ಭಾವನಾತ್ಮಕ ಪ್ರಬುದ್ಧತೆ ಹೆಚ್ಬೇಕಾ? ಕೊರಿಯನ್ ಪದ್ಧತಿ ನುಂಚಿ ಟಿಪ್ಸ್ ಫಾಲೋ ಮಾಡಿ

By Suvarna News  |  First Published Sep 1, 2023, 2:09 PM IST

ಭಾವನಾತ್ಮಕ ಪ್ರಬುದ್ಧತೆಯನ್ನು ತೀಕ್ಷ್ಣಗೊಳಿಸಿಕೊಳ್ಳಬೇಕು ಎನ್ನುವ ಆಸೆ ಇದ್ದರೆ ಕೊರಿಯನ್ನರು ಅನುಸರಿಸುವ “ನುಂಚಿ’ ಪದ್ಧತಿ ತಿಳಿಸುವ ಕೆಲವು ಮಾರ್ಗಗಳನ್ನು ಅನುಸರಿಸಬೇಕು. ಇದೊಂದು ರೀತಿಯಲ್ಲಿ ಭಾವನಾತ್ಮಕ ಟೂಲ್ ಕಿಟ್ ನಂತೆ ಬೆಂಬಲ ನೀಡುತ್ತದೆ.
 


ಜನರ ಗುಂಪಿನಲ್ಲಿರುವಾಗ ಹೇಗೆ ಎಲ್ಲರೊಂದಿಗೆ ಬೆರೆಯಬೇಕು, ಯಾವ ರೀತಿ ಅವರೊಂದಿಗೆ ಸಂವಹನದಲ್ಲಿ ಭಾಗಿಯಾಗಬೇಕು, ಯಾವ ಮಟ್ಟದಲ್ಲಿ ಕನೆಕ್ಟ್ ಆಗಬೇಕು ಎನ್ನುವ ಗೊಂದಲ ಕೆಲವೊಮ್ಮೆ ಕಾಡುತ್ತದೆ. ಇದು ನಿಮಗೊಬ್ಬರಿಗೇ ಎದುರಾಗುವ ಸಮಸ್ಯೆ ಅಥವಾ ಪ್ರಶ್ನೆಯಲ್ಲ. ಈ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಅಗತ್ಯವಾಗಿರುವುದು ಭಾವನಾತ್ಮಕ ಪ್ರಬುದ್ಧತೆ. ಈ ಅಂಶ ವ್ಯಕ್ತಿತ್ವದಲ್ಲಿ ಗಾಢವಾಗಿದ್ದಷ್ಟೂ ಉತ್ತಮ. ಭಾವನಾತ್ಮಕ ಪ್ರಬುದ್ಧತೆಯನ್ನು ಪ್ರಖರವಾಗಿಸಿಕೊಳ್ಳಲು ಕೊರಿಯಾದ ಜೀವನಪದ್ಧತಿಯೊಂದು ಸಾಕಷ್ಟು ತಿಳಿವಳಿಕೆ ನೀಡಬಲ್ಲದು. ಅದೇ “ನುಂಚಿ’. ಸಾಮಾಜಿಕ ಸಾಮರಸ್ಯವನ್ನು ಮೂಡಿಸಲು ಕೊರಿಯನ್ನರು ಅಳವಡಿಸಿಕೊಂಡಿರುವ ಶೈಲಿಯೇ ನುಂಚಿ. ಅಂದರೆ “ದೃಷ್ಟಿ ಬಲ ಅಥವಾ ಶಕ್ತಿ’ ಎಂದೂ ಹೇಳಲಾಗುತ್ತದೆ. ಇದರಲ್ಲಿ ಕ್ರಿಯಾಶೀಲವಾಗಿ ಕೇಳಿಸಿಕೊಳ್ಳುವುದು ಮತ್ತು ಸಹಾನುಭೂತಿಯ ಗುಣ ಪ್ರಧಾನವಾಗಿರುತ್ತದೆ. ಈ ಪದ್ಧತಿಯನ್ನು ಅರ್ಥ ಮಾಡಿಕೊಂಡು ಅನುಸರಿಸಿದರೆ ಸಂಬಂಧಗಳು ಮತ್ತು ಜನರನ್ನು ಚೆನ್ನಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆ ನೋಡಿದರೆ, ನಮ್ಮ ಭಾರತೀಯ ಸನಾತನ ಧರ್ಮ ಹೇಳುವುದು ಇದೇ ಅಂಶಗಳನ್ನು. ಆದರೆ, ವಿಶಿಷ್ಟ ಜೀವನ ನೋಟಗಳು ಬೇರೆಡೆಯೂ ಇದ್ದರೆ ಅಳವಡಿಸಿಕೊಳ್ಳುವುದರಲ್ಲಿ ಅರ್ಥವಿದೆ. 
 
