
ಇತ್ತೀಚಿನ ಆಧುನಿಕ ಬದುಕಿನಲ್ಲಿ ಸಂಬಂಧಗಳು ಸಡಿಲವಾಗುತ್ತಿವೆ. ಪೋಷಕರು(Parent) ಮತ್ತು ಮಕ್ಕಳ( Childrens)ನಡುವಿನ ಸಂಬಂಧ ಮೊದಲಿನಂತೆ ಈಗಿಲ್ಲ.ಹಿಂದಿನ ಕಾಲದಲ್ಲಿ ಪೋಷಕರು ಹೆಚ್ಚು ಶಿಕ್ಷಿತರಾಗದಿದ್ದರೂ ಮಕ್ಕಳ ಮೇಲೆ ಹೆಚ್ಚು ಕಾಳಜಿಯನ್ನ ವಹಿಸುತ್ತಿದ್ದರು ಆದರೆ ಈಗಿನ ಆಧುನಿಕ ಬದುಕಿನ ಪೋಷಕರು ಕೆಲಸದ ಒತ್ತಡದಲ್ಲಿ ತಮ್ಮ ವಯಕ್ತಿಕ ಜೀವನ, ಮಕ್ಕಳ ಮಾನಸಿಕ ಸ್ಥಿತಿ(Mental state) ಇದೆಲ್ಲದರ ಬಗ್ಗೆ ಗಮನಹರಿಸುವುದು ಕಡಿಮೆಯಾಗುತ್ತಿದೆ. ಈ ರೀತಿಯ ಪೋಷಕರ ನಿರ್ಲಕ್ಷ್ಯದಿಂದ ಮಕ್ಕಳ ಮಾನಸಿಕ ಸ್ಥಿತಿ ಹದಗೆಡುತ್ತಿದೆ.
ಬೆಳೆಯುವ ಪ್ರಾರಂಭ ಹಂತದಲ್ಲಿ ಮಕ್ಕಳಿಗೆ ತಂದೆ ತಾಯಿಯ ಮಮತೆ ಹೆಚ್ಚು ಬೇಕಾಗುತ್ತದೆ. ಅದರಲ್ಲಿ ಪ್ರಮುಖವಾದದ್ದು ಅನುಕರಣೆ ಮತ್ತು ಅನುಸರಣೆ. ಮಗು ಹಿರಿಯರನ್ನ ಅನುಕರಣೆ ಮಾಡುತ್ತಾ ಅನುಸರಿಸುತ್ತ ಎಲ್ಲವನ್ನು ಕಲಿಯಲು ಆರಂಭಿಸುತ್ತದೆ. ಹಿರಿಯರು ಮಗುವಿನ ಜೊತೆಗೆ ಇದ್ದಾಗ ಈ ರೀತಿಯ ಕಲಿಕೆ ತುಂಬಾ ಪರಿಣಾಮವಾಗಿ ಪರಿಣಾಮಕಾರಿಯಾಗಿ ಆಗುತ್ತದೆ.ಮಕ್ಕಳನ್ನು ಐದು ವರ್ಷದವರೆಗೆ ಮುದ್ದಾಗಿ ಆಟ ಆಡಿಸುತ್ತಾ ಬೆಳೆಸಬೇಕು. ಮತ್ತೆ 10 ವರ್ಷಗಳ ಕಾಲ ಅಂದರೆ 15 ವರ್ಷಗಳವರೆಗೆ ಮಕ್ಕಳಿಗೆ ಅವರ ತಪ್ಪುಗಳಿಗೆ ಅರಿವಾಗುವಂತೆ ಶಿಕ್ಷೆಗಳನ್ನು ನೀಡುತ್ತಾ, ಕಳಿಸಬೇಕು ಮತ್ತೆ ಗೆಳೆಯರಂತೆ ಅವರಲ್ಲಿ ವ್ಯವಹಾರ ಬೆಳೆಸಬೇಕು.ಇಂದಿನ ದಿನಗಳಲ್ಲಿ ತಂದೆ-ತಾಯಂದಿರು ತುಂಬಾ ಮುದ್ದು ಮಾಡುತ್ತಾ ಶಿಕ್ಷೆಗಳನ್ನು ನೀಡದೆ ಶಿಸ್ತನ್ನು ಬೆಳೆಸದೆ ಮಕ್ಕಳನ್ನು ಬೆಳೆಸುತ್ತಾರೆ. ಇಲ್ಲವೇ ತೀರಾ ಹೊಡಿ ಬಡಿಯ ಮೂಲಕ ಮಕ್ಕಳನ್ನು ತಮ್ಮ ನಿಯಂತ್ರಣದಲ್ಲಿ ಇರುವಂತೆ ಮಾಡುತ್ತಾರೆ. ಇವೆರಡು ಮಕ್ಕಳ ಬೆಳವಣಿಗೆ ದೃಷ್ಟಿಯಲ್ಲಿ ತಪ್ಪೇ. ಒಂದು ಹಂತದವರೆಗೆ ಅವರನ್ನ ಮಕ್ಕಳ ರೀತಿ ಬೆಳೆಸಬೇಕು. ನಂತರ ಅವರನ್ನ ಗೆಳೆಯರಂತೆ ನೋಡಿಕೊಳ್ಳಬೇಕು.