ತೃಣಮೂಲ ಕಾಂಗ್ರೆಸ್ ಮಾಜಿ ನಾಯಕ ರಿಯಾಜುಲ್ ಹಕ್ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಪತ್ನಿ ಸಬೀನಾ ಯಾಸ್ಮಿನ್‌ಗೆ ಎಕೆ-47 ರೈಫಲ್ ಗಿಫ್ಟ್ ನೀಡಿದ್ದಾರೆ. ಇದು ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
ಕೋಲ್ಕತ್ತಾ: ಪತ್ನಿಗೆ ವಿವಾಹ ವಾರ್ಷಿಕೋತ್ಸವ ನಿಮಿತ್ತ ಅಮೂಲ್ಯ ಗಿಪ್ಟ್ ನೀಡುವುದು ಅಥವಾ ಪಾರ್ಟಿ ಕೊಡಿಸುವುದು ವಾಡಿಕೆ. ಆದರೆ ತೃಣಮೂಲ ಕಾಂಗ್ರೆಸ್ ಮಾಜಿ ನಾಯಕ ರಿಯಾಜುಲ್ ಹಕ್ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ತಮ್ಮ ಪತ್ನಿ ಸಬೀನಾ ಯಾಸ್ಮಿನ್‌ಗೆ ಎಕೆ-47 ರೈಫಲ್ ಗಿಫ್ಟ್ ನೀಡಿದ್ದಾರೆ. ಈ ಬ್ಗೆ ಫೇಸ್‌ಬುಕ್‌ಗೆ ಫೋಟೋ ಹಾಕಿದ್ದಾರೆ. ಅದಕ್ಕೆ ಸ್ಥಳೀಯ ಬಿಜೆಪಿ ನಾಯಕರು ಮತ್ತು ಸಿಪಿಎಂನವರು ಕಿಡಿಕಾರಿ ‘ಇದು ತಾಲಿಬಾನಿ ಆಡಳಿತ’ ಎಂದಿದ್ದಾರೆ. ಆಗ ಹಕ್ ಈ ಪೋಸ್ಟ್ ಡಿಲೀಟ್ ಮಾಡಿ ಅದು ಆಟಿಕೆ ಗನ್ ಎಂದು ತಿಪ್ಪೆ ಸಾರಿಸಲು ಯತ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ (Social media) ರಿಯಾಜುಲ್ ಪತ್ನಿ ಸಬೀನಾ ಯಾಸ್ಮಿನ್ ಎಕೆ-47 ಹಿಡಿದುಕೊಂಡಿರುವ ಚಿತ್ರವನ್ನು ಹಂಚಿಕೊಂಡ ನಂತರ ಭಾರೀ ಚರ್ಚೆ ಆರಂಭವಾಗಿದೆ. ಸ್ಥಳೀಯ ಬಿಜೆಪಿ ನಾಯಕರು (BJP leaders), 'ತಾಲಿಬಾನ್ ಆಡಳಿತವನ್ನು ಉತ್ತೇಜಿಸಲಾಗುತ್ತಿದೆ' ಎಂದು ಟೀಕಿಸಿದ ನಂತರ ರಿಯಾಜುಲ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ತನ್ನ ನಡೆಯನ್ನು ಸಮರ್ಥಿಸಿಕೊಂಡ ರಿಯಾಜುಲ್, 'ನನ್ನ ಪತ್ನಿ (Wife) ಫೋಟೋದಲ್ಲಿ ಆಟಿಕೆ ಗನ್ ಹಿಡಿದಿದ್ದಾಳೆ. ಯಾವುದೇ ಅಕ್ರಮ ನಡೆದಿಲ್ಲ. ನನ್ನ ವಿರುದ್ಧದ ಆರೋಪ ನಕಲಿಯಾಗಿದ್ದು, ಅದು ನಕಲಿ ಗನ್' ಎಂದು ಹೇಳಿದ್ದಾರೆ.
ಸಾಕು ನಾಯಿಗಳ ವಿಚಾರವಾಗಿ ಜಗಳ: ಬಾಲ್ಕನಿಯಿಂದ್ಲೇ 8 ಜನರಿಗೆ ಶೂಟ್ ಮಾಡಿದ ಭದ್ರತಾ ಸಿಬ್ಬಂದಿ!
