ಆಕರ್ಷಕ ವ್ಯಕ್ತಿತ್ವಕ್ಕೆ ಬಾಡಿ ಲ್ಯಾಂಗ್ವೇಜ್ ಕೂಡ ಮಹತ್ವದ ಕೊಡುಗೆ ನೀಡುತ್ತದೆ. ದೇಹಭಾಷೆಯ ಕಡೆಗೆ ಗಮನ ನೀಡಿದರೆ ನಿಮ್ಮಲ್ಲಿ ಜನರ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ತುಂಬಿಕೊಳ್ಳುವುದು ಗ್ಯಾರೆಂಟಿ.
ಯಾವುದಾದರೂ ಸಮಾರಂಭಗಳಲ್ಲಿ ಕೆಲ ಜನ ಸೂಜಿಗಲ್ಲಿನಂತೆ ಆಕರ್ಷಿಸುತ್ತಾರೆ. ಎಲ್ಲರೂ ಅವರ ಬಳಿ ಒಡನಾಡಲು ಇಷ್ಟಪಡುತ್ತಾರೆ. ಹಾಗಿದ್ದರೆ ಜನರನ್ನು ಅವರ ಬಳಿ ಸೆಳೆಯುವುದು ಯಾವುದು? ನಿಮಗೂ ಹಾಗೆಯೇ ಆಗಬೇಕು ಎಂದಿದೆಯೇ? ಅದಕ್ಕೆ ಬಹಳವೇನೂ ಕಷ್ಟಪಡಬೇಕಾಗಿಲ್ಲ. ಕೆಲವು ಗುಣಗಳನ್ನು ಅಳವಡಿಸಿಕೊಂಡರೆ ಸಾಕು. ಆಯಸ್ಕಾಂತದಂತಹ ಆಕರ್ಷಕ ವ್ಯಕ್ತಿತ್ವ ನಿಮ್ಮದಾಗುತ್ತದೆ. ಎಲ್ಲರೂ ನಿಮ್ಮನ್ನು ಗೌರವಿಸಲು ಆರಂಭಿಸುತ್ತಾರೆ. ಇದಕ್ಕೆ ನಿಮ್ಮ ದೇಹಭಾಷೆಯೇ ಮುಖ್ಯವಾಗಿರುತ್ತದೆ. ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಲು ಬಾಡಿ ಲ್ಯಾಂಗ್ವೇಜ್ ಕೂಡ ಬಹಳಷ್ಟು ಕಾರಣವಾಗುತ್ತದೆ. ನೀವು ಎಷ್ಟು ತಿಳಿದುಕೊಂಡಿದ್ದರೂ, ಎಷ್ಟು ಬುದ್ಧಿವಂತರಾಗಿದ್ದರೂ ದೇಹಭಾಷೆ ಸೂಕ್ತವಾಗಿಲ್ಲ ಎಂದಾದರೆ ಅಲ್ಲೊಂದು ಆಕರ್ಷಣೆ ಇರುವುದಿಲ್ಲ. ಹೀಗಾಗಿ, ನಿಮ್ಮ ದೇಹಭಾಷೆಯ ಕಡೆಗೆ ಬಹಳ ಗಮನ ನೀಡಬೇಕಾಗುತ್ತದೆ. ಮುಖದಲ್ಲಿ ನಗು, ಕಂಗಳಲ್ಲಿ ಆತ್ಮವಿಶ್ವಾಸ, ದೃಢವಾದ ನಡಿಗೆ, ಮೃದುವಾದ ಮಾತುಕತೆ ಇವೆಲ್ಲವೂ ನಿಮ್ಮ ವ್ಯಕ್ತಿತ್ವವನ್ನು ಬಹಿರಂಗಪಡಿಸುವ ದೇಹಭಾಷೆಗಳು. ನಿಮ್ಮೊಳಗೆ ನೀವು ಆಂತರಿಕವಾಗಿ ಬದಲಾವಣೆ ತಂದುಕೊಂಡು ಧನಾತ್ಮಕ ವ್ಯಕ್ತಿಯಾಗಿ ರೂಪುಗೊಳ್ಳುವುದಕ್ಕೂ ಇದು ಕಾರಣವಾಗುತ್ತದೆ. ಹೀಗಾಗಿ, ಒಮ್ಮೆ ಪ್ರಯತ್ನಿಸಿ ನೋಡುವುದು ಅರ್ಥಪೂರ್ಣ.