ಹೀಗೆ ಮಕ್ಕಳನ ಬೆಳೆಸಿದರೆ ಮಕ್ಕಳು ಹೆತ್ತವರೊಂದಿಗೆ ವಾತ್ಸಲ್ಯದ ಬೆಸುಗೆಯನ್ನ ಕಟ್ಟಿಕೊಳ್ಳುತ್ತಾರೆ. ಶಿಸ್ತನ್ನು ರೂಡಿಸಿಕೊಳ್ಳುತ್ತಾರೆ ಗೆಳೆತನದ ಸಲುಗೆ ಇಂದ ಮಾತನ್ನು ಕೇಳಿಕೊಂಡು ಆರೋಗ್ಯ ವಂತರಗಿ ಬೆಳೆಯುತ್ತಾರೆ.
ಹಾಗೇ ಬೆಳೆದ ನಂತರ ಹದಿಹರಿಯದ ಮಕ್ಕಳಲ್ಲಿ ಮಾನಸಿಕ ಸಮಸ್ಯೆ(Mental problem, ಆ*ತ್ಮಹ*ತ್ಯೆಯ ಪ್ರವೃತ್ತಿಯನ್ನು ಪ್ರಚೋದಿಸುವ ಅನೇಕ ಅಂಶಗಳುಳ್ಳ ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಪ್ರೀತಿ,ಸೆಳೆತ, ಮೋಹ ಇವುಗಳಲ್ಲಿ ಜಾರಿದ ಹದಿಹರೆದವರು ಸಾಕಷ್ಟು ವಯೋಸಹಜ ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಆಗ ಅವರ ಮೇಲೆ ಒತ್ತಡ ಹಾಕದೇ ಹೆಚ್ಚು ಪ್ರಬುದ್ದರಾಗಿ ವರ್ತಿಸಬೇಕಾಗುತ್ತದೆ. ಮಕ್ಕಳ ಜೊತೆಗೆ ಆರ್ಥಿಕ ಕೀಳರಿಮೆ,(Economic inferiority complex )ದೈಹಿಕ ರೂಪ ನ್ಯೂನ್ಯತೆಗಳು ,ಗೆಳೆಯ ಗೆಳೆತಿರ ಸಂಬಂಧ, ಅಧ್ಯಯನದಲ್ಲಿ ವಿಫಲತೆ ಹೀಗೆ ಒಂಟಿತನಕ್ಕೆ ದೂಡುವ ಹಲವು ಕಾರಣಗಳು ಈ ಹದಿಹರಿಯದರಲ್ಲಿ ಎದುರಾಗುತ್ತದೆ. ಮಕ್ಕಳ ಸಮಸ್ಯೆಗಳು ಪೋಷಕರಿಗೆ ಚಿಕ್ಕದಾಗಿ ಕಂಡರೂ ಆ ಸಮಸ್ಯೆಗಳು ಅವರ ಜೀವ ತೆಗೆಯುವ ಹಂತಕ್ಕೂ ಅವರನ್ನ ತೆಗೆದುಕೊಂಡು ಹೋಗಬಹುದು. ಹಾಗಾಗಿ ಹದಿಹರೆಯದವರ ಜೊತೆ ಗೆಳೆಯರಂತೆ ವರ್ತಿಸಿ ಅವರಲ್ಲಿ ಅವರ ಮಾತುಗಳಿಗೆ ಕಿವಿಯಾಗಿ. ಹೆಚ್ಚು ಅವರ ಜೊತೆಗೆ ಬೆರೆಯಿರಿ. ಅವರ ಯೋಚನೆಗಳು ಕನಸು(Dream)ಳ ಬಗ್ಗೆ ಚರ್ಚೆ ಮಾಡಿ. ಹೆಚ್ಚು ಸಮಯ ಅವರೊಟ್ಟಿಗೆ ಕಾಲ ಕಳೆಯಿರಿ. ಇದರಿಂದ ಅವರ ಸಮಸ್ಯೆಗಳು, ವಿಚಾರಗಳು ಏನು ಎಂಬುದು ನಿಮಗೆ ತಿಳಿಯುತ್ತದೆ.
