಹೊರಬರೋದು ಹೇಗೆ?
ಇದು ಚಟವಾದಾಗ ತೊಂದರೆಗಳು ಹೆಚ್ಚು. ಅತಿಯಾದರೆ ಯಾವುದರಲ್ಲಾದರೂ ಸಮಸ್ಯೆ ಇದ್ದೇ ಇರುತ್ತೆ. ಹಾಗಾಗಿ ಈ ‘ಅತಿ’ಯನ್ನು ಮೀರೋದು ಅತ್ಯವಶ್ಯಕ. ಪ್ರಯತ್ನ ಪಟ್ಟರೆ ಅದು ಕಷ್ಟವೂ ಅಲ್ಲ.
ಬೋರಾಗುವ ಸಂಬಂಧಕ್ಕೆ ಜೋಶ್ ತುಂಬಲು ಮತ್ತೆ ರೊಮ್ಯಾನ್ಸ್ ಶುರು ಮಾಡಿ!
ದೈಹಿಕ ಶ್ರಮದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
ಬೆಳಗ್ಗೆದ್ದು ಓಡೋದು, ಪುಶ್‌ಅಪ್‌ನಂಥ ಎಕ್ಸರ್‌ಸೈಸ್‌ಗಳು ಈ ಚಟವನ್ನು ತಕ್ಕಮಟ್ಟಿಗೆ ತಪ್ಪಿಸಬಹುದು. ಯಾವುದೇ ಕ್ರೀಡೆಯಲ್ಲಿ ಇನ್ವಾಲ್ವ್ ಆಗೋದೂ ಉತ್ತಮ. ಆ ಚಟ, ಬಯಕೆ ನೆನಪಾದಾಗಲೆಲ್ಲ ಸಾಧ್ಯವಾದಷ್ಟು ಇಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅದಕ್ಕೆ ಕೊಡುವ ಸಮಯವನ್ನು ಇತ್ತ ತಿರುಗಿಸಿ.
ನಿಮ್ಮ ಸಮಸ್ಯೆಯನ್ನು ಬರೆಯಿರಿ
ನಿಮ್ಮೊಳಗಿನ ತಳಮಳ, ನಿಮ್ಮ ಸಮಸ್ಯೆಯ ಕುರಿತು ಒಂದು ಪೇಪರ್ ಪೆನ್ನು ತಗೊಂದು ಬರೆಯುತ್ತಾ ಹೋಗಿ. ಅದನ್ನು ಲೇಖನ ರೂಪದಲ್ಲಾದರೂ ಬರೆಯಿರಿ. ಇಲ್ಲವಾದರೆ ನಿಮ್ಮ ಉದ್ವೇಗ ಶಮನಗೊಳಿಸುವುದಕ್ಕಾಗಿಯಾದರೂ ಬರೆಯಿರಿ. ಇದರಿಂದ ನಿಮಗೆ ಸಮಸ್ಯೆಯಾಗಬಹುದು ಅನಿಸಿದರೆ ಆಮೇಲೆ ಹರಿದುಹಾಕಿ.
ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ....!?
ಏಕಾಂತವಾಗಿರುವುದನ್ನು ತಪ್ಪಿಸಿ
ಸಾಧ್ಯವಾದಷ್ಟು ಗೆಳೆಯರ ಜೊತೆಗೆ ಬೆರೆಯಿರಿ. ಏಕಾಂತವನ್ನು ತಪ್ಪಿಸುತ್ತಾ ಹೋಗಿ. ಒಂದು ವೇಳೆ ಗೆಳೆಯರು ಸಿಗದಿದ್ದರೆ ಫೋನ್‌ನಲ್ಲಾದ್ರೂ ಮಾತಾಡಿ. ಇದ್ಯಾವುದೂ ಸಾಧ್ಯವಿಲ್ಲ ಅಂತಾರೆ ಸಿನಿಮಾ ನೋಡಿ. ಪುಸ್ತಕ ಓದಿ. ಇದಲ್ಲದೇ ಯೋಗ, ಪ್ರಣಾಯಾಮಗಳೂ ನಿಮ್ಮ ಚಟವನ್ನು ನಿಯಂತ್ರಿಸಲು, ನಿಮ್ಮ ಮೇಲೆ ನಿಮಗೆ ಹತೋಟಿ ಸಿಗಲು ಸಹಕಾರಿ.