• ತುಟಿಯಲ್ಲಷ್ಟೇ (Lips) ಅಲ್ಲ, ಕಂಗಳಲ್ಲೂ (Eyes) ನಗುವಿರಲಿ (Smile)
ಕೆಲವರು ಬಾಯಿಮಾತಿನಲ್ಲಿ “ತುಂಬ ಖುಷಿಯಾಯ್ತು’ ಎಂದು ಹೇಳುತ್ತಾರೆ. ಆದರೆ, ಅವರ ಮುಖ, ಕಣ್ಣುಗಳಲ್ಲಿ ಕಿಂಚಿತ್ತಾದರೂ ಖುಷಿಯ ಭಾವನೆ ಇರುವುದಿಲ್ಲ. ಇದು ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಸೂಚಿಸಿಬಿಡುತ್ತದೆ. ಆದರೆ, ನಿಜಕ್ಕೂ ಕಣ್ಣುಗಳಲ್ಲಿ ಖುಷಿಯನ್ನು (Happiness) ಹೊಮ್ಮಿಸಿದರೆ ಅದರ ಮುದವೇ ಬೇರೆ. ಅದುವೇ ನಿಮ್ಮನ್ನು ಆಕರ್ಷಕ (Attractive) ವ್ಯಕ್ತಿಯನ್ನಾಗಿ ರೂಪಿಸುತ್ತದೆ.
undefined
Walking Tips: ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುತ್ತೆ ನಡಿಗೆ
• ಕಣ್ಣುಗಳನ್ನು ನೋಡಿ ಮಾತಾಡಿ
ಮಾತನಾಡುವಾಗ ಎದುರು ಇರುವವರ ಕಣ್ಣುಗಳನ್ನು ನೋಡಿ ಮಾತನಾಡುವುದು ಉತ್ತಮ ಅಭ್ಯಾಸ. ಮಾತನಾಡುವಾಗ ಬೇರೆಲ್ಲೋ ನೋಡುತ್ತಿರುವುದು, ಕಣ್ಣುಗಳನ್ನು ತಪ್ಪಿಸಿ ಮಾತನಾಡುವುದನ್ನು ಜನ ಇಷ್ಟಪಡುವುದಿಲ್ಲ. ಅಲ್ಲದೆ, ಇದು ಅಗೌರವ (Disrespect) ಸೂಚಿಸುವ ದೇಹಭಾಷೆ.
• ಸ್ನೇಹಮಯಿ (Friendly) ಆಗಿರಿ
ನೀವು ಕಠಿಣವಾಗಿ (Rude) ವರ್ತಿಸಲು ನಿಮ್ಮದೇ ಹಲವಾರು ಕಾರಣಗಳು ಇರಬಹುದು. ಆದರೆ, ಕಠಿಣವಾಗಿ ವರ್ತನೆ ಮಾಡಿದರೆ ಜನ ನಿಮ್ಮ ಬಳಿ ಕೇವಲ ಏನಾದರೂ ಕೆಲಸವಿದ್ದಾಗಷ್ಟೇ ಬರುತ್ತಾರೆ. ಸ್ನೇಹಮಯಿ ವ್ಯಕ್ತಿತ್ವ ಅಳವಡಿಸಿಕೊಂಡರೆ ಜನರ ಮನಸ್ಸನ್ನು ಗೆಲ್ಲಲು ಸಾಧ್ಯ. ನಗುಮೊಗದಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಿ.