ತನಿಖೆಗೆ ಒಳಪಡಿಸಲು ಬಿಜೆಪಿ ನಾಯಕರ ಒತ್ತಾಯ
ಬಿರ್‌ಬೂಮ್‌ನ ಬಿಜೆಪಿ ಜಿಲ್ಲಾಧ್ಯಕ್ಷ ಧ್ರುಬೋ ಸಹಾ, 'ರಿಯಾಜುಲ್‌ಗೆ ಬಂದೂಕು ಎಲ್ಲಿಂದ ಸಿಕ್ಕಿತು ಎಂಬುದನ್ನು ತನಿಖೆಗೆ ಒಳಪಡಿಸಬೇಕು. ನಾನು ಅವರ ಫೇಸ್‌ಬುಕ್ ಪೋಸ್ಟ್ ನೋಡಿದ್ದೇನೆ. ಅವರು ಮಾಜಿ ಟಿಎಂಸಿ ನಾಯಕ ಮತ್ತು ರಾಜ್ಯ ಉಪಸಭಾಪತಿಯ ಆಪ್ತರು. ಇದು ಯಾವ ಸಂದೇಶವನ್ನು ನೀಡುತ್ತದೆ. ಇದು ತಾಲಿಬಾನ್ ಆಡಳಿತದ ಪ್ರಚಾರವೇ. ಅವರು ಮುಂದಿನ ಪೀಳಿಗೆಯನ್ನು ಜಿಹಾದಿಗಳಾಗಲು ತಳ್ಳಲು ಪ್ರಯತ್ನಿಸುತ್ತಿದ್ದಾರೆಯೇ' ಎಂದು ಪ್ರಶ್ನೆ ಮಾಡಿದ್ದಾರೆ. ಬಿರ್‌ಬೂಮ್‌ನ ಸಿಪಿಐಎಂನ ನಾಯಕ ಸೋಂಜಿಬ್ ಮುಲ್ಲಿಕ್, 'ಆಡಳಿತ ಪಕ್ಷವು ಸಾರ್ವಜನಿಕ ವೇದಿಕೆಗಳಲ್ಲಿ ಇಂಥಾ ಬಂದೂಕುಗಳನ್ನು ಪ್ರದರ್ಶಿಸುತ್ತಿರುವ ಕುರಿತು ತಕ್ಷಣವೇ ಪರಿಶೀಲಿಸಬೇಕು' ಎಂದಿದ್ದಾರೆ.
ಉಪಸಭಾಪತಿ ಮತ್ತು ರಾಮ್‌ಪುರಹತ್‌ನ ಶಾಸಕ ಆಶಿಶ್ ಬಂಡೋಪಾಧ್ಯಾಯ ಅವರ ನಿಕಟವರ್ತಿ ಎಂದು ಹೇಳಲಾದ ಮಾಜಿ ಟಿಎಂಸಿ ನಾಯಕ, 'ಅನೇಕ ಜನರು ಗನ್ ಬಗ್ಗೆ ಕೇಳಿದ್ದರಿಂದ ಪೋಸ್ಟ್‌ನ್ನು ಅಳಿಸಿದ್ದೇನೆ' ಎಂದು ಹೇಳಿದ್ದಾರೆ. ರಿಯಾಜುಲ್ ಈ ಹಿಂದೆ ತೃಣಮೂಲದ ಅಲ್ಪಸಂಖ್ಯಾತರ ಸೆಲ್‌ನ ರಾಮ್‌ಪುರಹತ್-1 ಬ್ಲಾಕ್‌ನ ಅಧ್ಯಕ್ಷರಾಗಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಕಳೆದೆರಡು ತಿಂಗಳ ಹಿಂದೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಣ್ಣ-ತಮ್ಮಂದಿರ ಜಗಳದಲ್ಲಿ ಬೆಳಕಿಗೆ ಬಂತು ನಾಡ ಬಂದೂಕು ತಯಾರಿಸುವ ಭಯಾನಕ ಕೃತ್ಯ!