ಮಕ್ಕಳು ಮಾನಸಿಕವಾಗಿ ಸದೃಢರಾಗಲು ಪೋಷಕರ ಪಾತ್ರ ಬಲು ಮುಖ್ಯ ಹೇಗೆ ಬೀಜಕ್ಕೆ ಮರವಾಗುವ ಮಣ್ಣು ಗೊಬ್ಬರಗಳು ಅತಿ ಮುಖ್ಯವೋ ಪೋಷಕರು ಮತ್ತು ಮಕ್ಕಳ ಸಂಬಂಧಗಳು ಅಷ್ಟೇ ಮುಖ್ಯ. ಮಕ್ಕಳಲ್ಲಿ ಸಮಸ್ಯೆಗಳು ಮೊದಲು ಪ್ರಾರಂಭವಾಗುವುದೇ ಅಭದ್ರತೆಯ ಭಾವನೆ ಕಾಡಲು ಆರಂಭವಾದಾಗ.ಹೆಚ್ಚಿನ ತಂದೆ ತಾಯಂದಿರು ಮಕ್ಕಳಿಗೆ ಏನು ಬೇಕು ಆ ಎಲ್ಲ ವಸ್ತುಗಳನ್ನು ತೆಗೆದುಕೊಡುತ್ತಾರೆ ಆದರೆ ನಿಜವಾಗಿ ಮಕ್ಕಳಿಗೆ ಆ ಕಾಲದಲ್ಲಿ ಬೇಕಿರುವುದು ಪೋಷಕರ ಸಮಯ. ಮಕ್ಕಳ ಜೊತೆಗೆ ಇರುವುದು ಅವರೊಂದಿಗೆ ಆಡುವುದು ಊಟ ಮಾಡುವುದು ಅವರಿಗೆ ದಿನವೂ ಪುಟ್ಟ ಕಥೆಗಳನ್ನ ಹೇಳುವುದು, ಅವರಿಗಿಷ್ಟವಾದತಂಹ ಕೆಲಸವನ್ನ ಮಾಡುವುದು ಮಾಡಿದರೆ ಮಕ್ಕಳು ಮಾನಸಿಕ ಸಮಸ್ಯೆಗಳಿಂದ ದೂರ ಇರುತ್ತಾರೆ. ಅವರ ಮಾನಸಿಕ ಆರೋಗ್ಯ(Mental health) ಸಹ ಸುಧಾರಿಸುತ್ತದೆ. ಆದರೆ ಇತ್ತೀಚಿಗಿನ ಪೋಷಕರು ಮಕ್ಕಳೊಟ್ಟಿಗೆ ಬೆರೆಯುವಂತಹ ಸಮಯ ಕಡಿಮೆಯಾಗುತ್ತಿದೆ. ಹಾಗಾಗಿಯೇ ಮಕ್ಕಳು ಹೆಚ್ಚು ಮಾನಸಿಕ ಸಮಸ್ಯೆ(Mental problem)ಯಿಂದ ಬಳಲುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.