•    ಮಾತುಗಳಿಗೆ ಕಿವಿಯಾಗುವುದು (Active Listening)
ಗುಂಪಿನಲ್ಲಿರುವಾಗ (Group) ಎಲ್ಲರೂ ಏನಾದರೊಂದು ಮಾತನಾಡುತ್ತಿರುತ್ತಾರೆ. ನಾವು ಯಾರ ಮಾತುಗಳನ್ನೂ ಸರಿಯಾಗಿ ಕೇಳಿಸಿಕೊಳ್ಳುವುದಿಲ್ಲ. ಅಷ್ಟೇ ಏಕೆ? ಪರಸ್ಪರ ಇಬ್ಬರು ಮಾತುಕತೆ ನಡೆಸುತ್ತಿರುವಾಗಲೂ ಮತ್ತೊಬ್ಬರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುವುದು ಅಷ್ಟರಲ್ಲೇ ಇದೆ. ಎಷ್ಟೋ ಬಾರಿ ಸುಮ್ಮನೆ ಹೂಂಗುಟ್ಟುತ್ತಿರುತ್ತೇವೆ. ಆದರೆ, ಗಮನವಿಟ್ಟು ಕೇಳಿಸಿಕೊಂಡರೆ ಅವರ ಮನದಾಳ (Inner World) ಅರ್ಥವಾಗುತ್ತದೆ. ಮಾತಿಗೆ ಪೂರಕವಾದ ಪ್ರಶ್ನೆಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂಥ ಮಾತುಕತೆ ಭಾವನಾತ್ಮಕ (Emotional) ಸೂಕ್ಷ್ಮತೆ ಹೆಚ್ಚಿಸುತ್ತದೆ. 

ಆತ್ಮವಿಶ್ವಾಸ ತುಂಬಿ ತುಳಕೋ ಮಹಿಳೆ ಬಗ್ಗೆ ಗಂಡಸ್ಯಾಕೆ ಹೀಗ್ ಯೋಚಿಸುತ್ತಾನೆ?

Tap to resize

Latest Videos

•    ಮಾತುರಹಿತವಾದ ವರ್ತನೆಯ (Behavior) ಬಗ್ಗೆ ಗಮನ
ಎಷ್ಟೋ ಬಾರಿ ಮಾತಿನಿಂದ ವ್ಯಕ್ತವಾಗದ ನೋವು ಅಥವಾ ಭಾವನೆಗಳು (Feelings) ವರ್ತನೆಗಳಲ್ಲಿ ಹೊರಸೂಸುತ್ತದೆ. ಅದರ ಬಗ್ಗೆ ಸೂಕ್ಷ್ಮವಾಗಿದ್ದರಷ್ಟೇ ತಿಳಿದುಬರುತ್ತದೆ. ಬಾಯಿಬಿಟ್ಟು ಹೇಳಿಕೊಳ್ಳಲಾಗದ ನೋವನ್ನು ಗುರುತಿಸಲು ವರ್ತನೆಯ ಬಗ್ಗೆ ಗಮನವಿರಬೇಕು. ವರ್ತನೆ ಮತ್ತು ದೈಹಿಕ ಹಾವಭಾವಗಳನ್ನು ಒಳಗೊಂಡ ಆಂಗಿಕ ಭಾಷೆಯನ್ನು (Body Language) ಅರಿಯುವ ಸಾಮರ್ಥ್ಯದಿಂದ ಅನೇಕರಿಗೆ ನೆರವಾಗಲು ಸಾಧ್ಯ. 

•    ಪರಿಸ್ಥಿತಿಯೊಂದಿಗೆ ಒಂದಾಗುವುದು (Adopt Mood)
ಜನ ಸೇರಿರುವ ಒಂದು ರೂಮಿಗೆ ಪ್ರವೇಶಿಸಿದಾಗ ಕೆಲವೊಮ್ಮೆ ಅಲ್ಲಿನ ವಾತಾವರಣದಿಂದ ಮುಜುಗರವಾಗಬಹುದು. ಎದ್ದು ಹೊರಹೋಗುವ ಬಯಕೆಯಾಗಬಹುದು. ಆದರೆ, ಹಾಗೆ ಮಾಡದೆ ಪರಿಸ್ಥಿತಿಯನ್ನು ಚುರುಕಾಗಿ ಅರ್ಥೈಸಿಕೊಂಡು ಅದರಲ್ಲಿ ಒಂದಾದರೆ ಅರ್ಥಪೂರ್ಣ (Meaningful) ಮಾತುಕತೆಯನ್ನು ಆರಂಭಿಸಲು ಸಾಧ್ಯವಾಗುತ್ತದೆ. ಇದರಿಂದ ಅಲ್ಲಿನ ವಾತಾವರಣವೂ ತಿಳಿಯಾಗುವ ಜತೆಗೆ, ಧನಾತ್ಮಕ (Positive) ಮೂಡ್ ಸೃಷ್ಟಿಸಲು ನೀವು ಕಾರಣರಾಗುತ್ತೀರಿ.