• ಕೈಗಳನ್ನು ಕ್ರಾಸ್ (Crossing Hands) ಮಾಡಿಕೊಳ್ಳಬೇಡಿ
ಯಾರೊಂದಿಗಾದರೂ ಮಾತನಾಡುವಾಗ ಕೈಗಳನ್ನು ಕ್ರಾಸ್ ಮಾಡಿ ಕಟ್ಟಿಕೊಳ್ಳಬಾರದು. ಇದು, ನೀವು ಅವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ನೀವು ಕಂಫರ್ಟ್ (Comforts) ಆಗಿರಲು ಹಾಗೆ ಕೈಕಟ್ಟಿ ನಿಂತಿರಬಹುದು. ಆದರೆ, ನೋಡುಗರು ಹಾಗೆ ಅಂದುಕೊಳ್ಳುವುದಿಲ್ಲ. ಹಾಗೂ ನಿಮ್ಮಿಂದ ದೂರ ನಡೆಯಲು ಇಚ್ಛಿಸುತ್ತಾರೆ. ಹಾಗೆಯೇ, ಹಿಂದಕ್ಕೆ ಕೈಕಟ್ಟಿ ನಿಲ್ಲುವುದು ಸಹ ಸರಿಯಲ್ಲ. ಸಹಜವಾಗಿ ಕೈಗಳು ಓಪನ್ ಇದ್ದಾಗ ಸ್ನೇಹದ ವಾತಾವರಣ ಮೂಡುತ್ತದೆ.
• ಮೊಬೈಲ್ (Mobile) ನೋಡುತ್ತಿರಬೇಡಿ
ಹಲವರು ತಮ್ಮ ಮೊಬೈಲ್ ನೋಡುತ್ತ ನಿಮ್ಮ ಮಾತುಗಳನ್ನು ಕೇಳುತ್ತಾರೆ. ಇದಂತೂ ಭಾರೀ ಇರಿಟೇಟಿಂಗ್ (Irritating) ನಡತೆ. ನೀವೂ ಹೀಗೆಯೇ ವರ್ತನೆ (Behave) ಮಾಡುತ್ತಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ.
Mental Health: ಹೈಪರ್ ಇಂಡಿಪೆಂಡೆನ್ಸ್ ನಿಂದ ನಿಮ್ಮ ಆರೋಗ್ಯಕ್ಕೇ ಕುತ್ತು
• ಶೇಕ್ ಹ್ಯಾಂಡ್ (Shake Hand) ದೃಢವಾಗಿರಲಿ
ಯಾರಿಗಾದರೂ ಹ್ಯಾಂಡ್ ಶೇಕ್ ನೀಡುವಾಗ ನಿಮ್ಮ ಕೈಗಳು ಬಲವಾಗಿರಲಿ. ಬಲಹೀನವಾದಂತೆ ಶೇಕ್ ಮಾಡುವುದು ಎದುರಿನವರನ್ನು ಇಂಪ್ರೆಸ್ ಮಾಡುವುದಿಲ್ಲ. ಹಾಗೆಯೇ, ಕುಳಿತುಕೊಳ್ಳುವ, ನಿಂತುಕೊಳ್ಳುವ ಭಂಗಿಯಲ್ಲಿ ಆತ್ಮವಿಶ್ವಾಸ (Confident) ತುಂಬಿರುವಂತೆ ನೋಡಿಕೊಳ್ಳಿ. ಕುಗ್ಗಿದಂತೆ, ಬಾಗಿದಂತೆ ನಿಂತುಕೊಳ್ಳಬೇಡಿ.
• ಮಾತಿನ (Talk) ಬಗ್ಗೆ ಗಮನವಿರಲಿ
ಇಷ್ಟೆಲ್ಲ ದೇಹಭಾಷೆಯ (Body Language) ಕಡೆಗೆ ಗಮನ ಕೊಟ್ಟು ಅವರು ಹೇಳುವುದನ್ನೇ ಸರಿಯಾಗಿ ಗ್ರಹಿಸಿಕೊಳ್ಳದಿರುವುದು ತಪ್ಪು. ಎದುರಿನವರು ಮಾತನಾಡುವಾಗ ಸರಿಯಾಗಿ ಕೇಳಿಸಿಕೊಳ್ಳಿ. ಮಾತಿನ ಬಗ್ಗೆ ಗಮನ ನೀಡುತ್ತಿದ್ದೀರಿ ಎನ್ನುವುದನ್ನು ಸೂಚಿಸಲು ಆಗಾಗ ತಲೆಯಾಡಿಸಿ. ನಿರ್ಲಿಪ್ತರಾಗಿ ವರ್ತಿಸಬೇಡಿ.