•    ವಿನಮ್ರತೆ (Humble) 
“ನುಂಚಿ’ (Nunchi) ಪದ್ಧತಿ ವಿನಮ್ರರಾಗಿರುವುದು ಎಷ್ಟು ಮುಖ್ಯ ಎನ್ನುವುದನ್ನು ತಿಳಿಸುತ್ತದೆ. ಇದರರ್ಥ ನಿಮ್ಮ ಸಾಧನೆ, ಪ್ರತಿಭೆಗಳನ್ನು ಹತ್ತಿಕ್ಕಬೇಕು ಎಂದಲ್ಲ. ದೊಡ್ಡ ಸಮೂಹದೊಂದಿಗೆ ಒಂದಾಗಲು ವಿನಮ್ರತೆ ಅಗತ್ಯ. ಏಕೆಂದರೆ, ಎಲ್ಲರೂ ಒಂದಲ್ಲ ಒಂದು ರೀತಿಯ ಪ್ರತಿಭೆ, ವಿಶಿಷ್ಟತೆ ಹೊಂದಿರುತ್ತಾರೆ. ವಿಶಿಷ್ಟತೆಯನ್ನೇ ಮುಖ್ಯವಾಗಿಸಿಕೊಂಡು ಡಾಮಿನೇಟ್ (Dominate) ಗುಣ ಬೆಳೆಸಿಕೊಂಡರೆ ಮತ್ತೊಬ್ಬರ ಮಾತುಗಳಿಗೆ ಬೆಲೆ ನೀಡುವ, ಕೇಳಿಸಿಕೊಳ್ಳುವುದರಿಂದ ವಂಚಿತರಾಗುತ್ತೇವೆ. ಇದರಿಂದ ಭಾವನಾತ್ಮಕ ಪ್ರಬುದ್ಧತೆ (Emotional Intelligence) ಹೊಂದಲು ಸಾಧ್ಯವೇ ಇಲ್ಲ.

ಬಾಲ್ಯದ ಘಟನೆಗಳಿಂದಲೇ ಮೂಡಿತೇ ಕೀಳರಿಮೆ? ಹೇಗೆ ಗುರುತಿಸಿ, ನಿವಾರಿಸಿಕೊಳ್ಳೋದು?

•    Time Management
ಜೀವನದಲ್ಲಿ ಸಮಯಕ್ಕೆ (Timing) ಭಾರೀ ಮಹತ್ವವಿದೆ. ಎಲ್ಲಕ್ಕೂ ಇಲ್ಲಿ ಸಮಯವೆನ್ನುವುದು ಇರುತ್ತದೆ. ನಾವು ಆಡುವ ಮಾತು, ಮಾಡುವ ಕೆಲಸಗಳು ಸಮಯಕ್ಕೆ ಅನುಗುಣವಾಗಿರುವುದನ್ನು ನುಂಚಿ ಪ್ರತಿಪಾದಿಸುತ್ತದೆ. ಎಲ್ಲರೂ ಖುಷಿಯಾಗಿರುವ ಸಮಯದಲ್ಲಿ ಕೆಲವರು ಅನಗತ್ಯವಾಗಿ ದುಃಖದ, ನೋವಿನ ಸಂಗತಿಗಳನ್ನು ತೆಗೆದು ಅಲ್ಲಿನ ಮೂಡನ್ನೇ ಹಾಳುಮಾಡುತ್ತಾರಲ್ಲವೇ? ಅವರಿಗೆ ಟೈಮಿಂಗ್ ಬಗ್ಗೆ ಗೊತ್ತಿಲ್ಲ ಎಂದರ್ಥ. 

•    ಸ್ವಯಂ ಅರಿವು (Self Awareness)
ನಮ್ಮ ಭಾವನೆ, ಸಾಮರ್ಥ್ಯ, ದೌರ್ಬಲ್ಯ, ಉದ್ದೇಶಗಳ ಬಗ್ಗೆ ಸ್ಪಷ್ಟತೆ ಹೊಂದಿರುವುದು ಅತ್ಯಂತ ಅಗತ್ಯ ಎನ್ನುತ್ತದೆ ನುಂಚಿ. 
 

click me!